Home Blog Page 4

ತರ್ಕ ಮತ್ತು ಭಾವುಕತೆ – ಶ್ರಿÃನಾಗೇಶ್

0

     images (8)

ಎರಡನೆಯ ಮಹಾ ಯುಧ್ದದಲ್ಲಿಗೆಲ್ಲುವ ಸಲುವಾಗಿ ಪರಮಾಣುಬಾಂಬ್‌ ಒಂದನ್ನುತಯಾರಿಸುವಕಲ್ಪನೆಅಮೆರಿಕಕ್ಕೆ ಬಂದಿತು.ಈ ಸಲಹೆಯನ್ನು ಮುಂದಿಟ್ಟಾಗ ಸುಮಾರು ೩೦೦ಕ್ಕೂ ಹೆಚ್ಚು ವಿಜ್ಞಾನಿಗಳು ಅದರಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರಂತೆ.ಆದರೆ ಹನ್ನೆರಡು ವಿಜ್ಞಾನಿಗಳು ತಾರ್ಕಿಕವಾಗಿಅಣು ಬಾಂಬ್‌ತಯಾರಿಸುವುದು ಸಾಧ್ಯವಿದೆಎಂದು ಹೇಳಿ ತಯಾರಿಸಲು ಮುಂದಾದರಂತೆ.

ಪರಮಾಣುರಿಯಾಕ್ಟರ್ ತಯಾರಿಸಿ ವಿದ್ಯುತ್‌ಉತ್ಪಾದನೆಯಲ್ಲಿತೊಡಗಿದ್ದಎನರಿಕೋ ಫರ್ಮಿ ಮತ್ತು ಅವರ ತಂಡಅದಕ್ಕೆಒಪ್ಪಿಕೊಂಡು, ಬಾಂಬ್‌ ಒಂದನ್ನು ತಯಾರಿಸಿ ಪರೀಕ್ಷಾರ್ಥ ಮರುಭೂಮಿಯೊಂದರಲ್ಲಿಜುಲೈ ೧೯೪೫ರಲ್ಲಿ ಸ್ಫೊÃಟಿಸಿತು.ಅದರ ಯಶಸ್ಸಿನಿಂದ ಆಗಸ್ಟ್ ೬ ರಂದು ಹಿರೋಷಿಮಾದಲ್ಲಿ ಮೊದಲ ಬಾಂಬ್‌ಅನ್ನು ಸ್ಫೊÃಟಿಸಿದರು.ಅದನ್ನು ಹಾಕಿದ ಪೈಲಟ್‌ಅದರ ಭೀಕರತೆಯನ್ನು ವರ್ಣಿಸಿದ್ದಾನೆ. ಅದು ತಿಳಿದೂ, ಮೂರು ದಿನಗಳ ನಂತರ ನಾಗಾಸಾಕಿಯ ಮೇಲೆ ಮತ್ತೊಂದನ್ನು ಹಾಕಿದರುಎನ್ನುವುದೇ ಮನುಕುಲದದುರ್ದೈವ.
ಇಂತಹ ಭಯಂಕರ ಉತ್ಪನ್ನವನ್ನು ತಯಾರಿಸಿ ಕೊಟ್ಟಿದ್ದಕ್ಕೆ ಫರ್ಮಿಯನ್ನು ವೈಜ್ಞಾನಿಕ ಸಂಸ್ಥೆಗಳು ದೂರವಿಟ್ಟವುಎನ್ನುವುದುಗಮನಾರ್ಹ!
ಫರ್ಮಿ ಮತ್ತು ಆತನ ತಂಡದವರು ಕೇವಲ ತರ್ಕಬದ್ಧರಾಗಿ ಯೋಚಿಸಿದರೇ ಹೊರತುಅದಕ್ಕೆ ಭಾವುಕತೆಯನ್ನು ಬಳಸಲಿಲ್ಲ. ಈ ಪ್ರಯೋಗದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ವಿಜ್ಞಾನಿಗಳು ಭಾವುಕತೆಯೊಂದಿಗೆತರ್ಕದ ಸಮತೋಲನವನ್ನುಕಾಪಾಡಿಕೊಂಡಿದ್ದ್ದರಿಂದಅವರಿಗೆತಮ್ಮ ಪ್ರಯೋಗದ ಭೀಕರ ಪರಿಣಾಮದಅರಿವುಉಂಟಾಗಿಅವರು ಆ ಪ್ರಯೋಗಕ್ಕೆ ನಿರಾಕರಿಸಿದರು.
ಪಿ ಯು ವಿದ್ಯಾರ್ಥಿನಿಯೊಬ್ಬಳಿಗೆ ಅವಳ ಸೋದರಮಾವಕೀಟಲೆ ಮಾಡಲು ಪರೀಕ್ಷೆಯಲ್ಲಿ ನೀನು ಪಾಸಾಗಿಲ್ಲಎಂದು ತಿಳಿಸಿದಾಗ, ಹಿಂದು ಮುಂದು ನೋಡದೆಆಕೆ ಭಾವಿಗೆ ಹಾರಿ ಬಿಟ್ಟಳು.ವಾಸ್ತವವಾಗಿ ಆಕೆ ಮೊದಲ ದರ್ಜೆಯಲ್ಲಿ ಪಾಸಾಗಿದ್ದಳು.ತರ್ಕವನ್ನು ಬಳಸಿದ್ದರೆ, “ನಾನು ಮೊದಲ ದರ್ಜೆಯಲ್ಲಿ ಪಾಸಾಗುವ ರೀತಿಯಲ್ಲಿ ಸಾಧನೆ ಮಾಡಿದ್ದೆ. ಹೆಚ್ಚೆಂದರೆ ಎರಡನೆಯ ದರ್ಜೆ ಬರಬಹುದೇ ಹೊರತು ಫೇಲಾಗುವುದು ಸಾಧ್ಯವೇ ಇಲ್ಲ” ಎಂದು ವಾದಿಸಿರುತ್ತಿದ್ದಳು. ಆದರೆ ಭಾವುಕತೆ ಅವಳನ್ನು ಆವರಿಸಿ, ತರ್ಕವನ್ನು ಹಿನ್ನೆಲೆಗೆ ತಳ್ಳಿ ದೊಡ್ಡತಪ್ಪನ್ನು ಮಾಡುವಂತೆ ಪ್ರೆÃರೇಪಿಸಿತು.
ಮೇಲೆ ಉಲ್ಲೆÃಖಿಸಿರುವ ಎರಡೂ ತಪ್ಪುಗಳು ತಿದ್ದಿಕೊಳ್ಳಲು ಸಾಧ್ಯವಿಲ್ಲದಂತಹ ತಪ್ಪುಗಳು ಎಂಬುದನ್ನು ಗಮನಿಸಿ!
ಅತೀ ಭಾವುಕತೆ ಅಥವ ಅತೀತಾರ್ಕಿಕತೆ ತೋರಿಸುುವ ನಡವಳಿಕೆ ವ್ಯಕ್ತಿಯ ಜೀನ್‌ಗಳಿಂದ ರೂಪುಗೊಂಡಿರಬಹುದು. ಪ್ರಾಥಮಿಕ ಆರೇಳು ವರ್ಷಗಳ ಕಾಲದ ಬೆಳವಣಿಗೆಯ ಸಮಯದಲ್ಲಿ ಉಂಟಾಗುವ ಕಲಿಕೆಯಿಂದಲೂ ಉಂಟಾಗಿರಬಹುದು. ಮಗುವಿನೊಂದಿಗೆ ಮನೆಯವರು ನಡೆದುಕೊಳ್ಳುವ ರೀತಿ, ಮಗುವನ್ನು ಬೆಳೆಸುವಾಗ ಅದರೊಡನೆ ಹಾಗೂ ಪರಸ್ಪರ ಹಿರಿಯರು ಮತ್ತುಕುಟುಂಬದಅನ್ಯ ಸದಸ್ಯರು ನಡೆದುಕೊಂಡ ವಿಧಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಮನೆಯ ಜನ ತಮ್ಮ ಭ್ರಮನಿರಸನಗಳನ್ನು ಹೇಗೆ ನಿಭಾಯಿಸಿಕೊಳ್ಳುತ್ತಾರೆ, ಅವರ ಭಾವೋದ್ವೆÃಗದ ನಿರ್ವಹಣೆ ಹೇಗಿರುತ್ತದೆ, ಪರಸ್ಪರ ಗೌರವ ಕೊಡುವಿಕೆ ಯಾವ ರೀತಿಯದ್ದು, ಜಗಳ ಹೇಗೆ ಆಡುತ್ತಾರೆ, ಜಗಳವಾಡುವ ಸಂಂದರ್ಭದಲ್ಲಿ ಬಳಸುವ ಭಾಷೆ, ಉಪಯೋಗಿಸುವ ಪದಗಳು ಹೇಗಿರುತ್ತವೆ, ಇವೆಲ್ಲವೂ ಮಕ್ಕಳಿಗೆ ವಿಶಿಷ್ಟ ಕಲಿಕೆಗಳನ್ನು ಕೊಡುತ್ತಿರುತ್ತವೆ. ಈ ಕಲಿಕೆಗಳು ಬಹುತೇಕ ಜೀವನದುದ್ದಕ್ಕೂ ಬರುವುದರಿಂದ ಅವು ನಮ್ಮ ಬಾಹ್ಯ ವರ್ತನೆಯ ಮೇಲೆ ಪರಿಣಾಮವನ್ನು ಬೀರುತ್ತವೆ.
ಇದರಿಂದ ನಮಗೆ ಸಿಗುವ ಮೊದಲ ಪಾಠಎಂದರೆ, ಮಕ್ಕಳ ಎದುರು ನಾವು ಹೇಗೆ ವರ್ತಿಸುತ್ತೆÃವೆ ಎನ್ನುವುದರತ್ತ ಗಮನ ಇರಬೇಕುಎನ್ನುವುದು.
“ಚಿಕ್ಕವನಿದ್ದಾಗ ಆತÀನ ತಾಯಿ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಪ್ರಾಣಿ ಹಿಂಸೆ ಮಾಡಬಾರದು, ಚೀಮೆಗಳನ್ನು ಕೊಲ್ಲ ಬಾರದು ಎಂದೆಲ್ಲ ಹೇಳಿಕೊಟ್ಟಿದ್ದರಿಂದಲೇ ಆತ ದೊಡ್ಡವನಾಗಿ ಜಗತ್ತಿಗೇ ಅಹಿಂಸೆಯನ್ನು ಬೋಧಿಸಿದ್ದು” ಎಂದು ಕೈಲಾಸಂ ಅವರು ಗಾಂಧೀಜಿಯನ್ನು ಕುರಿತು ಹೇಳುತ್ತಾರೆ.ಈ ಹೇಳಿಕೆಯ ಜೊತೆಗೆ ನವತಾರುಣ್ಯದಲ್ಲಿರುವ ವ್ಯಕ್ತಿಯೊಬ್ಬಬನ ಅಸಮರ್ಪಕ ನಡವಳಿಕೆ ಕುರಿತು ಪ್ರಶ್ನಿಸಿದಾಗ, ರಾಜಕಾರಣಿ ತಂದೆ, “ನಾವೇನು ಸದಾ ಅವರ ಹಿಂದೆ ಇರುವುದು ಸಾಧ್ಯವೇ” ಎಂದು ಮರು ಪ್ರಶ್ನಿಸಿದುದನ್ನು ಜೋಡಿಸಿದಾಗ ಈ ಬಾಲ್ಯದಕಲಿಕೆಯ ಶಕ್ತಿ ನಿಮಗೆ ಅರಿವಾಗುತ್ತದೆ.
ನಾವು ಬೆಳೆದ ವಾತಾವರಣ, ನಮ್ಮ ವಂಶವಾಹಿನಿ ನಮ್ಮ ನಡವಳಿಕೆಯನ್ನು ನಿರ್ವಹಿಸುತ್ತವೆ, ಆದುದರಿಂದ ನಾವು ಏನೂ ಮಾಡಲಾಗದುಎಂದು ಕೈ ಚೆಲ್ಲಿಕೂರುವಅಗತ್ಯವೂಇಲ್ಲ. ನಮ್ಮ ಪ್ರಗತಿಗೆ, ಸಮಾಜದಲ್ಲಿನ ನಮ್ಮ ವ್ಯಕ್ತಿತ್ವಕ್ಕೆಧಕ್ಕೆತರಬಹುದಾದಂತಹ ಕಲಿಕೆಗಳನ್ನು ಕೈ ಬಿಟ್ಟು ಹೊಸ ಕಲಿಕೆಗಳನ್ನು ರೂಢಿಸಿಕೊಳ್ಳುವುದು ಸಾಧ್ಯವಿದೆ.
ತರ್ಕ ಮತ್ತು ಭಾವುಕತೆಗಳ ನಡುವೆ ಸಮತೋಲನ ಮಾಡಿಕೊಳ್ಳುವುದನ್ನು ಕಲಿತರೆ, ನಾವು ಉತ್ತಮ ಜೀವನ ನಡೆಸುವುದು ಸಾಧ್ಯವಿದೆ.

Source – Sakhigeetha.com

ಬ್ಯಾನಿ ಮೂಳಗ ಆಮ್ರದ ಹಳವಂಡ …..!

0

unnamed

ನನ್ನ ಆತ್ಮಿÃಯ ಮಿತ್ರರೋಬ್ಬರು ಇಂಗ್ಲಿÃಷಿನ “ ನಾಸ್ಟಾಲ್ಜಯಾ” ಪದಕ್ಕೆ ಸಮಾಂತರದ ಕನ್ನಡ ಶಬ್ದ ಹೇಳಬೇಕೆಂದು ನನಗೆ ದೂರವಾಣಿಯಿಂದ ಕೇಳಿದರು. ತಕ್ಷಣ ನನ್ನ ನೆನಪಿನ ಪುಟ್ಟಿಯಿಂದ “ಹಳವಂಡ ಎಂಬ ಗ್ರಾಮೀಣ ಬಳಕೆಯ ಶಬ್ದ ಹೆಕ್ಕಿತೆಗೆದು ಹೇಳಿದೆ. ಅಚ್ಚರಿಯೆಂದರೆ ಗದಗ ಜಿಲ್ಲೆಯ ರೋಣದ ಮೂಲದಿಂದ ಬಂದ ನ್ನ ಹೆಂಡತಿ; ಈ “ಹಳವಂಡ” ಪದ ಬಳಕೆಯಾಗಿದ್ದ ೫೦ ವರ್ಷಹಿಂದಿನ ಕನ್ನಡ ಗಾದೆ…. ಬ್ಯಾನಿ ಮೂಳಗ ಆಮ್ರದ ಹಳವಂಡ” ಹೇಳಿದಳು. ಅದನ್ನು ಆ ನ್ನ ಮಿತ್ರರು ತುಂಬ ಗೌರವದಿಂದ ದಾಖಲಿಸಿಕೊಂಡರು.

ಇತ್ತಿÃಚಿನ ನಗರೀಕರಣ, ರೈಲೀಕರಣ, ವಿಮಾನೀಕರಣ, ಮೊಬೈಲೀಕರಣಗಳ ಭೂತ ಪ್ರವೇಶದಿಂದ ನಮ್ಮ ಮೂಲಭೂತವಾದ ಶಬ್ದಗಳು, ನುಡಿಗಟ್ಟುಗಳು, ವಿಚಾರಗಳು, ಬದುಕಿನ ಶೈಲಿಗಳು, ನಮ್ಮತನದ ಕಂಪುತಂಪುಗಳು ಹೇಳಹೆಸರಿಲ್ಲದಂತೆ ಸಾಯುತ್ತಿವೆ. ಉದಾಹರಣೆಗೆ ಇಂದಿಗೆ ಅರವತ್ತು ವರ್ಚಗಳ ಹಿಮದೆ ಹುಬ್ಬಳಿಯಲ್ಲಿ ಢಾಣಾಢಂಗುರವಾಗಿ ಬಳಕೆಯಲ್ಲಿದ್ದ “ಅಲ್ಲಿಕೇರಿ” ಎಂಬ ಶಬ್ದ, “ಪಿಕ್‌ನಿಕ್” ಎಂಬ ಕಡಲಾಚೆಯ ಚಲುವಿಯ ಆಕ್ರಮಣದಿಂದ ಅತ್ತುಹೋತು. ವಿಜಾಪೂರ-ರಾಯಚೂರ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಇದೇ ಅರ್ಥದ “ಕೊಂತಿರೊಟ್ಟಿ” ಪದವೂ ಕಂಬಿಕಿತ್ತು ಹೋತು. ಹಳೇಹುಬ್ಬಳ್ಳಿಯ ನಮ್ಮ ಓಣಿಯ ಹೆಣ್ಣುಮಕ್ಕಳೆಲ್ಲ ಬೆಳಿಗ್ಗೆ ಭೆಟ್ಟಿಯಾದಾಗ ….. “ನ್ಯಾರೀ ಏನ ಮಾಡೀದೇ ಅನ್ನಕ್ಕಾ…..” ಅಂತ ಕೇಳುತ್ತಿದ್ದರು. ಆದರೆ ಇಂಡಿಯಾದ ಮೇಲೆ ಬಾಂಬ ದಾಳಿ ನಡೆದಂತೆ; “ಬ್ರೆಕ್‌ಫಾಸ್ಟ” ಪದ ಏರಿಬಂದು “ನ್ಯಾರಿ” ಪದ ಮೋರಿ ಸೇರಿತು.
ಏನ್ಮಜಾ ಅಂತೀರಿ? ೧೯೬೪-೬೫ ರ ಸಾಲಿನಲ್ಲಿ ಇಲಕಲ್ಲ ಕಾಲೇಜಿನಲ್ಲಿ ಓದುತ್ತಿದ್ದ ರಾಯಚೂರ ಜಿಲ್ಲಿಯ ಹಳ್ಳಿಯ ವಿದ್ಯಾರ್ಥಿಯೊಬ್ಬ ನನಗೆ ಹೇಳಿದ- “ಸರ್…. ನಾನು ಭಾರೀಭಾರೀ ಯಕ್ರಲಾಡೀದ್ನಿರಿ….. ಆದ್ರೂ ನಾಪಾಸಾದ್ನಿರಿ….”. ಈ “ಯಕ್ರಲಾಡು” ಎಂಬ ಶಬ್ದದ ಶಕ್ತಿಗೆ ಸಮಾಂತರವಾದ ಪದ ಇಂಗ್ಲಿÃಷಿನಲ್ಲಿ ನನಗೆ ಎನ್ನೂ ಸಿಕ್ಕಿಲ್ಲ. ಇದಲ್ಲದೇ ಇಂಗ್ಲಿÃಷಿನ…. “ಅರ್ಜಂಟ್ಲಿ”…. “ಕ್ವಿ ಕ್ಲಿ’….”ಇಮ್ಮಿÃಡಿಯೇಟ್ಲಿ”…. ಈ ಎಲ್ಲ ಶಬ್ದಗಳನ್ನೂ ಮೀರಿಸಿದ ಒಂದು ಪದ ನಾವು ಕನ್ನಡದಲ್ಲಿ ಬಳಸುತ್ತಿದ್ದೆವು. “ರಾತ್ರಿ ನನ್ನ ಎದಿ ಶಬ್ದಗಳನ್ನೂ ಮೀರಿಸಿದ ಒಂದು ಪದ ನಾವು ಕನ್ನಡದಲ್ಲಿ ಬಳಸುತ್ತಿದ್ದೆವು. “ರಾತ್ರಿ ನ್ನ ಎದಿ ! ಈ “ಬುದುಂಗನೇ” ಎಂಬ ಶಬ್ದದ ತೀವ್ರತೆ-ರಭಸತೆ ಸಾರಿ ಹೇಳುವ ಪದದ ಎದುರಿಗೆ ಇಂಗ್ಲಿÃಷಿನ “ಅರ್ಜಂಟ್ಲಿ”, “ಕ್ವಿ ಕ್ಲಿ” ಗಳಲ್ಲೆ ಸಪ್ಪಟ ಸಪ್ಪನಬ್ಯಾಳಿ!
೫೦ ವರ್ಷಗಳ ಹಿಂದೆ ಇಲಕಲ್ಲಿನಲ್ಲಿ ಯಾರಿಗಾದರೂ ಬೈಯುವಾಗ….. “ಕುರ್ಸಾವಾಗ….” ಅಂತ ಬಯ್ಯುತ್ತಿದ್ದರು. ಈ “ಕುರ್ಸಾಲಿ” ಅಂದರೇನು ಅಂತ ಕೇಳಿದೆ. ಉತ್ತರ ಸಿಕ್ತು. ಆಗ ಜಾತಿ-ಕುಲಗಳು ತುಂಬಾ ಬಲಢ್ಯವಾಗಿದ್ದ ಕಾಲ. ಉದಾ- ಪಟ್ಟಸಾಲಿ, ಪಂಚಮಸಾಲಿ, ಅಗಸಾಲಿ, ಕುರುಂಸಾಲಿ ಇಂತ ನೂರಾರು ಜಾತಿಗಳು. ಇವರಲ್ಲಿ ಪರಸ್ಪರ ಮದುವೆ ನಿಷಿದ್ಧವಾಗಿತ್ತು. ಒಂದು ಜಾತಿಯ ಹುಡುಗ ತನ್ನ ಜಾತಿಯ ಚೌಕಟ್ಟನ್ನು ಮೀರಿ ಇನ್ನೊÃಂದು ಜಾತಿಯ ಹುಡುಗಿಯನ್ನು ಲವ್ ಮಾಡಿದಾಗ ಅವರಿಗೆ ಹುಟ್ಟಿದ ಕೂಸಿನ ಜಾತಿ ಯಾವುದು? .ಅಂಥಾ ಮಿಶ್ರಜಾತಿಯವರಿಗೆ ಹುಟ್ಟಿದ ಮಕ್ಕಳು; ಆ ಜಾತಿಯೂ ಅಲ್ಲ, ಈ ಜಾತಿಯೂ ಅಲ್ಲ; ಅದು “ಕುರ್ಸಾಲಿ” ಆಗುತ್ತಿತ್ತು! ಆದ್ದರಿಂದ ಆಗ “ಲೇ ಕುರ್ಸಾಲ್ಯಾ” ಎಂಬುದು ಜನಪ್ರಿಯ ಪ್ರಿÃತಿಯ ಬೈಗುಳವೂ ಆಗಿತ್ತು. ಯಾರಾದರೂ ಗೆಳೆಯರು ಪ್ರಿÃತಿಯಿಂದ “ಕುರ್ಸಾಲ್ಯಾ” ಅಂತ ಬೈದರೆ ಹಾಗೆ ಬೈಸಿಕೊಂಡವನು ಖುಶಿಯಿಂದ ಮುಳುಮುಳು ನಗುತ್ತಿದ್ದ.
ಇತ್ತಿÃಚೆಗೆ ನಗರೀಕರಣದಿಂದ ಸಿಮೆಂಟ್ ಬಿಲ್ಡಿಂಗುಗಳ ಬ್ರಹ್ಮಾಂಡ ರಾಕ್ಷಸರ ಪ್ರವೇಶವಾಯಿತು. ಇದರಿಂದ ನಮ್ಮ ಹಳೆಯ ಮಣ್ಣಿನ ಮೇಲ್ಮುದ್ದಿಯ ಮನೆಗಳಲ್ಲಿ ಸಹಜವಾಗಿ ಪ್ರಯೋಗದಲ್ಲಿದ್ದ ಆ ಅಚ್ಚಗನ್ನಡದ ಹಳೇ ಶಬ್ದಗಳು ಈಗ ಗುಳೇಎದ್ದು ಗುಟಕ್ ಅಂದವು. ಸಿಮೆಂಟ ಬಿಲ್ಡಿಂಗುಗಳ ಇಂಜಿನೀಯರ ಶೈಲಿಯ ಸಿಂಗಲ್ ಬೆಡ್ ರೂಮ್, ಡಬಲ್ ಬೆಡ್ರೂಮ, ಡ್ರಾಯಿಂಗ್ ರೂಮ್, ಲಿವಿಂಗ ರೂಮ್, ಕಿಚೆನ್, ಬಾತ್ರೂಮ ಇತ್ಯಾದಿ ಶಬ್ದಗಳ ಹೊಸಯುಗ ಪ್ರವೇಶವಾದ ಮೇಲೆ; ನಮ್ಮ ಹಳೇ ಮನೆಗಳ….”ಅಂಕಣ”, “ಬಂಕಣ”, “ತಳಪಾಯ”, “ಪಡಪಾಯ”, “ಜಂತಿ” “ಪಡಜಂತಿ”, “ಬೋದು”, ಕಟ್ಟಿ”, “ಹೋಳಗಟ್ಟಿ”, “ಹುಸಿ”, “ನಾಗೊಂದಿ”, “ತೊಲಿ”, “ಕಂಬ”, “ಗೊಂಬಿ”, “ಕಾಲ್ದಿÃವಿಗಿ”, “ನೆಲವು’, “ಅಡ್ಡೂಣಿಗಿ”, “ಕ್ವಾಟೀಕಾಣಿ”, “ಬೋದು”, “ಪಾತಾಳಂಕಣ”, “ಮೇಲಂಕಣ”, “ಗ್ವಾದ್ಲಿ” “ಒಳಟ್ಟ”, “ಹದ್ಲಿಕ್ವಾಣಿ”, “ಗೂಟ”, “ಸರಗೂಟ”, “ಜಗಲಿ”, “ಹರನಾಳಿಗಿ”, “ಪಾಗಲಗೂಟ”, “ಲಾವಂಡಿಗಿ”, “ಅಗುಳಿ”, ಚಿಲಕ”, “ಬೆಳಕಿಂಡಿ”, “ಹೊಚ್ಚಲ”, “ಬಳತ”, “ಕಣ್ಣಿ”, “ಬಾಯ್ಚಿಕ್ಕಾ”, “ಗುದ್ದಿ”, “ಜಂತಗುಂಟಿ”, “ಮಡಿಗುಂಟಿ”, “ಗ್ವಾರಿ”, “ಬ್ಯಾಕೋಲು”, ಕಾಳು ತೂರುವ “ಮೆಟ್ಟು”, “ಕಲಗಂಚು”, “ಲ್ಯಾವಿಗಂಟು” …… ಇಂಥಾ ಸಾವಿರಾರು ಶಬ್ದಗಳು ಇಂದಿನ ನಿರ್ಜೀವ ಇಂಜಿನೀಯರ ಶೈಲಿಯ ಮನೆಗಳಲ್ಲಿ ಮಾಯವಾದವು.
ಅಂದಿನ ಆ ಕೂಡುಘರಾಣೇದ ಆ ಮನೆಗಳಲ್ಲಿ ಹತ್ತಾರು ಜೀವಂತ ರೂಮುಗಳಿರುತ್ತಿದ್ದವು. ನಮ್ಮ ಮನೆಯಲ್ಲಿ ಹದಿಮೂರು ಕ್ವಾಣಿಗಳು ಎರಡು ಅಡಗೀಮನೆಗಳು, ಒಮದು ದೊಡ್ಡಬಚ್ಚಲ ಮನೆ, ದಂದಕ್ಕಿ ಇದ್ದವು. ಗುಬ್ಬಿಗಳಿಗೆ ಸ್ನಾನ ಮಾಡಲು ಚಿಕ್ಕ ಕಲ್ಬಾನಿ ಇತ್ತು. ಕ್ವಾಣಿಗಳಲ್ಲಿ…. “ಅಜ್ಜನಕ್ವಾಣಿ”, “ಕಾಕಾನ ಕ್ವಾಣಿ”, “ದೊಡ್ಡಪ್ಪನಕ್ವಾಣಿ”, “ಚಿಗವ್ವನ ಕ್ವಾಣಿ”, “ಹದ್ಲಿಕ್ವಾಣಿ”, “ಕ್ವಾಟಿ ಕ್ವಾಣಿ”…… ಇಂಥಾ ಹತ್ತಾರು ಕ್ವಾಣಿಗಳೊಂದಿಗೆ ಒಣದು “ದೆವ್ವನ ಕ್ವಾಣಿ”ಯೂ ಇರುತಿತ್ತು. ಆ ಕ್ವಾಣಿಯಲ್ಲಿ ಹಿಂದೆ ಸತ್ತವರೆಲ್ಲ ದೆವ್ವವಾಗಿ ಚಕ್ಕಾ ಆಡುತ್ತ, ಹರಟೆ ಹೊಡೆಯುತ್ತ ಕದ್ದುಮುಚ್ಚಿ ಕುಳಿತಿರುತ್ತಿದ್ದರು. ನನಗೆ ನ್ನ ಅಕ್ಕ ಗುರಕ್ಕನಿಗೆ ಆ ದೆವ್ವಗಳು ಕವನೆಳ್ಳು ಸ್ಪಷ್ಟವಾಗಿ ಕಾಣುತ್ತಿತ್ತು. ಒಮ್ಮೊಮ್ಮೆ ಮಾತೂ ಕೇಳುತ್ತಿತ್ತು. ಅಂದಿನ ಈ ಲೈಟಿನ ಯುಗದಲ್ಲಿ ಪಾಪ ಆ ಹಾಳುಹಳೇ ದೆವ್ವಗಳಿಗೆ ನಿರುಂಬ್ಳಾಗಿ ಇರಲು ಜಾಗ ಇತ್ತು. ಇಂದಿನ ಈ ಲೈಟಿನ ಯುಗದಲ್ಲಿ ಪಾಪ ಆ ಹಾಳುಹಳೇ ದೆವ್ವಗಳೆಲ್ಲ ಗುಳೇ ಎದ್ದು ಹೋಗಿಬಿಟ್ಟುವು! ದೆವ್ವಗಳ ಸಂತತಿ ನಾಶವಾಗಿ ಹೋತು. ಹುಂಚಿಮರದ ದೆವ್ವ, ಕುಂಬಳಕಾಯಿಯಲ್ಲಿ ಕುಂತ ದೆವ್ವ, ಜೋಗತೆರ ಬಾವಿ ದೆವ್ವ, ಅಗಸೀದೆವ್ವ ಎಲ್ಲಾ ಇಲ್ಲವಾದವು.
ಓ…… ಈಗ ನಾವು ಮನುಷ್ಯರೇ ಸ್ಪೆÃಶಲ್ ದೆವ್ವ ಆಗಿರುವಾಗ ಆ ಹಳೇ ದೆವ್ವಗಳ ಅವಶ್ಯಕತೆಯಾದರೂ ಏನಿದೆ ಹೇಳ್ರಿÃ?

unnamed

Source – Sakhigeetha.com

ಸಂಚಲನ ಭಾರತಕ್ಕೆ ಭವಿಷ್ಯ ಇದೆಯೇ…? -ಡಾ| ಬೈರಮಂಗಲ ರಾಮೇಗೌಡ

0

images (7)

ವಾಟ್ಸಪ್‌ನಲ್ಲಿ ತೂರಿಬಂದ ಒಂದು ಸಂದೇಶ ವಿಶೇಷವಾಗಿ ನನ್ನ ಗಮನ ಸೆಳೆಯಿತು. ಅದನ್ನು ಸಮಾನವಾಗಿ ಆಲೋಚಿಸುವ ಗೆಳೆಯರೊಂದಿಗೆ ಹಂಚಿಕೊಳ್ಳಬೇಕು ಎನಿಸಿತು. ಒಂದು ಸಣ್ಣ ಟಿಪ್ಪಣಿಯೊಂದಿಗೆ ಸುಮಾರು ನೂರು ಜನ ಗೆಳೆಯರಿಗೆ ಅದನ್ನು ರವಾನಿಸಿದೆ. ಸಂದೇಶದಲ್ಲಿ ಒಂದು ತೈಲ ವರ್ಣಚಿತ್ರ ಇತ್ತು. ಅದು ಪ್ರಾಚೀನ ಅಥೆನ್ಸ್ನಲ್ಲಿದ್ದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಬಂಧಿಸಿದ್ದಾಗಿತ್ತು. ಸಂಸತ್ ಭವನದ ನಡುವೆ ಇದ್ದ ಪ್ರಾಂಗಣದಲ್ಲಿ ನೂರಾರು ಜನ ನೆರೆದಿದ್ದಾರೆ. ಅವರ ನಡುವೆ ಒಬ್ಬ ಎದ್ದುನಿಂತು ಧೀರೋದಾತ್ತನಂತೆ ಒಂದು ಕೈ ಮೇಲೆತ್ತಿ ತನ್ನ ಅಭಿಪ್ರಾಯವನ್ನು ಮಂಡಿಸುತ್ತಿದ್ದಾನೆ. ಉಳಿದವರು ಅವನ ಮಾತುಗಳನ್ನು ಕುತೂಹಲ ಆಸಕ್ತಿಗಳಿಂದ ಆಲಿಸುತ್ತಿದ್ದಾರೆ. ಚಿತ್ರದ ಕೆಳಗಿರುವ ಸಂದೇಶ ಇಂತಿದೆ: “ವಿಶ್ವದ ಮೊದಲ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದ್ದ ಪ್ರಾಚೀನ ಅಥೆನ್ಸ್ನಲ್ಲಿ `ಆಸ್ಟಾçಸಿಸಮ್’ ಎಂದು ಕರೆಯಲಾಗುತ್ತಿದ್ದ ಒಂದು ಪದ್ಧತಿಯಿತ್ತು. ಅದರ ನಿಯಮದಂತೆ ಅಥೆನ್ಸ್ನ ಪ್ರಜೆಗಳೆಲ್ಲ ವರ್ಷದಲ್ಲಿ ಒಂದು ದಿನ ಒಟ್ಟಾಗಿ ಸೇರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ವಿನಾಶಕಾರಿ, ಗಂಡಾಂತರ ಎನಿಸುವ ರಾಜಕಾರಣಿಯನ್ನು ಆಯ್ಕೆಮಾಡಲು ಮತ ಚಲಾಯಿಸುತ್ತಿದ್ದರು. ಅದರಲ್ಲಿ ಗೆಲ್ಲುತ್ತಿದ್ದ ರಾಜಕಾರಣಿಯನ್ನು ಹತ್ತು ವರ್ಷಗಳ ಕಾಲ ಅಥೆನ್ಸ್ನಿಂದ ಗಡೀಪಾರು ಮಾಡಲಾಗುತ್ತಿತ್ತು.” ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕನಾದ, ಬಲಿಷ್ಠನೂ ದುರ್ಜನನೂ ಜನಮೆಚ್ಚಿಕೆಯಿಲ್ಲದವನೂ ಆದ ರಾಜಕಾರಣಿಯನ್ನು ದೇಶದಿಂದ ಹೊರಗಟ್ಟಲು ಅಥೆನ್ಸ್ನವರು ಅನುಸರಿಸುತ್ತಿದ್ದ ಕ್ರಮವನ್ನು ನಾವೂ ಅಳವಡಿಸಿಕೊಂಡಲ್ಲಿ ನಮ್ಮ ಭ್ರಷ್ಟ, ದುಷ್ಟ, ನೀಚ, ಘಾತುಕ ರಾಜಕಾರಣಿಗಳಿಂದ ರಾಜ್ಯವನ್ನೂ ರಾಷ್ಟçವನ್ನೂ ಜನತಂತ್ರ ವ್ಯವಸ್ಥೆಯನ್ನೂ ಉಳಿಸಿಕೊಳ್ಳಬಹುದಲ್ಲವೇ? ಎನ್ನುವ ಟಿಪ್ಪಣಿಯನ್ನು ಈ ಸಂದೇಶದ ಜೊತೆಗೆ ಕಳಿಸಿದ್ದೆ. ಬಹಳಷ್ಟು ಜನ ಸಂದೇಶದ ಬಗೆಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ಕೆಲವರು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲಿಲ್ಲ. ಅವರು ಓದಿಕೊಂಡಿದ್ದಾರೆನ್ನುವುದಕ್ಕೆ ಸಾಕ್ಷಿಯಾಗಿ ನೀಲಿಬಣ್ಣದ ಎರಡು `ಸರಿ’ ಗುರುತುಗಳು ಗೋಚರಿಸಿದವು.

ಈ ಲೇಖನ ಬರೆಯಲು ನನ್ನನ್ನು ಪ್ರೆÃರೇಪಿಸಿದ ಒಂದು ಸಂಗತಿ–ಐದಾರು ವರ್ಷಗಳ ಕಾಲ ನನ್ನ ಸಹೋದ್ಯೊÃಗಿಯಾಗಿದ್ದ, ಅಧ್ಯಯನಶೀಲ ಮತ್ತು ವಿಚಾರವಂತ ನಿವೃತ್ತ ಕನ್ನಡ ಅಧ್ಯಾಪಕರೊಬ್ಬರು ಸಂದೇಶಕ್ಕೆ ಪ್ರತಿಕ್ರಿಯಿಸಿದ ರೀತಿ. “ಭಾರತದಲ್ಲಿ ಎಲ್ಲವೂ ಕನಸೇ. ಮೇರಾ ದೇಶ್ ಮಹಾನ್ ಎಂಬ ಮಾತೇ ಹಸಿ ಸುಳ್ಳಾಗಿದೆ. ಭಾರತದ ಮೌಲ್ಯ ಇಂದು ಭ್ರಷ್ಟತೆಯೇ ಆಗಿದೆ. ಭಾರತಕ್ಕೆ ನಿಜಕ್ಕೂ ಭವಿಷ್ಯವಿಲ್ಲ. ಇದನ್ನು ನೋಡಲು ಮುಂದೆ ನಾವೂ ಇರುವುದಿಲ್ಲ…” ಇತ್ತಿÃಚಿನ ವರ್ಷಗಳಲ್ಲಿ ದೇಶದಲ್ಲಿ ನಡೆಯುತ್ತಿರುವ, ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ಸ್ನೆÃಹಿತರ ಮನಸ್ಸನ್ನು ಆವರಿಸಿಕೊಂಡಿರುವ ಭಯ, ಆತಂಕ, ನಿರಾಶೆ, ವಿಷಾದ ಇವೆಲ್ಲವೂ ಸಕಾರಣವಾದದ್ದು ಅನ್ನಿಸುತ್ತದೆ. ಭಾರತದ ಭವಿಷ್ಯ ಉಜ್ವಲವಾಗಿರಬೇಕೆಂದು ಬಯಸುವವರು, ಅದನ್ನು ಮಾತು ಭಾಷಣ ಆಶ್ವಾಸನೆಗಳಲ್ಲಿ ತುಂಬಿ ತುಳುಕಿಸುವವರು ದೇಶದ ಅಂಥ ಉಜ್ವಲ ಭವಿಷ್ಯ ಯುವಜನತೆಯ ಭವಿಷ್ಯದ ಮೇಲೆ ನಿಂತಿದೆ ಎನ್ನುವ ಕನಿಷ್ಟ ಆಲೋಚನೆಯನ್ನೂ ಮಾಡಿದಂತಿಲ್ಲ. ಶಿಕ್ಷಣ ಸಂಸ್ಥೆಗಳೆನ್ನುವ ಕಾರ್ಖಾನೆಗಳಿಂದ ಪ್ರತಿವರ್ಷ ಲಕ್ಷಾಂತರ ಸಂಖ್ಯೆಯ ಯುವಜನರು ಪದವೀಧರರಾಗಿ ಹೊರಬರುತ್ತಿದ್ದಾರೆ. ಬದುಕಿಗೆ ಕಿಂಚಿತ್ತೂ ಉಪಯುಕ್ತವಾಗದ ಸಂಗತಿಗಳನ್ನು ತಲೆಯೊಳಗೆ ತುಂಬಿಕೊಂಡು ಹೊರಬರುವ ಅವರು ವಾಸ್ತವ ಪ್ರಪಂಚಕ್ಕೆ ಮುಖಾಮುಖಿಯಾದಾಗ ದಿಗ್ಭಾçಂತರಾಗುತ್ತಾರೆ. ಕನಸುಗಳಿಲ್ಲದ, ಮಹತ್ವಾಕಾಂಕ್ಷೆಗಳಿಲ್ಲದ, ಗುರಿಗಳಿಲ್ಲದ, ಛಲವಿಲ್ಲದ, ಸಂಕಲ್ಪವಿಲ್ಲದ ಆ ಬರಡು ಭೂಮಿಗಳಲ್ಲಿ ಯಾವ ಫಲವನ್ನು ತಾನೇ ನಿರೀಕ್ಷಿಸಲಾದೀತು? ಶ್ರಿÃಮಂತ ಕುಟುಂಬಕ್ಕೆ ಸೇರಿದವರಾಗಿದ್ದರೆ ಅಪ್ಪ ಮಾಡಿಟ್ಟ ಆಸ್ತಿಯನ್ನು ಅನುಭವಿಸುತ್ತ, ಶ್ರಿÃಮಂತಿಕೆಯ ಮೋಜು ಮತ್ತು ವ್ಯಸನಗಳಿಗೆ ಬಲಿಯಾಗಿ ಸಮಾಜಕ್ಕೆ ಭಾರವಾಗುತ್ತಾರೆ; ದುಷ್ಟಶಕ್ತಿಗಳ ಸೆಳೆತಕ್ಕೆ ಒಳಗಾದರೆ ಸಮಾಜಘಾತುಕರಾಗುತ್ತಾರೆ. ಅನೇಕರನ್ನು ಅನೇಕ ರೀತಿಗಳಲ್ಲಿ ಕೆಡಿಸುತ್ತಾರೆ. ಹಾಗೆಯೇ ಮಧ್ಯಮ, ಬಡಕುಟುಂಬಗಳಿಗೆ ಸೇರಿದವರು ಬದುಕಿನಲ್ಲಿ ನೆಲೆ ನಿಲ್ಲುವ, ತಮ್ಮ ಕುಟುಂಬಗಳಿಗೆ ಆಧಾರವಾಗಬೇಕೆನ್ನುವ ಹಂಬಲದಿಂದ ಉದ್ಯೊÃಗಗಳನ್ನು ಹುಡುಕುತ್ತಾ, ದಣಿಯುತ್ತಾ, ನಿರಾಶರಾಗುತ್ತ ಹತಾಶೆಯ ಅಂಚಿಗೆ ಸರಿಯುತ್ತಾರೆ. ಅಂಥವರು ಮುಂದೆ ಒಳ್ಳೆಯದಾದೀತು ಎನ್ನುವ ಭರವಸೆಯಿರಿಸಿಕೊಂಡು ಮಾಲ್‌ಗಳಂಥ ಐಷಾರಾಮಿ ಪ್ರಪಂಚದಲ್ಲಿ, ಅಂಥದೇ ಇನ್ನೊಂದು ತಾಣದಲ್ಲಿ ತಿಂಗಳಿಗೆ ಐದರಿಂದ ಹದಿನೈದು ಸಾವಿರ ಸಂಬಳಕ್ಕೆ ದುಡಿಯುತ್ತ ಬದುಕುವ ಆಸಕ್ತಿಯನ್ನೆÃ ಕಳೆದುಕೊಳ್ಳುತ್ತಾರೆ. ಸಂಸಾರಕ್ಕೂ ಒತ್ತಾಸೆಯಾಗಲು ಸಾಧ್ಯವಾಗದೆ, ತಮ್ಮ ಖರ್ಚುವೆಚ್ಚಗಳಿಗೂ ಸರಿದೂಗಿಸಿಕೊಳ್ಳಲಾಗದೆ ಒದ್ದಾಡುತ್ತಾರೆ. ಅಂಥವರ ಅತಿ ಸೂಕ್ಷö್ಮತೆಯೇ ಅವರನ್ನು ಖಿನ್ನತೆಗೂ ಅಲ್ಲಿಂದ ಆತ್ಮಹತ್ಯೆಗೂ ದೂಡಿದರೆ ಅಚ್ಚರಿಯಿಲ್ಲ. ಯುವ ಸಬಲೀಕರಣದಂಥ ಇಲಾಖೆಗಳು ಕೋಟಿಗಟ್ಟಲೆಯ ಯೋಜನೆಗಳನ್ನು ಸಿದ್ಧಪಡಿಸಿ ನನಗಿಷ್ಟು ನಿನಗಿಷ್ಟು ಅಂತ ತಿಂದುಹಾಕಿವೆಯೇ ಹೊರತು, ಯುವಜನರ ಸಬಲೀಕರಣವನ್ನಾಗಲೀ ಉದ್ಧಾರವನ್ನಾಗಲೀ ಮಾಡಿದ ಉದಾಹರಣೆಗಳು ಗೋಚರವಾಗುತ್ತಿಲ್ಲ. ಯುವಜನರ ಭವಿಷ್ಯ ನಿರ್ಮಾಣದ ಬಗೆಗೆ ಚಿಂತನೆಯನ್ನೆÃ ಮಾಡದೆ, ಅವರಿಗೆ ನೆರವಾಗುವ ಯಾವ ಯೋಜನೆಗಳನ್ನೂ ಅನುಷ್ಠಾನಕ್ಕೆ ತರದೆ ಬರೀ ಭಾಷಣ ಹೊಡೆದುಕೊಂಡು, ಭರವಸೆಗಳನ್ನು ಜಡಿದುಕೊಂಡು ವಿಧಾನಸಭೆ, ಲೋಕಸಭೆ ಅವಧಿಗಳನ್ನು ಪೂರೈಸಿದರೆ ಅದರಿಂದ ಭಾರತದ ಭವಿಷ್ಯ ರೂಪಿತವಾಗುವುದೇ?
ಇದಕ್ಕಿಂತಲೂ ಭಯಂಕರವಾದ, ಆಘಾತಕಾರಿಯಾದ, ಭಾರತದ ಭವಿಷ್ಯವನ್ನೆà ಸರ್ವನಾಶಕ್ಕೆ ಈಡುಮಾಡುಬಲ್ಲ ಸಂಗತಿಯೆಂದರೆ- ಭಾರತ ಸಂವಿಧಾನದ ಮೂರು ಕಣ್ಣುಗಳೆಂದೇ ಭಾವಿಸಲಾಗಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಮಹಾಭ್ರಷ್ಟಾಚಾರಗಳನ್ನೆಸಗುತ್ತ, ದೊಡ್ಡದೊಡ್ಡ ಆರೋಪಗಳು ಸಾಬೀತಾಗುತ್ತ ದೇಶವನ್ನು ಅಧಃಪತನದ ದಾರಿಯಲ್ಲಿ ವೇಗವಾಗಿ ಸಾಗುವಂತೆ ಮಾಡಿರುವುದು. ರಾಷ್ಟಿçÃಯ ಪಕ್ಷಗಳೆಂದು ಮೆರೆಯುತ್ತಿರುವಂಥವೇ ಅಪರಾಧದ ಆರೋಪ ಹೊತ್ತವರನ್ನೂ, ಅಪರಾಧಕ್ಕಾಗಿ ಸೆರೆಮನೆ ವಾಸ ಅನುಭವಿಸಿದವರನ್ನೂ ಅವರ ಬಳಿ ಕೊಳ್ಳೆ ಹೊಡೆದು ಇಟ್ಟುಕೊಂಡಿರುವ ಅಪಾರ ಪ್ರಮಾಣದ ಹಣ ಇದೆ, ಅದು ಚುನಾವಣೆಯಲ್ಲಿ ಅನುಕೂಲಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ರತ್ನಗಂಬಳಿ ಹಾಸಿ ಬರಮಾಡಿಕೊಂಡು, ಭಕ್ತಿಪೂರ್ವಕವಾಗಿ ಟಿಕೆಟ್ ಕೊಟ್ಟು, ಚುನಾವಣೆಗಳಲ್ಲಿ ಗೆಲ್ಲಿಸಿ, ಮಂತ್ರಿಸ್ಥಾನವನ್ನೂ ಕೊಟ್ಟು ಮೆರೆಸುತ್ತಿರುವುದ;. ಅಂಥವರು ಖರ್ಚು ಮಾಡಿದ ಹಣವನ್ನು ಬಡ್ಡಿ ಸಮೇತ ಸಂಪಾದಿಸಿಕೊಳ್ಳಲು ಅನುಸರಿಸುವ ಹಗಲು ದರೋಡೆಯನ್ನು ಕಂಡೂ ಕಾಣದಂತೆ ಕೇಳಿಸಿದರೂ ಕೇಳಿಸದಂತೆ ಸುಮ್ಮನಿದ್ದು, ಅಂಥ ಭ್ರಷ್ಟಾಚಾರದ ರಕ್ತಬೀಜಾಸುರ ಸಂತತಿಯ ಕಬಳಿಕೆಗೆ ಅನುವು ಮಾಡಿಕೊಡುವುದು. ಈ ಬಕಾಸುರ ರಾಜಕಾರಣಿಗಳು ಐದು ಹತ್ತು ವರ್ಷಗಳ ಹಿಂದೆ ಯಾವ ಸ್ಥಿತಿಯಲ್ಲಿದ್ದರು? ಇಷ್ಟೊಂದು ಕಡಿಮೆ ಅವಧಿಯಲ್ಲಿ ಅವರ ಆದಾಯ ಕೋಟಿ ಕೋಟಿ ಏರಿಕೆಯಾಗುವುದು ಸಾಧ್ಯವೇ? ಎಂದು ವರಮಾನ ತೆರಿಗೆಯಾಗಲೀ ಚುನಾವಣಾ ಆಯೋಗವಾಗಲೀ ನ್ಯಾಯಾಂಗವಾಗಲೀ ಗಂಭೀರವಾಗಿ ಚಿಂತನೆ ಮಾಡಿ, ಅವರ ಭ್ರಷ್ಟತೆಯ ಬೇರುಗಳನ್ನು ಕತ್ತರಿಸುತ್ತಿಲ್ಲವಾದ್ದರಿಂದ ಅವರ ಪೊಗರು, ಧಿಮಾಕು ಏರುಮುಖಿಯಾಗೇ ನಡೆದಿದೆ. ಅಲ್ಲೊಬ್ಬರು ಇಲ್ಲೊಬ್ಬರು ಸಾಮಾಜಿಕ ಕಾರ್ಯಕರ್ತರೋ ಪತ್ರಕರ್ತರೋ ಅವರ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಹೊರಟರೆ ಅಂಥವರನ್ನು ಕೊಲೆ ಮಾಡಿ ಆರೋಪದಿಂದ ನುಸುಳಿಕೊಳ್ಳುವ ರಾಕ್ಷಸಬಲವೂ ಅವರಿಗಿದೆ. ಹೆಸರು, ಹಣ, ಆಸ್ತಿ, ಗಂಭೀರ ಅಪರಾಧ ಪ್ರಕರಣಗಳಿಂದ ರಕ್ಷಣೆ, ಕಾನೂನನ್ನು ತನಗೆ ಬೇಕಾದಂತೆ ಬಾಗಿಸಿಕೊಳ್ಳುವುದು ಇತ್ಯಾದಿ ಎಲ್ಲವೂ ರಾಜಕಾರಣದಿಂದಲೇ ಸಾಧ್ಯ ಎನ್ನುವ ಬಲವಾದ ನಂಬಿಕೆಯಿಂದ ಅಜ್ಞಾನಿಗಳು, ಅವಿವೇಕಿಗಳು, ಭಂಡರು, ಅರೆಹುಚ್ಚರು, ಅರುಳು ಮರಳಿನವರು ಕೂಡ ರಾಜಕೀಯದತ್ತ ಆಕರ್ಷಿತರಾಗುತ್ತಿದ್ದಾರೆ. ರಾಜ್ಯ ವಿಧಾನಸಭೆಗಳಿಗೆ, ಲೋಕಸಭೆಗೆ, ಸ್ಥಳೀಯ ಆಡಳಿತ ಸಂಸ್ಥೆಗಳಾದ ನಗರಪಾಲಿಕೆ, ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್‌ಗಳಿಗೆ ಆಯ್ಕೆಯಾಗಿ ಬರುವವರಲ್ಲಿ ಎಷ್ಟೊಂದು ಮಂದಿ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ತಗುಲಿಕೊಂಡಿರುತ್ತಾರೆ, ರೌಡಿಗಳಾಗಿರುತ್ತಾರೆ ಎನ್ನುವ ಅಂಕಿಅಂಶಗಳೇ ನಮ್ಮ ಬೆಚ್ಚಿಬೀಳಿಸುತ್ತವೆ. ಅವರು ಮಾಡಿರುವ, ಮಾಡಲಿರುವ ಸರ್ವಾಪರಾಧಗಳಿಗೂ ರಾಜಕೀಯ ಅಧಿಕಾರವೇ ಶ್ರಿÃರಕ್ಷೆಯಾಗಿರುವುದರಿಂದ ಅಲ್ಲಿಗೆ ಆಯ್ಕೆಯಾಗಲು ಅವರು ಎಷ್ಟಾದರೂ ಹಣ ಚೆಲ್ಲಬಲ್ಲರು, ಯಾವುದೇ ಅಡ್ಡದಾರಿಯಲ್ಲಾದರೂ ಸಾಗಬಲ್ಲರು. ಒಂದು ಸಾರಿ ಆಯ್ಕೆಯಾದರಂತೂ ಮುಗಿದೇ ಹೋಯಿತು! ಅದು ಅವರಿಗೆ ಅಜೀರ್ಣವಾಗುವಂತೆ ಮೇಯಲು ಸೊಂಪಾದ ಹುಲ್ಲುಗಾವಲು! ಅಲ್ಲಿ ಕಬಳಿಸುವುದು, ಮತ್ತೆ ಚುನಾವಣೆಯಲ್ಲಿ ಸುರಿಯುವುದು, ಆಯ್ಕೆಯಾಗುವುದು, ಮತ್ತೆ ಮೇಯುವುದು. ಬೇರೆಲ್ಲೂ ಹೋಗುವುದು ಬೇಡ, ಬರೀ ಕರ್ನಾಟಕದ ಉದಾಹರಣೆ ತೆಗೆದುಕೊಂಡರೂ ಸಾಕು. ಸ್ವಾತಂತ್ರö್ಯ ಬಂದಾಗಿನಿಂದ ನಮ್ಮ ರಾಜಕಾರಣಿಗಳು ರಾಮನ ಲೆಕ್ಕದಲ್ಲಿ, ಕೃಷ್ಣನ ಲೆಕ್ಕದಲ್ಲಿ ಎಷ್ಟೆಷ್ಟು ಸಂಪಾದನೆ ಮಾಡಿದಾರೆನ್ನುವ ನಿಖರ ಲೆಕ್ಕ ತೆಗೆದುಕೊಂಡರೆ ಹಳ್ಳಿಗಳು ದೈನೇಸಿ ಸ್ಥಿತಿಗೆ ತಲುಪುತ್ತಿರಲಿಲ್ಲ, ಯುವಕ ಯುವತಿಯರು ಬದುಕು ಕಟ್ಟಿಕೊಳ್ಳಲಾಗದ ಅಸಹಾಯಕತೆಯಲ್ಲಿ ನರಳುತ್ತಿರಲಿಲ್ಲ, ಕಾಡುಗಳು ಬೋಳಾಗುತ್ತಿರಲಿಲ್ಲ, ರೈತರ ಆತ್ಮಹತ್ಯೆ ನಡೆಯುತ್ತಿರಲಿಲ್ಲ, ದರ ಏರಿಕೆ ನಿತ್ಯ ನಿರಂತರವಾಗುತ್ತಿರಲಿಲ್ಲ; ಕರ್ನಾಟಕದ ಹಳ್ಳಿ ನಗರ ಎನ್ನದೆ ಸಮಗ್ರ ಅಭಿವೃದ್ಧಿ ಕಂಡುಬಿಡುತ್ತಿತ್ತು. ಸಮಗ್ರ ಅಭಿವೃದ್ಧಿಗೆ ಮೀಸಲಾದ ಹಣ ರಾಜಕಾರಣಿಗಳ ತೀರದ ದಾಹದಲ್ಲಿ ಎಲ್ಲೊà ಸುರಿಯಲ್ಪಟ್ಟಿದೆ. ಅವರು ತಿಂದು ತೇಗುತ್ತಿರುವ, ಹೂಸುತ್ತಿರುವ ದುರ್ವಾಸನೆ ಇಡೀ ರಾಜ್ಯವನ್ನು ಆವರಿಸಿಕೊಂಡಿದೆ.
ಇನ್ನೊಂದು ಕಡೆ ರಾಜಕಾರಣಿಗಳು ಕಂಡ ಕಂಡ ಹಾಗೇ ಇಷ್ಟೆಲ್ಲ ಗುಳುಂ ಮಾಡುತ್ತಿದ್ದಾರಲ್ಲ, ನಾವೇಕೆ ಸುಮ್ಮನಿರಬೇಕು ಎಂದು ಶಾಸಕಾಂಗಕ್ಕೆ ಸಮೀಪಸ್ಥರಾಗಿರುವ ಕರ‍್ಯಾಂಗದವರೂ ನಿಧಾನಕ್ಕೆ ಎಡಗೈ ಬಲಗೈ ಎರಡರಿಂದಲೂ ಬಾಚಲಾರಂಭಿಸಿ ಹಣ ಆಸ್ತಿ ಐಷಾರಾಮದಲ್ಲಿ ರಾಜಕಾರಣಿಗಳನ್ನೂ ಮೀರಿಸುವ ಮಟ್ಟಕ್ಕೆ ಏರಿದರು. ರಾಜಕಾರಣಿಗಳು ಚಾಪೆ ಕೆಳಗೆ ನುಸುಳಿದರೆ ಇವರು ರಂಗೋಲಿ ಕೆಳಗೇ ನುಸುಳುವ ಚಾಣಾಕ್ಷರು. ಇವರು ಆದಾಯ ಮೀರಿ ಗಳಿಸಿರುವ ಆಸ್ತಿ ಲೋಕಾಯುಕ್ತರ ದಾಳಿ, ಎಸಿಬಿ ದಾಳಿಯ ಸಂದರ್ಭದಲ್ಲಿ ಬಹಿರಂಗಗೊಳ್ಳುತ್ತದೆ. ಐ.ಎ.ಎಸ್. ಕೆ.ಎ.ಎಸ್. ಗಳಿಗಿಂತ ಅಡ್ಡದಾರಿಯ ಗಳಿಕೆಯಲ್ಲಿ ಗುಮಾಸ್ತರು ಕೂಡ ಹಿಂದೆ ಬೀಳಲಿಲ್ಲ. ಇವರನ್ನೆಲ್ಲ ಕಾನೂನಿನ ಅಸ್ತçದಿಂದಲೇ ದಂಡಿಸಬಹುದಾದ ಅಧಿಕಾರವಿರುವ ನ್ಯಾಯಾಂಗವಾದರೂ ಈ ಮನೆಹಾಳರ ಸೊಂಟ ಮುರಿದೀತೆ ಎಂದರೆ ಲೋಕಾಯುಕ್ತರಿಂದ ಮೊದಲುಗೊಂಡು ಅನೇಕ ನ್ಯಾಯಾಧೀಶರ ಮೇಲೇ ಗಂಭೀರ ಆರೋಪಗಳಿವೆ. ಅನುಕೂಲಕರ ತೀರ್ಪು ಕೊಡುವುದಾಗಿ ಕೋಟಿಗಟ್ಟಲೆ ಲಂಚ ಪಡೆಯುವಾಗಲೇ ಸಿಕ್ಕಿಬಿದ್ದಿದ್ದಾರೆ. ಆದರೆ ಕಪ್ಪು ವ್ಯವಹಾರವನ್ನು ಜಾಣ್ಮೆಯಿಂದ ನಿಭಾಯಿಸುತ್ತ ಸಿಕ್ಕಿಬೀಳದ ತಿಮಿಂಗಿಲಗಳು ಅಲ್ಲಿ ಇನ್ನೆಷ್ಟಿವೆಯೋ? ಹಣ ಇಲ್ಲದವರಿಗೆ ನ್ಯಾಯ ಸಿಗುವುದಿಲ್ಲ. ಹಣ ಉಳ್ಳವರು ಅನ್ಯಾಯವನ್ನೆÃ ನ್ಯಾಯವಾಗಿ ಪರಿವರ್ತನೆ ಮಾಡಿಕೊಳ್ಳಬಲ್ಲರು ಎನ್ನುವುದು ರಹಸ್ಯವಾಗೇನೂ ಉಳಿದಿಲ್ಲ. ಸಂವಿಧಾನದ ನಾಲ್ಕನೆಯ ಅಂಗ ಅಂತಲೋ ಕಣ್ಣು ಅಂತಲೋ ಸ್ವಯಂ ಘೋಷಿಸಿಕೊಂಡು ಅದನ್ನು ಎಲ್ಲರೂ ಒಪ್ಪಿಕೊಂಡಂತೆ ಆಗಿಬಿಟ್ಟಿರುವ ವಿದ್ಯುನ್ಮಾನ, ಪತ್ರಿಕೆ ಎರಡನ್ನೂ ಒಳಗೊಂಡಿರುವ ಮಾಧ್ಯಮ ತನಿಖಾ ವರದಿಗಳನ್ನು ಪ್ರಕಟಿಸಿ ಭಾರೀ ಹಗರಣಗಳನ್ನೆÃ ಬಯಲಿಗೆಳೆದ ಪ್ರಖ್ಯಾತಿಯಿಂದ ಈಗ ಕಾಸಿಗಾಗಿ ಸುದ್ದಿ ಪ್ರಕಟಿಸುವ, ಪ್ರಸಾರ ಮಾಡುವ ಕುಖ್ಯಾತಿಗೆ ಇಳಿದುಬಿಟ್ಟಿದೆ. ಕೆಲವಂತೂ ಒಂದು ಪಕ್ಷದ ಪರವಾಗಿಯೇ, ಜಾತಿ ಮತಗಳ ಪರವಾಗಿಯೇ ತುತ್ತೂರಿಯೂದುತ್ತ ಉಳಿದವುಗಳ ಸಣ್ಣ ಪುಟ್ಟ ಹುಳುಕುಗಳನ್ನೆÃ ಭೂತಗನ್ನಡಿಯಲ್ಲಿ ತೋರಿಸುತ್ತ, ಪ್ರಚಾರದ ಭರಾಟೆಯಲ್ಲಿ ಅನಾರೋಗ್ಯಕರ ಪೈಪೋಟಿಗೂ ಇಳಿದು ತಿಮ್ಮಿಯನ್ನು ಬೊಮ್ಮಿಯೆಂದೂ ಬೊಮ್ಮಿಯನ್ನು ತಿಮ್ಮಿಯೆಂದೂ ಬಿಂಬಿಸುತ್ತಿವೆ. ಇದು ಎಷ್ಟು ಅತಿರೇಕಕ್ಕೆ ಹೋಗಿದೆಯೆಂದರೆ ಕನ್ನಡದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಎಂದು ಘೋಷಿಸಿಕೊಳ್ಳುವ ಪತ್ರಿಕೆಯೂ ಚುನಾವಣೆಯ ಈ ದಿನಗಳಲ್ಲಿ ತಾನು ಕಾಸಿಗಾಗಿ ಸುದ್ದಿ ಪ್ರಕಟಿಸುವುದಿಲ್ಲ ಎಂದು ಜನರನ್ನು ನಂಬಿಸುವಂತಾಗಿದೆ. ದೇಶದ ಮತ್ತು ಜನರ ಹಿತವನ್ನೆÃ ದೃಷ್ಟಿಯಲ್ಲಿರಿಸಿಕೊಂಡು ಸತ್ಯಾಂಶಗಳನ್ನು ಆಧರಿಸಿ ತನಿಖಾ ವರದಿಗಳನ್ನು ಬರೆದವರನ್ನು, ಪ್ರಕಟಿಸಿದ ಸಂಪಾದಕರನ್ನು ನಿರ್ದಯವಾಗಿ ಹತ್ಯೆ ಮಾಡಿ, ಸತ್ಯದ ಬಾಯನ್ನು ಶಾಶ್ವತವಾಗಿ ಮುಚ್ಚಿಬಿಡುವ ಹೀನ ಕೃತ್ಯಗಳೂ ಎಗ್ಗಿಲ್ಲದೆ ನಡೆಯುತ್ತಿವೆ. ಸುಳ್ಳರೂ ವಂಚಕರೂ ಕೊಲೆಗಡುಕರೂ ಭ್ರಷ್ಟರೂ ಸ್ವಜನ ಮತ್ತು ಸ್ವಜಾತಿ ಪಕ್ಷಪಾತಿಗಳೂ ಮತಾಂಧರೂ ಮದಾಂಧರೂ ದರೋಡೆಕೋರರೂ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ರಾಜಕಾರಣಿಗಳಾಗಿ ಅಂದಾದುಂದಿ ದರ್ಬಾರು ನಡೆಸುತ್ತಿರಬೇಕಾದರೆ, ಶಾಸಕಾಂಗದ ದಾರಿತಪ್ಪಿದ ನಡೆಯೇ ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗಗಳಿಗೆ ಕೆಟ್ಟ ಮಾದರಿಯಾಗಿರಬೇಕಾದರೆ, ಅಷ್ಟಿಷ್ಟು ವಿಚಾರವಂತರೂ ಪ್ರಜ್ಞಾವಂತರೂ ಆಗಿರುವವರಿಗೆ “ಈ ದೇಶಕ್ಕೆ ಭವಿಷ್ಯ ಇದೆಯೇ?” ಎನ್ನುವ ಅನುಮಾನ ಬರುವುದಿಲ್ಲವೇ?
ವಿಳಾಸ
ಡಾ. ಬೈರಮಂಗಲ ರಾಮೇಗೌಡ
#೮೪, ಚಿತ್ತಾರ, ೪ನೇ ತಿರುವು
ಪುಷ್ಪಗಿರಿನಗರ, ಹೊಸಕೆರೆಹಳ್ಳಿ – ಅಂಚೆ
ಬನಶಂಕರಿ ೩ನೇ ಹಂತ, ಬೆಂಗಳೂರು- ೫೬೦೦೮೫
ಸಂ.ದೂ. ೯೩೪೧೨೫೮೧೪೨
ಮಿಂಚಂಚೆ: bಡಿg೧೬೫೫@gmಚಿiಟ.ಛಿom

Source – Sakhigeetha.com

ಬೇಸಿಗೆಯ ಯೌವ್ವನಕ್ಕೆ ಎಳನೀರು

0
- ಸಿ.ಎನ್ ಅಂಬಿಕಾ ನಂಜುಂಡಪ್ಪ
– ಸಿ.ಎನ್ ಅಂಬಿಕಾ ನಂಜುಂಡಪ್ಪ

ಬೇಸಿಗೆ ಕಾಲದಲ್ಲಿ ದಾಹ ಎಲ್ಲರಿಗೂ ಸರ್ವೇಸಾಮಾನ್ಯ. ದಾಹ ತಣಿಸುವ ಸಲುವಾಗಿ ನಾವು ಹಲವಾರು ತಂಪು ಪಾನೀಯಗಳ ಮೊರೆ ಹೋಗುತ್ತೆÃವೆ. ಬೇಸಿಗೆ ಕಾಲ ಬರುತ್ತಿದ್ದಂತೆಯೇ ನಾಯಿಕೊಡೆಗಳಂತೆ ತಂಪು ಪಾನೀಯಗಳ ಅಂಗಡಿಗಳು ಎಲ್ಲೆಂದರಲ್ಲಿ ಹುಟ್ಟಿಕೊಳ್ಳುತ್ತವೆ. ಸದ್ಯದ ಪರಿಸ್ಥಿತಿಯ ದಾಹ ನಿವಾರಣೆಗಾಗಿ ಕೈಗೆ ಸಿಕ್ಕಿದ್ದೆಲ್ಲವನ್ನು ಕುಡಿದು ಬಿಟ್ಟರೆ ತತಕ್ಷಣಕ್ಕೆ ದಾಹ ಕಡಿಮೆಯಾಗಬಹುದೇ ವಿನಾ ಅದರ ಮುಂದಿನ ಪರಿಣಾಮ ಮಾತ್ರ ಅತ್ಯಂತ ಭೀಕರ.
ಬೇಸಿಗೆ ಕಾಲದ ದಾಹವನ್ನು ನೀಗಿಸುವಲ್ಲಿ ಉತ್ತಮ ನೈಸರ್ಗಿಕ ಪಾನೀಯಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಎಳನೀರು. ಆ ಬಾಲವೃದ್ದರಾಗಿಯೂ ಎಳನೀರನ್ನು ಇಷ್ಟಪಡದ ವ್ಯಕ್ತಿ ಈ ಪ್ರಪಂಚದಲ್ಲಿಯೇ ಇಲ್ಲ. ಪ್ರತಿಯೊಬ್ಬ ಮನುಷ್ಯನ ದೇಹದ ರಾಸಾಯನಿಕತೆಗೆ ಅತ್ಯುತ್ತಮ ಪಾನೀಯ ಎಳನೀರು. ಅಲೋಪತಿ ವೈದ್ಯರುಗಳು ಕೂಡ ತಮ್ಮ ರೋಗಿಗೆ ಎಳನೀರು ಸೇವಿಸುವಂತೆ ಸಲಹೆ ಕೊಡುತ್ತಾರೆಂಬುದು ವೈಜ್ಞಾನಿಕ ಸತ್ಯ.
ಬಹಳಷ್ಟು ಮಂದಿ ತಮ್ಮ ಆರೋಗ್ಯ ಹದಗೆಟ್ಟಾಗ ಮಾತ್ರ ಎಳನೀರು ಸೇವನೆ ಮಾಡುತ್ತಾರೆ. ಉಳಿದ ದಿನಗಳಲ್ಲಿ ಅದರ ಬಗ್ಗೆ ಗಮನ ನೀಡುವುದಿಲ್ಲ. ಅಷ್ಟೆÃ ಅಲ್ಲದೇ ಎಷ್ಟೊÃ ಜನರಿಗೆ, ಆರೋಗ್ಯ ವೃದ್ದಿಸುವಲ್ಲಿ ಎಳನೀರು ಎಷ್ಟು ಉಪಯುಕ್ತ ಎಂಬುದರ ಅರಿವು ಸಹ ಇರುವುದಿಲ್ಲ. ಎಳನೀರಿನ ಆರೋಗ್ಯಕಾರಿ ಉತ್ಕೃಷ್ಟ ಗುಣಗಳ ಮಹತ್ವವನ್ನು ತಿಳಿದುಕೊಂಡರೆ ಇತರೆ ಆಧುನಿಕ ಪಾನೀಯಗಳನ್ನು ಬದಿಗೊತ್ತಿ ಎಳನೀರು ಸೇವನೆಗೆ ಮುಂದಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಹಾಗೆ ನೋಡಿದರೆ ಎಳನೀರು ಕೇವಲ ಬಾಯಾರಿಕೆಯನ್ನು ನೀಗಿಸುವುದಿಲ್ಲ. ಎಳನೀರಿನಲ್ಲಿ ಗ್ಲೊÃಕೋಸ್ ಒಳಗೊಂಡಂತೆ ಹಲವು ಸತ್ವಗಳು ತುಂಬಿವೆ. ಊಟ ಮಾಡಿದ ನಂತರ ಎಳನೀರಿನ ಕ್ರಮಬದ್ಧ ಸೇವನೆಯಿಂದ ಮನುಷ್ಯನಿಗೆ ಬರುವ ಸಾಮಾನ್ಯ ರೋಗಗಳಾದ ಕಫ, ಉಷ್ಣ, ಪಿತ್ತ ಇವುಗಳನ್ನು ತಡೆಯಬಹುದು. ಮೂತ್ರ ಹೆಚ್ಚಿಸುವಲ್ಲಿ ಅತ್ಯಂತ ಸಹಾಯಕಾರಿಯಾಗಿರುವ ಎಳನೀರು ಸರಳವಾಗಿ ಮಲ ವಿಸರ್ಜನೆಯಾಗುವಂತೆ ಮಾಡುತ್ತದೆ. ಮನುಷ್ಯನ ಮಾನಸಿಕ ಹಾಗೂ ದೈಹಿಕ ತಿಳುವು ಉಂಟಾಗುವಲ್ಲಿ ಇದು ಅತ್ಯಂತ ಉಪಯುಕ್ತ.
ಆಗ ತಾನೆ ತೆಗೆದ ತಾಜಾ ಗಂಜಿ ಇರುವ ಎಳನೀರು ಮನುಷ್ಯನ ದೇಹಕ್ಕೆ ನಾನಾ ಬಗೆಯಲ್ಲಿ ಒಳಿತು ಮಾಡುತ್ತದೆ. ತುಂಬ ದಿನ ಇಟ್ಟ ಎಳನೀರು ಶೀತವನ್ನುಂಟು ಮಾಡುತ್ತದೆ. ಖಾಲಿ ಹೊಟ್ಟೆ ಇದ್ದಾಗ ಎಳನೀರು ಕುಡಿಯುವುದು ಸರಿಯಲ್ಲ. ಹೀಗೆ ಮಾಡಿದರೆ ಹಸಿವಿನ ಶಕ್ತಿಯನ್ನು ಕುಗ್ಗಿಸುತ್ತದೆ.
ಗರ್ಭಿಣಿ ಮಹಿಳೆಯರ ಪಾಲಿಗೆ ಸಾಕಷ್ಟು ಉಪಯುಕ್ತವಾಗಿರುವ ಎಳನೀರಿನ ನಿಯಮಿತ ಸೇವನೆಯು ಸುಂದರ ಹಾಗೂ ಸ್ವಾಸ್ಥö್ಯ ಮಗುವಿನ ಜನನಕ್ಕೆ ಕಾರಣವಾಗಲಿದೆ. ಅಲ್ಲದೇ ಗರ್ಭಿಣಿಯರಿಗೆ ಒಳ್ಳೆಯ ಹಸಿವು ಹಾಗೂ ಶಾರೀರಿಕ ತೇಜಸ್ಸನ್ನು ಮೂಡಿಸುತ್ತದೆ.
ದೇಹಕ್ಕೆ ಅಧಿಕ ಶಕ್ತಿ ನೀಡುವ ಗುಣ ಹೊಂದಿರುವ ಎಳನೀರನ್ನು ವ್ಯಾಯಾಮ ಮಾಡಿದ ನಂತರ ಸೇವಿಸುವುದು ಸೂಕ್ತ. ಧಾರ್ಮಿಕ ಮಹತ್ವದ ಎಳನೀರಿನಲ್ಲಿ ಪೊಟ್ಯಾಶಿಯಂ, ಫೈಬರ್, ಕ್ಯಾಲ್ಸಿಯಂ, ಮೆಗ್ನಿÃಶಿಯಂ ಗುಣಗಳಿವೆ. ಎಳನೀರಿನಲ್ಲಿ ಆಮೆನೋ ಆ್ಯಸಿಡ್ ಇದ್ದು, ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ ಹಾಗೂ ಕೆಟ್ಟ ಕೊಲೆಸ್ಟಾçಲ್ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟಾçಲ್‌ಅನ್ನು ಹೆಚ್ಚಿಸುತ್ತದೆ. ಈ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರಮಾಡುವುದಲ್ಲದೇ, ತೂಕವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ.

ಬೇಸಿಗೆಯ ಅವಧಿಯಲ್ಲಿ ನೀರಿನಂಶ ಕಡಿಮೆಯಾಗಿ ಸುಸ್ತು ಅನಿಸಿದಾಗ ಎಳನೀರು ಸೇವನೆ ಅತ್ಯಂತ ಹೆಚ್ಚು ಖುಷಿ ಕೊಡುತ್ತದೆಯಲ್ಲದೇ, ದಿನವಿಡೀ ದೇಹವು ಚಟುವಟಿಕೆಯಿಂದ ಹಾಗೂ ಲವಲವಿಕೆಯಿಂದ ಕೂಡಿರುತ್ತದೆ ಹಾಗೂ ಮುಖದ ತ್ವಜೆಯು ಸಹ ತಾರುಣ್ಯಪೂರ್ಣವಾಗಿರುವಂತೆ ಮಾಡುತ್ತದೆ. ಮುಖ ಸುಕ್ಕುಗಟ್ಟುವುದು, ವಯಸ್ಸಾದರೂ ಯೌವನದ ಕಳೆ ಬೇಗನೆ ಮಾಸದಿರಲು ಎಳನೀರು ಸೇವನೆ ಅತ್ಯಂತ ಅವಶ್ಯಕ. ಚರ್ಮ ಹೊಳಪಾಗಿಸಿ ಎಳವೆಯನ್ನು ಎಳೆತರುವುದರಿಂದಾಗಿಯೇ ಇದಕ್ಕೆ ಎಳನೀರು ಎಂದು ಕರೆಯಲಾಗುತ್ತದೆ.
ನೂರು ರೋಗಗಗೆ ಒಂದೇ ಔಷಧಿ ಎಳನೀರು ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಎಳನೀರಿನಲ್ಲಿ ಅಧಿಕ ವಿಟಮಿನ್ಸ್ಗಳು ಹಾಗೂ ಖನಿಜಗಳು ಇರುವುದರಿಂದ ಇದರ ಸೇವನೆಯಿಂದ ದೇಹ ಸದಾಕಾಲ ಆರೋಗ್ಯದಿಂದಿರುವುದಲ್ಲದೇ, ದೇಹದಾರ್ಢ್ಯಕ್ಕೂ ಅತ್ಯಂತ ಉಪಯೋಗಕರ. ಪ್ರತಿದಿನ ಎಳನೀರು ಕುಡಿದರೆ ದೇಹವು ಏರ್ ಕಂಡೀಶನರ್ ಆಗುವುದಲ್ಲದೇ, ಕಣ್ಣುಗಳನ್ನು ಸ್ಪಷ್ಟಗೊಳಿಸಿ ಕಣ್ಣಿನ ದೃಷ್ಟಿಗೂ ಬಲಗೊಳಿಸುವ ಶಕ್ತಿಯನ್ನು ಒದಗಿಸುತ್ತದೆ. ಇತ್ತಿÃಚಿಗೆ ವೆಸ್ಟ್ ಇಂಡಿಯಾ ಜರ್ನಲ್ ನಡೆಸಿರುವ ಅಧ್ಯಯನದ ಪ್ರಕಾರ ಎಳನೀರಿನಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಎಂದು ತಿಳಿಸಿದೆ.
ಎಳನೀರಿನಲ್ಲಿ ಕೆಂದಾಳಿ, ಗೆಂದಾಳಿ, ತಿಳಿಹಸಿರು, ಕಡುಹಸಿರು, ಕೆಂದು, ತಿಲಿಗಪ್ಪು, ಎಂಬ ವಿವಿಧ ಬಗೆಗಳಿವೆ. ಇವುಗಳಲ್ಲಿ ಕೆಲವು ವಿಶೇಷ ಗುಣಗಳಿವೆ ಹೊರತು ಭಾರೀ ವ್ಯತ್ಯಾಸಗಳು ಕಂಡುಬರುವುದಿಲ್ಲ. ತಾಜಾ ತಾಜಾ ಎಳನೀರು ದೇಹದ ಆಮ್ಲತೆಯನ್ನು ನೀಗಿಸಿ ಕಫ ತೆಗೆಯುತ್ತದೆ.
ಇನ್ನಾದರೂ ಬಾಯಿ ರುಚಿಗೋಸ್ಕರ ರಾಸಾಯನಿಕ ಮಿಶ್ರಿತ ತಂಪು ಪಾನೀಯ ಸೇವಿಸುವುದನ್ನು ಬಿಟ್ಟು, ದೇಹದ ಆರೋಗ್ಯವನ್ನು ಸದಾ ಯೌವನದಂತೆ ಕಾಣುವಂತಿಡುವ ಎಳನೀರನ್ನು ಸೇವಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಒಳಿತು.

Source – Sakhigeetha.com

ಬೆಳಕಿನ ಹೊಳೆಯಲಿ ಮಿಂದರೆ ಬದುಕು….. **ದೊಡ್ಡರಂಗೇಗೌಡ*

0

images (5)

ಉಪ್ಪು ಖಾರ ತಿನ್ನುವ ಮಾನವರು ನಾವು; ಎಡವುವುದು ಸಹಜ; ಮತ್ತೆÃ ಮತ್ತೆÃ ಎಡವಿದಲ್ಲೆÃ ಎಡವುವುದು ಎಳ್ಳಷ್ಟೂ ಸರಿಯಲ್ಲ.. ತಪ್ಪು ಮಾಡುವುದು ಮನುಷ್ಯರ ಗುಣಧರ್ಮ, ಮಾಡಿದ ತಪ್ಪನ್ನು ತಿದ್ದಿಕೊಳ್ಳುವುದರಲ್ಲಿದೆ ನರನ ಕಲ್ಯಾಣ!

ಕವಿ ವಾಣಿ ಅನುರಣಿಸಿದೆ: “ಕೆಟ್ಟ ಸಂಗ ಕೆಟ್ಟದ್ದನಲ್ಲದೆ ಒಳ್ಳೆಯದನೆಂದೂ ತರದು!”; ಕರ್ನಾಟಕದ ಜನತೆ ಈಗ ಅತ್ಯಂತ ಜಾಗರೂಕವಾಗಿ ಹೆಜ್ಜೆ ಇಡಬೇಕು; ನಮ್ಮ ಮುಂದೆ ಇರುವುದೇ ಎರಡು, ಮೂರು ಆಯ್ಕೆ! ಈಗ ಶ್ರಿÃ ಸಾಮಾನ್ಯರು ಎಡವಿದರೆ- ಮತ್ತೆ ಐದು ವರ್ಷ ಪರಿತಾಪವನ್ನು ಪಡಬೇಕಾಗುತ್ತದೆ.
ಬೇವಿನೊಡನಾಟದಿಂದ ಕಹಿಯ ಸಂಸರ್ಗ ಮಾತ್ರ ಸಾಧ್ಯ. ಮಾವನ್ನು ಆಯ್ಕೆ ಮಾಡಿದರೆ-ಜೀವನಕ್ಕೆ ಸಿಹಿಯ ಸಾನ್ನಿಧ್ಯ!
“ನಮಗೂ ಈ ರಾಜಕಾರಣಕ್ಕೂ ಸಂಬಂಧ ಏನೇನೂ ಇಲ್ಲ” ಎಂದು ನಮ್ಮ ಪಾಡಿಗೆ ನಾವು ಸುಮ್ಮನಿರಲಾಗದು. ನಿರ್ಧಾರಗಳು ನಮ್ಮ ಬಾಳಿನ ಮಾರ್ಗಗಳನ್ನೆÃ ಬದಲಿಸಯಾವು! ಚಿಂತನೆ ಮುಖ್ಯ. ನಮ್ಮ ಜವಾಬ್ದಾರಿಗಳನ್ನು ನಾವು ನಿರ್ವಹಿಸುವುದೂ ತುರ್ತು ಅಗತ್ಯ “ಎಣ್ಣೆ ಬಂದಾಗ ಕಣ್ಣು ಮುಚ್ಚಿಕೂಡಬಾರದು!” ಎಂಬುದು ನಮ್ಮ ಹಿರಿಯರು ಹೇಳುತ್ತಾ ಬಂದ ನಾಣ್ನುಡಿ!
ಈಗ ನಾಗರೀಕರು ಪುಡಿ ಕಾಸಿನ ಗೀಳಿಗೆ ಬಿದ್ದರೆ-ಅದೇ ಕೇಡು,”ಮತ” ಅಮೂಲ್ಯ; ಅದನು ಮಾರಿಕೊಂಡರೆ-ಬದುಕು ಕೊಳಕು! ಇಂದಿನ ಒಂದು ಪುಟ್ಟ ನಡೆ ಮುಂದಿನ ನಮ್ಮೆಲ್ಲರ ಬದುಕಿಗೆ ಪರಿತಾಪ ತರಬಲ್ಲದು. ಎಚ್ಚರಿಕೆ ಅತ್ಯಗತ್ಯ. ಆಲೋಚನೆಯೂ ಅನಿವಾರ್ಯ; ತೀರ್ಮಾನಗಳು ಶುದ್ಧವಾಗಿದ್ದರೆ ಪ್ರಬುದ್ಧವಾಗಿದ್ದರೆ ನಾಗರೀಕ ಬದುಕು ಸಂಕಟಕ್ಕೆ ಸಿಲುಕದು.
ಜಾತಿಯನ್ನು ನೋಡಿ, ಧನ ಬಲವ ನೋಡಿ, ಮುಂದೆ ಈ ಹಣವಂತ ನಮಗೆ ಆಸರೆಯಾದನು ಎಂಬ ಆಮಿಷಕ್ಕೆನಾವು ಒಳಗಾಗಿ ಗುಣವಂತರ ಕಡೆಗಣಿಸಿದರೆ-ಪ್ರಜಾಪ್ರಭುತ್ವಕ್ಕೆÃನೆ ಅಪಾಯ.
ಯಾರು ಜನಪರವಿರುತ್ತಾರೋ ಅಂಥವರ ಆಯ್ಕೆ ಸೂಕ್ತ. ದಿನ ದಿನವೂ ಚುನಾವಣೆಯನ್ನು ನಡೆಸಲಾಗದು. ಸಾಮಾನ್ಯರು ಕುಬ್ಜರಾಗಬಾರದು. ಆಮಿಷಗಳ ಸೆಳೆತಗಳೇ ಹಾಗೇ, ಅವು ನಮ್ಮ ಒಟ್ಟಾರೆ ಆಶಯಗಳಿಗೇ ಉರುಲಾಗುತ್ತವೆ. ಮುಂದೆ ಕ್ಷೆÆÃಭೆಯನ್ನೂ ಸೃಷ್ಟಿಸುತ್ತವೆ!
ಪ್ರಜೆಗಳಿಗೆ ಈಗ ಸವಾಲು; ಮನಮಂಥನ ಆಗಲೇಬೇಕು. ಬುದ್ಧಿ ಪ್ರಖರವಾಗಿ ನಮ್ಮ ಕಣ್ಣೆದುರಿನ ವ್ಯಕ್ತಿಗಳಲ್ಲಿ ಆದರ್ಶ ವ್ಯಕ್ತಿತ್ವಗಳು ಎಲ್ಲಿಹವೋ ಅಂಥವುಗಳನ್ನೆÃ ಆಯ್ದು ಪ್ರಜಾತಂತ್ರಕ್ಕೆ ಮಾನ್ಯತೆಯನ್ನು ನೀಡಬೇಕು. ಇಲ್ಲವಾದರೆ ಮತ್ತೆ ಕತ್ತಲ ಸಂಸರ್ಗವೇ ಗಟ್ಟಿಯಾಗಿ ವರುಷ ವರುಷ ನರಳಾಟವಾದೀತು! ಎಲ್ಲ ಸಮಸ್ಯೆಗಳಿಗೂ ಪರಿಹಾರಗಳು ಇದ್ದೆÃ ಇವೆ. ಪ್ರಮೇಯಗಳು ಬಂದಾಗ ತಿಮಿರ ಮುತ್ತಿ ಕತ್ತಲು!
ಅಜ್ಞಾನ ಯಾವತ್ತೂ ಕತ್ತಲು. “ಇವನು ನಮ್ಮವನು; ಇವನು ನಮ್ಮ ಜಾತಿಯವನು; ಇವನು ನಮ್ಮ ನೆಂಟ.” ಹೀಗೆ ಏನೇನೋ ಪ್ರಲೋಭನೆಗಳ ಕಡೆಗೆ ವಾಲಿದರೆ, ಮತ್ತೊಮ್ಮೆ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೇ ಧಕ್ಕೆ ಆಗುತ್ತದೆ.
ಮತ ನೀಡಬೇಕು ಪ್ರಜೆಗಳು ಸಮರ್ಥರಿಗೆ, ಯಾರು ಆಡಳಿತ ರಥದ ಚುಕ್ಕಾಣಿಯನ್ನು ಹಿಡಿಯಲು ಶಕ್ತರು ಯಾರಿಂದ ಪ್ರಜೆಗೆ ಒಟ್ಟಾರೆ ಸಮುದಾಯಕ್ಕೆ ತನ್ನೂಲಕ ಈ ನಾಡಿಗೆ (ರಾಜ್ಯಕ್ಕೆ) ಸೂಕ್ತವೆಂಬುದನ್ನು ಮತ್ತೆ ಮತ್ತೆ ಯೋಚಿಸಿ ವ್ಯಕ್ತಿಗಿರುವ ಪ್ರಗಲ್ಭವಾದ “ಮತ”ವೆಂಬ ಅಮೂಲ್ಯ ಮಾಲೆಯನ್ನು ಧೀರರ ಕೊರಳಿಗೆ ಹಾರವನ್ನಾಗಿಸಬೇಕು.
ಎಲ್ಲಿ ಶುಭ ಚಿಂತನ-ಮಂಥನ
ಅಲ್ಲಿ ಕಾರ್ಯಾಚರಣೆಗೆ ಶುಭ ತೋರಣ!
ಎಲ್ಲೆಲ್ಲ ವಿಚಾರ-ವಿಮರ್ಶೆಗೆ ಆದ್ಯ ಗಮನ
ಅಲ್ಲಲ್ಲಿ ಆಯ್ಕೆಗೆ ಕಂಡೀತು ಸಮರ್ಥ ಹೂರಣ!

ಈಗ ಸುವರ್ಣ ಅವಕಾಶ ಒದಗಿ ಬಂದಿದೆ. ಅದನ್ನು ಸರಿಯಾಗಿ ಮತದಾರ ತನ್ನ ಪ್ರಜ್ಞೆಯನ್ನು ಜೋಪಾನವಾಗಿ ಹರಿತವಾಗಿ ಆಯ್ಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿದರೆ ಆಗ ನವ ನಿರ್ಮಾಣ!
ಸುಮ್ಮನೆ ದಡದಲ್ಲಿ ನಿಂತುನೋಡುವುದಲ್ಲ. ಇಳಿಯಬೇಕು ಕಣಕ್ಕೆ. ಈಜಬೇಕು ಬಾಳಿನ ಹೊಳೆಯಲ್ಲಿ ಪ್ರವಾಹ ಬಂದಾಗ, ನಮ್ಮ ಜಾಣ್ಮೆ ನಮ್ಮ ನಮ್ಮ ಕೈಯಲ್ಲಿರಬೇಕು. ಎತ್ತ ಸಮಗ್ರ ದೃಷ್ಟಿ ಕೋನ… ಅತ್ತ ಶುಭದ ಅನಾವರಣ!
ಡಾ||ದೊಡ್ಡರಂಗೇಗೌಡ

Source – Sakhigeetha.com

ಬಂಗಾರದ ವ್ಯಕ್ತಿತ್ವ : ಬೆಳೆಸಿಕೊಳ್ಳವ ಬಗೆ ಹೇಗೆ?

0

images (4)

ನಿಮ್ಮ ವ್ಯಕ್ತಿತ್ವ ಅಭಿವೃದ್ಧಿಗೊಂಡಿದ್ದರೆ, ಅದು ಪ್ರಕಾಶಿಸುವುದಲ್ಲದೆ, ತೇಜಸ್ಸಿನಿಂದ ಕೂಡಿರುತ್ತದೆ. ಅಲ್ಲದೇ ನಿಮ್ಮ ವ್ಯಕ್ತಿತ್ವದ ಆಕರ್ಷಣೆಗೊಳಗಾಗಿ, ಜನರು ನಿಮ್ಮ ಸುತ್ತಲೂ ನೆರೆದಿರುತ್ತಾರೆ ಹಾಗೂ ನಿಮ್ಮ ಅಭಿಪ್ರಾಯಗಳನ್ನು ಶ್ಲಾಘಿಸುತ್ತಾರೆ. ನಿಮ್ಮ ಸಮ್ಮುಖದಲ್ಲಿರುವುದೆಂದರೆ ಅನೇಕರಿಗೆ ತಮ್ಮ ಜೀವನದಲ್ಲಿ ಭರವಸೆ ಮತ್ತು ಸ್ಫೂರ್ತಿ ತುಂಬಿದಂತೆ ಎಂದು ಭಾವಿಸುತ್ತಾರೆ. ನೀವು ಸ್ಪರ್ಧೆಯಲ್ಲಿ ಭಾಗವಹಿಸದ ನಾಯಕರಾಗಿರುತ್ತಿÃರಿ.
ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಜೀವನದಲ್ಲಿ ಸಂತೋಷವನ್ನು ಅನುಭವಿಸುವ ಉದ್ದೆÃಶದಿಂದ ಅಭಿವೃದ್ಧಿಗೊಳಿಸಿಕೊಳುತ್ತಾನೆ. ವ್ಯಕ್ತಿತ್ವವನ್ನು ಅಭಿವೃದ್ಧಿಕೊಳ್ಳುತ್ತಿರುವ ವ್ಯಕ್ತಿ ಸ್ವಾವಲಂಭಿಯಾಗಿರುತ್ತಾನೆ. ಅಲ್ಲದೆ, ಆತ ಸಂತೋಷಕರವಾಗಿ ಮತ್ತು ಸ್ವತಂತ್ರವಾಗಿ ಜೀವಿಸುತ್ತಾನೆ. ತನ್ನ ಸಂತೋಷವನ್ನು ಹಾಗೂ ಸಾಮಾಜಿಕ ಯಶಸ್ಸನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾನೆ.
ವ್ಯಕ್ತಿತ್ವ ವಿಕಾಸದತ್ತ ಆಸಕ್ತಿ ವಹಿಸಿರುವ ವ್ಯಕ್ತಿಯಲ್ಲಿ ಸಂಪತ್ತು ಅಥವಾ ಆರ್ಥಿಕವಾಗಿ ಸದೃಢತೆ ಇಲ್ಲದಿದ್ದರೂ, ಹೃದಯ ವೈಶಾಲ್ಯ ಇರುತ್ತದೆ. ಅಲ್ಲದೆ, ತನ್ನ ಬಗ್ಗೆ ವಿಶ್ವಾಸವಿಟ್ಟು ಬರುವವರಿಗೆ ಅನುಕಂಪವನ್ನು ತೋರಿಸುವುದಲ್ಲದೆ, ಅಗತ್ಯ ಬಿದ್ದರೆ ಆಶ್ರಯವನ್ನು ಕಲ್ಪಿಸಿಕೊಡುತ್ತಾನೆ.
ಬಂಗಾರದ ವ್ಯಕ್ತಿತ್ವದವರು ಅಹಂಕಾರದಿಂದ ವರ್ತಿಸುವುದಿಲ್ಲ. ಕೋಪತಾಪಗಳನ್ನು ನಿಯಂತ್ರಣದಲ್ಲಿರಿಸಿ ಕೊಂಡಿರುತ್ತಾರೆ ಮತ್ತು ಮಾನವೀಯತೆಗೆ ಹೆಚ್ಚು ಬೆಲೆ ಕೊಡುತಾರೆಯೇ ಹೊರತು; ಜಾತಿ ಮತಗಳಿಗೆ ಹೆಚ್ಚು ಬೆಲೆ ಕೊಡುವುದಿಲ್ಲ. ಎಲ್ಲ ಸಂದರ್ಭಗಳಲ್ಲೂ ಪ್ರಜ್ಞಾಪೂರ್ವಕವಾಗಿ ವರ್ತಿಸುತ್ತಾರೆ.
ಬದುಕು ಭಾವನೆಗಳ ನಡುವೆ ಘರ್ಷಣೆ ಗಲಾಟೆಗೆ ಅವಕಾಶ ನೀಡುವುದಿಲ್ಲ. ಕಷ್ಟ ಬಂದಾಗ ಎದೆಗುಂದುವುದಿಲ್ಲ. ಸುಖ ಬಂದಾಗ ಅಹಂನಿಂದ ನಡೆದುಕೊಳ್ಳುವುದಿಲ್ಲ. ಸುಖ ದುಃಖಗಳೆರಡರಲ್ಲಿಯೂ ಮಾನಸಿಕ ಸಮತೋಲನವಿರುತ್ತದೆ. ಸೋಲು, ಗೆಲುವು ಎರಡನ್ನೂ ಸಮಾಧಾನಕರವಾಗಿಯೇ ಒಪ್ಪಿಕೊಳ್ಳುತ್ತಾರೆ.
ಅಭಿವೃದ್ಧಿಗೊಂಡ ವ್ಯಕ್ತಿತ್ವ
ಅಭಿವೃದ್ಧಿಗೊಂಡ ವ್ಯಕ್ತಿತ್ವ ತನಗಾಗಿಯೇ ಮೀಸಲಾಗಿರುವುದಿಲ್ಲ. ಇತರರಿಗೂ ವಿಸ್ತಾರಗೊಂಡಿರುತ್ತದೆ. ಅಲ್ಲದೆ, ಇವರು ಸ್ವಾನುಭವದ ಉಪಾಧ್ಯಾಯರಾಗಿರುತ್ತಾರೆ. ಅನೇಕರಿಗೆ ಅನೇಕ ವಿಷಯಗಳಲ್ಲಿ ಮಾಹಿತಿ ಶಿಕ್ಷಣ ಸಂವಹನ ನೀಡುವಂತಹ ಸಾಮರ್ಥ್ಯವನ್ನು ಹೊಂದಿರುತ್ತಾರೆ.
ತಾವು ಇತರರಿಗೆ ಮಾದರಿಯಾಗಿರುವುದಲ್ಲದೆ ಆದರ್ಶವನ್ನು ಪರಿಪಾಲಿಸುವಂತಹ ಪ್ರವೃತ್ತಿಯಿಂದ ಕೂಡಿರುತ್ತಾರೆ. ಅಲ್ಲದೆ, ಇವರ ಧೈರ್ಯ ಮತ್ತು ಸ್ಫೂರ್ತಿ ಇತರರಿಗೆ ಉದಾಹರಣೆಯಾಗಿರುತ್ತದೆ.
ದೇಶಕ್ಕಾಗಿ ಜನರ ಕಲ್ಯಾಣಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗಿರುತ್ತಾರೆ. ಇವರಲ್ಲಿ ಸ್ವಲ್ಪಮಟ್ಟಿಗೆ ರಾಜಕೀಯ ವ್ಯಕ್ತಿಗಳಲ್ಲಿರಬಹುದಾದ ನಾಯಕತ್ವದ ಗುಣಗಳಿರುತ್ತವೆ.
ಇವರಲ್ಲಿ ಇಚ್ಚಾಶಕ್ತಿ ಮತ್ತು ಯೋಜನೆ ಇರುತ್ತದೆ. ಸಮಾನಮನಸ್ಕರನ್ನು ಸಂಘಟಿಸಿ, ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ದುರಾಸೆ ದುಶ್ಚಟಗಳಿರುವುದಿಲ್ಲ. ನೈತಿಕತೆಯ ನೆಲೆಗಟ್ಟಿನ ಮೇಲೆ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಅಲ್ಲದೆ, ನಾನೇ ಹೆಚ್ಚು; ಇನ್ನೊಬ್ಬರು ಕಡಿಮೆ ಎಂಬ ಮನೋಭಾವನೆ ಇರುವುದಿಲ್ಲ.
ಇವರಲ್ಲಿ ಉದಾರತೆ, ಅನುಕಂಪ, ಎಲ್ಲರಲ್ಲೂ ಒಂದಾಗುವ ಪ್ರವೃತ್ತಿ ಇರುತ್ತದೆ. ಸಮಯ ಸಂದರ್ಭ, ಸನ್ನಿವೇಶಗಳನ್ನು ಅರ್ಥ ಮಾಡಿಕೊಂಡು ವ್ಯವಹರಿಸುವ ಕೌಶಲ್ಯವಿರುತ್ತದೆ. ಇವರು ತಮ್ಮ ಸ್ನೆÃಹ ವಲಯದಲ್ಲಿ ಜನಪ್ರಿಯ ವ್ಯಕ್ತಿಯಾಗಿರುತ್ತಾರೆ. ತಮ್ಮ ತಪ್ಪು ಒಪ್ಪುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ತಮ್ಮಿಂದ ಗೊತ್ತಿಲ್ಲದೆ, ತೊಡಕು ತೊಂದರೆ ಆಗಿದ್ದರೆ, ಕ್ಷಮಾಪಣೆ ಕೇಳುವುದಲ್ಲದೆ, ಮುಂದೆ ಅಂಥ ತಪ್ಪುಗಳು ಸಂಭವಿಸದಂತೆ ಜಾಗೃತಿ ವಹಿಸುತ್ತಾರೆ.
ಪ್ರತಿದಿನ ಹೊಸ ಆಲೋಚನೆ, ಚಿಂತನೆಗಳಲ್ಲಿ ತೊಡಗುವುದಲ್ಲದೆ ತಮ್ಮ ಜೀವನದ ವಿಕಾಸದಲ್ಲಿ, ಅಂತರ್ಮುಖತೆ ಹಾಗೂ ಬಹಿರ್ಮುಖತೆಗಳೆರಡನ್ನು ಅಳವಡಿಸಿಕೊಂಡಿರುತ್ತಾರೆ. ಪ್ರತಿ ದಿನವೂ ಪ್ರಗತಿಯ ಬಗ್ಗೆಯೇ ಆಲೋಚಿಸುತ್ತಾರೆ.
ಇವರ ಮಾತು ನಡವಳಿಕೆ ಇತರರ ಮೇಲೆ ಪ್ರಭಾವವನ್ನು ಬೀರುವುದಲ್ಲದೆ, ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸಿ, ಪ್ರೊÃತ್ಸಾಹವನ್ನು ನೀಡುತ್ತಾರೆ. ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ವರ್ತಿಸುವುದಲ್ಲದೆ, ನೋವು ಉಂಟು ಮಾಡುವ ಮಾತುಗಳನ್ನು ಆಡುವುದಿಲ್ಲ.
‘ಅಭಿವೃದ್ಧಿಯೇ ಜೀವನ’ ಎಂದು ಭಾವಿಸಿರುವ ಇವರು, ಮೂಢನಂಬಿಕೆಗಳನ್ನು ನಿವಾರಿಸುವಲ್ಲಿ ಮುಕ್ತ ಪಾತ್ರ ವಹಿಸುತ್ತಾರೆ. ವೈಜ್ಞಾನಿಕ ಮನೋಭಾವನೆಯನ್ನು ತಾವು ಮೊದಲು ಅರ್ಥೈಸಿಕೊಂಡು, ಇತರರು ಅದನ್ನು ಪಾಲಿಸುವಂತೆ ಪ್ರಯತ್ನಿಸುತ್ತಾರೆ.
ಜ್ಞಾನ ವಿಜ್ಞಾನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಆಚರಿಸುತ್ತಾರೆ. ಒಟ್ಟಾರೆ, ಇವರ ವ್ಯಕ್ತಿತ್ವ ‘ಬಂಗಾರದ ವ್ಯಕ್ತಿತ್ವ’ವಾಗಿರುತ್ತದೆ.

Source – Sakhigeetha.com

ದುಡ್ಡಿದ್ದವರೇ ದೊಡ್ಡಪ್ಪ !! – ಅಗಸ್ತ್ಯ

0

images (3)

ಚುನಾವಣೆ ಬಂದಾಗ, ಅಭ್ಯರ್ಥಿಯಾಗಿ ಈ ರಾಜಕಾರಣಿಗಳು ಕಣಕ್ಕೆ ಇಳಿವಾಗ, ಅರ್ಜಿಯನ್ನು ಭರ್ತಿ ಮಾಡುವಾಗ ಇವರುಗಳು ಘೋಷಿಸಿಕೊಂಡ ಆಸ್ತಿ ಇವರ ಹಣ, ಕೂಡಿಟ್ಟ ನಿಧಿ, ಠೇವಣಿಗಳು, ಸಂಚಯಿಸಿದ ಬೆಳ್ಳಿ-ಬಂಗಾರ, ವಜ್ರದೊಡವೆಗಳು-ಇವುಗಳೆನ್ನಲ್ಲಾ (ಇಷ್ಟು ದೊಡ್ಡ ಮೊತ್ತ!!) ಹೇಗೆ ನಾಚಿಕೆಯಿಲ್ಲದೆ ಘೋಷಿಸಿಕೊಳ್ಳುತ್ತಿದ್ದಾರೆಂದರೆ-ಅದೆಲ್ಲವೂ ಅವರ ಸ್ವಂತ ದುಡಿಮೆಗಳೇನಲ್ಲ! ಐದು ವರ್ಷದಲ್ಲಿ, ಅವರುಗಳು ಲಂಚ ರುಷುವತ್ತುಗಳಿಂದ ಅಕ್ರಮವಾಗಿ ಗಳಿಸಿದ ಹಣ ಸರಿಯಾಗಿ ಹೇಳಬೇಕಾದರೆ ಲೂಟಿ ಹೊಡೆದ ಹಣ; ಸಾರ್ವಜನಿಕ ಧನ! ಹೇಗೆ ಅಂಥಾದ್ದನ್ನು ಸ್ವಲ್ಪವೂ ನಾಚಿಕೆ ಇಲ್ಲದೆ ಘೋಷಿಸಿಕೊಳ್ಳುತ್ತಾರೆ? ಇಂಥ ಲಜ್ಜಾಹೀನ ಅಗುಣವಂತ ಹಣವಂತ ಮಂದಿಯನ್ನು ಶ್ರಿÃ ಸಾಮಾನ್ಯರು ಮತ್ತೆ ಏಕೆ ಆರಿಸುತ್ತಾರೇ ಆ ದೇವರೇ ಬಲ್ಲ! ಹಣವೇ ನಿನ್ನ ಗುಣದ ಏನೆಂದು ಹೇಳಬೇಕಯ್ಯಾ?
ಎಂಥದ್ದೆÃ ಉದ್ದಿಮೆದಾರನಾದರೂ, ಎಷ್ಟೆÃ ಸಮರ್ಥ ವ್ಯಾಪಾರದಾರನಾದರೂ, ಏನೆಲ್ಲ ರೀತಿಯ ಚಾಣಕ್ಯ ತಂತ್ರಗಳನ್ನು ಮಾಡಿದರು ಹೀಗೆ ನೂರ್ಪಟ್ಟು ಸಾವಿರ ಪಟ್ಟು ಹಣ ಮಾಡುವುದರಲ್ಲಿದೆ ರಾಷ್ಟçದ್ರೊÃಹ. ಇಂಥಾ ಅಪರಾಧ ಖಂಡನೀಯ!
ನಮ್ಮದಲ್ಲದ ವಸ್ತುವನ್ನು ನಾವು ಮುಟ್ಟಬಾರದು. ಸಂಗ್ರಹಿಸಬಾರದು; ಅಂಥ ಸಂಚಯ ನಿಜಕ್ಕೂ ಅನ್ಯಾಯ.
ಕಳಬೇಡ, ಕೊಲಬೇಡ,
ಹುಸಿಯ ನುಡಿಯಲುಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರು ಹಳಿಯಲುಬೇಡ
ಎಂದೆಲ್ಲಾ “ಕೂಡಲ ಸಂಗಮದೇವ”ನ
ಅಂಕಿತದಲ್ಲಿ ಅಂದೇ ಬಸವಣ್ಣನವರು(೮೦೦ ವರ್ಷಗಳ ಹಿಂದೆ) ಹೇಳಿದ್ದುದನ್ನು ನಾವು ಇಂದಿನವರು ಮರೆತಿದ್ದೆÃವೆ. ಆ ಮಾತುಗಳನ್ನು ನಾವು ಹೂತು ಹಾಕಿದ್ದೆÃವೆ.
ಇಂದಿನ ರಾಜಕಾರಣಿಗಳು ಒಬ್ಬರಿಗಿಂತ ಒಬ್ಬರು ಆಸ್ತಿ ಮಾಡುವುದರಲ್ಲಿ ಪೈಪೋಟಿಗೆ ಇಳಿದಿರುವುದು ದುರಂತ.
ನನ್ನ ಬಳಿ ಇಂಥಿಂಥ ಆಸ್ತಿ ಒಡವೆ ವಸ್ತು ಧನ ಕನಕ ಕಾರು ಬಂಗಲೆ ಇದೆಯೆಂದು ಮರ್ಯಾದೆ ಬಿಟ್ಟು ಹೇಳಿಕೊಳ್ಳುವುದು ಇಂದಿನ ಸಮಾಜದಲ್ಲಿ ದೊಡ್ಡಸ್ತಿಕೆ ಆಗಿದೆ. “ದುಡ್ಡಿದ್ದವನೇ ದೊಡ್ಡಪ್ಪ” ಎಂಬ ಗಾದೆ ಇಂಥವರಿಗೆ ಅನ್ವಯ ಆಗುತ್ತಿದೆ.
ಸಾರ್ವಜನಿಕ ಆಸ್ತಿ ಲೂಟಿ ಮಾಡುವ ಇಂಥ ಗೋಸುಂಬೆಗಳ ದೂರ ಇಡಿ. ಮಾನಗೆಟ್ಟವರ ಸಹವಾಸ ಬಿಡಿ. ಆಗ ಇರದು ಯಾವುದೇ ಬಾನಗಡಿ.

Source – Sakhigeetha.com

ಕಾವ್ಯ : ಅರ್ಥೈಸುವ ಕಡೆಗೆ: ಆಯಾಮವಗಳಿವೆಯೇನು

0

images (2)

* ದೊ.ರಂ.ಗೌಡ
* ಜಗತ್ತಿನಲ್ಲಿ ಮಾನವ ಯಾವತ್ತು ಮಾತು ಕಲಿತನೋ ಆ ಹೊತ್ತು ಸಾಹಿತ್ಯದ ಉಗಮಕೂಡ ಆಗಿರಬೇಕು
* ಸಹಿತವಾದದ್ದು “ಸಾಹಿತ್ಯ”
* ಮನಸ್ಸಿಗೆ ಹಿತ, ಹೃದಯಕ್ಕೆ ಹಿತ,
* ಬದುಕಿಗೆ, ಸಮಾಜ ಸಾಹಿತ್ಯ ಜನ ಜೀವನದ ಪ್ರತಿಬಿಂಬ ಎಂಬ ಮಾತೊಂದಿದೆ.
ಕಾಲ ಕಾಲಕ್ಕೆ ಹೇಳಿಕೆಗಳು ನವೀಕರಣ ಗೊಳ್ಳುತ್ತವೆ. ಚಿಂತನೆಗಳು ಬದಲಾಗುತ್ತವೆ. ಹೀಗಾಗಿ ಅಭಿಪ್ರಾಯಗಳೂ ಕೂಡ ಮಾರ್ಪಾಟಾಗುತ್ತವೆ. ಈಗ…

“ಸಾಹಿತ್ಯ ಜೀವನದ ಗತಿ ಬಿಂಬ” ಎಂದು ರಾಷ್ಟçಕವಿ ಡಾ||ಜಿ.ಎಸ್.ಎಸ್ ಹೇಳಿದ್ದಾರೆ.
ಈ ಹೊಸ ಮಾತು ಚಾಲ್ತಿಗೆ ಬಂತು.
ಗತಿ – ಚಲನೆ, ಸಮಾಜದ ಬದುಕು ನಿಂತ ನೀರಲ್ಲ. ಸದಾ ಚಲನಶೀಲ, ಹೀಗಾಗಿ “ಗತಿಬಿಂಬ” ಸೂಕ್ತ ಆಗಬಹುದು, ಆದರೆ – ತರ್ಕ ಇಷ್ಟಕ್ಕೆ ನಿಲ್ಲಲಿಲ್ಲ.
“ಸಾಹಿತ್ಯ ಜೀವನದ ಮತಿಬಿಂಬ” ಕೂಡ ಆಗಬಹುದು. ಇದು ಇತ್ತಿÃಚಿನ ಮಾತು!
ಸಾಹಿತ್ಯವನ್ನು ಸೃಷ್ಟಿಸುವವನು ಸಾಹಿತಿ! ಅಲ್ಲಿ ಅವನ ಬರಹದಲ್ಲಿ ಅವನ ಬುದ್ಧಿಮತ್ತೆ ಪ್ರತಿಫಲಿತ ಆಗಿರುತ್ತದೆ, ಕಲ್ಪನೆ ಬಿಂಬಿತವಾಗಿರುತ್ತದೆ. ಹೀಗಾಗಿ “ಮತಿ” ಪ್ರಧಾನವಾಗಿ ಬಿಂಬಿತ, ಆದ್ದರಿಂದ “ ಸಾಹಿತ್ಯ ಮತಿ ಬಿಂಬ” ಡಿ.ಆರ್.ಜಿ. ಎಂಬ ಮಾತೂ ಸಾಹಿತ್ಯದ ಸೂತ್ರಿÃಕರಣದಲ್ಲಿ ಸೂಕ್ತ ಆಗಬಹುದು. ಶಬ್ಧಾರ್ಥ ಸಹಿತವಾದುದ್ದು ಸಾಹಿತ್ಯ.
“ವಾಗರ್ಥ ವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ
ಜಗತ್‌ಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ”
ವಾಕ್ ಮತ್ತು ಅರ್ಥಗಳÀ ಸಾಮರಸ್ಯದಿಂದ ಕೂಡಿದ್ದು – ಸಾಹಿತ್ಯ, ವಾಕ್+ಅರ್ಥ ಕೂಡಿಕೊಂಡ ಹಾಗೆ – ಪಾರ್ವತೀ ಪರಮೇಶ್ವರ ಅನ್ಯೊÃನ್ಯ.
ನಾವು ಎಷ್ಟು ಸೂತ್ರಿÃಕರಿಸಿದರೂ ಅಷ್ಟು ಅರ್ಥಗಳನ್ನು ಒಳಗೊಳ್ಳಬಲ್ಲದು ಕಾವ್ಯ.
“ಕಾವ್ಯೆÃಷು ನಾಟಕಂ ರಮ್ಯಂ”
ಹಿಂದೆ ಕಾವ್ಯದಲ್ಲಿ ಎರಡು ಬಗೆ
೧. ಕಾವ್ಯ < ಶ್ರವ್ಯಕಾವ್ಯ (ಸಾಹಿತ್ಯ)
ದೃಶ್ಯಕಾವ್ಯ (ನಾಟಕ)
ಕವಿತೆ – ಕವಿಯ ಅಂತರಾತ್ಮದ ಭಾವ ಸರಿತೆ! ಸರಿತೆ ಅಂದರೆ ನದಿ, (ಭಾವ – ಪ್ರವಾಹ)
(Poeಣಡಿಥಿ is ಣhe sಠಿoಟಿಣಚಿಟಿious oveಡಿ ಜಿಟoತಿ oಜಿ ಠಿoತಿeಡಿಜಿuಟಟ ಜಿeeಟiಟಿgs.)
ಕಾವ್ಯ ಕವಿಯ ಮನಸ್ಸಿನ ಮುಕ್ತಾತಿಮುಕ್ತ ಸ್ವಚ್ಛಂದವಾದ ಹೃದಯದ ತುಂಬಿ ತುಳುಕಿದ ಭಾವಧಾರೆ. ಅಲ್ಲಿ ಕವಿಯ ಬದುಕಿನ ಅನುಭವಗಳೇ ಪಲ್ಲವಿಸಿರುತ್ತವೆ, ಉಕ್ಕುಕ್ಕಿ ಹರಿದಿರುತ್ತವೆ. ಕವಿತೆಯಲ್ಲಿ ಕವಿಯನುಡಿ – ಜಾಣ್ಮೆ ಇರುತ್ತದೆ, ಸೊಗಸಾದ ಪದಗಳ ಹೆಣಿಗೆ ಇರುತ್ತದೆ, ಮಾತಿನ ಸೊಗಸುಗಾರಿಕೆ ಇರುತ್ತದೆ,
ಉದಾ :- ಓ! ತಂದೆ ಈ ತರಕಾರಿಯನ್ನು
ಎಲ್ಲಿಂದ ತಂದೆ ?
ಮೊದಲಿನ “ತಂದೆ” ಪದ ನಾಮಪದ, ಕೊನೆಯ “ತಂದೆ” – ಕ್ರಿಯಾಪದ, ಪದಗಳ ಮೇಲೆ ಆಟ ಆಡಬಲ್ಲವ “ಕವಿ” ಆಗುತ್ತಾನೆ.
ನಿದರ್ಶನ – ದ.ರಾ.ಬೇಂದ್ರೆ
“ಬಸ್ಸು ಸಿಗಲಿಲ್ಲ ಅಂತ –
“ರಿಕ್ಷಾ” ಹತ್ತಿದೆ”.
ಇಲ್ಲಿ ಕವಿಯ ಉದ್ದೆÃಶ ತಾವು ಕಲ್ಪನೆಗೆ ಹೋದದ್ದು “ಅಂತರಿಕ್ಷ” ಪದ ಪ್ರಯೋಗ ಇದೆ.

ನಾವು ಸಾಮಾನ್ಯರು ಕವಿಗಳಿಗೆ ಎಲ್ಲೊÃ ಬಸ್ಸು ಸಿಕ್ಕಿಲ್ಲ. ಎಷ್ಟು ಹೊತ್ತಾದರೂ ಅದಕ್ಕೆ ಅವರು “ರಿಕ್ಷಾ” ಹತ್ತಿದ್ದಾರೆ ಎಂದು ಉತ್ತರಿಸುತ್ತೆÃವೆ. ಆದರೆ ಕವಿಯ ಕಾವ್ಯದ ಲೆಕ್ಕಾಚಾರವೇ ಬೇರೆ!
ಹೀಗೆ ಕವಿತೆಗೆ ಅನಂತಮುಖ! ಅಗಣಿತ ಆಯಾಮ. ಕುವೆಂಪು ಮತ್ತು ಬೇಂದ್ರೆ ಒಂದು ಕನಿಷ್ಠ ೩,೦೦೦ ಪದಗಳನ್ನು ತಮ್ಮ ಕಾವ್ಯದಲ್ಲಿ ಬಳಸಿರ ಬಹುದು.
ನಿನ್ನ ಪ್ರೆÃಮ ಗಂಗೆಯಲ್ಲಿ
ನಾನು ಮಿಂದೆ –
ಇಲ್ಲಿ “ಪ್ರೆÃಮ” ಮತ್ತು “ಗಂಗೆ” ಎರಡೂ ಬೇರೆ ಬೇರೆ ಕೆಲವು ನಿದರ್ಶನಗಳು: ಪದಗಳು; ವಿಷಯಗಳು. ಕವಿ ಒಂದುಗೂಡಿಸಿ ವಾಗರ್ಥದ ಶ್ರೆÃಷ್ಠತೆ ಮೆರೆದಿದ್ದಾರೆ.
“ಅವನ ದ್ವೆÃಷ ಬೆಂಕಿಯಲ್ಲಿ
ಅವಳು ಸುಟ್ಟು ಕರುಕಾದಳು”
* * *
ಅಳುವ ಕಂದನ ತುಟಿಯು
ಹವಳದ ಕುಡಿಯಾಂಗ –
ಕುಡಿ ಹುಬ್ಬು ಬೇವಿನ ಎಸಳಾಂಗ –
* * *
ಅನುಭವದ ಪುನರ್ ಅನುಭವವೇ
ಕಾವ್ಯ – ಡಾ.ಜಿ.ಎಸ್.ಎಸ್ ಹೀಗೆ ಮನೋಜ್ಞವಾಗಿ ಹೇಳಿದ್ದಾರೆ.
ಆಡಿ ಬಾ ನನ್ನ ಕಂದ ಅಂಗಾಲು ತೊಳೆದೇನು
ತೆಂಗಿನಕಾಯಿ ತಿಳಿನೀರು – ತಕ್ಕೊಂಡು
ಬಂಗಾರದ ಪಾದ ತೊಳೆದೇನು.
ಮಕ್ಕಳ ಪದ್ಯ ಬರೆದರೂ ಖhಥಿಣhಚಿm ಇರಬೇಕು.
ದಡದ ಬಳಿ ಮರದ ಸಾಲು
ಅಲ್ಲಿ ಹಸಿರು ಕೆಳಗೆ ಕೆಸರು
ರಮ್ಯ ಬಣ್ಣ ಕೆಂಪು ನೀರು
ಏನು ಚೆಂದ ತಂಪು ನೆರಳು
* * *
ಹಕ್ಕಿ ಹಿಂಡು ಹಾರಿಕೊಂಡು
ಬಂದು ನದಿಯ ನೀರು ಕುಡಿದು
ಮತ್ತೆ ಹಾರಿ ಸಾಲುಗೊಂಡು
ಕಾಣದಾದವು – ನಭದಿ ಕಾಣದಾದವು
ಹೀಗೆ ಕಾವ್ಯಕ್ಕೆ ಅನೇಕ ಆಯಾಮಗಳು ಅಂಧಕಾರದಲ್ಲಿರುವ ನಮಗೆ ದಾರಿದೀಪ
* * *
“ಕರುನಾಡು ಬಾ ಬೆಳಕೆ
ಮಸುಕಿಡೀ ಹುಬ್ಬಿನಲಿ
ಕೈ ಹೊಡಾಡಿ ನಡೆಸೆನ್ನನು”!

ಕಾವ್ಯ : ಅರ್ಥೈಸುವ ಕಡೆಗೆ: ಆಯಾಮವಗಳಿವೆಯೇನು?
* ದೊ.ರಂ.ಗೌಡ.
* ಜಗತ್ತಿನಲ್ಲಿ ಮಾನವ ಯಾವತ್ತು ಮಾತು ಕಲಿತನೋ ಆ ಹೊತ್ತು ಸಾಹಿತ್ಯದ ಉಗಮಕೂಡ ಆಗಿರಬೇಕು
* ಸಹಿತವಾದದ್ದು “ಸಾಹಿತ್ಯ”
* ಮನಸ್ಸಿಗೆ ಹಿತ, ಹೃದಯಕ್ಕೆ ಹಿತ,
* ಬದುಕಿಗೆ, ಸಮಾಜಕ್ಕೆ ಹಿತ-
ಇದು ಸಾಹಿತ್ಯ.
(ಐiಣeಡಿಚಿಣuಡಿe is ಣhe miಡಿಡಿoಡಿ oಜಿ ಟiಜಿe)
ಸಾಹಿತ್ಯ ಜನ ಜೀವನದ ಪ್ರತಿಬಿಂಬ ಎಂಬ ಮಾತೊಂದಿದೆ.
ಕಾಲ ಕಾಲಕ್ಕೆ ಹೇಳಿಕೆಗಳು ನವೀಕರಣ ಗೊಳ್ಳುತ್ತವೆ. ಚಿಂತನೆಗಳು ಬದಲಾಗುತ್ತವೆ. ಹೀಗಾಗಿ ಅಭಿಪ್ರಾಯಗಳೂ ಕೂಡ ಮಾರ್ಪಾಟಾಗುತ್ತವೆ. ಈಗ…

“ಸಾಹಿತ್ಯ ಜೀವನದ ಗತಿ ಬಿಂಬ” ಎಂದು ರಾಷ್ಟçಕವಿ ಡಾ||ಜಿ.ಎಸ್.ಎಸ್ ಹೇಳಿದ್ದಾರೆ.
ಈ ಹೊಸ ಮಾತು ಚಾಲ್ತಿಗೆ ಬಂತು.
ಗತಿ – ಚಲನೆ, ಸಮಾಜದ ಬದುಕು ನಿಂತ ನೀರಲ್ಲ. ಸದಾ ಚಲನಶೀಲ, ಹೀಗಾಗಿ “ಗತಿಬಿಂಬ” ಸೂಕ್ತ ಆಗಬಹುದು, ಆದರೆ – ತರ್ಕ ಇಷ್ಟಕ್ಕೆ ನಿಲ್ಲಲಿಲ್ಲ.
“ಸಾಹಿತ್ಯ ಜೀವನದ ಮತಿಬಿಂಬ” ಕೂಡ ಆಗಬಹುದು. ಇದು ಇತ್ತಿÃಚಿನ ಮಾತು!
ಸಾಹಿತ್ಯವನ್ನು ಸೃಷ್ಟಿಸುವವನು ಸಾಹಿತಿ! ಅಲ್ಲಿ ಅವನ ಬರಹದಲ್ಲಿ ಅವನ ಬುದ್ಧಿಮತ್ತೆ ಪ್ರತಿಫಲಿತ ಆಗಿರುತ್ತದೆ, ಕಲ್ಪನೆ ಬಿಂಬಿತವಾಗಿರುತ್ತದೆ. ಹೀಗಾಗಿ “ಮತಿ” ಪ್ರಧಾನವಾಗಿ ಬಿಂಬಿತ, ಆದ್ದರಿಂದ “ ಸಾಹಿತ್ಯ ಮತಿ ಬಿಂಬ” ಡಿ.ಆರ್.ಜಿ. ಎಂಬ ಮಾತೂ ಸಾಹಿತ್ಯದ ಸೂತ್ರಿÃಕರಣದಲ್ಲಿ ಸೂಕ್ತ ಆಗಬಹುದು. ಶಬ್ಧಾರ್ಥ ಸಹಿತವಾದುದ್ದು ಸಾಹಿತ್ಯ.
“ವಾಗರ್ಥ ವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ
ಜಗತ್‌ಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ”
ವಾಕ್ ಮತ್ತು ಅರ್ಥಗಳÀ ಸಾಮರಸ್ಯದಿಂದ ಕೂಡಿದ್ದು – ಸಾಹಿತ್ಯ, ವಾಕ್+ಅರ್ಥ ಕೂಡಿಕೊಂಡ ಹಾಗೆ – ಪಾರ್ವತೀ ಪರಮೇಶ್ವರ ಅನ್ಯೊÃನ್ಯ.
ನಾವು ಎಷ್ಟು ಸೂತ್ರಿÃಕರಿಸಿದರೂ ಅಷ್ಟು ಅರ್ಥಗಳನ್ನು ಒಳಗೊಳ್ಳಬಲ್ಲದು ಕಾವ್ಯ.
“ಕಾವ್ಯೆÃಷು ನಾಟಕಂ ರಮ್ಯಂ”
ಹಿಂದೆ ಕಾವ್ಯದಲ್ಲಿ ಎರಡು ಬಗೆ
೧. ಕಾವ್ಯ < ಶ್ರವ್ಯಕಾವ್ಯ (ಸಾಹಿತ್ಯ)
ದೃಶ್ಯಕಾವ್ಯ (ನಾಟಕ)
ಕವಿತೆ – ಕವಿಯ ಅಂತರಾತ್ಮದ ಭಾವ ಸರಿತೆ! ಸರಿತೆ ಅಂದರೆ ನದಿ, (ಭಾವ – ಪ್ರವಾಹ)
(Poeಣಡಿಥಿ is ಣhe sಠಿoಟಿಣಚಿಟಿious oveಡಿ ಜಿಟoತಿ oಜಿ ಠಿoತಿeಡಿಜಿuಟಟ ಜಿeeಟiಟಿgs.)
ಕಾವ್ಯ ಕವಿಯ ಮನಸ್ಸಿನ ಮುಕ್ತಾತಿಮುಕ್ತ ಸ್ವಚ್ಛಂದವಾದ ಹೃದಯದ ತುಂಬಿ ತುಳುಕಿದ ಭಾವಧಾರೆ. ಅಲ್ಲಿ ಕವಿಯ ಬದುಕಿನ ಅನುಭವಗಳೇ ಪಲ್ಲವಿಸಿರುತ್ತವೆ, ಉಕ್ಕುಕ್ಕಿ ಹರಿದಿರುತ್ತವೆ. ಕವಿತೆಯಲ್ಲಿ ಕವಿಯನುಡಿ – ಜಾಣ್ಮೆ ಇರುತ್ತದೆ, ಸೊಗಸಾದ ಪದಗಳ ಹೆಣಿಗೆ ಇರುತ್ತದೆ, ಮಾತಿನ ಸೊಗಸುಗಾರಿಕೆ ಇರುತ್ತದೆ,
ಉದಾ :- ಓ! ತಂದೆ ಈ ತರಕಾರಿಯನ್ನು
ಎಲ್ಲಿಂದ ತಂದೆ ?
ಮೊದಲಿನ “ತಂದೆ” ಪದ ನಾಮಪದ, ಕೊನೆಯ “ತಂದೆ” – ಕ್ರಿಯಾಪದ, ಪದಗಳ ಮೇಲೆ ಆಟ ಆಡಬಲ್ಲವ “ಕವಿ” ಆಗುತ್ತಾನೆ.
ನಿದರ್ಶನ – ದ.ರಾ.ಬೇಂದ್ರೆ
“ಬಸ್ಸು ಸಿಗಲಿಲ್ಲ ಅಂತ –
“ರಿಕ್ಷಾ” ಹತ್ತಿದೆ”.
ಇಲ್ಲಿ ಕವಿಯ ಉದ್ದೆÃಶ ತಾವು ಕಲ್ಪನೆಗೆ ಹೋದದ್ದು “ಅಂತರಿಕ್ಷ” ಪದ ಪ್ರಯೋಗ ಇದೆ.

ನಾವು ಸಾಮಾನ್ಯರು ಕವಿಗಳಿಗೆ ಎಲ್ಲೊÃ ಬಸ್ಸು ಸಿಕ್ಕಿಲ್ಲ. ಎಷ್ಟು ಹೊತ್ತಾದರೂ ಅದಕ್ಕೆ ಅವರು “ರಿಕ್ಷಾ” ಹತ್ತಿದ್ದಾರೆ ಎಂದು ಉತ್ತರಿಸುತ್ತೆÃವೆ. ಆದರೆ ಕವಿಯ ಕಾವ್ಯದ ಲೆಕ್ಕಾಚಾರವೇ ಬೇರೆ!
ಹೀಗೆ ಕವಿತೆಗೆ ಅನಂತಮುಖ! ಅಗಣಿತ ಆಯಾಮ. ಕುವೆಂಪು ಮತ್ತು ಬೇಂದ್ರೆ ಒಂದು ಕನಿಷ್ಠ ೩,೦೦೦ ಪದಗಳನ್ನು ತಮ್ಮ ಕಾವ್ಯದಲ್ಲಿ ಬಳಸಿರ ಬಹುದು.
ನಿನ್ನ ಪ್ರೆÃಮ ಗಂಗೆಯಲ್ಲಿ
ನಾನು ಮಿಂದೆ –
ಇಲ್ಲಿ “ಪ್ರೆÃಮ” ಮತ್ತು “ಗಂಗೆ” ಎರಡೂ ಬೇರೆ ಬೇರೆ ಕೆಲವು ನಿದರ್ಶನಗಳು: ಪದಗಳು; ವಿಷಯಗಳು. ಕವಿ ಒಂದುಗೂಡಿಸಿ ವಾಗರ್ಥದ ಶ್ರೆÃಷ್ಠತೆ ಮೆರೆದಿದ್ದಾರೆ.
“ಅವನ ದ್ವೆÃಷ ಬೆಂಕಿಯಲ್ಲಿ
ಅವಳು ಸುಟ್ಟು ಕರುಕಾದಳು”
* * *
ಅಳುವ ಕಂದನ ತುಟಿಯು
ಹವಳದ ಕುಡಿಯಾಂಗ –
ಕುಡಿ ಹುಬ್ಬು ಬೇವಿನ ಎಸಳಾಂಗ –
* * *
ಅನುಭವದ ಪುನರ್ ಅನುಭವವೇ
ಕಾವ್ಯ – ಡಾ.ಜಿ.ಎಸ್.ಎಸ್ ಹೀಗೆ ಮನೋಜ್ಞವಾಗಿ ಹೇಳಿದ್ದಾರೆ.
ಆಡಿ ಬಾ ನನ್ನ ಕಂದ ಅಂಗಾಲು ತೊಳೆದೇನು
ತೆಂಗಿನಕಾಯಿ ತಿಳಿನೀರು – ತಕ್ಕೊಂಡು
ಬಂಗಾರದ ಪಾದ ತೊಳೆದೇನು.
ಮಕ್ಕಳ ಪದ್ಯ ಬರೆದರೂ ಖhಥಿಣhಚಿm ಇರಬೇಕು.
ದಡದ ಬಳಿ ಮರದ ಸಾಲು
ಅಲ್ಲಿ ಹಸಿರು ಕೆಳಗೆ ಕೆಸರು
ರಮ್ಯ ಬಣ್ಣ ಕೆಂಪು ನೀರು
ಏನು ಚೆಂದ ತಂಪು ನೆರಳು
* * *
ಹಕ್ಕಿ ಹಿಂಡು ಹಾರಿಕೊಂಡು
ಬಂದು ನದಿಯ ನೀರು ಕುಡಿದು
ಮತ್ತೆ ಹಾರಿ ಸಾಲುಗೊಂಡು
ಕಾಣದಾದವು – ನಭದಿ ಕಾಣದಾದವು
ಹೀಗೆ ಕಾವ್ಯಕ್ಕೆ ಅನೇಕ ಆಯಾಮಗಳು ಅಂಧಕಾರದಲ್ಲಿರುವ ನಮಗೆ ದಾರಿದೀಪ
* * *
“ಕರುನಾಡು ಬಾ ಬೆಳಕೆ
ಮಸುಕಿಡೀ ಹುಬ್ಬಿನಲಿ
ಕೈ ಹೊಡಾಡಿ ನಡೆಸೆನ್ನನು”!

Source – Sakhigeetha.com

ಆಡಿಬಾ ನನಕಂದ ಅಂಗಾಲ ತೊಳದೇನ…..!

0

aadi baa nana kanda

ಮುದ್ದಿನ ಮಗು ಅತ್ತರೆ ಅದಕ್ಕೆ ಆಟಿಕೆಯ ಪ್ಲಾಸ್ಟಿಕ್ ಕಾರು ಕೊಡಿಸಲೇಬೇಕು. ಅದಕ್ಕೆ ಭಾರತೀಯ ಲೆಕ್ಕದಲ್ಲಿ 27 ಸಾವಿರ ರೂಪಾಯಿ! ಕೆಲಿಫೋರ್ನಿಯಾ ಕಡಲಕೊಲ್ಲಿಯ ಬರ್ಕಲಿಯ ಈ ಮಕ್ಕಳ ಬ್ರಹ್ಮಾಂಡದ ಅಂಗಡಿಗೆ ಏನಿಲ್ಲೆಂದರೂ ನೂರಾರು ಕಾರುಗಳೂ. ಇಮದ ಸಂಡೆ ಬೇರೆ. ನಮ್ಮ ಕಾರು ಪಾರ್ಕ ಮಾಡಲು ಹತ್ತುನಿಮಿಷ ಕಾಯಬೇಕಾಯಿತು.
ಒಳಹೊಕ್ಕರೆ; ಅಮೇರಿಕಯ ಪ್ರಚಂಡ ಮಾರ್ಕೆಟಿಂಗ್ ಸಂಸ್ಕೃತಿಯ ಬೃಹತ್ ಅನಾವರಣ. ಮಕ್ಕಳೇಕೆ….. ಇಲ್ಲಿ ಬಂದರೆ ಮುದುಕರೂ ಹುಚ್ಚರಾಗುತ್ತಾರೆ. ಮಾರಾಟದ ಕ್ಷೆÃತ್ರದಲ್ಲಿ ಜಗತ್ತಿನ ಮಹಾಪ್ರಚಂಡರು ಹೊಕ್ಕು ಮಕ್ಕಳ ಆಟಿಕೆಗಲೆಲ್ಲ ಅನೇಕ ಮಿಲಿಯನ್ನುಗಳನ್ನು ದಾಟುತ್ತವೆ.
ನಾವೆಲ್ಲ ಒಂದು ಕಾಲಕ್ಕೆ ರಾಯಚೂರ, ಬಳ್ಳಾರಿ, ಬಿಜಾಪೂರ, ಹುಬ್ಬಳ್ಳಿಯಲ್ಲಿ ಮಣ್ಣಿನ ಕುಡಿಕಿ, ಮಣ್ಣಿನ ವಲಿ, ಜೋಳದ ದಂಟಿನ ಚಕ್ಕಡಿ, ಗುಂಡ, ಗಜಗ, ಹುಂಚಿಕಪ್ಪ, ವಟ್ಟಪ್ಪ, ಬಗರಿ, ಬಿಂಗರಿ, ಕಣಮುಚಿಗಿ ಆಡಿದವರು. ಯಾವುದಕ್ಕೂ ಪೈಪಾವಾಣೆ ಖರ್ಚಿಲ್ಲ. ಪ್ರಕೃತಿ ನಮ್ಮ ಆಟದ ಮನೆಯಾಗಿತ್ತು. ನ್ನ ಅಕ್ಕಂದಿರಿಗೆ ಆಡಲು ಒಂದೇ ಒಂದು ಕಟ್ಟಿಗೆಯ ಗೊಂಬೆ ಇತ್ತು. ಅದಕ್ಕೆ “ಚಂದಾಳಗೊಂಬಿ” ಅನ್ನುತ್ತಿದ್ದರು.
ಮಕ್ಕಳ ಮನಸ್ಸು ಮಾರ್ಕೇಟಿಂಗ್ ಬ್ರಹ್ಮಾಂಡದ ಮಹಾಬಾಹುಗಳ ತೆಕ್ಕೆಗೆ ಸಿಕ್ಕಮೇಲೆ ಮುಗುದೇ ಹೋತು. ಸೀರಿಯ ಕರಿಯನ್ನೆÃ (ಕಡೇ ಚುಂಗು) ನಮ್ಮ ಅಕ್ಕ ಉಟ್ಟು ಮದುವಿಯ ಆಟ ಅಡುತ್ತಿದ್ದಳು. ಆ ಕತ್ತರಿಸಿದ ಚುಂಗಿನಲ್ಲಿ ಅವಳು ರಾಜಕುಮಾರಿಯ ಸುಖ ಅನುಭವಿಸುತ್ತಿದ್ದಳು. ಹುಂಚೀಮರದ ಗಿಡಮಂಗನ ಆಟ ಎಂಥಾ ಖುಶಿ! ಅದು ನಮ್ಮ ಮನೆಮುಂದಿನ ಪಂಚಮಿ ಹಬ್ಬ! ಕೂಳುಮರೆತು ಆಡುತ್ತಿದ್ದ ಕಾಲ!
ಈ ಕೊಳ್ಳಬಾಕ ಸಂಸ್ಕೃತಿಯಲ್ಲಿ ಬೆಳೆದುಬಂದ ಮಕ್ಕಳಿಗೆ ತೃಪ್ತಿ ಎಂಬುದೇ ಇಲ್ಲ. ಕನಿಷ್ಟ ತಿಂಗಳಿಗೆ ನಮ್ಮ ಲೆಕ್ಕದಲ್ಲಿ ೨೦-೩೦ ಸಾವಿರ ರೂಪಾಯಿ ಆ ಮಕ್ಕಳ ಆಟಿಕೆಗಳಿಗೆ ವೆಚ್ಚವಾಗುತ್ತದೆ. ಪ್ರತಿಯೊಂದು ಮನೆಯಲ್ಲೆÃ ಒಂದು ದೊಡ್ಡ ಹಾಲ್‌ತುಂಬ ಮಿನಿ ಮಾಲ್ !ಮನೆಮನೆಯೂ ಮಕ್ಕಳ ಶಾಪಿಂಗ್ ಕಾರ್ನರ್!
ಭೂತ-ಪ್ರೆÃತ-ಪಿಶಾಚಿ-ಕಿನ್ನರರು-ಕಿಂಪುರುಷರು-ಯಕ್ಷರು-ಯಕ್ಷಿÃಣಿಯರು-ಗಂಧರ್ವರು-ಸುಡುಗಾಡ ಸಿದ್ಧರು ಮಕ್ಕಳ ಆಟಿಕೆಗಳಾಗಿ ಮನೆ ಸೇರುತ್ತವೆ. ಮನೆಮನೆಯಲ್ಲೂ ಮಕ್ಕಳ ಆಟದ ಮಹಾಕಸ ತುಂಬುತ್ತದೆ.
ಅಮೇರಿಕೆಯವರ ಕೈಯಲ್ಲಿ ಏನು ಕೊಟ್ಟರೂ ಮಾರ್ಕೇಟಿಂಗ್ ಗೂಡ್ಸ ಆಗುತ್ತದೆ. ನಮ್ಮ ಎಲ್ಲ ದೇವರುಗಳೂ ಈಗ ಅಮೇರಿಕೆಯಲ್ಲಿ ಮಾರಾಟದ ವಸ್ತುವಾಗಿ ಸೇರ್ಪಡೆಯಾಗಿದ್ದಾರೆ. ನಮ್ಮ ಬುದ್ಧ, ಗಣಪತಿಯರಿಗೆ ಅಲ್ಲಿ ಮನೆಮನೆಯಲ್ಲೂ ಆದ್ಯಸ್ಥಾನ ಸಂದಿದೆ.
ನಮ್ಮ ಯಕ್ಷಗಾನ, ದೊಡದಡಾಟ, ಸಣ್ಣಾಟ, ತೊಗಲಗೊಂಬಿ, ಪಾರಿಜಾತ, ಡೊಂಬರಾಟ ಕಾಡಸಿದ್ಧರು, ಸುಡುಗಾಡು ಸಿದ್ಧರು, ಬುಡಬುಡಿಕಿಗಳು, ಜಾತಿಗಾರ ತಂಡಗಳು ನಮ್ಮ ಗ್ರಾಮೀಣ ಸಂಸ್ಕೃತಿಯ ಕಲೆಗೆ ಬಣ್ಣದ ತೋರಣ ಕಟ್ಟಿದವು. ಮಠಮಾನ್ಯಗಳ ಪುರಾಣಕಾರರು, ಕೀರ್ತನಕಾರರು ಪುಷ್ಪಕ ವಿಮಾನದಲ್ಲಿ ಕುಂತು ಕೈಲಾಸಕ್ಕೆ ಹೋಗುತ್ತಿದ್ದೆವು.
ನಮ್ಮ ಮಕ್ಕಳ ಮನಸು ಇಂಥ ಅತ್ಯಗಾಧ ಕಲ್ಪನಾ ಲೋಕದ ಅಂತರಾಳದಲ್ಲಿ ಅರಳುತ್ತಿದ್ದವು.ಏಳುಮಕ್ಕಳ ತಾಯಿ ನಮ್ಮನ್ನು ದಿನಾ ಭೆಟ್ಟಿಆಗುತ್ತಿದ್ದಳು. ಹಾಳುಬಾವಿಯ ದೆವ್ವಗಳು ನಮ್ಮ ಮನಸಿನಲ್ಲಿ ಚಲ್ಲಾಡುತ್ತಿದ್ದವು. ಬಾಣತಿ ಕಟ್ಟಿ, ಬಸರಿಕಟ್ಟಿಯ ಭೂತಗಳು ನಮ್ಮ ಕಲ್ಪನಾ ಲೋಕಕ್ಕೆ ಕನಸಿನ ಅಭಿಷೇ ಮಾಡುತ್ತಿದ್ದವು.
ಮಗುವನ್ನು ಬಣ್ಣದ ತೊಟ್ಟಿಲಲ್ಲಿ ಮಲಗಿಸಿ, ಜೋಗುಳ ಹಾಡುವ ಕನ್ನಡತಾಯಿಯ ಜೋಗುಳ ಹಾಡು ಇಲ್ಲಿಲ್ಲ. “ಆಡಿಬಾ ನನ ಕಂದ ಅಂಗಾಲ ತೊಳದೇನ, ತೆಂಗೀನ ಕಾಯ ತಿಳಿ ನೀರ ತೊಕ್ಕೊಂಡು ಬಂಗಾರದ ಮಾರಿ ತಿಳದೇನ” ಅಂತ ಹಾಡುವ ತಾಯಿ ಇಲ್ಲ. “ಮುಂಜಾನೆ ಏಳುತಲೆ ಅಂಗಳಕೆ ಚಳಿ ಹೊಡೆದು ದುಂಡು ಮಲ್ಲಿÃಗೆ ಹರವೀದೆ, ನನಮನೆಗೆ ನಂದೀಯನೇರಿ ಶಿವಬಂದ”…..ಎಂಥಾ ಮನಸಿನ ಆನಂದ! “ಎಲ್ಲಾö್ಯರ ಇರಲೆವ್ವ ಹುಲ್ಲಾಗಿ ಬೆಳೆಯಲೀ, ನೆಲ್ಲಿÃ ಬಡ್ಯಾಗಿ ಚಿಗಿಯಲಿ ನನಕಂದ, ಜಯವಂತನಾಗಿ ಬೆಳೆಯಲಿ” ಎನ್ನುವ ಕನ್ನಡತಾಯ ಹರಕೆ ಎಂಥಾ ಕಕ್ಕುಲಾತಿಯ ಕಳಬಳ್ಳಿ
ಮಣ್ಣಿನ ಗುಳ್ಳವ್ವ, ಮಣ್ಣಿನ ಶೀಗವ್ವ, ನಾಗಪ್ಪ-ಗಣಪ್ಪ-ಬಸವಣ್ಣ ನಮ್ಮಿಂದ ದೂರವಾದರು
ಮಣ್ಣು ಹೋತು ! ಬಣ್ಣ ಬಂತು!
ಪ್ರಿÃತಿ ಹೋತು ! ಪ್ಲಾಸ್ಟಿಕ್ ಬಂತು!!

Source – Sakhigeetha.com

*ಅಭಿನವ ಉಮರ ಖಯ್ಯಾಂ: ಹರಿವಂಶರಾಯ್ ಬಚ್ಚನ್*

0

download (2)

*ಅಭಿನವ ಉಮರ ಖಯ್ಯಾಂ: ಹರಿವಂಶರಾಯ್ ಬಚ್ಚನ್*ಭಾವುಕತಾ ಕಿ ಅಂಗೂರ್ ಲತಾ ಸೆ
ಖೀಂಚಕರ್ ಲಾಯಾ ಹೂಂ ಏ ಹಾಲಾ
ಕೋಯಿ ಲಾಖ ಪಿಯೆ, ದೋ ಲಾಖ ಪಿಯೆ
ಕಭೀ ಖಾಲಿ ನ ಹೋಗಿ ಪ್ಯಾಲಾ. . . .

ಹೆಣ್ಣು ಮುಟ್ಟಿ, ಹೆಣ್ಣು ಹೆತ್ತು, ಕಾವ್ಯ ಕಲಿಸಿ-ಕುಡಿದು, ಅನೇಕ ದಶಕಗಳಿಂದ ಅದರ ಜೊತೆ ಜೊತೆಯಲ್ಲಿಯೇ ನಡೆದು, ಸಿಕ್ಕ ಸಭೆಗಳಲ್ಲೆಲ್ಲಾ ಅದನ್ನು ಕುರಿತು ಮಾತನಾಡುವಾಗಲೆಲ್ಲ ನಾನು ಮತ್ತೆ ಮತ್ತೆ ಉದ್ಧರಿಸುವ ನನ್ನ ತಂದೆ ಕಲಿಸಿದ ಪದ್ಯ ಇದು. ಕವಿ ಹರಿವಂಶರಾಯ್ ನನ್ನನ್ನು ಇಡಿಯಾಗಿ ಆವರಿಸಿಕೊಳ್ಳಲು ಕಾರಣವಾದ ಪದ್ಯ ಇದು. ಕುಡುಕರು, ಅವರ ತಲೆ ನೇವರಿಸಿ ಎದೆಯಲ್ಲಿ ಇಂಗಿಸಿಕೊಳ್ಳುವ ಹೆಂಗಸರು ಮತ್ತು ಅವರೊಳಗಿನ ಪದರುಗಳನ್ನು ಬಿಡಿ ಬಿಡಿಯಾಗಿ ನೋಡುವ ಒಳದೃಷ್ಠಿಯನ್ನು ಕೊಟ್ಟ ಪದ್ಯ ಇದು. ಸಂತರನ್ನು, ಲಫಂಗರನ್ನು ಮತ್ತು ಹುಚ್ಚರನ್ನೂ ಮನಸಾರೆ ಹಚ್ಚಿಕೊಂಡು ಮನುಷ್ಯರಂತೆ ಪರಿಗಣಿಸುವ ಪಾಠ ಕಲಿಸಿದ ಪದ್ಯ ಇದು.
ನೋಡೋಣ, ಇದನ್ನು ಭಾಷಾಂತರಿಸೋಣ ಎಂದು ಹಠಕ್ಕೆ ಬಿದ್ದೆ. ಶಬ್ದ ಹೊಂದಿದವು, ಮಾಧರ‍್ಯ ತರಲಾಗಲಿಲ್ಲ. ಹಿಗೆಂದುಕೊಂಡೆ –
ಭಾವ-ಮಧುವನದ
ಮದಿರೆಯನು ಬಸಿದು ತಂದಿದ್ದೆÃನೆ
ಯಾರೆಷ್ಟೆÃ ಕುಡಿದರೂ, ತುಟಿ ಕಚ್ಚಿ ಎಳೆದರೂ
ಖಾಲಿಯಾಗದು ಪ್ಯಾಲೆ ಎಂದು ನಂಬಿದ್ದೆÃನೆ
ಇದು ಹರಿವಂಶರಾಯ್. ನನ್ನ ಓದಿನ ಮಿತಿಯಲ್ಲಿ ಹೇಳುವುದಾದರೆ, ಅವರ ಪದ್ಯಗಳನ್ನಷ್ಟೆÃ ಅಲ್ಲ, ಅವರ ಗದ್ಯವನ್ನೂ ಕೂಡ ಭಾಷಾಂತರಿಸಲಾಗದು. ನೀವು ನಿಜವಾಗಿಯೂ ಕಾವ್ಯದ ಹುಚ್ಚು ಹಿಡಿಸಿಕೊಂಡಿದ್ದರೆ ಬಚ್ಚನ್‌ರ ಆತ್ಮಕತೆ ‘ಕ್ಯಾ ಭೂಲೂಂ ಕ್ಯಾ ಯಾದ ಕರೂಂ’ ಓದಲೇಬೇಕು. ನಾಲ್ಕು ಭಾಗಗಳಲ್ಲಿದೆ. ಇಡಿಯಾಗಿ ಓದಲಾಗದಿದ್ದರೂ ಚಿಂತೆಯಿಲ್ಲ, ಅವರ ಆತ್ಮಕತೆಯ ಮೊದಲ ಮತ್ತು ಕೊನೆಯ ಭಾಗಗಳನ್ನು ಓದಲೇಬೇಕು. ಮದಿರೆ, ಮಧುಶಾಲಾರನ್ನು ಅವರಷ್ಟು ಒಳನೋಟಗಳೊಂದಿಗೆ ಕಟ್ಟಿಕೊಟ್ಟವರಲ್ಲಿ ಉಮರ್ ಖಯ್ಯಾಮನ ನಂತರ ಬಚ್ಚನ್ ಬಿಟ್ಟರೆ ಮತ್ತೊಬ್ಬರಿಲ್ಲ. ಮದಿರೆಯ ಪ್ಯಾಲೆಯನ್ನು ಎತ್ತಿಕೊಂಡು ಅವರ ಪ್ರಪ್ರಥಮ ಕಾವ್ಯಸಂಕಲನ ‘ಮಧುಶಾಲಾ’ ನೀವು ಕೈಯಲ್ಲಿ ಹಿಡಿದರೆ ಸಾಕು, ಬೇರೆ ಜಗತ್ತಿನ, ಸಮಾಧಾನದ ಅವಶ್ಯಕತೆ ಇರುವುದಿಲ್ಲ. ಅವರು ಹೇಳುತ್ತಾರೆ, ನೀವು ಕೇಳುತ್ತಿÃರಿ, ಅವರು ಹಾಡುತ್ತಾರೆ, ನೀವು ನಾದಭೃಂಗವಾಗಿ ಓಲಾಡುತ್ತಿರುತ್ತಿÃರಿ, ತೇಲಾಡುತ್ತಿರುತ್ತಿÃರಿ. ‘ಮಧುಶಾಲಾ’ದ ಒಂದು ಪದ್ಯ-
ಶೆರೆಯಲ್ಲ ಗೆಳೆಯ
ಇವು ಮದಿರಾಲಯದ ಕಣ್ಣಿÃರ ಹನಿಗಳು
ಶೆರೆಯಲ್ಲ ಗೆಳೆಯ
ಇವು ಯಾವುದೋ ಕಾಲದ ಸುಖದ ಕೆಲ ಕ್ಷಣಗಳು
ಸಾಖಿಯಾಗಿ ಕುಣಿಯುವ ಇವಳು
ನನ್ನ ಎದೆಯಗಾನಕೆ ಹೆಜ್ಜೆ ಹಾಕಿದವಳಲ್ಲ
ನನ್ನ ವಿರಹಕೆ ಕೈ ಸೋಕಿದವಳು
ಅಚ್ಚರಿಯ ಸಂಗತಿ ಎಂದರೆ, ಶೆರೆಯೇ ಎಲ್ಲವು ಎಂಬ ಭ್ರಮೆಯನ್ನು ಸೃಷ್ಟಿಸುವ ‘ಮಧುಶಾಲಾ’ ಪ್ರಕಟವಾಗುವವರೆಗೂ ಹರಿವಂಶರಾಯ್ ಶೆರೆಯ ಒಂದು ತೊಟ್ಟು ಅನುಭವವನ್ನೂ ಹೊಂದಿರಲಿಲ್ಲ. ಕೃತಿ ಪ್ರಕಟಗೊಂಡ ನಂತರ ಮಧುಶಾಲಾಗಳೊಂದಿಗೆ ಮದಿರೆಯನ್ನು ಒಪ್ಪಿಕೊಂಡ ಹರಿವಂಶರಾಯ್, ಹೆಚ್ಚು-ಕಡಿಮೆ ಬದುಕಿನ ಕೊನೆಯವರೆಗೂ ಅದÀರ ಮುದವನ್ನು ಧಿಕ್ಕರಿಸಲಿಲ್ಲ.
ಹಿಂದಿಯ ೧೯೩೦ ರ ಆಸುಪಾಸಿನ ‘ಛಾಯಾವಾದ’ ಪಂಥದ ಕವಿಗಳಲ್ಲಿ ಅಗ್ರಗಣ್ಯ ಹರಿವಂಶರಾಯ್ ಬಚ್ಚನ್. ಖಾಯಿಸ್ಥಾ ಜನಾಂಗದ ಶ್ರಿÃವಾತ್ಸವ ಕುಟುಂಬದಲ್ಲಿ ೨೭, ನವೆಂಬರ್ ೧೯೦೭ ರಲ್ಲಿ ಪ್ರಥಾಪ್‌ಘಡ್ ಜಿಲ್ಲೆಯ ಬಾಬುಪಟ್ಟಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಹರಿವಂಶರಾಯ್, ವರ್ತಮಾನದ ಉತ್ತರ ಪ್ರದೇಶದವರಾಗುತ್ತಾರೆ. ಪ್ರತಾಪ್ ನಾರಾಯಣ್ ಶ್ರಿÃವಾತ್ಸವ ಮತ್ತು ಸರಸ್ವತಿದೇವಿಯವರ ಹಿರಿಯ ಮಗನಾದ ಇವರ ಪೂರ್ಣ ಹೆಸರು ಹರಿವಂಶರಾಯ್ ಬಚ್ಚನ್ ಶ್ರಿÃವಾತ್ಸವ. ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಮುನ್ಸಿಪಲ್ ಶಾಲೆಯಲ್ಲಿಯೇ ಮುಗಿಸಿ, ಲಾ ಓದುವದಕ್ಕಾಗಿ ಉರ್ದು ಭಾಷೆಯನ್ನು ಕಲಿತರು. ಅಲಹಾಬಾದ್ ಮತ್ತು ಬನಾರಸ ವಿಶ್ವವಿದ್ಯಾಲಯಗಳಲ್ಲಿ ಅಭ್ಯಸಿಸುವಾಗ ದೇಶ ಸ್ವಾತಂತ್ರö್ಯದ ಕಿಚ್ಚು ಹೊತ್ತಿಸಿಕೊಂಡು, ಮಹಾತ್ಮ ಗಾಂಧಿಯ ಗಮನವನ್ನೂ ಸೆಳೆದರು. ಅವರಿಂದ ಅತ್ಯುತ್ತಮ ಹಳೆಯ ವಿದ್ಯಾರ್ಥಿ ಪ್ರಶಸ್ತಿಯಿಂದ ಪುರಸ್ಕೃತರಾದರು.
ಹರಿವಂಶರಾಯ್‌ರ ಬದುಕಿನ ಎರಡನೆಯ ಘಟ್ಟ ಪ್ರಾರಭವಾಗುವುದು ೧೯೪೧ರಲ್ಲಿ. ೧೯೪೧ ರಿಂದ ೧೯೫೧ರ ವರೆಗೆ ಒಂದು ದಶಕದ ಕಾಲ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರೊಫೆಸರ್‌ರಾಗಿದ್ದ ಅವರು, ಎರಡು ವರ್ಷಗಳ ಕಾಲ ಕೆಂಬ್ರಿಜ್‌ನ ಸೇಂಟ್ ಕ್ಯಾಥರಿನ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ನಿಯುಕ್ತಗೊಂಡರು. ಇದೇ ವೇಳೆ, ಹರಿವಂಶರಾಯ್‌ರಷ್ಟೆÃ ಲೌಖಿಕ-ಅಲೌಖಿಕ ಮಹಾ ಮಿಶ್ರಣವಾಗಿದ್ದ ಡಬ್ಲೂö್ಯ ಬಿ ಏಟ್ಸ್ನನ್ನು ಕುರಿತು ಥಾಮಸ್ ರೈಸ್ ಹೆನ್‌ನ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡುವ ಅವಕಾಶ ಹರಿವಂಶರಿಗೆ ದಕ್ಕಿದ್ದು. ಅಂದಹಾಗೆ, ಈ ರೀತಿ ಇಂಗ್ಲಿಷ್‌ನಲ್ಲಿ ವಿದೇಶದಲ್ಲಿ ಸಂಶೋಧನೆ ಮಾಡಿದವರಲ್ಲಿ ಎರಡನೆಯವರಾಗಿದ್ದರು ಬಚ್ಚನ್. ಬಚ್ಚನ್ ಎಂದರೆ ಬಾಲಕ ಎಂದರ್ಥ. ಆದರೆ ಸಾಧನೆಯಲ್ಲಿ ಬಚ್ಚನ್ ಬಾಲಕರಾಗಿರಲಿಲ್ಲ, ಉತ್ತುಂಗದ ಸಂಪ್ರದಾಯಕ್ಕೆ ಮುನ್ನುಡಿ ಬರೆದ ನಾಯಕರಾಗಿದ್ದರು.
ವಿಚಿತ್ರವೆಂದರೆ ಇದು. ಆಲೋಚನೆಯಲ್ಲಿ ಪಾಶ್ಚಾತ್ಯ ಬದುಕಿಗೆ ಅಷ್ಟೊಂದು ಹತ್ತಿರವಾಗಿದ್ದ ಬಚ್ಚನ್‌ರ ಮೊದಲ ಮದುವೆ ಜರುಗಿದ್ದು ಅವರ ಬದುಕಿನ ೧೯ ನೇ ವಯಸ್ಸಿನಲ್ಲಿ. ಹೆಂಡತಿ ಶ್ಯಾಮಾ ಆಗ ಕೇವಲ ೧೪ ವರ್ಷದವಳು. ೧೦ ವರ್ಷ ಬಾಳಿದ ಅವಳು, ಕ್ಷಯರೋಗದಿಂದ ನಿಧನ ಹೊಂದಿದಳು. ವ್ಯಕ್ತಿಯ ಸಾವಿನಷ್ಟು ಸರಳವಲ್ಲ ನೆನಪುಗಳ ಅವಸಾನ. ಶ್ಯಾಮಾ ಆಗಲೇ ಬಚ್ಚನ್‌ರಲ್ಲಿ ಮಧುಶಾಲಾ ಆಗಿ ಮರುಹುಟ್ಟು ಪಡೆಯುತ್ತಿದ್ದಳು. ಮದಿರೆಯಾಗಿ ಮನಸ್ಸಿಗಿಳಿದು, ಕವಿತೆಯಾಗಿ ಅರಳುತ್ತಿದ್ದಳು.
ನನ್ನ ಶೆರೆಯಲ್ಲಿ ಒಂದೊಂದು
ಹನಿ ಒಬ್ಬೊಬ್ಬರಿಗೂ
ನನ್ನ ಪ್ಯಾಲೆಯೊಳಗೆ
ಒಂದೊಂದು ಗುಟುಕು ಎಲ್ಲರಿಗೂ
ನನ್ನ ಸಾಕಿಯೊಳಗೇ
ಅವರವರ ಸಾಕಿಯರ ಸುಖ ಎಲ್ಲರಿಗೂ
ಹೀಗೆ ಯಾರಿಗೆ ಯಾವ ಹಂಬಲವೊ
ಹಾಗೇ ಕಂಡಳು ನನ್ನ ಮಧುಶಾಲಾ
ಕೆಂಬ್ರಿಜ್‌ನ ಹಳೆಯ ಮಹಲುಗಳು, ಸೇತುವೆಗಳು, ನೀಳ ವಿಶಾಲ ರಸ್ತೆಗಳು ಅಲ್ಲಿಯೇ ಸುಳಿದು ಹೋದ ನ್ಯೂಟನ್, ಬೆಕನ್, ಡಾರ್ವಿನ್, ಸ್ಪೆನ್ಸರ್, ಕ್ರಾಮ್‌ವೆಲ್ ಹಾಗೂ ಮಿಲ್ಟನ್‌ರ ಆತ್ಮಗಳು, ಇದೇ ಕೆಂಬ್ರಿಜ್‌ನ ಮಾರ್ಲೊ, ಗ್ರೆÃ, ಥ್ಯಾಕರೆ, ವರ್ಡ್ಸವರ್ಥ್, ಬೈರನ್ ಮತ್ತು ಟೆನ್ನಿಸನ್‌ರ ಕವಿತೆಯ ಸಾಲುಗಳು, ಸುಳಿಸುಳಿಯಾಗಿ ಬರುತ್ತಿದ್ದ ಇಕ್ಬಾಲ್ ಹಾಗೂ ಅರವಿಂದರ ಕಾವ್ಯದ ಗಾನಗಂಧ ಅವರು ಈ ಕೆಂಬ್ರಿಜ್‌ನ್ನು ಹುಚ್ಚನಂತೆ ಮೋಹಿಸುವಂತೆ ಮಾಡಿತು.
ಅಂದಹಾಗೆ, ಇಲ್ಲಿಗೆ ಬರುವುದರೊಳಗಾಗಿ ಎರಡನೆಯ ಮದುವೆಯನ್ನು ತೇಜಾರೊಂದಿಗೆ ಮಾಡಿಕೊಂಡಿದ್ದ ಹರಿವಂಶರಾಯ್, ಎರಡು ಮಕ್ಕಳ ತಂದೆಯೂ ಆಗಿದ್ದರು. ಮಕ್ಕಳಾದ ಅಮಿತಾಬ್ ಮತ್ತು ಅಜತಾಬ್‌ರನ್ನು ಬಿಟ್ಟು, ಪ್ರಿÃತಿಯ ಹೆಂಡತಿಯನ್ನು ಬಿಟ್ಟು, ಅವರಿಲ್ಲದ ವೇಳೆಯಲ್ಲಿ ಅಲ್ಲಿ ಭಾರತದಲ್ಲಿ ಅವರ ಕುಟುಂಬದ ಸುತ್ತಲೂ ನಡೆಯುತ್ತಿದ್ದ ಕೆಟ್ಟ ಉಹಾ-ಪೂಹಗಳನ್ನು ಬದಿಗೆ ಸರಿಸಿ, ಅಧ್ಯಯನವನ್ನು ಮಾಡುವುದು ಸಾವಿನಷ್ಟೆÃ ಸಂಕಟದ ಸಂಗತಿಯಾಗಿತ್ತು ಹರಿವಂಶರಾಯ್‌ರಿಗೆ. ಕುಟುಂಬ ನೆಹರು ಕುಟುಂಬದೊಂದಿಗೆ ಸಮೀಪವೇನೊ ಆಗಿತ್ತು, ಆದರೆ ಆ ಕಾರಣಕ್ಕಾಗಿಯೇ ಬರುತ್ತಿದ್ದ ಅಪಮಾನದ ಮೊತ್ತವೂ ಅಷ್ಟೆÃ ಪ್ರಮಾಣದಲ್ಲಿ ಹೆಚ್ಚಾಗಿತ್ತು.
ಭಾರತಕ್ಕೆ ಮರಳಿದ ಹರಿವಂಶರಾಯ್ ಅದೇ ಉಪನ್ಯಾಸಕ ವೃತ್ತಿಯಲ್ಲಿದ್ದರು. ಜೊತೆಗೆ ಅಲಹಾಬಾದಿನ ಆಕಾಶವಾಣಿ ಕೇಂದ್ರ ನಿರ್ದೇಶಕರೂ ಆದರು. ೧೯೬೬ ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆನಂತರ ಸಾಹಿತ್ಯ ಅಕಾಡೆಮಿ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಹಾಗೂ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿಯಿಂದ ಪುರಸ್ಕೃತರಾದ ಹರಿವಂಶರಾಯ್, ಒಬ್ಬ ವಿಚಿತ್ರ ದರ್ಶನ ಸಾಹಿತಿಯಾಗಿಯೂ ರೂಪಗೊಳ್ಳುತ್ತಿದ್ದರು.
ಇಂದಿಗೂ ಭಗವದ್‌ಗೀತೆ ಕುರಿತಾದ ಬಚ್ಚನ್‌ರ ಬರಹ ಒಂದು ಅನನ್ಯ ಅನ್ವೆÃಷಣೆ. ೯೬ ವರ್ಷ ದೀರ್ಘಕಾಲ ಬಾಳಿ ಭಾರತವಷ್ಟೆÃ ಅಲ್ಲ, ಇಡೀ ಪ್ರಪಂಚವೇ ನಿಬ್ಬೆರಗಾಗುವ ಕಲಾವಿದ ಮಗನನ್ನು ನೀಡಿ ಮರೆಯಾದ ಹರಿವಂಶರಾಯ್, ತಮ್ಮ ಪರಿಚಯವನ್ನು ಮಾಡಿಕೊಳ್ಳುವುದು ಮೂರೇ ವಾಕ್ಯಗಳಲ್ಲಿ-
“ಮಣ್ಣಿನ ದೇಹ, ಮಿತಿಯರಿಯದ ಮನಸ್ಸು, ಕ್ಷಣಭಂಗುರ ಬದುಕು”- ಇಷ್ಟೆÃ ನನ್ನ ಪರಿಚಯ. ಮಣ್ಣು, ಹೆಣ್ಣು, ಹೆಂಡಗಳಲ್ಲಿ ಮಿಂದೇಳುವವ ಹೇಳುವ ಬದುಕಿನ ಸತ್ಯಗಳಿಗಿರುವ ಹೊಳಪು, ಹೊತ್ತಿಗೆಗಳನ್ನು ಮುಂದಿಟ್ಟುಕೊಂಡು ಜೀವನವೆಂದರೆ ಹೀಗೆ ಎಂದು ಖಂಡಿಸುವ ಪಂಡಿತನ ಮಾತುಗಳಿಗಿರುವುದಿಲ್ಲ. ಯಾಕೆಂದರೆ, ನಮ್ಮ ಬದುಕುಗಳು ಪ್ರಪಂಚದ ಯಾವ ಪುಸ್ತಕಗಳಲ್ಲೂ ವ್ಯಾಖ್ಯಾನಿಸಲ್ಪಟ್ಟಿಲ್ಲ. ಏನೆಲ್ಲ ಸಿಗುವ ಈ ಪ್ರಪಂಚದಲ್ಲಿ ನಮ್ಮ ಬದುಕನ್ನು ಅದರ ಅಂತ್ಯಕ್ಕೂ ಮುಂಚೆ ಹೇಳಿಬಿಡುವ ಒಂದು ಕೃತಿಯೂ ಸಿಕ್ಕಿಲ್ಲ, ಸಿಗುವುದೂ ಇಲ್ಲ. ಅಂತೆಯೇ ಬರೆಯುತ್ತಾರೆ ಬಚ್ಚನ್ –
ಮನದ ಮಹಲುಗಳು ಕುಸಿದಷ್ಟೂ
ಖುಷಿಯಾಗುತ್ತಾಳೆ ಮಧುಶಾಲಾ
ಬೇಗ ಕುಡಿ ಗೆಳೆಯನೆ, ಹೊರಟುಬಿಡುತ್ತಾರೆ ಕುಡುಕರು
ಎಷ್ಟು ನನ್ನವೊ, ಅದೆಷ್ಟು ನಿಮ್ಮವೊ
ಹೊತ್ತಿ ಉರಿದಷ್ಟು ಶಾಂತವಾಗಿ ಖಾಲಿಯಾಗುತ್ತವೆ
ಶೆರೆಯ ಗ್ಲಾಸುಗಳು
ಒಂದು ಸತ್ಯ. ಕಾವ್ಯವಿರುವವರೆಗೂ ಬಚ್ಚನ್ ಇರುತ್ತಾರೆ ಎನ್ನುವುದು ಅರ್ಧ ಸತ್ಯ. ಮದಿರೆ ಇರುವವರೆಗೂ ಮಾತಾಡುತ್ತಾಳೆ ಅವರ ಮಧುಶಾಲಾ ಎನ್ನುವುದು ಪೂರ್ಣ ಸತ್ಯ.

Source – Sakhigeetha.com