Home Blog Page 2

ಉಂಡಗಡಬು ಪುಂಡೀಪಲ್ಲೆ !

0

ಎಪ್ಪತ್ತು ವರ್ಷಗಳು ಹಿಂದೆ ಉಂಡ ಆ ಆರದ ಅಂಟಿನುಂಡಿ, ಗುಳ್ಳೆಡಿಕಿ ಉಚಿಡಿ, ಮುಟಿಗಿ ರೊಟ್ಟಿ, ಉಂಡಗಡಬು-ಪುಂಡಿಪಲ್ಲೆ, ಹರಕಹುಗ್ಗಿ-ಹೆರತುಪ್ಪಾ, ಗುದುಗುನ ಹುಗ್ಗಿ, ರೊಟ್ಟಿ-ಸಪ್ಪನಬ್ಯಾಳಿ- ಕುಚ್ಚಿದ ಮೆಣಸಿನಕಾಯಿ, ಕಟಗರೊಟ್ಟಿ-ಕರಂಡಿ, ಸುರುಳೀಹೋಳ್ಗಿ, ಬಾನಾ- ಪುಡಿಚಟ್ನಿ- ಮೆಣಸಿಂಡಿ, ಎಳ್ಳಹಚ್ಚಿದ ಸಜ್ಜಿÃರೊಟ್ಟಿ, ಡೊಣ್ಣಮೆಣಸಿನಕಾಯಿಯ ತುಂಬಗಾಯಿ, ಕೊರದ ಹಿಟ್ಟಿನ ಪಲ್ಲೆ, ಬದ್ನಿÃಕಾಯಿ ತುಂಬಗಾಯಿ, ಮಡಕಿ ಉಸುಳಿ,ಹಕ್ಕರಕಿ, ಪಚಡಿ ಇ ನ್ನೂ ಮರೆಯಲಾಗಿಲ್ಲ ! ನೆನಪು ಕಾಡುತ್ತದೆ ! ನಾಲಿಗೆ ನೀರೂರುತ್ತಿದೆ !
ಹುಬ್ಬಳ್ಳಿಯಲ್ಲಿ ನಾವು ಹುಡುಗರು ಅಕ್ಕ-ಅವ್ವ-ಕಾಕಾ-ದೊಡ್ಡಪ್ಪ-ಚಿಗವ್ವರೊಂದಿಗೆ ತಿಮ್ಮಸಾಗರ ಗುಡಿಗೆ ಕಾರ್ತೀಕ ಮಾಸದಲ್ಲಿ “ಅಲ್ಲಿÃಕೇರಿ”ಗೆ ಹೋಗುತ್ತಿದ್ದೆವು. ಅಲ್ಲಿÃಕೇರಿಯೆಂದರೆ ಮನೆಯ ಜಂಜಡದಿಂದ ದೂರಾಗಿ ಹಸಿರು-ಹೂದೋಟ-ಗುಡ್ಡ-ಬೆಟ್ಟ-ಹಳ್ಳ-ಹೊಳೆ-ಹೊಂಡಗಳಿಗೆ ಹೋಗಿ; ಮನೆಯಿಂದ ಎಣ್ಣಿÃಬುಟ್ಟಿಯಲ್ಲಿ ತುಂಬಿ ತಂದ ಎಳ್ಳುಹಚ್ಚಿದ ಸಜ್ಜಿÃರೊಟ್ಟಿ, ಎಣಗಾಯಿ ಪಲ್ಲೆ, ಬಳ್ಳೊಳ್ಳಿ ಚಟ್ನಿ, ರಂಜಕ, ಕರಂಡಿ,ಕರ್ಚೀಕಾಯಿ ಸುರಳೀಹೋಳ್ಗಿ, ಎಳ್ಳಹೋಳ್ಗಿ, ಕರಿಗಡಬು, ಜುಣುಕದ ವಡಿ, ಮಸರನ್ನ, ಪಚಡಿ, ಅಗಸೀಹಿಂಡಿ ಮುಂತಾದ ರುಚಿಕಟ್ಟಾದ ದೀನಸುಗಳನ್ನುಖೂಬಾಗಿ ಕುಂತು ನಿರುಂಬ್ಳಾಗಿ ಉಣ್ಣುವ ಸಂತಸ.
ಶಿಶುನಾಳ ಶರೀಫ ಕೂಡ ತಮ್ಮ ಅನುಭಾವ ಪದ್ಯದಲ್ಲಿ… “ಅಲ್ಲಿÃಕೇರಿಗೆ ಹೋಗೂನು ಬರ್ತೀರೇನ್ರೆÃ ನೀವು… ಒಲ್ಲದಿದ್ರ ಇಲ್ಲೆÃ ಇರತೀರೇನ್ರೆÃ…’’ ಅಂತ ಹಾಡಿದ.
ಈಗ ವಿದೇಶ ನೆಲದ “ಪಿಕ್ನಿಕ್” ಶಬ್ದಬಂದು; ಈ “ಅಲ್ಲಿಕೇರಿ” ಶಬ್ದ ನಮ್ಮಿಂದ ದೂರವಾಯಿತು.
ಹಾಂ…! ರಾಯಚೂರ- ವಿಚಾಪೂರ-ಗುಲಬರ್ಗಾ ಜಿಲ್ಲೆಗಳಲ್ಲಿ ಅರವತ್ತು ವರ್ಷಗಳ ಹಿಂದೆ ಇದೇರೀತಿ “ಕೊಂತೀರೊಟ್ಟಿ”ಗೆ ಹೋಗುವ ಸಂಪ್ರದಾಯವಿತ್ತು. ವಿಶೇಷ ಹಬ್ಬದ ಮರುದಿ ವಸ ಹಬ್ಬದ ಅಡಿಗೆಯನ್ನೆಲ್ಲ ಎಣ್ಣೆಬುಟ್ಟಿಯಲ್ಲಿ ತುಂಬಿಕೊಂಡು ಪ್ರಶಾಂತ ಪರಿಸರದಲ್ಲಿ ಊರಜನರೆಲ್ಲ… ತಾವು ತಂದ ಪಕ್ವಾನ್ನಗಳನ್ನು ಪರಸ್ಪರ ಹಂಚಿಕೊಂಡು… ಸಾಮೂಹಿಕವಾಗಿ ಉಣ್ಣುವ ನೆಮ್ಮದಿಯ ದಿನ ಇತ್ತು. ಇದಕ್ಕೆ “ಕೊಂತಿರೊಟ್ಟಿ” ಅಂತ ಹೆಸರು.
ಆದರೆ ಕಡಲಾಚೆಯಿಂದ ಬಂದ ಆಂಗ್ಲಭಾಷೆಯ “ಪಿಕ್‌ನಿಕ್”ಎಂಬ ಶಬ್ದ ಬಳಕೆಯಲ್ಲಿ ಬಂದು ನಮ್ಮ “ಅಲ್ಲಿಕೇರಿ” ಹಾಗೂ “ಕೊಂತೀರೊಟ್ಟಿ” ಪದಗಳು ಬಳಕೆಯಿಂದ ದೂರವಾದವು.
ಹರಿಹರಿ ಮಹಾಕವಿ ತನ್ನ ಪುಷ್ಪರಗಳೆಯಲ್ಲಿ “ಹೂವು ಹರಿ” ಎಂಬ ಶಬ್ದಕ್ಕೆ “ಹೂವುತಿರಿ” ಎಂಬ ಪದ ಬಳಸಿದ್ದಾನೆ. “ಹೂವು ಹರಿ” ಹಾಗೂ “ಅಂಗಿ ಹರಿ” ಶಬ್ದಗಳಲ್ಲಿರುವ ಹಿಂಸೆಯ ಸಂಕೇತವನ್ನು ಗುರುತಿಸಿದ ಕನ್ನಡ ಕವಿಗಳು ಅಹಿಂಸಾತ್ಮಕವಾದ “ಹೂವು ತಿರಿ” ಪದ ಬಳಸಿದ್ದಾರೆ. ಎಂದು ಕೂಡಾ ಧಾರವಾಡ ಜಿಲ್ಲೆಯಲ್ಲಿ “ಹೂವು ಎತ್ತು” “ಹೂವು ಬಿಡಿಸು” ಎಂಬ ಅಹಿಂಸಾತ್ಮಕವಾದ ಪದಗಳನ್ನು ಬಳಸುವ ಕನ್ನಡದ ಸಾಂಸ್ಕçತಿಕ ಮನಸನ್ನು ಗಮನಿಸನಹುದು.
೭೦ ವರ್ಷಗಳಹಿಂದೆ ಹುಬ್ಬಳ್ಳಿಯಲ್ಲಿ “ರ‍್ಯಾಗ ನ್ಯಾರೀ” ಮಾಡುತ್ತಿದ್ದರು. ಆದರೆ ಆಂಗ್ಲಭಾಷೆಯ “ಬ್ರೆಕ್‌ಫಾಸ್ಟ” ಶಬ್ದ ಚಾಲ್ತಿಯಲ್ಲಿ ಬಂದು “ನ್ಯಾರೀ” ಶಬ್ದ ಇಲ್ಲವಾಯಿತು. ಜೋತೆಗೆ “ಚುಮುಚುಮು ಬೆಳಕು”, ಚಿಕ್ಕಿಬೆಳಕು”, “ಮುನ್ನಸಕು”… ಸಂಜೆಗೆ “ಗೊಂಬಿಹೊತ್ತು”, “ಮಾರು ಹೊತ್ತು”…. ಕತ್ತಲೆಗೆ “ಕಾಡಿಗತ್ತಲು”…. ಹಾಗೂ “ಕತ್ತಲಗಡಸ”…. ಶಬ್ದಗಳು ಬಳಕೆಯಿಮದ ದೂರಾದವು.
ಅಷ್ಟೆÃ ಅಲ್ಲ ನಮ್ಮ ಗೃಹೋಪಯೋಗಿ ಪದಗಳಲ್ಲಿ “ಕೆಂಜಿಗ್ಯಾ”, “ವನಕೀಮಂಡಾ”, “ಹುಗ್ಗಿÃಜೇನು”, “ಕುಡ್ಡಿÃಕುಕ್ಕಾರಿ”, “ಬಳತಾ”, “ಹಗೆ”, “ಹೋಳಗಟ್ಟಿ”, “ಬಂಕಾ”, “ಜಂತಿ”, “ಪಡಜಂತಿ”, “ಕ್ವಾಟೀ ಕೋಣಿ”, “ಬೆಂಡಾಲಿ”, “ಗುಬ್ಬಿಬಾವಲಿ”, ಬುಗುಡಿ”, ಸಾರು ನೀಡುವ ಕಾಗಿ”, “ತುಪ್ಪನೀಡುವ ಕಾಗಿ”, “ಹುಟ್ಟು”, “ಸವುಟು”, “ಗಡಿಗಿ”, “ಮಡಿಕಿ”, “ಚಟಿಗಿ”, “ಕುಡಿಕಿ”, “ಮಿಳ್ಳಿ”, “ಹರಿವಿ”, “ಬಾನಿ”, “ಕಲ್ಗಡಗಿ’, “ರ‍್ಯಾಣ”, “ಮುಚ್ಳ”, “ಚಿಬ್ಲಾ”, “ಬೋಕಿ”, “ಕಲಗಂಚು”, “ಬಾಯಿ ಚಿಕ್ಕಾ”, “ಗ್ವಾದ್ಲಿ”, ದಂದಕ್ಕಿ”, “ಹುಸಿ”, “ಒಳಟ್ಟಾ”, “ಹದ್ಲಿÃ ಕೋಣೆ”, “ಹಸಿಬಿ”, “ಚಂಚಿ”, “ಅಡಕೊತ್ತು”, “ಸೀಬು”, “ಡಂಬು”, “ರಂಟಿ”, “ಕುಂಟಿ”, “ಮೇಟಿ”, “ಬ್ಯಾಕೋಲು”, “ಗ್ವಾರಿ”, “ಜಂತಗುಂಟಿ”, “ಮಡಿಗುಂಟಿ”, “ಕೊಡ್ಡಾ”, “ಹಂತಿ”, “ತತ್ತ ರಾಣಿ”…… ಇತ್ಯಾದಿ ಅಸಂಖ್ಯ ಪದಗಳು ಬಳಕೆಯಿಂದ ದೂರಾಗಿಬಿಟ್ಟಿವು. ನಾವು ಮನಸು ಮಾಡಿದ್ದರೆ ಇವುಗಳಲ್ಲಿ ಕೆಲವಾದರೂ ಪದಗಳನ್ನು ಉಳಿಸಿಕೊಳ್ಳನಹುದಿತ್ತು.
ಕನ್ನಡ ನಮ್ಮದು. ನಮ್ಮ ಭಾಷೆ ಅಷ್ಟೆÃ ಕನ್ನಡ ಅಲ್ಲ; ನಮ್ಮ ಪ್ರಾಣ, ಪ್ರಿÃತಿ, ಸಂಸ್ಕೃತಿ, ಆಚಾರ, ಅನುಭವವೇ ಕನ್ನಡ ! ಕಡಲಾಚೆಯ ಭಾಷಾಸಂಸ್ಕçತಿ ಶಿಕ್ಷಣದಲ್ಲಿ ಬಂದನಂತರ ನಮ್ಮ ಅಸಂಖ್ಯ ಕನ್ನ ಪದಗಳು ನಮ್ಮಿಂದ ದೂರವಾದವು!
ಕನ್ನಡವೇ ನಮ್ಮ ಬೆಲ್ಲ-ಬೆಳಸಿ-ಬೆಳ್ದಿಂಗಳು !!

Source – Sakhigeetha.com

ಮೃತ್ಯು ಮೆಟ್ಟಿಲು ಮತ್ತು ಪತ್ರಿಕೋದ್ಯಮ: – ಟಿ. ಶಿವರಾಂ

0

ಮೃತ್ಯು ಮೆಟ್ಟಿಲು ಮತ್ತು ಪತ್ರಿಕೋದ್ಯಮ: ಟಿ. ಶಿವರಾಂ
ದೇಶ ಸಣ್ಣದೊ, ದೊಡ್ಡದೊ ರಾಜಕೀಯ ವಿಪ್ಲವ ಅಥವಾ ಪಲ್ಲಟಗಳಿಲ್ಲದ ಒಂದು ದೇಶ ಇಲ್ಲವೇ ಇಲ್ಲ ಎಂದೇ ಹೇಳಬೇಕು. ಈ ಆಂತರಿಕ ಕ್ಷೆÆÃಭೆ, ಕಲಹ ಹಾಗೂ ಯುದ್ಧಗಳ ಹಿನ್ನಲೆಯಲ್ಲಿ ಐನ್‌ಸ್ಟಿನ್ ಹೇಳುತ್ತಿದ್ದರು, ಖಿhe ಜesಣiಟಿies oಜಿ ಚಿಟಟ ಛಿouಟಿಣಡಿies ಚಿಡಿe ಛಿಟoseಟಥಿ iಟಿಣeಡಿತಿoveಟಿ ಚಿಟಿಜ ಣhe ಛಿoಟಿಜiಣioಟಿs ಚಿಡಿe sಚಿme. ಭಾರತದ ಭಾಗದಂತೆಯೇ ಇರುವ ಪುಟಾಣಿ ದೇಶ ಶ್ರಿÃಲಂಕ. ಇದರೊಂದಿಗಿನ ಭಾರತದ ನಂಟು ಭೌತಿಕವಾದುದಲ್ಲ. ಬದಲಾಗಿ ಭಾವನಾತ್ಮಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ನೆಲೆಯದ್ದು. ಶ್ರಿÃಲಂಕೆಯ ಭಾವದೊಳು ಕೈಯಾಡಿಸಿದಷ್ಟೂ ಸಿಗುತ್ತವೆ ಭಾರತಗಳು, ಭಾರತದ ಇತಿಹಾಸ ಓದಿದಷ್ಟು ಕಾಣಿಸುತ್ತವೆ ಸಿಡಿದ ಮತ್ತೆ ಮತ್ತೆ ಸಿಡಿಯುತ್ತಲೇ ಕೂಡಿದ ಶ್ರಿÃಲಂಕಾಗಳು. ಒಂದರ್ಥದಲ್ಲಿ ಭಾರತದ ಇತಿಹಾಸದಷ್ಟೆÃ ದೀರ್ಘ ಶ್ರಿÃಲಂಕಾದ ಇತಿಹಾಸ. ಶ್ರಿÃಲಂಕಾದ ಹಲವು ಮಜಲುಗಳ ಇತಿಹಾಸದಲ್ಲಿ ನಮ್ಮ ಈ ಕ್ಷಣದ ಆಯ್ಕೆ ಅದರ ಸಿವಿಲ್ ವಾರ್ ಅವಧಿ. ಈ ಸಂದರ್ಭದಲ್ಲಿ ಮಹತ್ವದ ಪತ್ರಕರ್ತರ, ಸಾಹಿತಿಗಳ, ನಟರ ಹಾಗೂ ಸೃಜನಶೀಲ ಚಿಂತಕರ ಹತ್ಯಯಾಯಿತು.
ಈ ಮೂಲಕ ಶ್ರಿÃಲಂಕದಂಥ ಪುಟ್ಟರಾಷ್ಟçವೂ ಬೌದ್ಧಿಕ ಅಸಹನೀಯತೆಯಿಂದ ಮುಕ್ತವಲ್ಲ ಎನ್ನುವುದಕ್ಕೆ ಸಾಕ್ಷಿಯಾಯಿತು. ಶ್ರಿÃಲಂಕ ಸಿವಿಲ್‌ವಾರ್ ಅವಧಿಯಲ್ಲಿ ಮುಖ್ಯವಾಗಿ ಪತ್ರಕರ್ತರ ಹತ್ಯೆಯಾಯಿತು ಎನ್ನುವುದು ಗಮನಿಸಬೇಕಾದ ಅಂಶ. ಅಭಿವ್ಯಕ್ತಿ ಸ್ವಾತಂತ್ರö್ಯದ ಅಪರೂಪದ ಪುಟಗಳಾಗಿದ್ದ ಈ ಪತ್ರಕರ್ತರು ಹತ್ಯೆಗೊಳ್ಳುವುದರ ಮೂಲಕ ಕಳಚಿದ ಕೊಂಡಿಗಳಂತಾದರು.
ನಾವು ಕೇಳಿಸಿಕೊಳ್ಳಲಾಗದ ಸತ್ಯವನ್ನು ಸಾರಿಹೇಳಲು ಯತ್ನಿಸಿ ಸಾವನ್ನು ಎದುರಿಸಿದ ಅಕ್ಷರಲೋಕದ ಈ ಗೆಳೆಯರ ಹೆಸರುಗಳನ್ನು ಕೇಳಿಸಿಕೊಳ್ಳದ ಭಾವದಾರಿದ್ರö್ಯಕ್ಕೆ ನಾವು ಸಾಕ್ಷಿಗಳಾಗಬಾರದು ಎನ್ನುವ ಉದ್ದೆÃಶದಿಂದ ಅವುಗಳನ್ನಿಲ್ಲಿ ದಾಖಲಿಸುತ್ತಿದ್ದೆÃನೆ. ನದರಜ್ ಅತ್‌ಪುತ್‌ರಾಜಾ, ಪ್ರೆÃಮಕೀರ್ತಿ ಡಿಅಲ್ವಿಸ್, ನಿರ್ಮಲ ರಾಜನ್, ಕೆ.ಎಸ್.ರಾಜಾ, ತರಕ್ಕಿ ಶಿವರಾಂ, ರೇಲಂಗಿ ಸೆಲ್ವರಾಜ, ಐ ಷಣ್ಮುಗಲಿಂಗಂ, ಸಿನ್ನಥಂಬಿ, ಶಿವಮಹಾರಾಜ, ಸುಬ್ರಮನ್ಯಮ್, ರಜನಿ, ಲಾಸಂತ ಮತ್ತು ಸುಗಿರ್‌ದರ್ಜನ್ ಹೀಗೆ ಒಟ್ಟು ಹದಿನೇಳು ಪ್ರತಿಭಾನ್ವಿತ ಶ್ರಿÃಲಂಕನ್ ಪತ್ರಕರ್ತರ ಹತ್ಯೆ ಆ ದೇಶದ ಸಿವಿಲ್‌ವಾರ್ ಅವಧಿಯಲ್ಲಿ ನಡೆಯಿತು ಎಂದು ದಾಖಲಿಸುತ್ತದೆ ಆ ದೇಶದ ಇತಿಹಾಸ.
ನೆನಪಿರಲಿ ಬಂಧುಗಳೆ, ಇದು ಒಟ್ಟು ಶ್ರಿÃಲಂಕಾದ ಇತಿಹಾಸದಲ್ಲಿ ನಡೆದ ಪತ್ರಕರ್ತರ ಹತ್ಯೆಯ ಪಟ್ಟಿಯಲ್ಲ ಬದಲಾಗಿ ಕೇವಲ ಶ್ರಿÃಲಂಕಾದ ಸಿವಿಲ್‌ವಾರ್ ಅವಧಿಯಲ್ಲಿ ಹತ್ಯೆಗೊಂಡವರ ಹಲಕೆಲವು ಹೆಸರುಗಳಷ್ಟೆ.
ತರಕ್ಕಿ ಶಿವರಾಂ ಅಥವಾ ಧರ್ಮರತ್ನಂ ಶಿವರಾಂ, 1959 ದಿಂದ 2005ರ ಅವಧಿಯಲ್ಲಿ ಬದುಕಿದ್ದ ಮಹತ್ವದ ಪತ್ರಕರ್ತ. ಈತನ ಜೀವಿತಾವಧಿ ಕೇವಲ ನಲ್ವತ್ತೆöÊದು ವರ್ಷ. ಶ್ರಿÃಲಂಕಾ ದೇಶ ಕಂಡ ಅಪರೂಪದ ಲೇಖಕ, ಚಳುವಳಿಕಾರ ಹಾಗೂ ಪರ್ತಕರ್ತ. ಈತ ಬರೆದುದೆಲ್ಲವೂ ತಮಿಳು ಭಾಷೆಯಲ್ಲಿ. ಬದುಕು ಕೊನೆಯುಸಿರೆಳೆದದ್ದು ಮಾತ್ರ ಬಂಬಲಪೀಠ ಪೊಲೀಸ್ ಸ್ಷೆÃಷನ್‌ದ ಎದುರಿನಲ್ಲಿ. ಇದಲ್ಲವೆ ವ್ಯಂಗ್ಯ?
ತರಕ್ಕಿ ಶಿವರಾಂ ಶ್ರಿÃಲಂಕಾ ದೇಶದ ಬಟ್ಟಿಕೊಲವಾ ಬಳಿಯ ಅಕ್ಕರಾಯಪಟ್ಟು ಪ್ರಾಂತದ ಪ್ರತಿಷ್ಠಿತ ಜಮೀನ್ದಾರಿಕೆಯ ರಾಜಕೀಯ ಹಿನ್ನಲೆಯ ಶ್ರಿÃಮಂತ ಕುಟುಂಬದಲ್ಲಿ 11 ಅಗಷ್ಟ್ 1959ರಲ್ಲಿ ಜನಿಸಿದಾತ. ತಮಿಳು ಭಾಷೆಯಲ್ಲಿ ಬರೆದು ಬದುಕಿದ ಶಿವರಾಂ ಇದೇ ಬಟ್ಟಿಕೊಲವಾದ ಸೇಂಟ್ ಮೈಖಲ್ ಹಾಗೂ ಕೋಲಂಬೊದ ಅಕ್ಯೂನಾಸ್ ಕಾಲೇಜುಗಳಲ್ಲಿ ಶಿಕ್ಷಣವನ್ನು ಪೂರೈಸಿದ. 1982ರಲ್ಲಿ ಪೆರಾದೆನಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದನಾದರೂ ಶ್ರಿÃಲಂಕನ್ ಸಿವಿಲ್‌ವಾರ್‌ದ ಮೊದಲ ಹಂತದ ಚಟುವಟಿಕೆಗಳ ಬಿಸಿ ತಾಗಿ ಓದಿಗೆ ವಿದಾಯ ಹೇಳಿ ಪತ್ರಕರ್ತನಾಗಿ ಚಳುವಳಿಯನ್ನು ಸೇರಿದ.
ಗಾಂಧಿಯನ್ ಮೂವ್ಹ್ಮೆಂಟ್ ತರಕ್ಕಿ ಶಿವರಾಂ ಆಯ್ದುಕೊಂಡ ಮೊದಲ ದಾರಿ. ಈಗ ಆತನ ವಯಸ್ಸು ಇಪತ್ಮೂರು. ಇಲ್ಲಿಂದ ಮುನ್ನಡೆದ ಶಿವರಾಂ ಅನೇಕ ತಮಿಳು ಪರ ಸಂಘಟನೆಗಳಲ್ಲಿ ಒಂದಾಗಿದ್ದ ಪೀಪಲ್ಸ್ ಆರ್ಗ್ನೈಜೇಶನ್ ಆಫ್ ತಮಿಳ ಈಲಂನ್ನು ಸೇರಿಕೊಂಡು 1983ರಲ್ಲಿ ಪ್ರಬಲವಾದ ಶ್ರಿÃಲಂಕನ್ ಸಿವಿಲ್‌ವಾರ್‌ದ ಮಹತ್ವದ ಲೇಖಕನಾದ. ಎಸ್.ಆರ್ ಎಂಬ ಹೆಸರಿನಡಿ ಬರೆಯುತ್ತ ಹೋದ ಶಿವರಾಂ ತಮಿಳು ಉಗ್ರವಾದಿ ಎಂಬ ಹಣೆಪಟ್ಟಿ ಕಟ್ಟಿಕೊಂಡ.
ಅತಂತ್ರ ಅಪಾಯದ ಇಟ್ಟಿಗೆಗಳ ಮೇಲೆ ಕಾಲಿಡುತ್ತಲೆ ಅಲ್ಲಲ್ಲಿ ಕನಸುಗಳ ಹಬ್ಬ ಆಚರಿಸಿಕೊಳ್ಳುತ್ತದೆ ಪತ್ರಕರ್ತರ ಬದುಕು. ಚಳುವಳಿ ಸೇರಿದ ಐದು ವರ್ಷಗಳ ನಂತರ ಮುದುವೆಯಾದ ಶಿವರಾಂ. ಬಾಳಸಂಗಾತಿ ಅದೇ ಬಟ್ಟಿಕೊಲವಾದವಳು. ಹರ‍್ಲಿ ಯೋಗರಂಜಿನಿ ಪೂಪಲ ಪಿಲ್ಲೆöÊ ಎಂಬ ಹೆಸರಿನ ಇವಳು ವೈಷ್ಣವಿ, ವೈತೇಕಿ ಮತ್ತು ಎಂಡ್ರಿವ್ ಎನ್ನುವ ಮೂರು ಮಕ್ಕಳನ್ನು ನೀಡಿ ಶಿವರಾಂನ ಬದುಕಿಗೆ ಪ್ರಿÃತಿಯ ಆರ್ದ್ರತೆಯನ್ನು ತುಂಬಿದವಳು. ಹಿಂದೂ ಹಿನ್ನಲೆಯಿಂದಲೇ ಕುಟುಂಬ ಬಂದುದಾಗ್ಯೂ ಕ್ರಿಶ್ಚಿಯನ್ ಪ್ರಭಾವಕ್ಕೆÃವು ಕೊರತೆ ಇರಲಿಲ್ಲ. 1988ರ ಸಪ್ಟೆಂಬರ್ 8ರಂದು ಮದುವೆಯಾದ ಈ ದಂಪತಿಗಳಿಗೆ ದಕ್ಕಿದ ನೆಮ್ಮದಿಯ ದಿನಗಳು ಮಾತ್ರ ಬೆರಳೆಣಿಕೆಯಷ್ಟೆ ಎಂದು ಹೇಳಬೇಕು.
1988ರಲ್ಲಿ ಶಿವರಾಂ ಬದುಕಿನ ಅತ್ಯಂತ ಮಹತ್ವದ ವರ್ಷ ಎಂದು ಹೇಳಿದೆ, ಶಿವರಾಂ ಮದುವೆಯಾದ ಇದೇ ವರ್ಷ ಇಂಡೋ-ಲಂಕನ್ ಒಪ್ಪಂದ ಏರ್ಪಟ್ಟು ಚಳುವಳಿಗಳನ್ನೆಲ್ಲ ಬಗ್ಗು ಬಡಿಯುವ ಕಾರ್ಯಾಚರಣೆ ಆರಂಭವಾಯಿತು. ಒಂದೆಡೆ ಪಿಎಲ್‌ಓಟಿಇ ಸಂಘಟನೆಯ ನಾಯಕ ಉಮಾ ಮಹೇಶ್ವರನ್ ಸಂಘಟನೆಯ ಜನರಲ್ ಸೆಕ್ರೆಟರಿಯಾಗಿ ಶಿವರಾಂನನ್ನು ನಿಯುಕ್ತಗೊಳಿಸುತ್ತಿದ್ದರೆ ಇನ್ನೊಂದೆಡೆ ಶಿವರಾಂನ ಅತ್ಯಂತ ಪ್ರಿÃತಿಯ ಗೆಳೆಯ, ನಟ, ಚಳುವಳಿಕಾರನಾಗಿದ್ದ ರಿಚರ್ಡ್ ಡಿಸೋಜಾನ ಹತ್ಯೆಯ ಯೋಜನೆ ರೂಪಗೊಳ್ಳುತ್ತಿತ್ತು. ಆಗಲೇ ಯುಎನ್ ಪೋಷಿತ ಇಂಟರ್ ಪ್ರೆಸ್ ಸರ್ವಿಸ್‌ನ ವರದಿಗಾರನಾಗಿದ್ದ ರಿಚರ್ಡ್ನೇ ಶಿವರಾಂನನ್ನು ‘ದ ಐಲ್ಯಾಂಡ್’ ಪತ್ರಿಕೆಗೆ ರಾಜಕೀಯ ಸುದ್ದಿಗಾರನಾಗಿ ಪರಿಚಯಿಸಿದ. ಮುಂದೊರೆದ ಶಿವರಾಂ ಗಾಮಿನಿ, ತಾರಕಾ, ಸ್ಟಾರ್ ಹಾಗೂಸಿಂಹಳೀಸ್ ಪತ್ರಿಕೆಗಳಲ್ಲಿ ವರದಿಗಾರನಾಗಿ ತನ್ನ ವ್ಯಕ್ತಿತ್ವ ರೂಪಿಸಿಕೊಂಡ. ಎಲ್ಲ ಸರಿಯಾಗಿತ್ತು ಎನ್ನುವ ಈ ವೇಳೆಯಲ್ಲಿಯೆ ಅಂದರೆ 1990ರಲ್ಲಿ ಆತ್ಮಿÃಯ ಕಲಾವಿದ ಗೆಳೆಯ ರಿಚರ್ಡ್ ಡಿಸೋಜಾನ ಹತ್ಯೆಯಾಯಿತು. ಇದು ಒಂದು ರೀತಿಯಲ್ಲಿ ಶಿವರಾಂಗೆ ನೀಡಿದ ಎಚ್ಚರಿಕೆಯೂ ಆಗಿತ್ತು.
ತರಕ್ಕಿ ಶಿವರಾಂ ಶ್ರಿÃಲಂಕಾದಲ್ಲಿ ಮನೆಯಾತಾಗಿದ್ದು ಎರಡು ಮಹತ್ವದ ಬರಹದ ರೀತಿಗಳಿಂದಾಗಿ. ಅವನ ಮಿಲಿಟರಿ ಸಾಯಿನ್ ಕುರಿತಾದ ಬರಹಗಳು ಹಾಗೂ ಪೊಲಿಟಿಕಲ್ ಫಿಲಾಸಫಿ ಕುರಿತಾದ ವಿವರಣೆಗಳು ಸಮಕಾಲೀನ ಪತ್ರಕರ್ತರಲ್ಲಿಯೇ ಆತನನ್ನು ಭಿನ್ನವಾಗಿಸಿತು. 1990ರ ದಶಕದ ತರಕ್ಕಿಯ ಬರಹಗಳು ಅಂತರ್ ರಾಷ್ಟಿçÃಯ ಮನ್ನಣೆಯ ದ ಸಂಡೆ ಟೈಮ್ಸ್, ತಮಿಳ್ ಟೈಮ್ಸ್, ದ ಡೇಲಿ ಮಿರರ್ ಹಾಗೂ ವೀರಕೇಸರಿ ಪತ್ರಿಕೆಗಳ ಅವಿಭಾಜ್ಯ ಅಂಗದಂತೆ ಪ್ರಕಟವಾಗಲಾರಂಭಿಸಿದವು.
1991ರಲ್ಲಿ ಪ್ರಕಟವಾದ ತರಕ್ಕಿ ಶಿವರಾಂನ ಎರಡು ಪುಸ್ತಕಗಳಾದ ಆನ್ ಇನ್‌ಸೈಡರ್ ಎನಲಿಸಸ್ ಆಫ್‌ದ ಎಥ್ನಿಕ್ ಕಾನ್‌ಫ್ಲಿಕ್ಟ್ ಇನ್ ಶ್ರಿÃಲಂಕಾ ಹಾಗೂ ಅವನ ಅನೇಕ ತಮಿಳು ಲೇಖನಗಳು ಜಾಗತಿಕ ಮಟ್ಟದ ಇತಿಹಾಸಕಾರರ, ರಾಜಕೀಯ ಚಿಂತಕರ, ವಿಜ್ಞಾನಿಗಳ, ಮಾನವಶಾಸ್ತçಜ್ಞರ, ಗಮನ ಸೆಳೆಯಲಾರಂಭಿಸಿದವು. ಕೊರ‍್ಯಾಡೊ, ಕರೋಲಿನಾ, ಕ್ಲರ್ಕ್ ವಿಶ್ವವಿದ್ಯಾಲಯಗಳಿಂದ ಚಿಂತಕರು ಶಿವರಾಂನೆಡೆಗೆ ಬೆರಗು ಕಣ್ಣುಗಳಿಂದ ನೋಡಲಾರಂಭಿಸಿದರು.
1990ರ ವೇಳೆಗೆ ಪ್ರಪಂಚದ ಅನೇಕ ದೇಶಗಳ ಸರಕಾರಗಳು ಹಾಗೂ ಎನ್‌ಜಿಓ ಸಂಘಟನೆಗಳು ತರಕ್ಕಿ ಎಡೆಗೆ ಸ್ನೆÃಹದ ಹಸ್ತ ಚಾಚಿದವು. ತರಕ್ಕಿ ಈಗ ಏಷಿಯಾ, ಇರೋಪ, ಅಮೇರಿಕಾಗಳನ್ನು ವ್ಯಾಪಕವಾಗಿ ಸುತ್ತಿದ. ಇನ್ನೆÃನು ಜಪಾನ್‌ಗೆ ಹೋಗುವುದು ಶಿವರಾಂರ ಮುಂದಿನ ಗುರಿಯಾಗಿತ್ತು. ಆದರೆ ಘಟಿಸಬಾರದ ಘಟನೆ ಜರುಗಿಹೋಯಿತು. ಈ ಮಧ್ಯ ಅನೇಕ ಬಾರಿ ತರಕ್ಕಿಗೆ ಕೊಲೆ ಬೆದರಿಕೆಯ ಸಂದೇಶಗಳು ಬರುತ್ತಲೇ ಇದ್ದವು. ಇದನ್ನೆÃ ಹಿನ್ನಲೆಯಾಗಿಟ್ಟುಕೊಂಡೇ ವ್ಹೆÃರ್ ಎಲ್ಸ್ ಶುಡ್ ಐ ಡೈ ಬಟ್ ಹೀಯರ್ ಎನ್ನುವ ಮಹತ್ವದ ಸಾರ್ವಜನಿಕ ಭಾಷಣವನ್ನು ಈತ ಮಾಡಿದ್ದ. ಪ್ರಮುಖವಾಗಿ ಶ್ರಿÃಲಂಕಾದ ಜಾತಿಕಾ ಹೇಲಾ ಉರ್ಮಯಾ ಮತ್ತು ಜನತಾ ವಿಮುಕ್ತಿ ಪೆರಮುನಾ ಸಂಘಟನೆಗಳು ಪದೆ ಪದೆ ಶಿವರಾಂನಿಗೆ ಕೊಲೆ ಬೆದರಿಕೆಯ ಸಂದೇಶಗಳನ್ನು ರವಾನಿಸಿದ್ದವು. ಈ ಹಿನ್ನಲೆಯಲ್ಲಿ 2004ರಲ್ಲಿ ಈತನ ಮನೆಯನ್ನು ಶೋಧಿಸಿದ ಶ್ರಿÃಲಂಕನ್ ಪೊಲೀಸ್ ಈತನಿಗಿದ್ದ ಕೊಲೆ ಬೆದರಿಕೆಯ ಮಾಹಿತಿಯನ್ನು ಕಲೆ ಹಾಕಿದ್ದವು.
28 ಏಪ್ರಿಲ್, 2005 ತರಕ್ಕಿ ಶಿವರಾಂ ತನ್ನ ನಿತ್ಯದ ಚಳುವಳಿ, ಭಾಷಣ, ಬರಹದಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದಾಗ ಮನೆಯಲ್ಲಿದ್ದ ಈತನನ್ನು ಬಿಳಿ ಬಣ್ಣದ ವ್ಯಾನ್‌ನಲ್ಲಿ ಬಂದ ನಾಲ್ಕು ಜನ ಅಪರಿಚಿತರು ಅಪಹರಿಸಿದರು. ಅಲ್ಲಿಂದಾಚೆ ಎರಡು-ಮೂರು ದಿನಗಳವರೆಗೆ ಯಾವ ಮಾಹಿತಿಗಳೂ ಲಭ್ಯವಾಗಲಿಲ್ಲ. ಮುಂದೆ ಬಂಬಲ ಪೀಠ ಪೊಲೀಸ್ ಸ್ಟೆÃಷನ್ ಎದುರುಗಡೆ ತರಕ್ಕಿಯ ಹೆಣ ಸಿಕ್ಕಿತು. ಇದು ಶ್ರಿÃಲಂಕಾದ ಪಾರ್ಲಿಮೆಂಟ್‌ನ ಸಮೀಪದ ಸ್ಥಳವೇ ಆಗಿತ್ತೆನ್ನುವದೊಂದು ವಿಪರ್ಯಾಸ. ಶರೀರದ ಮೇಲೆ ಈತನನ್ನು ಹಿಗ್ಗಾ-ಮುಗ್ಗಾ ಥಳಿಸಿದ ಗುರುತುಗಳು, ತಲೆಗೆ ಗುಂಡು ಹಾರಿಸಿದ ಸ್ಪಷ್ಟ ಕುರುಹು.
ಹರಣ-ಹಂಸ ಎಲ್ಲಿಂದಲೇ ಹಾರಲಿ ಅದರ ನೆನಪು ಸ್ಮರಣೀಯ. ಹೀಗೆ ನಮ್ಮ ನಿತ್ಯದ ಸ್ಮರಣೆ

Source – Sakhigeetha.com

ಸ್ಮಾರ್ಟ್ಪೋನ್ ಎಂಬ ಭೂತ…! – ಪ್ರಭಾ ರಮೇಶ್

0

ಬೇಡವೆಂದು ಬಿಡಿಸಿಕೊಂಡಷ್ಟು ಅಂಗೈಯೊಳಗೆ ಬಂದು ಕೂರುವ ಸ್ಮಾರ್ಟ್ ಪೋನ್ ಸುಮ್ಮನೆ ಕೂರುವುದಿಲ್ಲ ಪೇಸ್‌ಬುಕ್ ಪುಟವನ್ನು ತೆರೆದು ನಿಲ್ಲುತ್ತದೆ ನಾವು ಹಾಕಿರುವ ಪೋಟೋಗೆ ಎಷ್ಟು ಲೈಕ್ ಸಿಕ್ಕಿದೆ ಎಷ್ಟು ಕಾಮೆಂಟ್ ಮಾಡಿದ್ದಾರೆ ಎಂದು ತಿಳಿದುಕೊಳ್ಳುವ ಆತುರ ಹೆಚ್ಚಾಗುತ್ತದೆ. ವಾಸ್ತವಕ್ಕಿಂತಲೂ ಭ್ರಮೆ ಮೂಡಿಸುವ ಅವಾಸ್ತವದ ಜಗತ್ತಿನಲ್ಲಿ ವಿಹರಿಸುತ್ತಲೇ ಹೋಗಬೇಕೆಂಬ ಆಸೆ ಹೆಚ್ಚಿಸುತ್ತದೆ. ಬೆರಳ ತುದಿಗೆ ಸಿಕ್ಕ ಪೋಟೋವೊಂದು ಮನಸ್ಸನ್ನು ಒಮ್ಮೆ ಕದಲುವಂತೆ ಮಾಡುತ್ತದೆ.
ಅವರ ಜೋಡಿ ಚೆನ್ನಾಗಿತ್ತು ಅವರ ರೀತಿ ನಾವಿಲ್ಲ ಹೀಗೆ ಅನೇಕ ಯೋಚನೆಗಳು ತಲೆಯಲ್ಲಿ ಹರಿದಾಡುತ್ತವೆ ಕುತೂಹಲಕ್ಕೆ ನೋಡಿದ ಪೋಟೋ ಅಸೂಯೆಗೆ ಕಾರಣವಾಗುತ್ತದೆ ಹೌದು ಫೇಸ್‌ಬುಕ್ ಸೇರಿದಂತೆ ಇತರೆ ಸಾಮಾಜಿಕ ತಾಣಗಳಲ್ಲಿ ಎದುರಾಗುವ ಕೆಲವು ಪೋಟೋ, ಬರಹಗಳು ನಿಮ್ಮ ಮನಸ್ಸನ್ನು ವಿನಾಕಾರಣ ಕೆದುಕುತ್ತವೆ. ಅದೇ ಅಸೂಯೆ, ಸಿಟ್ಟು, ಅಸಮಾಧಾನ, ಮೂಡಿಸಬಹುದು.
ಇಡೀ ಮನಸ್ಸನ್ನು ಕೆಡಿಸಿ ಕೊನೆಗೆ ಖಿನ್ನತೆ ಹಂತ ತಲುಪಬಹುದು ಫೇಸ್‌ಬುಕ್‌ನಂತಹ ಸಾಮಾಜಿಕ ತಾಣಗಳು ಅಸೂಯೆ ಮತ್ತು ಆಕ್ರಮಣಕಾರಿ ನಡವಳಿಕೆಗಳನ್ನು ಮೂಡಿಸಬಹುದು ಎಂಬುವುದನ್ನು ಹಲವಾರು ಅಧ್ಯಯನಗಳು ಶೋಧಿಸಿವೆ. ತೀರ ವೈಯುಕ್ತಿಕ ಅಂದೆನಿಸುವುದನ್ನು ಸಾರ್ವಜನಿಕವಾಗಿ ತೆರೆದುಕೊಳ್ಳುವ ಮನೋಭಾವ ಹಲವರಲ್ಲಿ ಇರುತ್ತದೆ.
ಈ ರೀತಿ ಬೇರೆಯವರ ಗಮನ ಸೆಳೆಯಲು ಮಾಡಿದ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುವ ರೋಮ್ಯಾಂಟಿಕ್ ಪೋಟೋಗಳು ಪೋಸ್ಟ್ ಮಾಡಿದವರ ಹಾಗೂ ನೋಡಿದವರ ಸಂಬಂಧದ ಮೂಲವನ್ನು ಅಲುಗಾಡಿಸಬಹುದು ಬೇರೆಯವರ ಪೋಟೋ ನೋಡಿ ಯಾರೋ ಅವರಷ್ಟು ನಾವು ಖುಷಿಯಾಗಿಲ್ಲ ಎಂದು ಕೊರಗಬಹುದು.
ಬೇರೆಯವರ ಪೋಸ್ಟ್ ಅವರ ಸಂಬಂಧದಲ್ಲಿ ಅಸುರಕ್ಷೆ ಭಾವ ಮೂಡಿಸುತ್ತದೆ. ಅನುಮಾನ ಸ್ವಭಾವವನ್ನು ಹೆಚ್ಚಿಸುತ್ತದೆ. ಅಂದರೆ ತಮ್ಮ ಸಂಗಾತಿಯ ಪೋಸ್ಟ್ಗಳಿಗೆ ಯರ‍್ಯಾರು ಕಾಮೆಂಟ್ ಮಾಡಿದ್ದಾರೆ. ಇನ್ಯಾರೋ ಲೈಕ್ ಕೊಟ್ಟಿದ್ದಾರೆ. ಅಂತೆಲ್ಲ ಹುಡುಕಾಡಬಹುದು ಇದು ಅವರ ಸಂಬಂಧದ ಬುಡವನ್ನು ಅಲುಗಾಡಿಸುತ್ತದೆ. ಡಿಜಿಟಲ್ ಪರದೆಯ ಮೇಲೆ ನೋಡಿದ್ದೆಲ್ಲ ಸತ್ಯವಲ್ಲ ಅದೇ ರೀತಿ ಅದರ ಹಿಂದಿನ ಭಾಗ ಸತ್ಯವಲ್ಲದೆ ಇರಬಹುದು.

Source – Sakhigeetha.com

ಕನ್ನಡ ಕಥಾ ಲೋಕದ ಆಸ್ತಿ: ಮಾಸ್ತಿ

0

ಅನಾದಿ ಕಾಲದಿಂದಲೂ ಕಥೆ ಹೇಳುವ ಪರಂಪರೆ ಅಸ್ತಿತ್ವದಲ್ಲಿ ಇದ್ದೆ ಇದೆ! ಹಳೆಯ ಕಾಲದಲ್ಲಿ ಮನೆ ಮನೆಯಲ್ಲಿ ಅಜ್ಜಿಯರು ಮೊಮ್ಮಕ್ಕಳಿಗೆ ಕಥೆ ಹೇಳುತ್ತಾ ಮಕ್ಕಳನ್ನು ಮಲಗಿಸುವ ಸಂಪ್ರದಾಯವೂ ನಡೆದು ಬಂದಿದೆ. ಅಮ್ಮಂದಿರು ಸಾಮಾನ್ಯವಾಗಿ ಮಕ್ಕಳಿಗೆ ಅಕ್ಕರೆಯಿಂದ ಊಟ ತಿನ್ನಿಸುವ ಸಂದಂರ್ಭದಲ್ಲಿ ಪುಟ್ಟ ಪುಟ್ಟ ಕಥೆಗಳನ್ನು ಹೇಳುತ್ತಲೇ ಮಕ್ಕಳ ಮನಸ್ಸಿನ ಕುತೂಹಲ ತಣಿಸುತ್ತಲೇ… ಅವರಿಗೆ ಉಣಿಸುವ ಅಕರ್ಷಕ ರೀತಿಯೂ ಅನೂಚಾನವಾಗಿ ಹರಿದು ಬಂದಿದೆ.
ಸಾಮಾನ್ಯವಾಗಿ ಮನುಷ್ಯನಿಗೆ ಕಥೆ ಎಂದರೆ ಅದು ಸೋಜಿಗದ ವಿಷಯ, ವಿಸ್ಮಯ ಅದರ ಹೃದಯ! ಎಲ್ಲಾರಲ್ಲೂ ಜನ್ಮಜಾತವಾದದ್ದು. ಮುಂದೇನು? ಮುಂದೇನು? ಎಂಬ ಕೌತುಕ. ಕೇಳುಗರ ಆ ಕುತೂಹಲವೇ ಕಥೆಗಾರನಿಗೆ ಮೂಲ ಭಾವದ ಬಂಡವಾಳ. ಅದೇ ಬದುಕಿನ ಕೌಶಲ!
ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ಕಥೆಗಳದ್ದೆÃ ಮಹತ್ತರ ಪಾತ್ರ. ಕಥೆಯಲ್ಲಿ ಸಣ್ಣ ಹರಹಿದ್ದರೆ, ಕಾದಂಬರಿ ಎಂಬುದು ನೀಳ್ಗಥೆಯೇ!
ಇಂದು ಎಲ್ಲಿಂದ ಎಲ್ಲಿಗೇ ಹೋಗಲಿ ದಿನಪತ್ರಿಕೆ, ವಾರ ಪತ್ರಿಕೆ, ಮಾಸಪತ್ರಿಕೆಗಳಲ್ಲಿ ಕಥೆಗಳು ಯಥೇಚ್ಚ ಬೆಳಕು ಕಾಣುತ್ತಿರುತ್ತವೆ. ವಿವಿಧ ವಾಹಿನಿಗಳಲ್ಲೂ ಧಾರವಾಹಿಯಾಗಿ ಪ್ರವಹಿಸುತ್ತಿರುವ ಕಥೆಗಳೆಲ್ಲಾ ಮೂಲಭೂತವಾಗಿ ಆಂತರ್ಯದಲ್ಲಿ ಸಣ್ಣ ಕಥೆಗಳೇ ಆಗಿರುತ್ತವೇ. ಇಂದು ಸಣ್ಣ ಕಥೆಗಳ ಸೃಷ್ಟಿ ಅಗಾಧ! ಹೊಸ ಬರಹಗಾರರ ಕಥೆಗಳು ಅನುಪಮ. ಮಹಿಳೆಯರಂತೂ ಅನನ್ಯ ಕಥೆಗಳನ್ನು ಕನ್ನಡ ಜನಕ್ಕೆ ನೀಡುತ್ತಿದ್ದಾರೆ. ಜೀವನ ಪ್ರಿÃತಿಯ ಉಜ್ವಲ ಆಶಾಕಿರಣಗಳೇ ಕಥೆಗಳ ಸಿಹಿ ಹೂರಣ.
ಸಣ್ಣ ಕಥೆ ಕೂಡ ಭಾವಗೀತೆಯಂತೆ ಕೌಶಲಪೂರ್ಣ ಸೃಷ್ಟಿಗೆ ಇಂಬಾಗಿರುತ್ತದೆ. ಆ ಎಲ್ಲದರ ಆಶಯವಂತು ಒಂದೇ ಆಗಿರುತ್ತದೆ.

ಇಂದಿನ ಕಥೆಗಾರರಲ್ಲೂ ಅಭಿವ್ಯಕ್ತಿಯಲ್ಲಿ ಹೊಸತನ ಕಂಡರೂ ಕಥೆಗಾರರಲ್ಲೂ ಅಭಿವ್ಯಕ್ತಿಯಲ್ಲಿ ಹೊಸತನ ಕಂಡರೂ ಕಥೆಗಾರಿಕೆಯ ದೃಷ್ಟಿಯಿಂದ ನೋಡುವುದಾದರೆ ಅದೇ ಪುರಾತನ ಕಟ್ಟುವಿಕೆಯ ಸಂಸ್ಕಾರ. ಕಲ್ಪನೆಯಿಂದ ವಿಸ್ತಾರವಾಗಿ ಕಥಾ ಹಂದರ ಹಬ್ಬಿಸುವ ಕಲೆಗಾರಿಕೆಯ ಸೃಜನಶೀಲತೆಯೇ ಆಧಾರ!
“ಸಣ್ಣ ಕಥೆಗಳ ಆಸ್ತಿ ಮಾಸ್ತಿ” ಎಂದು ಜನಜನಿತ ಆಗುವಷ್ಟು ಸಮೃದ್ಧವಾಗಿ ಕಥೆಗಳನ್ನು ಐದು ದಶಕಗಳ ಕಾಲ ಬರೆದವರು ನಮ್ಮೆಲ್ಲರಿಗೂ ಹಿರಿಯರಾದ ಕಥೆಗಾರ ಮಾಸ್ತಿವೆಂಕಟೇಶ ಅಂiÀÄ್ಯಂಗಾರ್. ಅವರ ಬರಹಗಳಲ್ಲೂ ತಂತ್ರಗಳಿವೆ, ವ್ಯಾಪ್ತಿಯೂ ಇದೆ, ಜೀವನಕ್ಕೆ ಹತ್ತಿರವಾದ ಕಥೆಗಳು ಸಮ ಸಮಾನಾಂತರವಾಗಿ ಕಲ್ಪಕಥೆಗಳೂ ಇವೆ,
ಸಣ್ಣ ಕಥೆಗಳಲ್ಲೂ ಪ್ರಧಾನವಾಗಿ ಬದುಕಿನ ಕಥೆ ಬೀಜರೂಪದಲ್ಲಿ ಇರುತ್ತದೆ, ಆನಂತರದಲ್ಲಿ ಘಟನೆಗಳ ಸರಮಾಲೆ.. ಅವುಗಳಿಗೆ ಅಂಟಿಕೊಂಡ ಅನುಭವದ ವ್ಯಾಖ್ಯಾನಗಳು, ಬಣ್ಣನೆಗಳು ಕೂಡಿಬರುತ್ತವೆ.
ಮಾಸ್ತಿ ಅವರ “ಕಾವ್ಯನಾಮ “-ಶ್ರಿÃನಿವಾಸ; ಮೂಲ ಹೆಸರು ಮಾಸ್ತಿ ವೆಂಕಟೇಶ್ ಅಂiÀÄ್ಯಂಗಾರ್, ಶ್ರಿÃನಿವಾಸರು ತಮ್ಮ ಪ್ರಮುಖ ಅಭಿವ್ಯಕ್ತಿ ಮಾಧ್ಯಮಕ್ಕೆ ಸಣ್ಣ ಕಥೆಯಹೆಣೆಯನ್ನೆÃ ಧಾತುವಾಗಿ ಪಡೆದು ಕೊಂಡದ್ದು ಬಹಳ ಮುಖ್ಯ ವಿಷಯ, ಮಾಸ್ತಿಯವರ ಬಗೆಗೆ ಮೆಚ್ಚುಗೆಯ ಮಾತು ಹೇಳಬೇಕೆಂದರೆ ಇಡೀ ಒಂದು ಜೀವ ಮಾನವನ್ನೆÃ ಕಥೆಗಳನ್ನು ಬರೆಯಲು ಅವರು ತೊಡಗಿಸಿಕೊಂಡಿದ್ದ ಅವರ ಯಶೋಗಾಥೆಯಾಗಿದೆ. ಸಣ್ಣ ಕಥೆಗಳ ಕ್ಷೆÃತ್ರದಲ್ಲಿ ಬಹಳ ದೊಡ್ಡ ಹೆಸರು ಮಾಡಿದರು ನಮ್ಮ ನಲ್ಮೆಯ ಮಾಸ್ತಿ ವೆಂಕಟೇಶ್ ಅಂiÀÄ್ಯಂಗಾರ್‌ರರು. ಜ್ಞಾನಪೀಠ ಪ್ರಶಸ್ತಿ ವಿಜೇತರು, ಅಭಿಜಾತ ಬರಹಗಾರರು.
ಮೊದಮೊದಲಿಗೆ ಅವರು ರಂಗಪ್ಪನ ಕಥೆಗಳನ್ನು ಬರೆದ್ದಿದ್ದಾರೆ, ನಮ್ಮ ದೈನಂದಿನ ನಡೆಯ ತಳಭಾಗದ ನೆಲದಲ್ಲಿ ಇರುವ ಅಮೂಲ್ಯ ತವನಿಧಿಯ ಹಾಗೆ ಪಾತ್ರಗಳ ಆಂತರ್ಯದಲ್ಲಿ ಬಾಳಿನ ಘಟನೆಗಳೇ ಜೀವನದ ಉನ್ನತಿಗೆ ಕಾರಣವಾದ ಅಂಶಗಳಡಗಿರುವುದೇ ಸೋಜಿಗ.
“ ಕಾಮನ ಹಬ್ಬದ ಕಥೆ “ ಆಗಬಹುದು! “ವೆಂಕಟಶಾಮಿಯ ಪ್ರಣಯ” ಆಗಬಹುದು! ಇವು ಕೇವಲ ನಿದರ್ಶನಗಳು ಅಷ್ಟೆ. ಕಾಮನ ಹಬ್ಬದ ಕಥೆಯಲ್ಲಿ ಕಥಾ ನಾಯಕ -ಸಾವಿತ್ರಮ್ಮ… ಆಕೆಗೆ ಚಿಕ್ಕವಯಸ್ಸಿನಲ್ಲೆÃ ಕಂಕಣಭಾಗ್ಯ ಕೂಡಿ ಬಂದಿರುತ್ತದೆ. ಅವಳ ಪತಿರಾಯ ಶ್ರಿÃನಿವಾಸ ಅಂದರೆ ಕಥೆಯಲ್ಲಿನ ನಾಯಕಿ “ಶ್ರಿÃನಿ” ತೀರ್ಥಯಾತ್ರೆಗೆ ಹೋಗಿರುತ್ತಾನೆ. ಅವನು ದಾರಿಯಲ್ಲೆÃ ಸತ್ತನೆಂಬ ವದಂತಿ ಹೆಚ್ಚುತ್ತದೆ.
*ಸಾವಿತ್ರಮ್ಮ ಊರವರ ಕಣ್ಣಲ್ಲಿ ವಿಧವೆ ಆಗುತ್ತಾಳೆ, ಕಷ್ಟದಲ್ಲಿ ಕಾಲ ತಳ್ಳುತ್ತಾ ಇರುತ್ತಾಳೆ, ಕಾಮನ ಹಬ್ಬದ ದಿನ -ಸಾವಿತ್ರಮ್ಮ ಕಾಮನ ಸುಟ್ಟ ಜಾಗದಲ್ಲಿ ಬೂದಿಯನ್ನು ತಲೆಯ ಮೇಲೆ ಸುರಿದುಕೊಳ್ಳೊ ವಿಷಮ ಸಂಧರ್ಭಕ್ಕೆ ಸರಿಯಾಗಿ-ತೀರ್ಥಯಾತ್ರೆಯಲ್ಲಿ ಸತ್ತು ಹೋದನೆಂದು ಹೇಳಲಾದ “ಶ್ರಿÃನಿ” ಪ್ರತ್ಯಕ್ಷನಾಗಿ ಬಿಡುತ್ತಾನೆ. ಕಥೆಗಾರ ಮಾಸ್ತಿ ಯಾವ ಭಾವವೇಶಕ್ಕೂ ಒಳಗಾಗದೆ -ಸಂಯಮದಲ್ಲಿ ಕಥೆ ಮುನ್ನಡೆಸುತ್ತಾರೆ. ಕಥೆಗಾರರಿಗೆ ಸಾಂಪ್ರದಾಯಿಕ ಆಚರಣೆಗಳು ಮುಖ್ಯವಾಗುತ್ತವೆ.
ಇಂಥ ಎಷ್ಟೊÃ ಕಥೆಗಳನ್ನು ಮಾಸ್ತಿ ಬರೆದಿದ್ದಾರೆ. ವೆಂಕಟಶಾಮಿಯ ಪ್ರಣಯ, ನಮ್ಮ ಮೇಸ್ಟçರು, ಮಸುಮತಿ, ಬಾದಷಹನ ದಂಡನೆ, ಪಂಡಿತನ ಮರಣ ಶಾಸನ, ನಿಜಗಲ್ಲಿನ ರಾಣಿ, ಪೆನಗೊಂಡೆ ಕೃಷ್ಣಮೂರ್ತಿ, ಪ್ರಿಯದರ್ಶಿನಿ ಅಶೋಕ, ಸಾರಿಪುತ್ರನ ಕೊನೆಯ ದಿನಗಳು, ಆಚಾರ್ಯರ ಪತ್ನಿ, ಹೇಮಕೂಟದಿಂದ ಬಂದ ಮೇಲೆ -ಹೀಗೆ ಅಸಂS್ಯಕಥೆಗಳನ್ನು ಬರೆದು ಕನ್ನಡ ಸಣ್ಣ ಕಥಾ ಪ್ರಪಂಚದ ವಿಸ್ತರಣೆಗೆ ಕಾರಣರಾಗಿದ್ದಾರೆ.
ಮಾಸ್ತಿ ಅವರ ರೀತಿ: ವಾಸ್ತವದ ಚಿತ್ರಣ. ನೈಜ ಛಾಯಾಗ್ರಹಣದ ಹಾಗೆ: ಅಪ್ಪಟ. ಈ ನೆಲದ ಮನುಜರ ಕಥೆಗಳು. ರಷ್ಯಾ ದೇಶದ “ಟಾಲ್ ಸ್ಟಾರ್ಯ” ಹಾಗೆ, ಎಲ್ಲೂ ಯಾವ ಕಥೆಯಲ್ಲೂ ನಿರೂಪಣೆಯಲ್ಲಿ ಪೆಡುಸಿಲ್ಲ. ಸುಲಿದ ಬಾಳೆಯ ಹನ್ನಿನ ಹಾಗೆ ಸರಳ, ನೇರ, ಸಹಜ ಸ್ಪಂದನ, ಸತ್ಯ ಕಥನ. ಆದ್ದರುಂದಲೇ ಮಾಸಿ ಅವುಗಳನ್ನು ಬರೆದು ಐದು ದಶಕಗಳೇ ಕಳೆದಿದ್ದರೂ ಇಂದಿಗೂ ಜೀವಂತ. ಈಗಲೂ ಈ ಹೋತ್ತಿನ ಓದುಗರಿಗೂ ಆಕರ್ಷಕ ಅನ್ನಿಸಿವೆ, ಅದೇ “ಶ್ರಿÃನಿವಾಸ” ಕಾವ್ಯ ನಾಮದ ಮಾಸ್ತಿ ವೆಂಕಟೇಶ ಅಂiÀÄ್ಯಂಗಾರ್ ಅವರ ಸಾಹಿತ್ಯ ಸತ್ವ.
– ದೊಡ್ಡರಂಗೇಗೌಡ

Source – Sakhigeetha.com

ನಮ್ಮ ಸಂಸ್ಕೃತಿಯ ಮೂಲಧಾತು ಜಾನಪದವೇನು? – ದೊ.ರಂ.ಗೌಡ

0

ಹಳ್ಳಿಗರ ಬದುಕಿನಲ್ಲಿ ಸಮೃದ್ಧವಾದ ಜೀವನ ಮೌಲ್ಯಗಳಿವೆ; ಅವುಗಳನ್ನು ನಾವು ಯಾವತ್ತೂ ಪಾಲಿಸಬಹುದು.
ಹಿರೀಕರ ಮರೀಬ್ಯಾಡ|
ಸರೀಕರ ತೊರೀಬ್ಯಾಡ||
ನೆರೆದೋರ ಮುಂದೆ ಮರೀಬ್ಯಾಡ ಪುಟ್ಟ ತಿಮ್ಮಾ…||
ದೊರೆ ತನಕ ದೂರ ಹೊಯ್ಯಬ್ಯಾಡ|

 

ಊರ ಹಿರಿಯರಿಗೆ ತಲೆ ಬಾಗು; ಸಮಾಜದಲ್ಲಿನ ವಯೋವೃದ್ಧರಿಗೆ, ಜ್ಞಾನ ವೃದ್ಧರಿಗೆ-ಗೌರವ; ಕೊಡುವರಿಗೆ ಸ್ನೆÃಹಿತರ ಯಾವತ್ತೂ ಕೈ ಬಿಡಬೇಡ. ನಿನ್ನ ಕಷ್ಟ ಸುಖಗಳಿಗೆ ಆಗುವವರು ಎಂದೆಂದೂ ಅವರೇನೆ|
ಹೆತ್ತೊರ‍್ನ ಜರಿಯೋದುಂಟೇ||
ಹೊತ್ತೊರ‍್ನ ಮರೆಯೋದುಂಟೇ||
ಸಾಕಿ ಸಲಹದರ‍್ನ ತೊರೆಯೋದುಂಟೇ||
-||ಎಲೋ ಗೆಣೆಯಾ||
ಕಳ್ಳು ಬಳ್ಳಿ ಸಂಬಂಧ ಕಳಚೋದುಂಟೇ?
ತಾಯಿಯನ್ನು, ತಂದೆಯನ್ನು, ಬಂಧುವನ್ನು, ಬಳಗವನ್ನು, ನಾವು ಎಂತಾದರೂ ಸಂಪೂರ್ಣ ಮರೆಯಬಹುದೇನು? ಆ ಅಕ್ಕರೆಯ ಅನುಬಂಧಗಳು ಅಪೂರ್ವವಾದವು; ಅನನ್ಯವಾದವು. ಆ ಎಲ್ಲ ವಾತ್ಸಲ್ಯದ ಸಂಬಂಧಗಳಿಗೆ ಬೆಲೆ ಕಟ್ಟಲಾಗದು. ಅವು ಸಾರ್ವಕಾಲಿಕ; ಮೌಲಿಕ. ಅವು ಗುಣಾತ್ಮಕವೂ ಹೌದು; ಧನಾತ್ಮಕ ಹೌದು.

ಬಾಲ್ಯದಲ್ಲಿ ನಮ್ಮೆಲ್ಲರ ಬದುಕನ್ನೂ ರೂಪಿಸುವ ಮಹಾನುಭಾವರು-ನಲ್ಮೆಯ ಗುರುಗಳು; ಊರ ಹಿರೀಕರು ಅವರನ್ನು “ಓಚಯ್ಯಗಳು” ಅನ್ನುತ್ತಿದ್ದರು. ಓಚರು ಎಂದರೆ ವಿದ್ಯೆಯನ್ನು ನೀಡುವ ಗುರುಗಳು. ಎಳೆಯರ ಪಾಲಿಗೆ ಆದರ್ಶ ಪುರುಷರು. ಸ್ವಾತಂತ್ರಾö್ಯನಂತರದಲ್ಲಿ… ಅವರನ್ನು ನಾವು “ಮೇಷ್ಟುç” ಎಂದು ಕರೆಯವುದೂ ವಾಡಿಕೆ. ಇಂಗ್ಲಿÃಷಿನ ಒಚಿsಣeಡಿ(ಮಾಸ್ಟರ್) ಹೋಗಿ “ಮಾಸ್ತರ” ಆಗಿ “ಮೇಷ್ಟುç” ಪದ ಬಳಕೆಗೆ ಬಂದಿದೆ. ಅಂಥ ಹಿರಿಯ ಜೀವಗಳನ್ನು ಕುರಿತ ಜಾನಪದಗೀತೆ ಹೀಗಿದೆÉ
ಗುರುವೆಂಬ ಪದ ಕೇಳೋ|
ಅರಿವಿನ ಮುದ ತಾಳೋ||
ತೆರೆದು ಕೊಟ್ಟಾರೋ ಬುದ್ಧಿÃಯ ಕಣ್ಮುಂದೆ ||ಎಲೆಹೈದ||
ಗುರುಪಾದಕೆ ನೀನು ಅಡ್ಡಬೀಳೋ||
* * *

ಅಂದೇ ದಾಸರು ತಮ್ಮ ಕೀರ್ತನೆಗಳಲ್ಲಿ ಮನೋಜ್ಞವಾಗಿ ಹೇಳಿದ್ದಾರೆ-
ಗುರುವಿನ ಗುಲಾಮನಾಗುವತನಕ
ದೊರೆಯದಣ್ಣಾ ಮುಕುತಿ! ಅಂತ- ಮೃಗವಾದ ಮನುಷ್ಯನನ್ನು ಪಳಗಿಸಿ ತಿದ್ದಿ-ತೀಡಿ ಹದಮಾಡುವವರೇ ಗುರುಗಳು!!
ಜಾನಪದೀಯರು ನಿರಕ್ಷರಕುಕ್ಷಿಗಳಾಗಿರಬಹುದು! ಆದರೆ ಕವಿರಾಜ ಮಾರ್ಗಕಾರನ ಪ್ರಕಾರ…. “ಕುರಿತೋದದೆಯುಂ- ಕಾವ್ಯ ಪ್ರಯೋಗ ಪರಿಣತ ಮತಿಗಳ್” ಅಂದರೆ ಯಾವುದೇ ಶಾಲಾ ಕಾಲೇಜುಗಳಲ್ಲಿ ಓದಿ- ಪದವಿಗಳ ಪಡೆಯದೇ ಹೋದರೂ…. ಹಳ್ಳಿಗರು… ಅನುಭಸ್ಥರು. ತಿಳಿವಳಿಕೆ ಪಡೆದವರು; ನೋವು-ನಲಿವುಂಡವರು, ಏಳು ಬೀಳು ಕಂಡವರು, ಒಟ್ಟಾರೆ ಬವಣೆ ಬದುಕನ್ನು ಅನುಭವಿಸಿದವರು.. ಅವರು.. ಸಾಕಷ್ಟು ಸಂಕ್ರಾಂತಿಗಳ ನೋಡಿದರು ಅವರು. ಅವರ ಮಾತೆಲ್ಲಾ ಅನುಭವದ ಅಮೃತದಂಥಾ ನುಡಿ!

ಬಾಳೆಯ ಬಗೆದು ಹಾಕು|
ತೆಂಗನ್ನು ತೇಲಿಸಿ ಹಾಕು||
ಹುಳುಕ ಕಾಳುಗಳ ದೂರ ಬಿಸಾಕೋ-ತಮ್ಮಾ||
ಜಳ್ಳು ತೂರಿ, ಗಟ್ಟಿ ಕಾಳು-ನಾಟಿ ಹಾಕೋ!
* * *
ಇಂಥವು ಅವೆಷ್ಟೊÃ ಇವೆ. ಅವೆಲ್ಲವೂ ಸಾವಿರದ ಜಾನಪದ ಗೀತೆಗಳು. ಸತ್ತಂಥ ಇಂದಿನ ಆಧುನಿಕ ಬದುಕಿಗೆ ಪ್ರಾಣ ಕೊಡುವ ಕಾಯಕಲ್ಪಮಾಡುವ ಮರುಜೇವಣಿಗೆಗಳು. ಗ್ರಾಮೀಣ ಬದುಕಿನಲ್ಲಿ ಲೋಕಾನುಭವದ ತವನಿಧಿಯೇ ಇದೆ. ಅದೇಂದ ಕಾವ್ಯ ಕಣಜ!!

ನಮಗಿಂಥ ಬದುಕು ದೊಡ್ಡದು. ಆದ್ದರಿಂದಲೇ ಹಿಂದಿನವರು ಬಹುತೇಕ “ಅವಿಭಕ್ತ ಕುಟುಂಬ”ಗಳಲ್ಲಿಯೇ ವಾಸಿಸುತ್ತಿದ್ದರು. ಅದಕ್ಕೆ ಅವರು ಸಾಮರ್ಥ್ಯದಲ್ಲಿ ಬಲಿಷ್ಟ-ಈಗ ಎಲ್ಲೆಲ್ಲೂ “ವಿಭಕ್ತ” ಕುಟುಂಬಗಳೇ ಹೆಚ್ಚು. ಅದಕ್ಕೆ ನಾವು ಈ ಹೊತ್ತು ಕನಿಷ್ಟ..! ಹಾಗಾಗಬಾರದು…
ಹನಿ ಹನಿಗೂಡಿದರೆ ಹಳ್ಳ
ತೆನೆ ತೆನೆಗೂಡಿದರೆ ಭತ್ತ
ಅಂಥ ಮುತ್ತಿನಂಥ ಮಾತುಗಳನ್ನು ನಾವೀಗ ಬದುಕಿಗೆ ಅಳವಡಿಸಿಕೊಳ್ಳಬೇಕಾದ್ದು ಅಗತ್ಯವಾಗಿದೆ.
ಈ ಎಲ್ಲ ಅಂಶಗಳನ್ನೂ ಸರಿಯಾಗಿ ಅವಲೋಕಿಸಿದರೆ… ನಮ್ಮ ಸಂಸ್ಕೃತಿಯ ಮೂಲ ಬೇರುಗಳೇ “ಜಾನಪದ”ದಲ್ಲಿ ಇವೆ. ಅನ್ನಿಸುತ್ತದೆ. ಜಾನಪದ ಪ್ರಾಚೀನ! ಜಾನಪದ ಚಿರಂತನ! ಅಂಥ ಜಾನಪದವನ್ನು ನಾವು ಕಡೆಗಣಿಸದೆ ಬದುಕಿಗೆ ಅಳವಡಿಸಿಕೊಳ್ಳಬೇಕು

Source – Sakhigeetha.com

* ಸಂಸ್ಮರಣೆ * ಮಾಧುರ್ಯಕ್ಕೆ ಮತ್ತೊಂದು ಹೆಸರು: ಡಾ||ಪಿ.ಬಿ.ಶ್ರಿÃನಿವಾಸ್

0

ಮಾಧುರ್ಯಕ್ಕೆ ಮತ್ತೊಂದು ಹೆಸರು: ಡಾ||ಪಿ.ಬಿ.ಶ್ರಿÃನಿವಾಸ್ಜಗತ್ತಿನಲ್ಲಿ ಅತ್ಯಂತ ಎತ್ತರಕ್ಕೆ ಏರಿದ, ಕೀರ್ತಿ ಶಿಖರವೇರಿ ಅಪಾರ ಜನಪ್ರಿಯತೆಗಳಿಸಿ ಅಜರಾಮರವಾದ ಹೆಸರು ದಾಖಲಿಸಿ ಚಿರಂತನ ಹೆಜ್ಜೆಗುರುತುಗಳನ್ನು ಚರಿತ್ರೆಯಲ್ಲಿ ಮೂಡಿಸಿದ ವ್ಯಕ್ತಿಗಳು ನಿಜಕ್ಕೂ ಕಡಿಮೆ, ಅಂಥ ವಿರಳ ಪಂಕ್ತಿಯಲ್ಲಿ ರಾರಾಜಿಸಿದ ಕನ್ನಡದ ಮಧುರ ಗಾಯಕ ಡಾ|| ಪಿ.ಬಿ.ಶ್ರಿÃನಿವಾಸ್.
“ಭಕ್ತ ಕನಕದಾಸ “ ಕನ್ನಡ ಚಿತ್ರದಲ್ಲಿ ಡಾ|| ಪಿ.ಬಿ.ಶ್ರಿÃನಿವಾಸ್ ಅವರು ಹಾಡಿದ ಹಾಡುಗಳು ಎಲ್ಲಕಾಲಕ್ಕೂ ಸಲ್ಲುತ್ತವೆ. “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ” ಆಗಿನ ಕಾಲಕ್ಕೆÃನೆ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸ್ಥಾಪಿಸಿದ ಅಸಾಮಾನ್ಯ ಭಕ್ತಿಗೀತೆ, ೧೯೫೬ರಲ್ಲೆÃ “ಓಹಿಲೇಶ್ವರ” ಚಿತ್ರದಲ್ಲಿ ಪಿ.ಬಿ.ಎಸ್. ಮನೋಜ್ಞವಾಗಿ ಹಾಡಿದ್ದಾರೆ.
ಪಿ.ಬಿ.ಎಸ್. ಭಕ್ತಿ ಗೀತೆ ಹಾಡಿದರೆಂದರೆ-ಎದುರಿನ ದೈವದಲ್ಲಿ ವ್ಯಕ್ತಿ ಸಂಪೂರ್ಣ ಲೀನವಾಗಿ ತನ್ಮಯತೆಯಿಂದ ಹಾಡುಗಾರ ತೊಡಗಿಸಿಕೊಂಡಿದ್ದಾನೆ ಎಂದರ್ಥ. ಆ ನಿವೇದನಾ ರೀತಿಯ ಬಿನ್ನಹದ ಶಕ್ತಿ ಆರ್ತನಾದ: ಪರವಶತೆ! ದೈವದಲ್ಲಿ ವ್ಯಕ್ತಿ ಸಂಪೂರ್ಣ ಲೀನವಾಗಿ ತನ್ಮಯತೆಯಿಂದ ಹಾಡುಗಾರ ದೈವದ ಹಿರಿಮೆ ಮುಂದೆ ಮನುಷ್ಯ ತನ್ನ ಅಸಹಾಯಕತೆಯನ್ನು ಹೇಳಿಕೊಂಡನೆಂದೇ ಅರ್ಥ. ಅಷ್ಟೊಂದು ಭಾವದ ಆಂತರ್ಯ!
*ಬದುಕಿನಲ್ಲಿ ಬಹಳಷ್ಟು ಜನ ಸಾಮಾನ್ಯವಾಗಿ ಜೀವನ ನಡೆಸಿ ಮಣ್ಣಲ್ಲಿ ಮಣ್ಣಾಗುತ್ತಾರೆ.
*ಆದರೆ ಎಲ್ಲೊÃ ಕೆಲವರು ಮಾತ್ರ ಅದ್ಭುತವಾದ ಸಾಧನೆಗಳನ್ನು ಮಾಡಿ ತಮ್ಮ ಅಸಾಮಾನ್ಯ ವ್ಯಕ್ತಿತ್ವದಿಂದ ಸಮಾಜದ ಮೇಲೆ ಬಹಳ ದೊಡ್ಡ ಪ್ರಭಾವವನ್ನು ಬೀರಿ… ನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿ ಅಮರರಾಗುತ್ತಾರೆ.
*ಅಂಥ ಹಿರಿದಾದ ಸಾರ್ಥಕ್ಯವನ್ನು ಪಡೆದವರು ನಮ್ಮ _ ನಿಮ್ಮೆಲ್ಲರ ಪಿ.ಬಿ.ಎಸ್.
*ಈ ಹೊತ್ತು ಕನ್ನಡ ಚಲನಚಿತ್ರ ಸಂಗೀತ ತುಂಬಾ ವ್ಯಾಪಕವಾಗಿ ಬೆಳೆದಿದೆ,ವಿಸ್ತಾರವಾಗಿ ಹಬ್ಬಿಕೊಂಡಿದೆ.
*ಭಾರತದ ಸಿನಿಮಾ ಸಂಗೀತ ಕ್ಷೆÃತ್ರದಲ್ಲಿ… ಅನೇಕ ರೀತಿಯ ಅಧ್ವರ್ಯುಗಳು ಅಮೂಲ್ಯವಾದ ಸೃಜನಶೀಲ ಸಂಗೀತ ನೀಡಿದ್ದಾರೆ.
*ಚಲನ ಚಿತ್ರ ಸಂಗೀತದಲ್ಲಿ ಮಾಧುರ್ಯಕ್ಕೆ ವಿಶೇಷವಾದ ಒತ್ತು…
* ಪ್ರಾರಂಭಕಾಲದಲ್ಲಿ ಗಾಯಕ ಗಾಯಕಿಯರ ಬದಲು = ನಾಯಕ ನಾಯಕಿಯರೇ ಹಾಡಿಕೊಂಡು ಅಭಿನಯಿಸಬೇಕಿತ್ತು.
*ಬರುತ್ತಾ ಬರುತ್ತಾ ಈ ಪದ್ಧತಿ ಮಾರ್ಪಾಟಾಗಿ ಹಿನ್ನೆಲೆ ಗಾಯಕ ಗಾಯಕರಿಂದ ಹಾಡಿಸುವ ಪದ್ಧತಿ ರೂಢಿಗೆ ಬಂತು.
*ಅಂಥ ಗೀತೆಗಳು ಜನಪ್ರಿಯವಾಗಲು ಸ್ಥಳೀಯ “ಆಕಾಶವಾಣಿ” ಹಾಗೂ ಆಕ್ರೆಸ್ಟಾçಗಳು ಕಾರಣವಾದವು ಚಲನ ಚಿತ್ರಗೀತೆಗಳ ಪ್ರಸಾರಕ್ಕೆ ಇಂಬಾದವು.
*ಹೀಗೆ ಮೂಡಿಬಂದ ಹಿನ್ನೆಲೆ ಗಾಯನ ಪರಂಪರೆಯಲ್ಲಿ೧೯೫೦,೬೦,೮೦ ರ ದಶಕಗಳಲ್ಲಿ ಅಪರೂಪದ ಹೆಸರು ಮಾಡಿದರು ಪಿ.ಬಿ.ಎಸ್. ಈ ಹೊತ್ತಿಗೂ ಅವರ ಸಿರಿಕಂಠದ ಹಾಡುಗಳನ್ನು ಆರಾಧಿಸಿದ ಅಭಿಮಾನಿಗಳು ಕೋಟಿ… ಕೋಟಿ… ಜನ!!
*ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿ ಗೌರಿಶಂಕರದಷ್ಟು ಕೀರ್ತಿಯನ್ನು ಸಂಪಾದಿಸಿದವರು – ಪಿ.ಬಿ.ಎಸ್.
* ಡಾ|| ಪ್ರತಿವಾದಿ ಭಯಂಕರ ಶ್ರಿÃನಿವಾಸ್ *
ಪಿ.ಬಿ.ಎಸ್. ಅವರಿಗೆ ದೈವದತ್ತವಾದ ಕಂಠಸಿರಿ ಇತ್ತು. ಅದು ಸುಮಧುರ ಸುಶ್ರಾವ್ಯ; ಸುಕೋಮಲ; ಅಗಣಿತ ರಸಿಕರ ಹೃನ್ಮನಗಳ ಗೆದ್ದ ಮಹಾನ್ ಗಾಯಕರು ಅವರ ಅವರ ನಾದ ಮಾಧುರ್ಯದಿಂದ ಲಕ್ಷೆÆÃಪಲಕ್ಷ ಜನ ಸಂತೋಷವನ್ನು ಕಂಡುಕೊಂಡಿದ್ದಾರೆ. ಸಂಗೀತ ಅಂಥ ಅದ್ಭುತ ಸಂಜೀವಿನಿ.
“ಪ್ರಿÃತಿನೇ ಆದ್ಯಾವ್ರು ತಂದ…
ಆಸ್ತಿನಮ್ಮ ಬಾಳ್ವೆಗೇ
ಹಸಿವಿನಲ್ಲೂ ಹಬ್ಬನೇ
ದಿನವೂ ನಿತ್ಯವೂ ಯುಗಾದಿನೇ”
ಹಾಡು ಮುಗ್ಧ.. ರೀತಿ ಮೂಡಿ ಬಂದಿದೆ ಮುಗ್ಧಹಾಡುಗಾರಿಕೆ ಇನಿದೋ ಇನಿತು…
* * *
* “ಯಾರಿಗೆ ಯಾರೋ ನಿನಗಿನ್ಯಾರೋ” *
ತಾತ್ವಿಕ ಗೀತೆಗಳನ್ನು ಹಾಡುವುದರಲ್ಲೂ ಎತ್ತಿದ ಕೈ, ಆ ಮೆಲೋಡಿ ಮಧುರಾತಿ ಮಧುರ.. ಪಿ.ಬಿ.ಎಸ್. ಗಾನ ಅದೊಂದು ದುಃಖಗೀತ!
“ಓಡುವ ನದಿ ಸಾಗರವ ಸೇರಲೇಬೇಕು”
ಅತ್ಯಂತ ಮಧುರಾತಿ ಮಧುರ!
ಹಾಡು ಕೇಳುತ್ತಿದ್ದರೆ ಮೋಹಕ ಇಂಚರವೇ
ನಿನದಿನದ ಹಾಗಾಗುತ್ತದೆ.
* * * *
“ನಗು ನಗುತಾ ನಲಿ ನಲಿ..
ಏನೇ ಆಗಲೀ!
*ಏನೆಲ್ಲ ಉತ್ಸಾಹಭಾವ ಹಾಡು ಕೇಳುತಾ ಇದ್ದರೆ ಪುಳಕಗೊಳ್ಳುತ್ತೆ ಜೀವ!
* * *
“ಚಂದ್ರ ಮಂಚಕೆ ಬಾ ಚಕೋರಿ”
ಸಿಹಿ ಸಿಹಿಯಾದ ಮಾತುಗಾರಿಕೆಗೆ
ಇಂಚರಾತಿ ಇಂಚರ
ಪಿ ಬಿ ಎಸ್ ನ ಆ ಮಧುರಾತಿ ಮಧುರ ಹಾಡುಗಾರಿಕೆ.
ಪಿ ಬಿ ಎಸ್ ಹಾಡದೆ ಉಳಿಸಿರುವ ಸನ್ನಿವೇಶಗಳೇ ಇಲ್ಲ! ಅವರು ಆರು ಭಾಷೆಗಳಲ್ಲಿ ಕೇವಲ ಹಾಡಿದವರಷ್ಟೆÃ ಅಲ್ಲ! ಗೀತೆಗಳನ್ನೂ ಬರೆದವರು. ಅವರ ಸೃಜನ ಶೀಲತೆಗೆ ಅನಂತ ಆಯಾಮಗಳು, ಅವರು ಬರೆದ ಘಜಲ್ ಗಳಿಗೆ, ಹಾಡುಗಳಿಗೆ ಅಸೀಮ ನೆಲೆಗಳು, ಅಸಾಧಾರಣ ಸ್ತರಗಳು.
ಡಾ||ರಾಜಕುಮಾರ್ ಶರೀರವಾದರೆ ಡಾ.ಪಿ.ಬಿ.ಎಸ್. ಶಾರೀರ! ಈ ಜೋಡಿ ಕನ್ನಡ ಚಿತ್ರರಂಗದಲ್ಲಂತೂ ಮಾಡಿದ್ದು ಅದ್ವಿತೀಯ ಮೋಡಿ.
ಪಿ.ಬಿ.ಎಸ್.ಒಬ್ಬ ಗೀತ ರಚನಕಾರರಾಗಿ,ಒಳ್ಳೆಯ ಕವಿಯಾಗಿ ಅಗಣಿತ ಭಕ್ತಿಗೀತೆ ಬರೆದಿದ್ದಾರೆ. ಅವರಿಗೆ ದೇವರಲ್ಲಿ ಅಪಾರವಾದ ನಂಬಿಕೆ, ತನ್ಮಯವಾಗಿ, ಭಾವಪೂರ್ಣವಾಗಿ, ಸ್ಭುಟವಾಗಿ, ಆರ್ದ್ರವಾಗಿ ಹಾಡುವ ಮೂಲಕ ಈ ನಾಡಿಗೆ ಅಸೀಮ ಭಕ್ತಿ ಕುಸುಮಾಂಜಲಿ ಅರ್ಪಿಸಿದ್ದಾರೆ.
ಅವರ ಹಾಡುಗಳ ಪಟ್ಟಿಯನ್ನು ನಾನಿಲ್ಲ ನೀಡಬೇಕಾಗಿಲ್ಲ. ನಮ್ಮ ಚಿತ್ರರಸಿಕರಿಗೆ ನನಗಿಂತ ಹೆಚ್ಚಿನ ಮಾಹಿತಿ, ವಿವರಗಳು ಗೊತ್ತಿವೆ. ಆದರೆ ಅವರು ಹಾಡುವ ಮೂಲಕ ದಾಖಲಿಸಿರುವ ದನಿ ಚಿರಂತನ! ಭಾವಗಳು ಎಂದಿಗೂ ಜೀವಂತ! ನವನವೀನ! ದೇಹ ಮರೆಯಾದರೂ ಆ ಗಾಯನ ಸವಿ ಗಾಳಿಯಲ್ಲಿ ಲೀನವಾಗಿದೆ. ಅವರ ಸಂಸ್ಮರಣೆಯ ಶುಭ ಸಂದರ್ಭದಲ್ಲಿ ಅವರ ದನಿ ಅನಂತಾನಂತವಾಗಿ ವ್ಯೊÃಮದಲ್ಲಿ ಅನುರಣನ ವಾಗುತ್ತಿರುವುದಂತೂ ಸತ್ಯಸ್ಯ ಸತ್ಯ.
ಸಾವಿರಾರು ಹಾಡು ಹಾಡಬೇಕಾಗಿಲ್ಲ ಗಾಯಕ,
ಸುಧೀರ್ಘಕಾಲ ಜನಮನದಲ್ಲಿ ಬೇರೂರಬಲ್ಲ-
ಹತ್ತಾರು ಹಾಡಿದರೂ ಅದೇ ಸಾರ್ಥಕ, ಚರಿತ್ರಾರ್ಹ ಉಲ್ಲೆÃಖ!
ಏಳು ಬೆಟ್ಟದೊಡೆಯ, ಮಲೆ ಮಲೆಯ ಮೇಲೆ ನಿಂತಂತೆ-
ನಮ್ಮ ನಲ್ಮೆಯ “ಶ್ರಿÃನಿವಾಸ” ಶಾಶ್ವತ ನಿಂತಿದ್ದಾರೆ, ರವಿಶಶಿಯಂತೆ!

* ದೊ.ರಂ.ಗೌಡ

Source – Sakhigeetha.com

ಸುಗಮ ಸಂಗೀತ ಕ್ಷೆÃತ್ರಕ್ಕೆ… “ಪುರುಷ ಸರಸ್ವತಿ” ಡಾ|| ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕೊಡುಗೆ – ಡಾ||ಡಿ.ಭರತ್

0

ಆಧುನಿಕ ಕನ್ನಡ ಕಾವ್ಯದ ಒಂದು ಭಾಗವಾಗಿ, ತನ್ನದೇ ಆದ ವಿಶಿಷ್ಟತೆಯಿಂದ, ವಿಭಿನ್ನವಾದ ಅಭಿವ್ಯಕ್ತಿ, ಶೈಲಿಯಿಂದ ಸಂಪೂರ್ಣ ಸಾಹಿತ್ಯನಿಷ್ಠ ಸಂಗೀತದ ಮಾದರಿಯಾಗಿದೆ ಸುಗಮ ಸಂಗೀತ.
ಈ ಸುಗಮ ಸಂಗೀತವು ಪ್ರತಿಭಾವಂತ ಕವಿಗಳಿಂದ ರಚನೆಯಾದ ಕವಿತೆಯನ್ನು ಪ್ರಮುಖ ನೆಲೆಯಾಗಿಸಿಕೊಂಡಿದೆ. ಗೇಯರೂಪದ ಆಧುನಿಕ ಕನ್ನಡ ಭಾವಗೀತೆಯ ಸ್ವರೂಪವನ್ನು ಗುರುತಿಸುವ, ಒಂದು ಕನ್ನಡದ ಕವಿತೆ ಮತ್ತು ಗಾಯನಕ್ಕಿರುವ ಆವಿನಾಭಾವ ಸಂಬಂಧವನ್ನು ತಿಳಿಸುವ, ಸಂಗೀತಕ್ಕೆ ಅನುಗುಣವಾದ ಸಾಹಿತ್ಯಕ ನೆಲೆಯನ್ನು ಸೂಚಿಸುವ ಕಾರ್ಯವೈಖರಿ ಈ ಸುಗಮ ಸಂಗೀತದ್ದೆÃ ಆಗಿದೆ.
೧೯೮೦ ರ ಹೊತ್ತಿನಲ್ಲಿ ಶಾಸ್ರಿÃಯ ಸಂಗೀತಕ್ಕಿಂತ, ಚಿತ್ರಗೀತೆಗಳಿಗಿಂತ ವಿಭಿನ್ನವಾಗಿ ತಂಗಾಳಿಯ ತಂಪಿನಂತೆ, ಮಲ್ಲಿಗೆಯ ಹೂಮೊಗ್ಗು ಅರಳಿ ಕಂಪು ಬೀರಿದಂತೆ ಸಂಗೀತ ಕ್ಷೆÃತ್ರದಲ್ಲಿ ಒಂದು ಹೊಸದಾದ ಬದಲಾವಣೆಯ ಸ್ವರೂಪವನ್ನು ‘ನಿತ್ಯೊÃತ್ಸವ’ ಧ್ವನಿಸುರುಳಿಯ ಮೂಲಕ ಕರ್ನಾಟಕದಾದ್ಯಂತ ಉಂಟು ಮಾಡಿದ್ದು ಸುಗಮ ಸಂಗೀತದ ಘನತೆ, ಹೆಗ್ಗಳಿಕೆ.
ಮೈಸೂರು ಅನಂತಸ್ವಾಮಿಯವರ ಸಂಗೀತ – ಗಾಯನದ ಕವಿ ನಿಸಾರ ಅಹಮದ್ರ ಕವಿತೆಗಳ ‘ನಿತ್ಯೊÃತ್ಸವ’ ಕನ್ನಡಿಗರ ಮನೆ – ಮನಗಳಲ್ಲಿ ಮಿಂಚಿನ ಸಂಚಾರ ಮಾಡಿಸಿತ್ತು ‘ಜೋಗದ ಸಿರಿ ಬೆಳಕಿನಲ್ಲಿ’ ‘ಬೆಣ್ಣೆ ಕದ್ದ ನಮ್ಮ ಕೃಷ್ಣ’ ಮುಂತಾದ ಗೀತೆಗಳು ಕೇಳುಗನ ಮನಸ್ಸಿಗೆ ರಸದೌತಣ ನೀಡಿತ್ತು. ಇದರ ಬೆನ್ನಲ್ಲಿಯೇಬಂದ ‘ಶಿಶುನಾಳ ಶರೀಫ ಸಾಹೇಬರ ಗೀತೆಗಳು’ ‘ಮೈಸೂರುಮಲ್ಲಿಗೆ’ ಮತ್ತು ‘ಮಾವು ಬೇವು’ ಧ್ವನಿಸುರುಳಿಗಳು ಸಂಗೀತ ನಿರ್ದೇಶಕ- ಗಾಯಕ ಸಿ.ಅಶ್ವಥ್‌ರ ಮಹಾಪ್ರತಿಭೆಗೆ ಸಾಕ್ಷಿಯಾದವು. ಸುಗಮ ಸಂಗೀತ ಕ್ಷೆÃತ್ರಕ್ಕೆ ಅಶ್ವಥ್‌ರ ಸೃಜನಶೀಲತೆಯ ಕಾಣಿಕೆಯನ್ನು ನಿಚ್ಚಳವಾಗಿ ತೋರಿಸಿದವು.
ರಸಋಷಿ ಕುವೆಂಪು ಅವರ ಕೆಲವು ಗೀತೆಗಳು, ಶರೀಫ್ ಸಾಹೇಬರ ಕವಿತೆಗಳು ,
ಡಾ||ಕೆ.ಎಸ್.ನರಸಿಂಹಸ್ವಾಮಿಯವರ ಕವಿತೆಗಳು – ‘ಕೋಡಗನ ಕೋಳಿ ನುಂಗಿತ್ತ’ ‘ಹಾವು ತುಳಿದೆಯೇನೆ’ ‘ಗುಡಿಯ ನೋಡಿರಣ್ಣ’ ‘ಅಕ್ಕಿ ಆರಿಸುವಾಗ’, ‘ರಾಯರು ಬಂದರು’ ‘ನಿನ್ನೊಲುಮೆಯಯಿಂದಲೇ’ ‘ಒಂದಿರುಳು ಕನಸಿನಲಿ’ ಮುಂತಾದವು ಸಹೃದಯನ ಪಾಲಿಗೆ ರಸದೌತಣ ಪಡೆದಿದ್ದವು. ಇದೇ ರೀತಿ ಕುವೆಂಪು ಅವರ ಗೀತೆಗಳು ಅಪಾರ ಜನಪ್ರಿಯತೆ.
ಇಂತಹ ಕ್ಷಣಗಳಲ್ಲಿಯೇ ಸುಗಮ ಸಂಗೀತ ಕ್ಷೆÃತ್ರಕ್ಕೆ ಮತ್ತೊಂದು ಮೈಲಿಗಲ್ಲಾದ ನಿತ್ಯ ನೆನಪಿನಲ್ಲಿ ಉಳಿಯುವಂಥ ಧ್ವನಿಸುರುಳಿ (ಈಗ ಧ್ವನಿ ಸಾಂದ್ರಿಕೆಯಾಗಿಯೂ ಆಗಿರುವ) “ಮಾವು ಬೇವು” ಬಂದಿತು. ವಿಶೇಷತೆಗಳನ್ನೆÃ ಮೈತಾಳಿಕೊಂಡು ಕನ್ನಡಿಗರ ಮುಂದಿತ್ತು. ಆ ವಿಶೇಷತೆಗಳೇನೆಂದರೆ- ಮೊಟ್ಟ ಮೊದಲ ಬಾರಿಗೆ ಸುಗಮ ಸಂಗೀತ ಕ್ಷೆÃತ್ರಕ್ಕೆ ಅತ್ಯಂತ ಪ್ರಖ್ಯಾತರಾದ ಭಾರತದ ಚಲನಚಿತ್ರ ಹಿನ್ನಲೆ ಗಾಯಕ “ಪದ್ಮಭೂಷಣ” ಡಾ||ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ್ದು. ಸಿ.ಅಶ್ವಥ್ ಅವರ ಸಂಗೀತ ಮತ್ತು ಚಿತ್ರ ಸಾಹಿತಿಯೂ, ಕವಿಯೂ ಆದ ಡಾ||ದೊಡ್ಡರಂಗೇಗೌಡ ಅವರ ಕಾವ್ಯರಚನೆಗಳು ಇದ್ದದ್ದು.
ಸಂಪೂರ್ಣವಾಗಿ ಕಾವ್ಯ ಸಂವಹನಕ್ಕೆ ಬದ್ಧವಾದ ಸಾಹಿತ್ಯದ ಸತ್ವವನ್ನು ರಾಗದ ಮೂಲಕ ಸಹೃದಯನಿಗೆ ಸುಲಲಿತವಾಗಿ, ನೇರವಾಗಿ ಮನಸ್ಸಿಗೆ ತಲುಪಿಸುವ ಕಾರ್ಯವನ್ನು ಗಾಯಕ ಎಸ್.ಪಿ.ಬಿ. ನಿಚ್ಚಳವಾಗಿಯೂ “ಮಾವು ಬೇವು” ಧ್ವನಿ ಸುರಳಿಯ ಹತ್ತು ಗೀತೆಗಳ ಮೂಲಕ ಹಾಡಿ ತೋರಿಸಿಕೊಟ್ಟಿದ್ದಾರೆ.
ಕವಿ ಡಾ||ದೊಡ್ಡರಂಗೇಗೌಡ ಅವರ ಮನದಾಳದ ಅನೇಕಾನೇಕ ಭಾವನೆಗಳ ಸಾಕಾರಕ್ಕೆ ಸ್ಪಷ್ಟವಾದ ಅರ್ಥಬದ್ಧವಾದ, ಪರಿಣಾಮಕಾರಿಯಾದ ಇಂಬನ್ನು ತಮ್ಮ ಗಾಯನದಿಂದ ಎಸ್.ಪಿ.ಬಿ. ನೀಡಿದ್ದಾರೆ. ಬಹಳ ಮನಮೋಹಕವಾದ ಸ್ವರ ಸಂಯೋಜನೆಗಳನ್ನು ಮಾಡಿ ತುಂಬಾ ಕೋಮಲವಾದ ವಾದ್ಯನ್ನು ಬಳಸಿ- ನುಡಿಸಿದ್ದಾರೆ. ಸಿ.ಅಶ್ವಥ್. (ಹಿನ್ನೆಲೆ ಸಂಗೀತ – ಎಲ್.ವೈದ್ಯನಾಥನ್) “ಮೂಡುತ ರವಿ ರಂಗು ತಂದೈತೆ’’ಯಲ್ಲಿನ ಪ್ರಕೃತಿಯ ಚೆಲುವನ್ನು, ‘ಯಾರಿಗುಂಟು ಯಾರಿಗಿಲ್ಲ’ ಕವಿತೆಯ ಬದುಕಿನ ಸತ್ಯವನ್ನು, ‘ಸುಗ್ಗಿ ವ್ಯಾಳೇಗೆ’ ಹಾಡಿನಲ್ಲಿನ ಗ್ರಾಮ್ಯತೆಯ ಸೊಬಗನ್ನು, ಸುಗ್ಗಿಯ ಸಂಭ್ರಮವನ್ನು, ‘ಈ ವಿರಹ’ ಕಡಲಾಗಿದೆ. ಕವಿತೆಯಲ್ಲಿನ ಗಾಢ ಪ್ರೆÃಮದ ವಿರಹವೇದನೆಯನ್ನು, ‘ಮಾತಾಡೇ ನೀರೇ’ ಪ್ರೆÃಮದ ನಿವೇದನೆಯನ್ನು, ‘ಗಾಳಿ ಗೊಡ್ಡಿದಾ ದೀಪದಂತೆ’ ಕವಿತೆಯ ತಾತ್ವಿಕತೆಯನ್ನು, ‘ಹೂ ತೋಟದ’ ಕವಿತೆಯಲ್ಲಿ ಪ್ರೆÃಮೋಲ್ಲಾಸದ ನಿಚ್ಚಳತೆಯನ್ನು, ‘ ಮುಂಜಾನೆ ಮಂಜೆಲ್ಲ’ ಕವಿತೆಯ ಮನುಷ್ಯನ ವ್ಯಕ್ತಿತ್ವ ಮತ್ತು ನೀತಿ ಔನ್ನತ್ಯವನ್ನು ಸೂಕ್ಷö್ಮತೆಗಳನ್ನು ಹಾಡುವುದರ ಮೂಲಕವೇ ಕೇಳುಗರಿಗೆ ತಲುಪಿಸುವ ಕಾರ್ಯವನ್ನು ಮಾಡಿದ್ದಾರೆ.
ಉಲ್ಲಾಸ, ಉತ್ಸಾಹ, ಭಾವಗಳೊಂದಿಗೆ, ವಿಷಾದ ವಿಷಣ್ಣ ಖೇದ ಭಾವಗಳನ್ನು ಆಯಾ ಕವಿತೆಗಳ ವಸ್ತು ವಿಚಾರಕ್ಕೆ ಅನುಗುಣವಾಗಿ ಅತ್ಯಂತ ಪರಿಣಾಮಕಾರಿಯಾಗಿ ಸ್ವರ ಸಂಯೋಜನೆಗೆ ತಕ್ಕಂತೆ ರಾಗವನ್ನು ಆಧರಿಸಿ ಹಾಡಿ ತಮ್ಮ ಪ್ರತಿಭಾ ಸಾಮರ್ಥ್ಯವನ್ನು ಎಸ್.ಪಿ.ಬಿ. ಅವರು ‘ಮಾವು – ಬೇವು’ ಸುಗಮ ಸಂಗೀತದ ಧ್ವನಿಸುರಳಿ, ಧ್ವನಿಸಾಂದ್ರಿಕೆಯಲ್ಲಿ ಸಾಬೀತು ಪಡಿಸಿದ್ದಾರೆ. ಕೇವಲ ಕರ್ನಾಟಕದಲ್ಲಷ್ಟೆà ಅಲ್ಲದೆ ಪ್ರಪಂಚದ ಆದ್ಯಂತ ಕನ್ನಡ ಸಂಘಗಳಲ್ಲಿ, ಅಮೇರಿಕಾದ ಹದಿನಾರು ರಾಜ್ಯಗಳಲ್ಲಿ ದುಬೈ, ಖತಾರ್, ಬೆಹರೇನ್, ಆಸ್ಟೆçÃಲಿಯಾದಲ್ಲಿಯೂ ‘ಮಾವು – ಬೇವು’ ಭಾವಗೀತೆಯ ಧ್ವನಿಸುರುಳಿ ಅತ್ಯಂತ ಜನಪ್ರಿಯವಾಗಿದೆ. ಡಾ||ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಸ್ವತಃ ಆ ಸ್ಥಳಗಳಿಗೆ ಹೋಗಿ ಸಂಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಆ ಸಂದರ್ಭದಲ್ಲಿ ‘ಗಾಳಿಗೊಡ್ಡಿದಾ’, ‘ಯಾರಿಗುಂಟು ಯಾರಿಗಿಲ್ಲ’ ಭಾವಗೀತೆಗಳನ್ನು ಹಾಡಿ ಕನ್ನಡÀದ ಕೀರ್ತಿಯನ್ನು ಮೆರೆಸಿದ್ದಾರೆ. ಕನ್ನಡ ಸಂಸ್ಕೃತಿಯ ವಕ್ತಾರರಾಗಿದ್ದಾರೆ.
ಮನೆ ಮಾತು ತೆಲುಗು ಆಗಿದ್ದರೂ ಕನ್ನಡದ ಬಗ್ಗೆ ವಿಶೇಷ ಪ್ರಿÃತಿ, ಅಭಿಮಾನ ಡಾ||ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗಿದೆ. ಕನ್ನಡದಲ್ಲಿ ಈಗಾಗಲೇ ನೂರಾರು ಭಾವಗೀತೆಗಳನ್ನು ಹಾಡಿರುವ ಎಸ್.ಪಿ.ಬಿ. ಭಾವಗೀತೆಗಳನ್ನು ಅತ್ಯಂತ ಸೃಜನಶೀಲ, ಸೌಜನ್ಯ, ಸುಸಂಸ್ಕೃತ ಪ್ರತಿಭಾವಂತ ಗಾಯಕಕರು. ನಿರಹಂಕಾರದ ಅಸಾಮಾನ್ಯ ಮಹಾಸಂಗೀತಜ್ಞಾನಿ.
ಪ್ರತಿಯೊಂದು ಹಾಡಿನ ಸಾಲನ್ನು ಅದರ ಅರ್ಥವನ್ನು ತಾವೇ ಆಯಾ ಕವಿ, ಗೀತರಚನೆಕಾರರಿಂದ ನೇರವಾಗಿಯೇ ಕೇಳಿ ತಿಳಿದು, ತಮ್ಮ ಹಾಡಿನ ಪುಸ್ತಕದಲ್ಲಿ ತಾವೇ ಬರೆದುಕೊಂಡು ಅತ್ಯಂತ ನಿಖರವಾಗಿ, ಸ್ಪಷ್ಟವಾಗಿ, ಭಾವಪೂರ್ಣವಾಗಿ, ವಿವೇಕದಿಂದ, ಔಚಿತ್ಯದಿಂದ, ತಾದಾತ್ಮö್ಯತೆಯಿಂದ, ಸ್ವರಜ್ಞಾನದಿಂದ, ಪರಿಪೂರ್ಣವಾಗಿ ಹಾಡುತ್ತಾರೆ ಡಾ||ಎಸ್.ಪಿ.ಬಾಲಸುಬ್ರಹ್ಮಣ್ಯಂ.
ಸಂಗೀತ ನಿರ್ದೇಶಕರೂ, ಗಾಯಕರೂ ಆದ ದಿ||ಜಿ.ವಿ. ಅತ್ರಿಯವರ ‘ವಿಶ್ವಮಾತೆ’ ಧ್ವನಿಸಾಂದ್ರಿಕೆಯಲ್ಲಿ ವರಕವಿ ಬೇಂದ್ರೆಯವರ ‘ವಿಶ್ವಮಾತೆಯ ಗರ್ಭ ಕಮಲ ಸಂಜಾತೆÀ’ ಕವಿತೆಯನ್ನು ಅತ್ಯಂತ ಭಾವಪೂರ್ಣವಾಗಿ, ಕೇಳಿದರೆ ಮೈಮರೆಯುವಷ್ಟು ರೀತಿಯಲ್ಲಿ ಎಸ್.ಪಿ.ಬಿ. ಅವರು ಹಾಡಿದ್ದಾರೆ. ಕವಿಯ ತೀವ್ರವಾದ ಭಾವಕ್ಕೆ ಪರಿಣಾಮಕಾರಿಯಾದ ಗಾನ ಮಾಧುರ್ಯವನ್ನು ನೀಡಿದ್ದಾರೆ. ಒಂದು ಕಾವ್ಯವನ್ನು ಬಹುಜನ ಸಂವಹನ ಸಾಧನವನ್ನಾಗಿ ಮಾಡಿದ್ದಾರೆ. ಭಾವಗೀತೆಯ ವಾಗರ್ಥದ ಸಂವಹನಕ್ಕೆ ಈ ಗಾಯಕರು ಕಾರಣರಾಗಿದ್ದಾರೆ.
ಕವಿ ಡಾ||ಎನ್.ಎಸ್.ಲಕ್ಷಿö್ಮÃನಾರಾಯಣಭಟ್ಟರ ಕವಿತೆಗಳಾದ – ‘ತಪ್ಪು ಯಾರದೋ ಯಾರಿಗೋ ಶಿಕ್ಷೆ’ಯಲ್ಲಿನ ಸತ್ಯ, ಧರ್ಮ ಪ್ರಜ್ಞೆಯನ್ನು ಮತ್ತು ಎಲ್ಲಿದ್ದರೂ ನಿನ್ನದೇ ಧ್ಯಾನ’ ಕವಿತೆಯಲ್ಲಿನ ನಿರ್ಮಲ ಪ್ರಿÃತಿ ಭಾವನೆಗಳನ್ನು ಗಾಯನದ ಮೂಲಕ ಎತ್ತಿ ಮೆರೆಸಿದ್ದಾರೆ ಎಸ್.ಪಿ.ಬಿ. ಅವರು ‘ತರಂಗಲೀಲೆ’ ಭಾವಗೀತೆಗಳ ಧ್ವನಿಸಾಂದ್ರಿಕೆಯಲ್ಲಿ ಎಸ್.ಬಾಲಿ ಅವರ ಸಂಗೀತಕ್ಕೆ ಮಧುರ ಸ್ವರವಾಗಿದ್ದಾರೆ.
‘ರಾಗ ರತಿ’ ಎಂಬ ಭಾವಗೀತೆಗಳ ಧ್ವನಿ ಸುರುಳಿಯಲ್ಲಿ ಡಾ||ಎಸ್.ಪಿ.ಬಿ. ಅವರು ವಿಜಯಭಾಸ್ಕರ್ ಸಂಗೀತ ನಿರ್ದೇಶನದಲ್ಲಿ ಕೆ.ಸಿ.ಶಿವಪ್ಪ ಅವರ ಭಾವ ಗೀತೆಗಳನ್ನು ಹಾಡಿದ್ದಾರೆ. ‘ಮುಗುದೆ ಮಲಗಿಹಳು’, ‘ಮೂಡಿ ಬಂದೆ ಅಂದು ನೀನು’ ‘ಬಾ ಬಾರೆ ಓ ಚೆಲುವೆ’ ‘ನೀಳಕೇಶ’ ‘ಮುನಿಯದಿರು’ ಎಂಬ ಕವಿತೆಗಳಲ್ಲಿನ ಪ್ರೆÃಮ ಭಾವನೆಗಳನ್ನು ಹಾಡುವ ಮೂಲಕ ಸಾಕಾರಗೊಳಿಸಿದ್ದಾರೆ. ರಾಜನ್ ನಾಗೇಂದ್ರ ಸಂಗೀತ ನೇಡಿದ ‘ಷೋಡಶಿ’ ಧ್ವನಿಸಾಂದ್ರಿಕೆಯಲ್ಲಿ ಸಂಗಮೇಶ್ ರಚಿಸಿದ ‘ವೃತ ಕಾಣದಿರು’ ‘ಸೊಬಗಿ ಸಿಂಗಾರಿ’ ಪ್ರೆÃಮದ ಕನಸು ಆಸೆ ಸೊಗಸುಗಳನ್ನು ಗಾಯನದ ಮೂಲವೇ ಸಾಕ್ಷಾತ್ಕಾರಿಸಿ ಶೋತೃಗಳಿಗೆ, ರಸಿಕರಿಗೆ ನೀಡಿದ್ದಾರೆ ಎಸ್.ಪಿ.ಬಿ.ಅವರು.
ಈ ವರೆವಿಗೆ ನಲ್ವತ್ತು ಸಾವಿರ ಗೀತೆಗಳನ್ನು ಹಾಡಿರುವ, ಒಂದೇ ದಿನದಲ್ಲಿ ಹದಿನೆಂಟು ಹಾಡುಗಳನ್ನು ಹಾಡಿ ದಾಖಲೆ ನಿರ್ಮಿಸಿರುವ ಪದ್ಮಶ್ರಿÃ ಡಾ||ಶ್ರಿÃಪತಿ ಪಂಡಿತಾರಾಧ್ಯ ಬಾಲಸುಬ್ರಹ್ಮಣ್ಯಂ ಅವರು ಬಹುಭಾಷಾ ಗಾಯಕರು. “ಕನ್ನಡವೇ ದೇವರು’’ ಭಾವಗೀತೆಗಳ ಧ್ವನಿಸಾಂದ್ರಿಕೆಯಲ್ಲಿ ಕವಿ ಡಾ||ಡಿ.ಭರತ್ ಬರೆದ ‘ಉಸಿರಲಿ ಉಸಿರುಸಿರಲಿ ಎಂದೂ ತುಂಬಿದೆ ನಮ್ಮ ಪ್ರಿÃತಿ ಕನ್ನಡ’ ಎಂಬ ಕವಿತೆಯನ್ನು ಬಹಳ ಸುಶ್ರಾವ್ಯವಾಗಿ ಹಾಡಿ ನಿರಂತರ ಕನ್ನಡಾಭಿಮಾನ ಮೆರೆಸಿದ್ದಾರೆ. ಹೀಗೆ ಸುಗಮ ಸಂಗೀತ ಕ್ಷೆÃತ್ರಕ್ಕೆ ಗಾಯನದ ಕಾಣಿಕೆ ನೀಡುತ್ತ ಭಾವಗೀತೆಯ ಬೆಳವಣಿಗೆ ಹಾಗೂ ಅಪಾರ ಜನಪ್ರಿಯತೆಗೆ ಕಾರಣರಾಗಿದ್ದಾರೆ.

Source – Sakhigeetha.com

ಸಮಯ ಪ್ರಜ್ಞೆ ….! ಪ್ರಭಾ

0

ಕೆಲವರಿಗೆ ತಾವು ಮಾಡಬೇಕಾದ ಕರ್ತವ್ಯದ ಬಗ್ಗೆ ಸಾಕಷ್ಟು ಅರಿವು ಇರುತ್ತದೆ ಅದಕ್ಕಾಗಿ ಅವರು ದಿನ ಪ್ರತಿ ಯೋಜನೆಯನ್ನು ಹಾಕಿಕೊಳ್ಳುತ್ತಾರೆ ಆದರೆ ಕೊನೆಗೆ ಅನಿವಾರ್ಯವಾಗಿ ಅವರು ಅನುಸರಿಸುವ ಅವಸರ ಗಡಿಬಿಡಿಯಿಂದಾಗಿ ತಾವು ನಿರ್ವಹಿಸುವ ಕರ್ತವ್ಯದಲ್ಲಿ ನಿರೀಕ್ಷಿತ ಯಶಸ್ಸನ್ನು ಸಾದಿಸುವುದಿಲ್ಲ ಅವರ ಈ ಅಪೂರ್ಣ ಯಶಸ್ಸಿಗೆ ಕಾರಣ ಅವಸರ.ಅವಸರಕ್ಕೆ ಕಾರಣ ಅವರಲ್ಲಿ ಸಮಯ ಪ್ರಜ್ಞೆ ಇಲ್ಲದಿರುವುದು ಆದ್ದರಿಂದ ನಾವು ಮಾಡಬೇಕಾದ ಕಾರ್ಯವೆಂದರೆ ನಾವು ನಾಳೆ ನಿರ್ವಹಿಸಬೇಕಾದ ಕೆಲಸಕ್ಕೆ ದಿನದಲ್ಲಿನ ಸಮಯವನ್ನು ಕರಾರುವಕ್ಕಾಗಿ ವಿಂಗಡಿಸಿ ಒಂದು ವೇಳಾಪಟ್ಟಿಯನ್ನು ಹಾಕಿಕೊಳ್ಳಬೇಕು ಆ ವೇಳಾಪಟ್ಟಿಯಂತೆ ಕಟ್ಟುನಿಟ್ಟಾಗಿ ನಡೆಯಬೇಕು ಅಂದಾಗ ಅಲ್ಲಿ ಅವಸರ ಮಾಡುವ ಪ್ರಶ್ನೆಯೇ ಬರುವುದಿಲ್ಲ. ನಮ್ಮ ಕಾರ್ಯವು ಸರಾಗವಾಗಿ ನಡೆಯುತ್ತದೆ. ಹಲವರು ಈ ರೀತಿ ವೇಳಾಪಟ್ಟಿಯನ್ನು ಹಾಕಿಕೊಳ್ಳುತ್ತಾರೆ ಆದರೆ ಅದರಂತೆ ನಡೆದುಕೊಳ್ಳುವುದಿಲ್ಲ. ಮುಂಜಾನೆ ೧೦-೩೦ ಘಂಟೆ ಆಫೀಸಿಗೆ ಹೊರಡಬೇಕಾಗುತ್ತದೆ ಆದರೆ ಅವರು ಹಾಸಿಗೆಯಿಂದ ಮೇಲೇಳುವುದು ೯-೩೦ ಕ್ಕೆ ಆಗ ಶುರುವಾಯಿತೆನ್ನಿ ಅವರ ಗಡಿಬಿಡಿ ಬೆಡ್‌ಕಾಫಿ ಕುಡಿಯುವುದು, ಹಲ್ಲುಜ್ಜುವುದು, ಮುಖ ತೊಳೆಯುವುದು, ಸ್ನಾನ ಮಾಡುವುದು ತಿಂಡಿ ತಿನ್ನುವುದು, ಬಟ್ಟೆ ಹಾಕಿಕೊಳ್ಳುವುದು ಎಲ್ಲವೂ ಗಡಿಬಿಡಿಯಾಗಿಯೇ! ಮಧ್ಯೆ ಮನೆ ಗಡಿಯಾರದ ಮುಳ್ಳುಗಳು ಮುಂದೋಡುತ್ತಿರುವ ಭಾಸವಾಗಿ ಉಧ್ವೆÃಗದೊಡನೆ ರಕ್ತದೊತ್ತಡ ಏರುತ್ತಿರುತ್ತದೆ. ರಕ್ತದೊತ್ತಡ ಹೆಚ್ಚುತ್ತಿದ್ದಂತೆ ಉದ್ವೆÃಗವು ಹೆಚ್ಚಾಗಿ ಎದುರು ಕಂಡವರ ಮೇಲೆ ಹರಿಹಾಯುತ್ತಿರುತ್ತಾರೆ. ಗಡಿಬಿಡಿಯ ಕಾರಣದಿಂದಾಗಿ ಆ ದಿನದ ಕಾರ್ಯವು ಸುರಳೀತವಾಗಿರುವುದಿಲ್ಲ. ಮನೆಯಲ್ಲಿ ಶಾಂತಿ ಭಂಗ ಮಾಡಿಕೊಳ್ಳುವುದು ತಪ್ಪುವುದಿಲ್ಲ, ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳು ಮತ್ತು ತಾಯಂದಿರು ಒಂದು ವೇಳಾಪಟ್ಟಿಯನ್ನು ರೆಡಿಮಾಡಿ ಅದರ ಪ್ರಕಾರ ಬೆಳಗ್ಗೆ ಬೇಗ ಎದ್ದು ತಮ್ಮ ಕರ್ತವ್ಯವನ್ನು ಮುಗಿಸಿದರೆ ಮಕ್ಕಳು ಶಾಲೆಗೆ ಸರಿಯಾದ ಸಮಯಕ್ಕೆ ತಲುಪಬಹುದು. ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಅವಸರವು ಕೆಲವೊಮ್ಮೆ ಗಂಭೀರ ಅನಾಹುತಕ್ಕಿÃಡು ಮಾಡುತ್ತದೆ. ಅವಸರದಿಂದ ಉದ್ವೆÃಗ, ಮಾನಸಿಕ ಗೊಂದಲ, ಅನ್ಯಮನಸ್ಕತೆ, ಚಿತ್ತಚಂಚಲತೆಯುಂಟಾಗಿ ನಾವು ವಿವೇಕವನ್ನೆÃ ಕಳೆದುಕೊಳ್ಳುತ್ತೆÃವೆ. ಆದ್ದರಿಂದ ಯಾವುದೇ ಕೆಲಸವನ್ನು ಶಾಂತ ಚಿತ್ತದಿಂದ ಯೋಚಿಸಿಮಾಡಬೇಕು. ಸುಧೀರ್ಘ ಅವಧಿಯ ಕೆಲಸವನ್ನು ಕ್ಷಣಾರ್ಧದಲ್ಲಿ ಮಾಡಭೇಕೆಂಬ ಹುಚ್ಚುಹಂಬಲವು ಬೇಡ. ಸಮಯಕ್ಕೆ ಸರಿಯಾಗಿ ನಮ್ಮ ಕೆಲಸವನ್ನು ನಿರ್ವಹಿಸಿ ಸಫಲತೆಯ ತೃಪ್ತಿಯನ್ನು ಅನುಭವಿಸುವುದೇ ಜಾಣತನ. ಆದ್ದರಿಂದ ಕೇವಲ ಕರ್ತವ್ಯ ಪ್ರಜ್ಞೆಯೊಂದಿದ್ದರೆ ಸಾಲದು, ಅದರ ಜೊತೆಗೆ ಸಮಯ ಪ್ರಜ್ಞೆಯು ಇರಬೇಕು.

Source – Sakhigeetha.com

* ಪ್ರಾಮಾಣಿಕ ಜೀವನಾನುಭವಗಳು * * ಡಾ||ದೊ.ರಂ.ಗೌಡ

0

ಕಾವ್ಯ ಕವಿಯ ಜೀವ ಧ್ವನಿ; ಮಾತು ಅವನ ನಾಲಗೆಯ ಖನಿ; ಗೀತೆ ಅವನ ಅಂತರಂಗದ ಭಾವ ವಾಹಿನಿ; ಅಭಿರುಚಿ ಅವನ ಸಂಸ್ಕಾರದ ಸರಿತೆ! ಓದು ಅವನ ಗ್ರಹಿಕೆ. ಬರಹ ಅವನ ಪ್ರತಿಭಾ ಶಿಖೆ.
ಈ ಹೊತ್ತು ಕವಿತೆ ಬರೆಯುವವರ ಸಂಖ್ಯೆ ಹೆಚ್ಚಿದೆ. ಮುದ್ರಣವಾಗುತ್ತಿರುವ ಕಾವ್ಯ ಸಂಕಲನಗಳ ಪ್ರಮಾಣವೂ ಅಸಂಖ್ಯೆ! ಗುಣ ಗ್ರಾಹಿಯಾಗಿ ಹೆಕ್ಕಿದಾಗ ಗಟ್ಟಿ ಕಡಿಮೆ, ಜೊಳ್ಳು ಅಗಣಿತ.
ಬಡೇನಹಳ್ಳಿ ಟಿ.ಗೋವಿಂದಯ್ಯ ಅವರು ವಿಶ್ರಾಂತ ಉಪನ್ಯಾಸಕರು. ಕ್ರಿಯಾಶೀಲರು; ಸಮಾಜಮುಖಿ ಕಾರ್ಯಗಳಲ್ಲಿ ಸಣ್ಣ ಪುಟ್ಟ÷ ಸೇವೆ ಮಾಡುವುದರಲ್ಲಿ ತಾವು ಧನ್ಯತೆಯನ್ನು ಕಂಡುಕೊಂಡವರು. ನಿವೃತ್ತರಿಗಾಗಿ ಸೂಕ್ತ ಭವನ ನಿರ್ಮಿಸಿದ ಪರೋಪಕಾರಿಗಳು.
ಸಂಘಟನೆಯಲ್ಲಿ ಪ್ರವೀಣರು! ಎಲ್ಲಕಿನ್ನ ಮಿಗಿಲಾಗಿ ಜನಾನುರಾಗಿಗಳು. ವೃದ್ಧರಿಗೆ ನೆಮ್ಮದಿ ಜೀವನ ನಡೆಸುವಲ್ಲಿ ನೆರವಾದವರು. ದೈವ ಭಕ್ತರು. ಶ್ರಿÃ ಸ್ವಾಮಿ ವಿವೇಕಾನಂದರ ಹೆಸರಲ್ಲಿ ಸಂಘ ಕಟ್ಟಿ ಗ್ರಾಮೀಣರ ಸರಳಾಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ನೈಜ ಶ್ರಮ ಜೀವಿಗಳು.
ತಾವು ಜೀವನದಲ್ಲಿ ಕಂಡುಂಡ ನೋವು ನಲಿವುಗಳನ್ನೆÃ ಅಭಿವ್ಯಕ್ತಿಸುತ್ತಾ ಕಾವ್ಯ ಮಾಲೆ ಕಟ್ಟುವಲ್ಲಿ ಆಸಕ್ತರು. ತಮ್ಮ ಸಹಜ ಅಂತರಾಳದ ಅನಿಸಿಕೆಗಳಿಗೆ ಪ್ರಾಮಾಣಿಕವಾಗಿ ರೂಪುಕೊಡುವಲ್ಲಿ ನಿರಂತರವಾಗಿ ಪ್ರಯತ್ನ ಪಡುತ್ತಿರುವ ಕಷ್ಟ ಜೀವಿಗಳು. ಪ್ರವಾಸ ಪ್ರಿಯರು. ತಾವು ಹೇಳಿದೆಲ್ಲಾ ಪಡೆದ ಅನುಭವಗಳನ್ನೆಲ್ಲಾ ಕವಿತೆ ಮಾಡುವ ಅಭೀಪ್ಸೆಯುಳ್ಳವರು, ಕನ್ಯಾಕುಮಾರಿಯನ್ನು ನೋಡಿ “ಕಡಲ ತಡಿಯಲ್ಲಿ” ಎಂಬ ಪದ್ಯ ಬರೆದಿದ್ದಾರೆ. ಕಲಾವಿದರ ಬಗೆಗೆ ಸದಾಭಿಪ್ರಾಯ ಹೊಂದಿದವರಾಗಿದ್ದಾರೆ. ಡಾ||ರಾಜ್ ಬಗ್ಗೆ, ಬಾಲಣ್ಣನ ಬಗೆ,್ಗ ನರಸಿಂಹರಾಜು ಬಗ್ಗೆ, ಮನ ತುಂಬಿ ಅಭಿವ್ಯಕ್ತಿಸಿದ್ದಾರೆ. ಒಳ್ಳೆಯ ಕಥನ ಕವನ ಬರೆದಿದ್ದಾರೆ. (ಅಳಿಲಿನ ಅಳಲು) ಗಿಡದ ಕುಡಿ ಚಿವುಟಿದಾಗ, ನಮ್ಮೂರ ರಸ್ತೆ – ಇವು ಪ್ರಾದೇಶಿಕ ವಿಷಯಗಳನ್ನು ಕುರಿತ ಕವಿತೆಗಳು.
ಪರಿಸರದ ಅವನತಿ, ಸ್ವಾತಂತ್ರö್ಯ ದಿನಾಚರಣೆ, ವೃದ್ಧಾಶ್ರಮಗಳು ಇವು ಸಾರ್ವಜನಿಕ ವಿಷಯಗಳು.
ಅಬ್ದುಲ್ ಕಲಾಂ, ಸಿದ್ಧಗಂಗಾಶ್ರಿÃ ಅವರುಗಳನ್ನು ಕುರಿತು ಗೌರವ ಸಮರ್ಪಣೆಯನ್ನು ಕವಿ ತಮ್ಮ ನುಡಿ ನಮನದಲ್ಲಿ ಸಲ್ಲಿಸಿರುವ ಹೃತ್ಪೂರ್ವಕ ಗೀತೆಗಳು
ಅನ್ಯಾಯದ ವಿರುದ್ಧ ಪ್ರತಿಭಟನೆಯ ರೀತಿ ಬರೆದ
“ರೈಟಿಗಾಗಿ ಹೋರಾಟ” ದ ಕವಿತೆ.
“ಸೂರ್ಯನೆದುರಲಿ” ಮಿನುಗುತಿಹ
ಒಂದು ಚಿಕ್ಕ ಹಣತೆ ನಾನು-
ಕಾಯಕವೇ ಕೈಲಾಸವೆಂದು ನಂಬಿ
ಕೈಲಾದ ಸೇವೆ ಮಾಡುತ್ತಾ ಬದುಕಿಹನು.
* * *
ಶಿಕ್ಷಣವು ಆಗಿಹುದು ವ್ಯಾಪಾರೀಕರಣ
ಹಣಗಳಿಸುವ ಖದೀಮರಿಗೆ ಬೇಕು
ಇಂತಹ ವಾತಾವರಣ
* * *
ಕಡಿದೂ ಕಡಿದೂ ಕಾಡು
ಹಾಳಾಯಿತು ನೋಡು-
ಪ್ರಕೃತಿಯಬೀಡು!
ಇಂಥ ಪ್ರತಿಕ್ರಿಯೆಗಳು ಈ ಕೃತಿಯಲ್ಲಿ ಹಲವಾರಿವೆ. ಅಲ್ಲೆಲ್ಲಾ ಕವಿ ಗೋವಿಂದಯ್ಯನವರ ಆರೋಗ್ಯಕರ ಮನಸ್ಸಿದೆ!
ನಿವೃತ್ತ ಜೀವನ ನಡೆಸುತ್ತಿರುವ ಕವಿ ಶ್ರಿÃ ಗೋವಿಂದಯ್ಯನವರು ವೃಥಾ ಕಾಲ ಕಳೆಯದೆ ಕಾವ್ಯದ ಕಡೆ ಅಭಿಮುಖವಾಗಿರುವುದು ಸಂತೋಷದ ವಿಷಯ,
ಒಳ್ಳೆಯ ಮನಸ್ಸಿನ, ಒಳ್ಳೆಯ ಪ್ರತಿ ಸ್ಪಂದನಗಳ ನೀಡುವ ಕವಿ ಗೋವಿಂದಯ್ಯ ಅವರು ಇನ್ನೂ ಮಹತ್ತಿನದನ್ನು ಕನ್ನಡಕ್ಕೆ ಕೊಡಬೇಕು. ಅವರ ಭಾವನೆಗಳು ನಮ್ಮ ನಾಡಿನಲ್ಲಿ ಬೆಳಕಾಗಬೇಕು.
ಕವಿ ಎಂದರೆ – ಸಮಾಜದ ಸಾಂಸ್ಕçೃತಿಕ ರೂವಾರಿ ಎಂದು ಸಾರಿ ಹೇಳಲು ನಮ್ಮ ನಲ್ಮೆಯ ಕವಿ ಗೋವಿಂದಯ್ಯನವರ ಜೀವನಾನುಗಳು ಮಾದರಿಯಾಗಿದೆ.

* ಡಾ||ದೊ.ರಂ.ಗೌಡ.

Source – Sakhigeetha.com

ಓದು-ಅರಿವಿನ ಸಂಸ್ಕಾರ ಓದುವುದು ಮನಸಾರೆ ಮಾಡುವ ವ್ರತವಾಗಬೇಕು….! – ಸಾತನೂರು ದೇವರಾಜ್.

0

ಓದು ಎನ್ನುವ ಪದ ಕಿವಿಯ ಮೇಲೆ ಬಿದ್ದ ತಕ್ಷಣವೆ ಅನೇಕ ಪ್ರಶ್ನೆಗಳು ಹಾಗು ಸಂಗತಿಗಳು ಮನಸ್ಸಿನಲ್ಲಿ ಹಾದು ಹೋಗುತ್ತವೆ. ಓದು ಎಂದರೇನು? ನಾವೇಕೆ ಓದ ಬೇಕು? ಓದಿನಿಂದ ಆಗುವ ಪ್ರಯೋಜನಗಳನ್ನು ಒಂದು ಪಕ್ಕ ಇಟ್ಟುಬಿಡೋಣ. ಓದಿಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೇ ಬರಿ ಪುಸ್ತಕಗಳ ಬಗ್ಗೆ ಸ್ವಲ್ಪ ಮಾಹಿತಿಯನ್ನು ಕಲೆ ಹಾಕುವ ಪ್ರಯತ್ನ ಮಾಡೋಣ. .
“ಓದು” ಎಂಬ ಪ್ರಕ್ರಿಯೆ ಶಾಲಾ/ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಸಂಗತಿ ಎಂದು ತಿಳಿದುಕೊಂಡಿರುವವರೇ ಹೆಚ್ಚು. ಓದು ವಿದ್ಯಾರ್ಥಿಗಳು ಮಾಡಲೇಬೇಕಾದ ಅನಿವಾರ್ಯ ಕರ್ಮ. ಅದರ ಬಗ್ಗೆ ನಾವೇಕೇ ಯೋಚಿಸಬೇಕು ಎಂದು ವಾದಿಸುವವರ ಸಂಖೆಯೇ ಹೆಚ್ಚು .
ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇನ್ನುಳಿದವರಿಗೆಲ್ಲಾ ಓದು ಬೇಡವೇ? ಎಂಬ ಇನ್ನೊಂದು ಪ್ರಶ್ನೆ ಇಣುಕಿ ನೋಡುತ್ತದೆ. ಹಾಗೇಯೇ ನಮ್ಮೆಲ್ಲರನ್ನು ಅಣಕಿಸುತ್ತದೆ. ಅಕ್ಷರ ಬಲ್ಲ ಎಲ್ಲರಿಗೂ ಓದು ಅನಿವಾರ್ಯ. ವಯಸ್ಸಿನ ಅಂತರವಿಲ್ಲದೆ ಎಲ್ಲಾ ವಯೋಮಾನದವರೆಗೂ “ಓದು” ಅತ್ಯಾವಶ್ಯಕ ಸಂಸ್ಕಾರ; ಎಲ್ಲರಿಗೂ ಓದು ಅನಿವಾರ್ಯ. ಅವರು ಉದ್ಯೊÃಗಸ್ಥರೇ ಆಗಲಿ ಇಲ್ಲವೆ ನಿರುದ್ಯೊÃಗÀಳೇ ಆಗಲಿ, ಗೃಹಿಣಿ ಆಗಲಿ ವಯೋವೃದ್ಧರೆ ಆಗಿರಲಿ ಎಲ್ಲರಿಗೂ ಓದು ಅನಿವಾರ್ಯ.
ನಿಮ್ಮ ವಾದವನ್ನು ನಾವು ಒಪ್ಪುತ್ತೆÃವೆ. ಓದುವುದರಿಂದ ನಮಗಾಗುವ ಲಾಭವೇನು? ಯಾವ ಬಗೆಯ ಕೃತಿಗಳನ್ನು ಮತ್ತು ಯಾವ ಯಾವ ಲೇಖಕರ ಕೃತಿಗಳನ್ನು ನಾವು ಓದಬೇಕು? ಎಂಬುದರ ಬಗ್ಗೆ ನೀವು ಮಾರ್ಗದರ್ಶನ ನೀಡುವಿರಾ? ಎಂಬ ನಿಮ್ಮ ಮನದಿಗಿಂತ ನನಗೆ ಅರ್ಥವಾಯಿತು.
ಓದು ಒಂದು ಬಗೆಯ ಸುಹವ್ಯಾಸ. ಹವ್ಯಾಸಗಳಲ್ಲಿ ಅತ್ಯಾಗ್ರÀವಾದುದ್ದು. ನೀವು ಓದುವಿನ ಹವ್ಯಾಸದಲ್ಲಿ ತೊಡಗಿದ್ದೆÃ ಆದರೆ ಅದರಿಂದ ಆಗುವ ಆನಂದ ಸಂತೋಷವನ್ನು ವರ್ಣಿಸುವುದಕ್ಕೆ ನೀವು ಒಂದು ಪುಸ್ತಕವನ್ನೆÃ ಬರೆಯಬೇಕಾಗುತ್ತದೆ. ಓದು ಒಂದು ಸುಹವ್ಯಾಸ ಎನ್ನುವುದರ ಜೊತೆಗೆ ಇದೊಂದು ಅರಿವಿನ ಸಂಸ್ಕಾರವೆಂದರೆ ತಪ್ಪಾಗಲಾರದು.
ಓದಿನಲ್ಲಿ ತೊಡಗುವುದಕ್ಕೆ ಮುಂಚಿತವಾಗಿ, ಓದಿನಿಂದಾಗುವ ಲಾಭ/ನಷ್ಟದ ಬಗ್ಗೆ ಹೆಚ್ಚಿಗೆ ಯೋಚಿಸದೆ, ಚಿಂತಿಸದೆ ಓದಿನಲ್ಲಿ ತೊಡಗಬೇಕು. ಅಂತು-ಇಂತೂ ಓದಿನಲ್ಲಿ ನಿಮಗ್ನರಾಗಬೇಕು. ಒಂದರೆಡು ವಾರಗಳಲ್ಲಿ ಇಲ್ಲವೆ ತಿಂಗಳಿನಲ್ಲಿ ನೀವು ಓದುವ ಹವ್ಯಾಸವನ್ನಾಗಿ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಇದಕ್ಕೆ ಯಾವುದೇ ಕಾಲದ ಮಿತಿಯಾಗಲೀ ಗಡಿಯಾಗಲೀ ಇಲ್ಲ. ಯಾವುದೇ ಬಗೆಯ ಲೆಕ್ಕಾಚಾರವನ್ನು ಬದಿಗಿಟ್ಟು ಓದಿನಲ್ಲಿ ತೊಡಗಬೇಕು.
ಓದು ಒಂದು ಮಾನಸಿಕ ಕ್ರಿಯೆ. ಅದು ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಒಂದೇ ರಾತ್ರಿಯಲ್ಲಿ ಇಲ್ಲವೆ ಒಂದೇ ದಿವಸದಲ್ಲಿ ಓದನ್ನು ನಾವು ದಕ್ಕಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಹಾಗಾದರೆ ಓದಿನಲ್ಲಿ ತೊಡಗುವುದಕ್ಕೆ ಓದಿನಲ್ಲಿ ಮೊದಲು ಮನಸ್ಸಿರಬೇಕು. ಯಾವದೇ ತರಹದ ಪೂರ್ವಾಗ್ರಹ ಇಲ್ಲದೆ ಓದಿನಲ್ಲಿ ತೊಡಗಬೇಕು.
ಪ್ರಾರಂಭsದಲ್ಲಿ ಓದು ಅಂತಹ ಸಂತೋಷವನ್ನು ನೀಡುವುದಿಲ್ಲ ಎಂಬುದು ನಿಜವಾದರೂ ಓದು ಓದುತ್ತಾ ಹೋದಹಾಗೆಲ್ಲಾ ಒಂದು ರೀತಿಯ ಅವ್ಯಕ್ತ ಸಂತೋಷವನ್ನು ಅನುಭವಿಸುತ್ತಿÃರಿ. ಅದು ನಿಮಗೆ ಗೊತ್ತಾಗದ ರೀತಿಯಲ್ಲಿ ನಿಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ನೀವು ಓದುವಿನ ತೆಕ್ಕೆಯಲ್ಲಿ ಬೀಳುತ್ತಿÃರಿ. ಒಮ್ಮೆ ನೀವು ಓದಿನ ತೆಕ್ಕೆಗೆ ಬಿದ್ದಿದ್ದೆÃ ಅದರೆ ಅದÀರಿಂದ ತಪ್ಪಿಕೊಳ್ಳುವುದಕ್ಕೆ ಆಗುವುದಿಲ್ಲ.
ಓದುವುದಕ್ಕೆ ಮನಸ್ಸು ಪ್ರಶಾಂತವಾಗಿರಬೇಕು. ವಾತಾವರಣ ಓದಿಗೆ ಪೂರಕವಾಗಿಬೇಕು. ಪುಸ್ತಕ ಲಭ್ಯತೆ ಮುಂತಾದ ಅಂಶಗಳು ಓದಿನ ಮೇಲೆ ಪ್ರಭಾವ ಬೀರುತ್ತವೆ. ಓದಿನ ಪ್ರಕ್ರಿಯೆಲ್ಲಿ ಪುಸ್ತಕಗಳು ಮಹತ್ತರ ಪಾತ್ರ ಬೀರುತ್ತವೆ. ಓದುವಿನಂಥ ಹವ್ಯಾಸದ ಬೆಳವಣಿಗೆಯಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ಬೀರುತ್ತವೆ. ಮಾರ್ಕೆಟ್‌ಗೆ ಬರುವ ಎಲ್ಲಾ ಪುಸ್ತಕಗಳು ಓದಿಗೆ ಪೂರಕವಾಗಿಲ್ಲ ಹಾಗೂ ಪ್ರೊÃತ್ಸಹದಾಯಕವಾಗಿರುವುದಿಲ್ಲ. ಹಾಗಾಗಿ ಪ್ರಾರಂಭದಲ್ಲಿ ಪುಸ್ತಕಗಳ ಆಯ್ಕೆ ಮಹತ್ವದ್ದೆÃ! ಪ್ರಾರಂಭದಲ್ಲಿ ನೀವು ಸ್ನೆಹಿರ‍್ನು, ಶಿಕ್ಷಕರನ್ನು ಇಲ್ಲವೆ ಪೋಷಕರ ಮಾರ್ಗದರ್ಶನ ಪಡೆದು ಮುಂದವರಿದರೆ ಒಳಿತು. ಇಲ್ಲದಿದ್ದರೆ ಓದುವಿನಿಂದ ನೀವು ವಿಮುಖರಾಗುವುದೇ ಹೆಚು.್ಚ
ಪುಸ್ತಕೋದ್ಯಮದಲ್ಲಿ ಪ್ರತಿವರ್ಷ ಸುಮಾರು ಏಳು ಸಾವಿರಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗುತ್ತವೆ. ಈ ಪುಸ್ತಕಗಳೆಲ್ಲವೂ ಓದುವುದಕ್ಕೆ ಯೋಗ್ಯವಾಗಿಲ್ಲ ಎಂದು ವಿಷಾದದಿಂದ ಹೇಳಲೇಬೇಕಾಗಿದೆ. ಓದುವುದಕ್ಕೆ ಯೋಗ್ಯವಾಗಿಲ್ಲ ಎಂದ ಮೇಲೆ ಏಕೆ ಬರೆಯಬೇಕು ಮತ್ತು ಇಂತಹ ಕೃತಿಗಳೇಕೆ ಪ್ರಕಟವಾಗಬೇಕು ಎಂಬ ನಿಮ್ಮ ಪ್ರಶ್ನೆ ನನಗೆ ಅರ್ಥವಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರದ ಅಡಿಯಲ್ಲಿ ಈ ದೇಶದ ಯಾವೊಬ್ಬ ಪ್ರಜೆ ಜನಾಂಗ, ಜಾತಿ, ಲಿಂಗ ಬೇಧವಿಲ್ಲದೆ ಯಾರೂ ಬೇಕಾದರೂ ತಮ್ಮ ಮನಸ್ಸಿ ಬಂದಂತೆ, ತೋಚಿದಂತೆ ಬರೆದು ಪುಸ್ತಗಳನ್ನು ಪ್ರಕಟಿಸಬಹುದು ಮತ್ತು ಇಂತಹ ಪುಸ್ತಕಗಳು ಪ್ರಕಟಗೊಳ್ಳತ್ತವೆ.ಸರ್ಕಾರಿ ಸಂಸ್ಥೆಗ ಳು ಮಾತ್ರ ಈ ವಿಷಯದಲ್ಲಿ ಅಪವಾದ.
ಪ್ರಕಟಣೆಗಾಗಿ ಬರುವ ಕೆಲವು ಸಂದರ್ಭಗಳಲ್ಲಿ ಆಹ್ವಾನಿಸಿದ ಹಸ್ತಪ್ರತಿಗಳನ್ನು ತಜ್ಙರಿಂದ ಪರಿಶೀಲಿಸಿ ಯೋಗ್ಯ ಕೃತಿಗಳನ್ನು ಪ್ರಕಟಿಸುವ ಸತ್ಸಂಪ್ರದಾಯ ಇರಿಸಕೊಂಡು ಅನಸರಿಸಿಕೊಂಡು ಬರುತ್ತಿರುವುದರಿಂದ ಕಳಪೆ ಗುಣಮಟ್ಟದ ಕೃತಿಗಳು ಪ್ರPಟಗೊಳುತ್ತಿಲ.್ಲ ಕೆಲವು ಸಂದರ್ಭಗಳಲ್ಲಿ ಇಲ್ಲಿಯೂ ಕಳಪೆಗುಣಮಟ್ಟದ ಪುಸ್ತಕಗಳು ಪ್ರಕಟವಾಗುತ್ತವೆ. ತಜ್ಙರುಗಳು ಜಾತಿ, ಪ್ರಾಂತೀಯ ಇಲ್ಲವೆ ಇನ್ನಿತರ ಕಾರಣಗಳಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಹಾಗಾಗಿ ಸರ್ಕಾರಿ ಸಂಸ್ಥೆಗಳಿಂದ ಪ್ರಕಾರ್ಶಿಸಲ್ಪಟ್ಟ ಎಲ್ಲಾ ್ಲ ಕೃತಿಗಳು ಚಿನ್ನಾಗಿರುತ್ತವೆ ಎಂದು ಹೇಳುವುದಕ್ಕೆ ಬರುವುದಿಲ್ಲ
ಖಾಸಗಿ ಸಂಸ್ಥೆ ಇಲ್ಲವೆ ಸರ್ಕಾರಿ ಸಂಸ್ಥೆಗಳಿಂದ ಪ್ರಶಸ್ತಿ ಪಡೆದ ಪುಸ್ತಕಗಳು ಓದುವುದಕ್ಕೆ ಸೂಕ್ತವೇ? ಎಂಬ ನಿಮ್ಮ ಪ್ರಶ್ನೆ ನನಗೆ ಅರ್ಥವಾಗುತ್ತದೆ. ಪ್ರಶಸ್ತಿ ಪಡೆದ ಕೃತಿಗಳ ಬಗ್ಗೆ ನಾನೇನು ವಿಮರ್ಶೆ ಮಾಡವುದಕ್ಕೆ ಹೋಗುವುದಿಲ್ಲ. ಅದು ನನ್ನ ಕೆಲಸವೂ ಅಲ್ಲ. ಪ್ರಾರಂಭದಲ್ಲಿ ಓದಿನಲ್ಲಿ ತೊಡಗಿರುವ ಓದುಗರಿಗೆ ಇಂತಹ ಕೃತಿಗಳು ನೆರವಾಗುವುದಿಲ್ಲ. ಏಕೆಂದರೆ ಇಂತಹ ಕೃತಿಗಳು ಪ್ರೌಢವಾಗಿರುವುರಿಂದ ಓದಿಗೆ ತೊಡಕಾಗುತ್ತದೆ. ಹಾಗಾದರೆ ಪ್ರಾರಂಭದಲ್ಲಿ ಎಂತಹ ಕೃತಿಗಳನ್ನು ಓದಬೇಕು ಎಂದು ಸಲಹೆ ನೀಡಿ ಎನ್ನುವ ನಿಮ್ಮ ತವಕವನ್ನು ನೋಡಿ ನನಗೆ ಸಂತೋಷವಾಗುತ್ತದೆ.
ಈಗಾಗಲೇ ಪ್ರಸಿದ್ಧಿ ಪಡೆದಿರುವ ಲೇಖಕರ ಕೃತಿಗಳನ್ನು ಓದಿನಲ್ಲಿ ತೊಡಗಿದರೂ ಕೆಲವೊಮ್ಮೆ ಬ್ರಹ್ಮನಿರಸನ ಒಳಗಾಗುತ್ತಿÃರಿ. ಹೀಗಾಗಿ ಓದಿಗೆ ಪೂರಕವಾಗಿರುವ ಪ್ರೆÃರಣೆ ನೀಡಬಲ್ಲಂತ ಕೃತಿಗಳು ಬಹಳ ವಿರಳವಾಗಿ ಪ್ರಕಟವಾಗುತ್ತವೆ. ಏಳು ಸಾವಿರ ಕೃತಿಗಳಲ್ಲಿ ಕೆಲವೆ ಕೆಲವು ಕೃತಿಗಳು ಓದುಗುರನ್ನು ಸೂಜಿಗಲ್ಲಿನಂತೆ ಆರ್ಕಶಿಸುತ್ತವೆ.
ಪ್ರಾರಂಭದಲ್ಲಿ ನನಗೆ ಓದಿನ ಹುಚ್ಚಿಗೆ ಹಚ್ಚಿದ ಕೃತಿಗಳು ಎಂದರೆ ಡಾ ಹಾ ಮ ನಾಯ್ಕ, ದೊರೆಸ್ವಾಮಿ ಅಂiÉÄÊಂಗಾರ್, ಪ್ರೊ.ಎ.ಎನ್ ಮೂರ್ತಿರಾಯರ್ ಅವರ ಕೃತಿಗಳು ಎಂದರೆ ತಪಾಗಲಾರದು. ಪ್ರಾರಂಭದಲ್ಲಿ ಒಳ್ಳೆಯ ಕೃತಿಗಳ ಸಂರ್ಪಕಕ್ಕೆ ಬಾರದೇ ಕೈಗೆ ಸಿಕ್ಕ-ಸಿಕ್ಕ ಕೃತಿಗಳನ್ನು ಓದಿನಲ್ಲಿ ನೀವು ತೊಡಗಿದ್ದೆ ಆದರೆ ನೀವು ಓದಿನ ಹವ್ಯಾಸಕ್ಕೆ ತೊಡಗಲಾರಿರಿ
ಓದಿನ ಹವ್ಯಾಸಕ್ಕೆ ಪೂರಕವಾಗಿರುವ ಪುಸ್ತಕಗಳು ವಿರಳವೆಂದು ನಾನು ಈಗಾಗಲೇ ತಿಳಿಸಿರುವುದು ಸರಿಯಷ್ಟೆ. ಓದಿನ ಹವ್ಯಾಸಕ್ಕೆ ಪೂರಕವಾಗಿರುವ ಕೃತಿಗಳ ಗುಣಲಕ್ಷಣಗಳೇನು? ಎಂಬ ನಿಮ್ಮ ಪ್ರಶ್ನೆಗೆ ಉತ್ತರ. ಪುಸ್ತಕದ ಭಾಷೆ ಸರಳವಾಗಿದ್ದು ಓದಿಸಿಕೊಂಡು ಹೋಗುವಂತಿರಬೇಕು ,ಒಮ್ಮೆ ಓದುವುದಕ್ಕೆ ಕೃತಿಯನ್ನು ಕೈಗೆ ಎತ್ತಿಕೊಂಡರೆ ಅದನ್ನು ಯಾವದೇ ಕಾರಣಕ್ಕೂ ಕೆಳಗಿಡಬಾರದು. ಸೂಜಿಗಲ್ಲಿನಂತೆ ಆಕರ್ಷಿಸುವಂತಿರಬೇಕು. ನಾನು ಸುಮಾರು ಇಂತಹ ಕೃತಿಗಳನ್ನು ಅಧ್ಯಯನಮಾಡಿದ್ದೆÃನೆ. ಈ ಕೃತಿಗಳಿಂದ ನನಗಾದ ಅನುಭವಗಳ ಮೂಲಕ ಈ ಪ್ರಬಂಧಕ್ಕೆ ಅಂತ್ಯ ಹಾಡಬಯುಸುತ್ತೆÃನೆ.
ಕೆಲವು ಪಸ್ತಕಗಳು ಅಂದರೆ ಯಾವ ವಿಷಯ ಮತ್ತು ಲೇಖಕ ಎಂಬುದು ಇಲ್ಲಿ ಪ್ರಸ್ತಾಪಿಸಬೇಕಾದ ಅಗತ್ಯವಿಲ್ಲ. ಒಮ್ಮೆ ಪುಸ್ತಕವನ್ನು ಕೈಗೆತ್ತಿಕೊಂಡರೆ ಅದೇ ನಮ್ಮನ್ನು ಕೊನೆಯುವವರೆಗೂ ಕೈಹಿಡಿದು ಓದಿನಲ್ಲಿ ಮುಳಗಿಸಬೇಕು. ಇಂತಹ ಹಲವಾರು ಪುಸ್ತಕಗಳನ್ನು ಓದಿ ಸಂಭ್ರಮಿಸಿದ್ದೆÃನೆ. ಮತ್ತೆ ಕೆಲವು ಆಕರ್ಷಕ ಶೀರ್ಷಿಕೆ ಈಗಾಲೆ ಹೆಸರು ಮಾಡಿದ ಕೆಲವು ಪುಸ್ತಕಗಳು ನನ್ನನು ಸಂಪೂರ್ಣವಾಗಿ ಓದಿಗೆ ತೊಡಗಿಸಿಕೊಂಡಿಲ್ಲ.
ನಾವು ಕೃತಿಯನ್ನು ಓದಬೇಕಾ? ಅಥವಾ ಕೃತಿ ನಮ್ಮಿಂದ ಓದಿಸಿಕೊಳ್ಳತ್ತದೆಯಾ? ಎಂಬ ಪ್ರಶ್ನೆಗೆ ಉತ್ತರ ಕೃತಿ ನಮ್ಮಿಂದ ಓದಿಸಿಕೊಳ್ಳತ್ತದೆ ಎಂಬದು ನನ್ನ ಉತ್ತರ. ಎಷ್ಟೊÃ ಕೃತಿಗಳು ಓದಲಿಕ್ಕೆಂದು ತೊಡಗಿಸಿಕೊಂಡಾಗಲೆಲ್ಲಾ ಕೆಲವು ಮೊದಲ ಅಧ್ಯಾಯದಲ್ಲಿ ಸ್ಥಗಿತವಾದರೆ ಇನ್ನೂ ಕೆಲವು ಅರ್ಧಕ್ಕೆ ನಿಂತ ಹೋಗಿದ್ದರೆ ಮತ್ತೆ ಕೆಲವು ಪುಸ್ತಕಗಳು ಸ್ಪರ್ಶಿಸುವಿಕೆಯಿಂದಲೆ ಸಂತೋಷವನ್ನು ಪಡೆದುಕೊಳ್ಳಬೇಕಾಗುತ್ತದೆ. ಓದುಗುರಿಂದ ಓದಿಸಿಕೊಳುವಂತ ಕೃತಿಗಳು ಹೆಚ್ಚಿನ ಸಂಖೆಯಲ್ಲಿ ಪ್ರಕಟವಾಗಲಿ ಎನ್ನವುದು ನನ್ನ ಹಾರೈಕೆ.ಓದುಗುರ ಹೃದಯವನ್ನು ಗೆಲ್ಲವ ಅವರ ಹೃದಯಕ್ಕೆ ಲಗ್ಗೆ ಇಡುವಂತಹ ಕೃತಿಗಳನ್ನು ಹೊರತರÀಬೇಕೆನ್ನವುದು ನನ್ನ ಹೆಬ್ಬಯಕೆ. ಈ ನನ್ನ
ಹೆಬ್ಬಯಕೆಯನ್ನು ನೆರವೇರೆಸಲೆಂದು
ದಯಾಮಯನಾದ ಭಗವಂತನಲ್ಲಿ ಪ್ರಾರ್ಥಿಸುವುದಷ್ಟೆÃ ನನಗುಳಿದಿರುವ ಕಾರ್ಯ.

Source – Sakhigeetha.com