ಜಿಯೋ ಕೊಟ್ಟ ಅಂಬಾನಿ ಮಕ್ಕಳ ಕೈಗೆ ಇನ್ಮುಂದೆ ಆಟಿಕೆ ಕೊಡ್ತಾರಂತೆ…!

0
633

ಮುಂಬೈ: ರಿಲಯನ್ಸ್ ಇಂಡಸ್ಟ್ರಿಸ್ ಅಂಗ ಸಂಸ್ಥೆಯಾದ ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್, ಹಾಂಗ್ ಕಾಂಗ್ ನಲ್ಲಿರುವ ಸಿ ಬ್ಯಾನರ್ ಇಂಟರ್ ನ್ಯಾಶನಲ್ ಹೋಲ್ಡಿಂಗ್ಸ್ ಒಡೆತನದ ಹ್ಯಾಮ್ಲೀಸ್ ಬ್ರ್ಯಾಂಡ್‌ನ ಹ್ಯಾಮ್ಲೀಸ್ ಗ್ಲೋಬಲ್ ಹೋಲ್ಡಿಂಗ್ಸ್ ಲಿಮಿಟೆಡ್‌ನ 100% ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ. ಈ ಒಪ್ಪಂದಕ್ಕೆ ರಿಲಯನ್ಸ್ ಬ್ರಾಂಡ್ ಮತ್ತು ಸಿ ಬ್ಯಾನರ್ ಇಂಟರ್ ನ್ಯಾಶನಲ್ ಸಹಿ ಹಾಕಿದೆ.

ಹ್ಯಾಮ್ಲೀಸ್ 1881 ರಲ್ಲಿ ಲಂಡನ್ ಪ್ರಮುಖ ರೆಜೆಂಟ್ ಸ್ಟ್ರೀಟ್‌ನಲ್ಲಿ ಮೊದಲ ಶಾಪ್ ಅನ್ನು ತೆರೆಯಿತು. ಈ ಅಂಗಡಿಯು 54,000 ಚದರ ಅಡಿ, ಏಳು ಮಹಡಿಗಳನ್ನು ಹೊಂದಿದ್ದು, 50,000 ಕ್ಕಿಂತಲೂ ಹೆಚ್ಚಿನ ಆಟಿಕೆಗಳು ಇಲ್ಲಿ ಮಾರಾಟಕ್ಕಿದೆ. ಇದು ಲಂಡನ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಪ್ರತಿವರ್ಷ 5 ದಶಲಕ್ಷ ಪ್ರವಾಸಿಗರು ಈ ಅಂಗಡಿಗೆ ಬರುತ್ತಾರೆ. ಇಲ್ಲಿ ಪ್ರಪಂಚದಾದ್ಯಂತವಿರುವ ಮಕ್ಕಳು ಮತ್ತು ಹದಿಹರೆಯದವರಿಗಾಗಿ ವರ್ಷಪೂರ್ತಿ ಈವೆಂಟ್ ಗಳು, ಮೆರವಣಿಗೆಗಳು, ಪ್ರದರ್ಶನಗಳು ಇರುತ್ತದೆ.

1760 ರಲ್ಲಿ ಸ್ಥಾಪಿತವಾದ ಹ್ಯಾಮ್ಲೀಸ್ ಪ್ರಪಂಚದಲ್ಲೇ ಅತಿ ಹಳೆಯ ಮತ್ತು ಅತಿದೊಡ್ಡ ಆಟಿಕೆ ಅಂಗಡಿ ಆಗಿದ್ದು, ಸುಮಾರು 250 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಕಂಪನಿ ಆಟಿಕೆಗಳಿಗೆ ಜೀವ ತರುವ ಮೂಲಕ ಪ್ರಪಂಚದಾದ್ಯಂತ ಮಕ್ಕಳ ನಗುವಿಗೆ ಕಾರಣವಾಗಿದೆ.

ಪ್ರಪಂಚದೆಲ್ಲೆಡೆ ಹ್ಯಾಮ್ಲೀಸ್ 18 ದೇಶಗಳಲ್ಲಿ 167 ಮಳಿಗೆಗಳನ್ನು ಹೊಂದಿದೆ. ಭಾರತದಲ್ಲಿ, ರಿಲಯನ್ಸ್ ಹ್ಯಾಮ್ಲೀಸ್ ಗೆ ಮಾಸ್ಟರ್ ಫ್ರಾಂಚೈಸ್ ಹೊಂದಿದೆ. ಭಾರತದ  29 ನಗರಗಳಲ್ಲಿ 88 ಮಳಿಗೆಗಳನ್ನು ಹೊಂದಿರುವ ಸಂಸ್ದೆಯನ್ನು ಇನ್ನು ಮುಂದೆ ರಿಲಯನ್ಸ್ ಬ್ರಾಂಡ್ಸ್ ಮುನ್ನಡೆಸಲಿದೆ.

Source – Sakhigeetha.com

LEAVE A REPLY

Please enter your comment!
Please enter your name here