ಬೇಸಿಗೆಯ ಯೌವ್ವನಕ್ಕೆ ಎಳನೀರು

0
785
- ಸಿ.ಎನ್ ಅಂಬಿಕಾ ನಂಜುಂಡಪ್ಪ
– ಸಿ.ಎನ್ ಅಂಬಿಕಾ ನಂಜುಂಡಪ್ಪ

ಬೇಸಿಗೆ ಕಾಲದಲ್ಲಿ ದಾಹ ಎಲ್ಲರಿಗೂ ಸರ್ವೇಸಾಮಾನ್ಯ. ದಾಹ ತಣಿಸುವ ಸಲುವಾಗಿ ನಾವು ಹಲವಾರು ತಂಪು ಪಾನೀಯಗಳ ಮೊರೆ ಹೋಗುತ್ತೆÃವೆ. ಬೇಸಿಗೆ ಕಾಲ ಬರುತ್ತಿದ್ದಂತೆಯೇ ನಾಯಿಕೊಡೆಗಳಂತೆ ತಂಪು ಪಾನೀಯಗಳ ಅಂಗಡಿಗಳು ಎಲ್ಲೆಂದರಲ್ಲಿ ಹುಟ್ಟಿಕೊಳ್ಳುತ್ತವೆ. ಸದ್ಯದ ಪರಿಸ್ಥಿತಿಯ ದಾಹ ನಿವಾರಣೆಗಾಗಿ ಕೈಗೆ ಸಿಕ್ಕಿದ್ದೆಲ್ಲವನ್ನು ಕುಡಿದು ಬಿಟ್ಟರೆ ತತಕ್ಷಣಕ್ಕೆ ದಾಹ ಕಡಿಮೆಯಾಗಬಹುದೇ ವಿನಾ ಅದರ ಮುಂದಿನ ಪರಿಣಾಮ ಮಾತ್ರ ಅತ್ಯಂತ ಭೀಕರ.
ಬೇಸಿಗೆ ಕಾಲದ ದಾಹವನ್ನು ನೀಗಿಸುವಲ್ಲಿ ಉತ್ತಮ ನೈಸರ್ಗಿಕ ಪಾನೀಯಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಎಳನೀರು. ಆ ಬಾಲವೃದ್ದರಾಗಿಯೂ ಎಳನೀರನ್ನು ಇಷ್ಟಪಡದ ವ್ಯಕ್ತಿ ಈ ಪ್ರಪಂಚದಲ್ಲಿಯೇ ಇಲ್ಲ. ಪ್ರತಿಯೊಬ್ಬ ಮನುಷ್ಯನ ದೇಹದ ರಾಸಾಯನಿಕತೆಗೆ ಅತ್ಯುತ್ತಮ ಪಾನೀಯ ಎಳನೀರು. ಅಲೋಪತಿ ವೈದ್ಯರುಗಳು ಕೂಡ ತಮ್ಮ ರೋಗಿಗೆ ಎಳನೀರು ಸೇವಿಸುವಂತೆ ಸಲಹೆ ಕೊಡುತ್ತಾರೆಂಬುದು ವೈಜ್ಞಾನಿಕ ಸತ್ಯ.
ಬಹಳಷ್ಟು ಮಂದಿ ತಮ್ಮ ಆರೋಗ್ಯ ಹದಗೆಟ್ಟಾಗ ಮಾತ್ರ ಎಳನೀರು ಸೇವನೆ ಮಾಡುತ್ತಾರೆ. ಉಳಿದ ದಿನಗಳಲ್ಲಿ ಅದರ ಬಗ್ಗೆ ಗಮನ ನೀಡುವುದಿಲ್ಲ. ಅಷ್ಟೆÃ ಅಲ್ಲದೇ ಎಷ್ಟೊÃ ಜನರಿಗೆ, ಆರೋಗ್ಯ ವೃದ್ದಿಸುವಲ್ಲಿ ಎಳನೀರು ಎಷ್ಟು ಉಪಯುಕ್ತ ಎಂಬುದರ ಅರಿವು ಸಹ ಇರುವುದಿಲ್ಲ. ಎಳನೀರಿನ ಆರೋಗ್ಯಕಾರಿ ಉತ್ಕೃಷ್ಟ ಗುಣಗಳ ಮಹತ್ವವನ್ನು ತಿಳಿದುಕೊಂಡರೆ ಇತರೆ ಆಧುನಿಕ ಪಾನೀಯಗಳನ್ನು ಬದಿಗೊತ್ತಿ ಎಳನೀರು ಸೇವನೆಗೆ ಮುಂದಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಹಾಗೆ ನೋಡಿದರೆ ಎಳನೀರು ಕೇವಲ ಬಾಯಾರಿಕೆಯನ್ನು ನೀಗಿಸುವುದಿಲ್ಲ. ಎಳನೀರಿನಲ್ಲಿ ಗ್ಲೊÃಕೋಸ್ ಒಳಗೊಂಡಂತೆ ಹಲವು ಸತ್ವಗಳು ತುಂಬಿವೆ. ಊಟ ಮಾಡಿದ ನಂತರ ಎಳನೀರಿನ ಕ್ರಮಬದ್ಧ ಸೇವನೆಯಿಂದ ಮನುಷ್ಯನಿಗೆ ಬರುವ ಸಾಮಾನ್ಯ ರೋಗಗಳಾದ ಕಫ, ಉಷ್ಣ, ಪಿತ್ತ ಇವುಗಳನ್ನು ತಡೆಯಬಹುದು. ಮೂತ್ರ ಹೆಚ್ಚಿಸುವಲ್ಲಿ ಅತ್ಯಂತ ಸಹಾಯಕಾರಿಯಾಗಿರುವ ಎಳನೀರು ಸರಳವಾಗಿ ಮಲ ವಿಸರ್ಜನೆಯಾಗುವಂತೆ ಮಾಡುತ್ತದೆ. ಮನುಷ್ಯನ ಮಾನಸಿಕ ಹಾಗೂ ದೈಹಿಕ ತಿಳುವು ಉಂಟಾಗುವಲ್ಲಿ ಇದು ಅತ್ಯಂತ ಉಪಯುಕ್ತ.
ಆಗ ತಾನೆ ತೆಗೆದ ತಾಜಾ ಗಂಜಿ ಇರುವ ಎಳನೀರು ಮನುಷ್ಯನ ದೇಹಕ್ಕೆ ನಾನಾ ಬಗೆಯಲ್ಲಿ ಒಳಿತು ಮಾಡುತ್ತದೆ. ತುಂಬ ದಿನ ಇಟ್ಟ ಎಳನೀರು ಶೀತವನ್ನುಂಟು ಮಾಡುತ್ತದೆ. ಖಾಲಿ ಹೊಟ್ಟೆ ಇದ್ದಾಗ ಎಳನೀರು ಕುಡಿಯುವುದು ಸರಿಯಲ್ಲ. ಹೀಗೆ ಮಾಡಿದರೆ ಹಸಿವಿನ ಶಕ್ತಿಯನ್ನು ಕುಗ್ಗಿಸುತ್ತದೆ.
ಗರ್ಭಿಣಿ ಮಹಿಳೆಯರ ಪಾಲಿಗೆ ಸಾಕಷ್ಟು ಉಪಯುಕ್ತವಾಗಿರುವ ಎಳನೀರಿನ ನಿಯಮಿತ ಸೇವನೆಯು ಸುಂದರ ಹಾಗೂ ಸ್ವಾಸ್ಥö್ಯ ಮಗುವಿನ ಜನನಕ್ಕೆ ಕಾರಣವಾಗಲಿದೆ. ಅಲ್ಲದೇ ಗರ್ಭಿಣಿಯರಿಗೆ ಒಳ್ಳೆಯ ಹಸಿವು ಹಾಗೂ ಶಾರೀರಿಕ ತೇಜಸ್ಸನ್ನು ಮೂಡಿಸುತ್ತದೆ.
ದೇಹಕ್ಕೆ ಅಧಿಕ ಶಕ್ತಿ ನೀಡುವ ಗುಣ ಹೊಂದಿರುವ ಎಳನೀರನ್ನು ವ್ಯಾಯಾಮ ಮಾಡಿದ ನಂತರ ಸೇವಿಸುವುದು ಸೂಕ್ತ. ಧಾರ್ಮಿಕ ಮಹತ್ವದ ಎಳನೀರಿನಲ್ಲಿ ಪೊಟ್ಯಾಶಿಯಂ, ಫೈಬರ್, ಕ್ಯಾಲ್ಸಿಯಂ, ಮೆಗ್ನಿÃಶಿಯಂ ಗುಣಗಳಿವೆ. ಎಳನೀರಿನಲ್ಲಿ ಆಮೆನೋ ಆ್ಯಸಿಡ್ ಇದ್ದು, ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ ಹಾಗೂ ಕೆಟ್ಟ ಕೊಲೆಸ್ಟಾçಲ್ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟಾçಲ್‌ಅನ್ನು ಹೆಚ್ಚಿಸುತ್ತದೆ. ಈ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರಮಾಡುವುದಲ್ಲದೇ, ತೂಕವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ.

ಬೇಸಿಗೆಯ ಅವಧಿಯಲ್ಲಿ ನೀರಿನಂಶ ಕಡಿಮೆಯಾಗಿ ಸುಸ್ತು ಅನಿಸಿದಾಗ ಎಳನೀರು ಸೇವನೆ ಅತ್ಯಂತ ಹೆಚ್ಚು ಖುಷಿ ಕೊಡುತ್ತದೆಯಲ್ಲದೇ, ದಿನವಿಡೀ ದೇಹವು ಚಟುವಟಿಕೆಯಿಂದ ಹಾಗೂ ಲವಲವಿಕೆಯಿಂದ ಕೂಡಿರುತ್ತದೆ ಹಾಗೂ ಮುಖದ ತ್ವಜೆಯು ಸಹ ತಾರುಣ್ಯಪೂರ್ಣವಾಗಿರುವಂತೆ ಮಾಡುತ್ತದೆ. ಮುಖ ಸುಕ್ಕುಗಟ್ಟುವುದು, ವಯಸ್ಸಾದರೂ ಯೌವನದ ಕಳೆ ಬೇಗನೆ ಮಾಸದಿರಲು ಎಳನೀರು ಸೇವನೆ ಅತ್ಯಂತ ಅವಶ್ಯಕ. ಚರ್ಮ ಹೊಳಪಾಗಿಸಿ ಎಳವೆಯನ್ನು ಎಳೆತರುವುದರಿಂದಾಗಿಯೇ ಇದಕ್ಕೆ ಎಳನೀರು ಎಂದು ಕರೆಯಲಾಗುತ್ತದೆ.
ನೂರು ರೋಗಗಗೆ ಒಂದೇ ಔಷಧಿ ಎಳನೀರು ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಎಳನೀರಿನಲ್ಲಿ ಅಧಿಕ ವಿಟಮಿನ್ಸ್ಗಳು ಹಾಗೂ ಖನಿಜಗಳು ಇರುವುದರಿಂದ ಇದರ ಸೇವನೆಯಿಂದ ದೇಹ ಸದಾಕಾಲ ಆರೋಗ್ಯದಿಂದಿರುವುದಲ್ಲದೇ, ದೇಹದಾರ್ಢ್ಯಕ್ಕೂ ಅತ್ಯಂತ ಉಪಯೋಗಕರ. ಪ್ರತಿದಿನ ಎಳನೀರು ಕುಡಿದರೆ ದೇಹವು ಏರ್ ಕಂಡೀಶನರ್ ಆಗುವುದಲ್ಲದೇ, ಕಣ್ಣುಗಳನ್ನು ಸ್ಪಷ್ಟಗೊಳಿಸಿ ಕಣ್ಣಿನ ದೃಷ್ಟಿಗೂ ಬಲಗೊಳಿಸುವ ಶಕ್ತಿಯನ್ನು ಒದಗಿಸುತ್ತದೆ. ಇತ್ತಿÃಚಿಗೆ ವೆಸ್ಟ್ ಇಂಡಿಯಾ ಜರ್ನಲ್ ನಡೆಸಿರುವ ಅಧ್ಯಯನದ ಪ್ರಕಾರ ಎಳನೀರಿನಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಎಂದು ತಿಳಿಸಿದೆ.
ಎಳನೀರಿನಲ್ಲಿ ಕೆಂದಾಳಿ, ಗೆಂದಾಳಿ, ತಿಳಿಹಸಿರು, ಕಡುಹಸಿರು, ಕೆಂದು, ತಿಲಿಗಪ್ಪು, ಎಂಬ ವಿವಿಧ ಬಗೆಗಳಿವೆ. ಇವುಗಳಲ್ಲಿ ಕೆಲವು ವಿಶೇಷ ಗುಣಗಳಿವೆ ಹೊರತು ಭಾರೀ ವ್ಯತ್ಯಾಸಗಳು ಕಂಡುಬರುವುದಿಲ್ಲ. ತಾಜಾ ತಾಜಾ ಎಳನೀರು ದೇಹದ ಆಮ್ಲತೆಯನ್ನು ನೀಗಿಸಿ ಕಫ ತೆಗೆಯುತ್ತದೆ.
ಇನ್ನಾದರೂ ಬಾಯಿ ರುಚಿಗೋಸ್ಕರ ರಾಸಾಯನಿಕ ಮಿಶ್ರಿತ ತಂಪು ಪಾನೀಯ ಸೇವಿಸುವುದನ್ನು ಬಿಟ್ಟು, ದೇಹದ ಆರೋಗ್ಯವನ್ನು ಸದಾ ಯೌವನದಂತೆ ಕಾಣುವಂತಿಡುವ ಎಳನೀರನ್ನು ಸೇವಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಒಳಿತು.

Source – Sakhigeetha.com

LEAVE A REPLY

Please enter your comment!
Please enter your name here