ಚುನಾವಣೆಯ ವೇಳೆ ಉತ್ತರದವರು ಬಾರಿಸುವರು ಕನ್ನಡ ಡಿಂಡಿಮವಾ….!

0
774

ಚುನಾವಣೆಯ ವೇಳೆ ಉತ್ತರದವರು ಬಾರಿಸುತಿಹರು ಕನ್ನಡ ಡಿಂಡಿಮವಾ….!ಉತ್ತರ ದಕ್ಷಿಣ ದಿಕ್ಕುಗಳು ಹೇಗೆ ವಿರುದ್ಧವಾಗಿವೆಯೋ ಹಾಗೆಯೇ ಭಾರತದಲ್ಲಿ ಉತ್ತರದವರು – ದಕ್ಷಿಣದವರು ಎಂಬ ಮಾತು ಆಗಾಗ ಕೇಳಿ ಬರುತ್ತಲೇ ಇದೆ. ಉತ್ತರ ಭಾರತೀಯರು ತಾವೇ ಮೂಲ ಭಾರತೀಯರು ಎಂದೋ ದಕ್ಷಿಣದವರು ನಾವೇ ಭಾರತದ ಮೂಲ ನಿವಾಸಿಗಳು ಎಂದೋ, ಆಗಾಗ ಕೆಸರೆರಚಾಡಿಕೊಳ್ಳುತ್ತಲೇ ಇರುತ್ತಾರೆ. ಆದರೆ ದಕ್ಷಿಣಭಾರತದಲ್ಲಿ ಅತಿ ಹೆಚ್ಚು ಪ್ರಾದೇಶಿಕ ಭಾಷೆಗಳಿವೆ ಆದರೆ ಉತ್ತರದವರಿಗೆ ಬೇರೆ ಬೇರೆ ಪ್ರಾದೇಶಿಕ ಭಾಷೆಗಳಿದ್ದರೂ ಹಿಂದಿ ಭಾಷೆಯು ಆ ಎಲ್ಲಾ ಭಾಷೆಗಳನ್ನೂ ಮೀರಿಸಿ ಅಲ್ಲಿನವರಿಗೆ ಹತ್ತಿರವಾಗಿದೆ. ಆದ್ದರಿಂದಲೇ ಹಿಂದಿ ರಾಷ್ಟç ಭಾಷೆ ಎಂದು ಘೋಷಣೆಯಾಗಿಲ್ಲದಿದ್ದರೂ ಹಿಂದಿಯೇ ರಾಷ್ಟಿçÃಯ ಭಾಷೆಯಾಗಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ ಉತ್ತರದವರು. ಆದರೆ
ಈ ವಾದಕ್ಕೆ ದಕ್ಷಿಣದವರು ಸೊಪ್ಪು ಹಾಕದೆ ತಮ್ಮ ಪ್ರಾದೇಶಿಕ ಭಾಷೆಗಳನ್ನೆÃ ಬಳಸುವುದೆಂದು ಪಟ್ಟು ಬಿಡದೆ ವಾದಿಸುತ್ತಿದ್ದಾರೆ. ದಕ್ಷಿಣದಲ್ಲಿ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಮರಾಠಿ ಎಲ್ಲಾ ಭಾಷೆಗಳಿಗೂ ಅವುಗಳದ್ದೆÃ ಆದ ಇತಿಹಾಸವಿದೆ. ಆ ಭಾಷೆಗಳಿಗೊಂದು ವೈಭವವಿದೆ.
ಪರಂಪರೆ ಇದೆ. ಆದರೆ ಉತ್ತರದವರು ಅದಕ್ಕೆಲ್ಲಾ ಕವಡೆ ಕಿಮ್ಮತ್ತೂ ನೀಡದೆ ಉದ್ದಟತನ ತೋರುತ್ತಾ ಬರುತ್ತಿದ್ದಾರೆ. ರಾಜಕೀಯವಾಗಿಯೂ ಉತ್ತರ ದಕ್ಷಿಣ ಬೇಧಭಾವಗಳು ದೂರವಾಗಿಲ್ಲ.
ಆರ್ಯರು – ದ್ರಾವಿಡರ ಕಾಲದಿಂದ ಈ ಜಿದ್ದಾ ಜಿದ್ದಿ ನಡೆಯುತ್ತಲೇ ಬಂದಿದೆ. ಆದರೀಗ ಸ್ವಲ್ಪ ಸುಧಾರಿಸಿದೆ ದಕ್ಷಿಣದವರಿಗೆ ತಮ್ಮತನದ ಅರಿವಾಗಿದೆ ಹಿಂದಿಯನ್ನು ರಾಷ್ಟಿçÃಯ ಭಾಷೆಯಾಗಿ ಸ್ವಿÃಕರಿಸಲಾರೆವು ಎಂದು ಬೀದಿಗಿಳಿದು ಹೋರಾಟವನ್ನೂ ಮಾಡುತ್ತಿದ್ದಾರೆ. ಆದರೂ ಇನ್ನೂ ಈ ವಿಷಯಕ್ಕೊಂದು ಸೂಕ್ತ ಅಂತ್ಯ ಸಿಕ್ಕಿಲ್ಲ. ಉತ್ತರದವರು ಇಂದಿಗೂ ರಾಜಕೀಯವಾಗಿ ದಕ್ಷಿಣದವರನ್ನು ತುಳಿಯುತ್ತಲೇ ಇದ್ದಾರೆ. ಇಂದಿಗೂ ದೇಶದ ಅತ್ಯನ್ನತ ಹುದ್ದೆಗಳೆಲ್ಲಾ ಹೆಚ್ಚು ಉತ್ತರದವರಿಂದ ತುಂಬಿದೆಯೇ ಹೊರದು ದಕ್ಷಿಣದವರಿಗೆ ಆ ಸ್ಥಾನ ಸಿಕ್ಕಿರುವುದು ಕೆಲವೇ ಕೆಲವು ಮಂದಿಗಷ್ಟೆÃ. ಇಂದಿಗೂ ಕೇಂದ್ರ ಸರ್ಕಾರ ಮಂಡಿಸುವ ವಾರ್ಷಿಕ ಆಯ-ವ್ಯಯದಲ್ಲಿ ಅಗ್ರಪಾಲು ದೊರೆಯುವುದು ಉತ್ತರದವರಿಗೇ, ದಕ್ಷಿಣದವರಿಗೆ ಸಿಕ್ಕುವುದು ಕಡಿಮೆಯೇ.
ರಾಷ್ಟç ರಾಜಕೀಯ ಪಕ್ಷಗಳೂ ಅಷ್ಟೆÃ ಉತ್ತರದಲ್ಲೆÃ ಹುಟ್ಟಿ ಅಲ್ಲೆÃ ಬೆಳದಿರುವಂತಹವು ದಕ್ಷಿಣದ ಯಾವ ಪಕ್ಷವೂ ಇದುವರೆಗೂ ಅಲ್ಲಿ ಪೂರ್ಣ ನೆಲೆ ಕಂಡುಕೊಳ್ಳಲಾಗಿಲ್ಲ. ಭಾರತ ಎಂದರೆ ಉತ್ತರದ ರಾಜ್ಯಗಳೇ ಎಂಬುದಾಗಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಬಿಂಬಿಸುತ್ತಿವೆ. ಆದರೆ ಕೆಲ ವಿಷಂiÀiಗಳೇಕೋ ದಕ್ಷಿಣದವರಿಗೆ ಅರ್ಥವಾಗುತ್ತಲೇ ಇಲ್ಲ.
ಇನ್ನು ಭಾಷೆಗಳ ವಿಷಯಕ್ಕೆ ಬರುವುದಾದರೆ ಹಿಂದಿಯೇ ರಾಷ್ಟç ಭಾಷೆ ಎಂದು ಬಿಂಬಿಸುವ ಉತ್ತರದವರು ಅದ್ಯಾಕೋ ದಕ್ಷಿಣ ರಾಜ್ಯಗಳಲ್ಲಿ ಚುನಾವಣೆಗಳು ಹತ್ತಿರ ಬರುತ್ತವೆಯೋ ಅಥವಾ ಘೋಷಣೆಯಾಗುತ್ತವೋ ಆ ಕ್ಷಣದಿಂದ ಉತ್ತರದ ಎಲ್ಲ ರಾಷ್ಟಿçÃಯ ಪಕ್ಷಗಳ ಮುಖಂಡರಿಗೂ ದಕ್ಷಿಣದ ಭಾಷೆಗಳ ಮೇಲೆ ಪ್ರಿÃತಿ ಉಕ್ಕಿಹರಿಯುತ್ತದೆ. ಪ್ರಚಾರಕ್ಕೆ ಬಂದಾಗ “ನಮಸ್ಕಾರ” ಅಂತ ಮಾತು ಪ್ರಾರಂಭಿಸಿ ಮರಳು ಮಾಡುತ್ತಿದ್ದಾರೆ.
ಕರ್ನಾಟಕ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯವರಾದ ನರೇಂದ್ರ ಮೋದಿಯವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟಾçಧ್ಯಕ್ಷರಾದ ಅಮಿತ್ ಶಾ ಎಲ್ಲರೂ ಕನ್ನಡ ನಮ್ಮ ಭಾಷೆ, ನಾನೂ ಕನ್ನಡಿಗ ಎಂದೆಲ್ಲಾ ಹೇಳುತ್ತಾ ಭಾಷಣ ಮಾಡುತ್ತಿದ್ದಾರೆ. ಅದರಲ್ಲೂ ಕನ್ನಡ ಪದ ಬಳಕೆ ಮಾಡುತ್ತಾ ನಮ್ಮ ಭಾಷೆಯ ಸೊಗಡನ್ನೂ ಹಾಳು ಮಾಡುತ್ತಿರುವುದು ಬೇಸರದ ಸಂಗತಿ.
ಕನ್ನಡ ಮಾತನಾಡಲು ಪ್ರಯತ್ನಿಸುತ್ತಿರುವುದು ಸಂತಸವೇ ಆದರೆ ಆ ಭಾಷೆಯ ಮೇಲಿನ ಪ್ರಿÃತಿಯಿಂದ ಮಾತನಾಡಲು ಪ್ರಯತ್ನಿಸಿದ್ದರೆ ನಮ್ಮದೂ ಆಕ್ಷೆÃಪವಿರಲಿಲ್ಲ ಆದರೆ ಬರೀ ಚುನಾವಣಾ ದೃಷ್ಟಿಯಿಂದ ಜನರನ್ನು ಮರಳು ಮಾಡಲು ಮಾತನಾಡಿದ್ದರಿಂದಲೇ ಬೇಸರವಾಗಿದ್ದು. ದಕ್ಷಿಣದವರನ್ನು ಓಲೈಸಲು ಅವರ ಭಾಷೆ ಮೇಲೆ ಪ್ರಿÃತಿ ಇರುವಂತೆ ನಟಿಸುವ ಬದಲು ಕನಿಷ್ಟ ಒಮ್ಮೆಯಾದರೋ ಮನಸಾರೆ ಮಾತನಾಡಲು ಪ್ರಯತ್ನಿಸಲಿ ಇಲ್ಲಿನವರ ಭಾವನೆಗಳು ಆಗಲಾದರೂ ನಿಮ್ಮ ಅರಿವಿಗೆ ಬರಬಹುದೇನೋ. ವಿಶ್ವೆÃಶ್ವರಾಯನವರನ್ನ ವಿಸ್ವೆÃಸ್ವರಯ್ಯನವರನ್ನಾಗಿ ಮಾಡುವುದು ಬಸವಣ್ಣನವರ ಇವನಾರವ ಇವನಾರವ ಅನ್ನುವುದು ಇವರ್ನ ಇವರ್ನ ಆಗುತ್ತಿರಲಿಲ್ಲ.
ಪ್ರಿಯ ನೇತಾರರೇನಿಮಗೆ ನಮ್ಮ ಭಾಷೆಯ ಸೊಗಡು ತಿಳಿದಿಲ್ಲವಾದರೆ ನಿಮ್ಮ ಸುತ್ತ ಇರುವ ಇಲ್ಲಿನ ಸ್ಥಳೀಯರ ಬಳಿಯಾದರೂ ನೀವಾಡುವ ಭಾಷೆಯ ಭಾವವನ್ನಾದರೂ ತಿಳಿದುಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಹಿಂದಿಯಲ್ಲೆÃ ಮಾತನಾಡಿ ನಿಮ್ಮ ಬೊಗಳೆ ಕನ್ನಡ ಪ್ರೆÃಮ ನಮಗೆ ಬೇಕಿಲ್ಲ. ನಮಗೆ ನೀವಾಡುವ ಹಿಂದಿಯು ಅರ್ಥವಾಗದಿದ್ದರೂ ನಿಮ್ಮ ಹಾವ ಭಾವದಿಂದಲೇ ನಿಮ್ಮ ಭಾಷಣವನ್ನು ಅರ್ಥೈಸಿಕೊಳ್ಳಬಲ್ಲೆವು ಅಷ್ಟರ ಮಟ್ಟಿಗಿನ ಜ್ಞಾನ ನಮಗಿದೆ.
ದಯವಿಟ್ಟು ಈ ಚುನಾವಣಾ ವೇಳೆಯ ಭಾಷಾ ಪ್ರೇಮವನ್ನು ಬಿಡಿ
ಭಾಷೆ ಎಂಬುದು-
ಹೃದಯಾಂತರಾಳದ
ಅಕ್ಕರೆ ನುಡಿ;

ಜನ ನಾಯಕರೇ,
ಬೂಟಾಟಿಕೆ ಮಾತನ್ನು
ಬಲವಂತವಾಗಿ
ಆಡಬೇಡಿ!

Source – Sakhigeetha.com

LEAVE A REPLY

Please enter your comment!
Please enter your name here