“ಹೆಣ್ಣು ಸಂಸಾರದ ಕಣ್ಣು” * ವಿಜಯಲಕ್ಷ್ಮಿ ಸತ್ಯ ಮೂರ್ತಿ

0
891

ಹೆಣ್ಣು ಮನೆಯ ದೀಪವಾಗಿ ಬೆಳಗುವ ಸಾಮರ್ಥ್ಯವನ್ನು ಉಳ್ಳವಳು. ತಾನು ಒಳಗೇ ನೊಂದರೂ ಯಾರಿಗೂ ನೋವಾಗದಂತೆ ನಗುನಗುತ್ತಾ ಎಲ್ಲರಿಗೂ ಪ್ರಿÃತಿಪಾತ್ರಳಾಗಿ ಸಂಸಾರವನ್ನು ಕಾಪಾಡುವ ಹೆಣ್ಣು ಒಂದು ವರವೆಂದರೆ ತಪ್ಪಾಗಲಾರದು.
ಇಂತ ಒಬ್ಬ ಹೆಣ್ಣು ತನ್ನ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ಮಡಿಯಾಳು ಅನ್ನುವುದೇ ಒಂದು ಪ್ರಶ್ನೆ. ಆದರೆ ಅವಳಿಗೆ ಈ ಪ್ರಶ್ನೆ ಕಾಡುವುದೇ ಇಲ್ಲ. ಯಾಕೆಂದರೆ ಅವಳ ಮನಸೆಲ್ಲಾ ತನ್ನ ಮನೆ ಸಂಸಾರ, ಗಂಡ, ಮಕ್ಕಳು, ಅತ್ತೆ, ಮಾವ ಹೀಗೆ ಈ ಬಂಧನಗಳಲ್ಲೆÃ ಮುಳುಗಿಹೋಗುತ್ತದೆ. ತನ್ನ ಬಗ್ಗೆ ಯೋಚಿಸಲು ಸಮಯವೇ ಇಲ್ಲ ಅವಳಿಗೆ. ಅಂತೆಯೇ ಎಷ್ಟು ಜನ ಹೆಂಡತಿ / ತಾಯಿಯ ಬಗ್ಗೆ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ? ತುಂಬಾ ಅಪರೂಪ ಇದು. ಆದರೆ ಒಬ್ಬ ಹೆಣ್ಣಿನ ಆರೋಗ್ಯಯದ ಬಗ್ಗೆ ನಿಗಾ ವಹಿಸುವುದೂ ಅಷ್ಟೆÃ ಮುಖ್ಯ. ಯಾಕೆಂದರೆ ಅವರ ಆರೋದ್ಯ ಸರಿ ಇದ್ದಾಗ ತಾನೆ ಆಕೆ ಎಲ್ಲರನ್ನೂ ನೋಡಿಕೊಳ್ಳಲು ಸಾಧ್ಯ ?
ಅವಳು ಎಷ್ಟೊÃ ಸಂಗತಿಗಳನ್ನು ಮರೆ ಮಾಚುತ್ತಾಳೆ ತನ್ನವರ ಹಿತದೃಷ್ಟಿಯಿಂದ. ಆದರೆ ಗಂಡಸು ಸಹ ಅದನ್ನು ಅರಿತು ಅವಳಿಗೆ ಸಹಾಯ ಮಾಡುತ್ತಾ ಸದಾ ಅವಳ ಆರೋಗ್ಯದ ಕಡೆ ನಿಗಾ ವಹಿಸಬೇಕು.
ಹೆಣ್ಣು ಬಹಳ ಸೂಕ್ಷö್ಮ ಅವಳು ಮನೆಯ ಎಲ್ಲರನ್ನೂ ಅಂಗೈಯಲ್ಲಿಟ್ಟುಕೊಂಡು ಸಲಹುತ್ತಾಳೆ. ಪೋಷಿಸುತ್ತಾಳೆ. ಅವಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮನೆಯವರೆಲ್ಲರ ಧರ್ಮ ಹಾಗೂ ಜವಬ್ದಾರಿ.
ನಲವತ್ತರ ನಂತರ ಹೆಣ್ಣಿನಲ್ಲಿ ಆಗುವ ಕೆಲವು ಸುಸ್ತು, ನಿಶ್ಯಕ್ತಿ ಅವಳನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಈ ಸಮಯದಲ್ಲಿ ಮಾನಸಿಕವಾಗಿ ಬಲಗೊಳಿಸಲು ಮನೆಯವರೆಲ್ಲರ ಸಹಕಾರ ಬಹುಮುಖ್ಯ. ಅನಾವಶ್ಯಕವಾಗಿ ಆಕೆಯ ಮೇಲೆ ರೇಗುವುದು, ಕೋಪಿಸಿಕೊಳ್ಳುವುದು ಇವುಗಳು ಸಲ್ಲದ. ಹೆಣ್ಣು ತನ್ನದೇ ಆದ ಒಂದು ಲಕ್ಷö್ಮಣ ರೇಖೆಯನ್ನು ಹಾಕಿಕೊಂಡಿರುತ್ತಾಳೆ. ವ್ಯಾವಹಾರಿಕವಾಗಿ ತಿಳುವಳಿಕೆ ಇಲ್ಲದಿದ್ದರೂ ಸಹ ತನ್ನ ಆರೋಗ್ಯದ ಬಗ್ಗೆ ಚಿಂತಿಸುವುದಿಲ್ಲ. ಅವಳ ಆರೋಗ್ಯದ ಸಲುವಾಗಿ ವೆಚ್ಚ ಮಾಡುವ ಹಣ ಮನೆಯ ಇತರ ಅತ್ಯಗತ್ಯಗಳಿಗೆ ಬೇಕಾದೀತು ಎಂಬ ಮುಂದಾಲೋಚನೆಯೊಂದ.
ಹಾಗಾಗಿ ಆಕೆಯ ಸ್ವಸ್ಥö್ಯಕ್ಕಾಗಿ ಆರು ತಿಂಗಳಿಗೊಮ್ಮೆಯಾದರೂ ಬಲವಂತವಾಗಿ ವೈದ್ಯಕೀಯ ತಪಾಸಣೆ ಮಾಡಿರುವುದು ಬಹಳ ಮುಖ್ಯ. ಆಕೆ ಬಹುಕಾಲ ಮನೆಮಂದಿಯೊಡನೆ ನಗುತ್ತ ಬಾಳಲು ಅವಕಾಶ ಮಾಡಿಕೊಡುವ ಜವಬ್ದಾರಿ ಮನೆಯವರೇ ವಹಿಸಿಕೊಂಡರೆ ಅವಳಿಗಿಂತ ಸಂಭ್ರಮಿಸುವವರುಂಟೇ? ಮಕ್ಕಳಿಗೂ ಸಹ ಈ ನಿಟ್ಟಿನಲ್ಲಿ ಅರಿವು ಮಾಡಿಸುವುದು ಸಹ ಅಷ್ಟೆÃ ಮುಖ್ಯ. ಆ ಸಂಸಾರವನ್ನು ರೂಢಿಸುವುದು ಹೆತ್ತವರ ಕರ್ತವ್ಯವೇ ಆಗಿದೆ. ತನ್ನವರಿಗಾಗಿ ಎಷ್ಟೆಲ್ಲಾ ಕಸರತ್ತು ಮಾಡುವ ಹೆಣ್ಣಿಗೆ ಅವಳು ಬಯಸುವ ಒಂದಿಷ್ಟು ಪ್ರಿÃತಿ ಅಕ್ಕರೆಯನ್ನು ಕೊಟ್ಟು ಮಾನಸಿಕವಾಗಿ ದೈಹಿಕವಾಗಿ ಅವಳನ್ನು ಬಲವಂತಳನ್ನಾಗಿ ಮಾಡಲು ಚೌಕಾಸಿಯಾದರೂ ಏಕೆ ? ಅವಳ ನಗು ಮನೆಯವರೆಲ್ಲರ ಆರೋಗ್ಯವನ್ನು ಕಾಪಾಡಬಲ್ಲುದಾದರೆ ಅವಳ ಆರೋಗ್ಯವು ಸಹ ಅಷ್ಟೆÃ ಬೆಲೆಯುಳ್ಳದ್ದು ಅಲ್ಲವೇ ? ತನ್ನ ಮನೆಯೇ ಪ್ರಪಂಚ ತನ್ನವರೇ ಎಲ್ಲಾ ಅಷ್ಟೆöÊಶ್ವರ್ಯ ಎಂದು ಬದುಕುವುವಳ ಬಗ್ಗೆ ಕೊಂಚ ಪ್ರಿÃತಿ, ಆದರ, ಆಭಿಮಾನ ಹಾಗೇ ಅವಳ ಆರೋಗ್ಯ ಇವೆಲ್ಲವೂ ತನ್ನವರಿಂದ ಅವಳಿಎ ಸಿಕ್ಕಿದರೆ ಮನಸಾರೆ ಸುಖಿಸುತ್ತಾಳೆ. ಹಾರೈಸುತ್ತಾಳೆ ಸದಾ.

ಯತ್ರ ನಾರ್ಯಾಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ|
ಯತ್ರೆöÊತಾಸ್ತು ನ ಪೂಜ್ಯಂತೇ ತತ್ರಾಫಲಾಃ ಸರ್ವಾಃಕ್ರಿಯಾಃ||

ನಾರಿಯರು ಎಲ್ಲಿ ಗೌರವಿಸಲ್ಪಡುವರೋ ಅಲ್ಲಿ ದೇವತೆಗಳು ಸಂತುಷ್ಟರಾಗುತ್ತಾರೆ. ಎಲ್ಲಿ ಇವರು ಪೂಜಿಸಲ್ಪಡುವುದಿಲ್ಲವೋ, ಅಲ್ಲಿ ಎಲ್ಲಾ ಕೆಲಸಗಳೂ ಸಫಲವಾಗುವುದಿಲ್ಲ.
ಹಾಗಾಗಿ ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ, ಅತ್ತಿಯಾಗಿ, ಮಡದಿಯಾಗಿ, ಎಲ್ಲಾ ಸಂದರ್ಭಗಳಲ್ಲಿಯೂ ಹೆಣ್ಣು ಗೌರವಾರ್ಹಳು. ಆಕೆಗೆ ನಮಿಸೋಣ.

Source – Sakhigeetha.com

LEAVE A REPLY

Please enter your comment!
Please enter your name here