ಬೇಡವೆಂದು ಬಿಡಿಸಿಕೊಂಡಷ್ಟು ಅಂಗೈಯೊಳಗೆ ಬಂದು ಕೂರುವ ಸ್ಮಾರ್ಟ್ ಪೋನ್ ಸುಮ್ಮನೆ ಕೂರುವುದಿಲ್ಲ ಪೇಸ್‌ಬುಕ್ ಪುಟವನ್ನು ತೆರೆದು ನಿಲ್ಲುತ್ತದೆ ನಾವು ಹಾಕಿರುವ ಪೋಟೋಗೆ ಎಷ್ಟು ಲೈಕ್ ಸಿಕ್ಕಿದೆ ಎಷ್ಟು ಕಾಮೆಂಟ್ ಮಾಡಿದ್ದಾರೆ ಎಂದು ತಿಳಿದುಕೊಳ್ಳುವ ಆತುರ ಹೆಚ್ಚಾಗುತ್ತದೆ. ವಾಸ್ತವಕ್ಕಿಂತಲೂ ಭ್ರಮೆ ಮೂಡಿಸುವ ಅವಾಸ್ತವದ ಜಗತ್ತಿನಲ್ಲಿ ವಿಹರಿಸುತ್ತಲೇ ಹೋಗಬೇಕೆಂಬ ಆಸೆ ಹೆಚ್ಚಿಸುತ್ತದೆ. ಬೆರಳ ತುದಿಗೆ ಸಿಕ್ಕ ಪೋಟೋವೊಂದು ಮನಸ್ಸನ್ನು ಒಮ್ಮೆ ಕದಲುವಂತೆ ಮಾಡುತ್ತದೆ.
ಅವರ ಜೋಡಿ ಚೆನ್ನಾಗಿತ್ತು ಅವರ ರೀತಿ ನಾವಿಲ್ಲ ಹೀಗೆ ಅನೇಕ ಯೋಚನೆಗಳು ತಲೆಯಲ್ಲಿ ಹರಿದಾಡುತ್ತವೆ ಕುತೂಹಲಕ್ಕೆ ನೋಡಿದ ಪೋಟೋ ಅಸೂಯೆಗೆ ಕಾರಣವಾಗುತ್ತದೆ ಹೌದು ಫೇಸ್‌ಬುಕ್ ಸೇರಿದಂತೆ ಇತರೆ ಸಾಮಾಜಿಕ ತಾಣಗಳಲ್ಲಿ ಎದುರಾಗುವ ಕೆಲವು ಪೋಟೋ, ಬರಹಗಳು ನಿಮ್ಮ ಮನಸ್ಸನ್ನು ವಿನಾಕಾರಣ ಕೆದುಕುತ್ತವೆ. ಅದೇ ಅಸೂಯೆ, ಸಿಟ್ಟು, ಅಸಮಾಧಾನ, ಮೂಡಿಸಬಹುದು.
ಇಡೀ ಮನಸ್ಸನ್ನು ಕೆಡಿಸಿ ಕೊನೆಗೆ ಖಿನ್ನತೆ ಹಂತ ತಲುಪಬಹುದು ಫೇಸ್‌ಬುಕ್‌ನಂತಹ ಸಾಮಾಜಿಕ ತಾಣಗಳು ಅಸೂಯೆ ಮತ್ತು ಆಕ್ರಮಣಕಾರಿ ನಡವಳಿಕೆಗಳನ್ನು ಮೂಡಿಸಬಹುದು ಎಂಬುವುದನ್ನು ಹಲವಾರು ಅಧ್ಯಯನಗಳು ಶೋಧಿಸಿವೆ. ತೀರ ವೈಯುಕ್ತಿಕ ಅಂದೆನಿಸುವುದನ್ನು ಸಾರ್ವಜನಿಕವಾಗಿ ತೆರೆದುಕೊಳ್ಳುವ ಮನೋಭಾವ ಹಲವರಲ್ಲಿ ಇರುತ್ತದೆ.
ಈ ರೀತಿ ಬೇರೆಯವರ ಗಮನ ಸೆಳೆಯಲು ಮಾಡಿದ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುವ ರೋಮ್ಯಾಂಟಿಕ್ ಪೋಟೋಗಳು ಪೋಸ್ಟ್ ಮಾಡಿದವರ ಹಾಗೂ ನೋಡಿದವರ ಸಂಬಂಧದ ಮೂಲವನ್ನು ಅಲುಗಾಡಿಸಬಹುದು ಬೇರೆಯವರ ಪೋಟೋ ನೋಡಿ ಯಾರೋ ಅವರಷ್ಟು ನಾವು ಖುಷಿಯಾಗಿಲ್ಲ ಎಂದು ಕೊರಗಬಹುದು.
ಬೇರೆಯವರ ಪೋಸ್ಟ್ ಅವರ ಸಂಬಂಧದಲ್ಲಿ ಅಸುರಕ್ಷೆ ಭಾವ ಮೂಡಿಸುತ್ತದೆ. ಅನುಮಾನ ಸ್ವಭಾವವನ್ನು ಹೆಚ್ಚಿಸುತ್ತದೆ. ಅಂದರೆ ತಮ್ಮ ಸಂಗಾತಿಯ ಪೋಸ್ಟ್ಗಳಿಗೆ ಯರ‍್ಯಾರು ಕಾಮೆಂಟ್ ಮಾಡಿದ್ದಾರೆ. ಇನ್ಯಾರೋ ಲೈಕ್ ಕೊಟ್ಟಿದ್ದಾರೆ. ಅಂತೆಲ್ಲ ಹುಡುಕಾಡಬಹುದು ಇದು ಅವರ ಸಂಬಂಧದ ಬುಡವನ್ನು ಅಲುಗಾಡಿಸುತ್ತದೆ. ಡಿಜಿಟಲ್ ಪರದೆಯ ಮೇಲೆ ನೋಡಿದ್ದೆಲ್ಲ ಸತ್ಯವಲ್ಲ ಅದೇ ರೀತಿ ಅದರ ಹಿಂದಿನ ಭಾಗ ಸತ್ಯವಲ್ಲದೆ ಇರಬಹುದು.
Source – Sakhigeetha.com