“ಸುರ ಸಿಂಗಾರ” ಪ್ರಶಸ್ತಿ ವಿಜೇತ ಸಂಗೀತ ಸಾಮ್ರಾಟ್ ವಿಜಯಭಾಸ್ಕರ್…! – ಡಾ||ದೊಡ್ಡರಂಗೇಗೌಡ

0
1287

“ಬಾರೆ… ಬಾರೆ… ಚೆಂದದ ಚೆಲುವಿನ ತಾರೆ”
ಹಾಡನ್ನು ಯಾರು ತಾನೆ ಕೇಳಿಲ್ಲ? ನೀವೇ ಹೇಳಿ!
“ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದ”
ಹಾಡು ಎಲ್ಲರಿಗೂ ಗೊತ್ತು. ಆ ಇಂಪಿನ ಹಾಡಿನ ಸ್ವರಪ್ರಸಾರದ
ರೂವಾರಿ ಯಾರಿಗೆ ಗೊತ್ತಿಲ್ಲ ಹೇಳಿ?
ಏಳು ಕೋಟಿ ಕನ್ನಡಿಗರಿಗೂ ಗೊತ್ತು “ಸುರ ಸಿಂಗಾರ್”
ಪ್ರಶಸ್ತಿ

“ವಿಜಯ ಭಾಸ್ಕರ್”
ಕನ್ನಡ ನಾಡಿನಲ್ಲಿ ಐದು ದಶಕಗಳ ಕಾಲ ಕನ್ನಡ ಚಿತ್ರಗಳಿಗೆ ಮಧುಮಧುರ ಸಂಗೀತ ನೀಡುವ ಮೂಲಕ ಜನಪ್ರಿಯತೆ ಅತ್ಯಂತ ಎತ್ತರದ ಶಿಖರ ಮುಟ್ಟಿದ ಸಂಗೀತ ನಿರ್ದೇಶನ ಶ್ರಿÃ ವಿಜಯಭಾಸ್ಕರ್ ಬಗ್ಗೆ ಬರೆಯಲು ಸಮೃದ್ಧ ವಿಷಯಗಳಿವೆ.
ವಿಜಯ ಭಾಸ್ಕರ್, ಪುಟ್ಟಣ್ಣ ಕಣಗಾಲ್, ಕೆ.ಎಸ್.ಎಲ್.ಸ್ವಾಮಿ(ರವೀ) ಅವರುಗಳು ಅತ್ಯುತ್ತಮ ಗೆಳೆಯರಾಗಿದ್ದರು. ಅವರು ಮೂವರೂ ಸೇರಿದಾಗೆಲ್ಲಾ ಸೃಜನಶೀಲತೆಯ ಹೊನಲೇ ಹರಿದದೆ! ಅತ್ಯುತ್ತಮ ಹಾಡುಗಳೂ ಮೂಡಿವೆ.
ಆ ಕಾಲಕ್ಕೆÃನೆ ಅವರು ರಾಗ ಸಂಯೋಜಿಸಿದ ಹಾಡುಗಳು ಅತ್ಯಂತ ಜನಪ್ರಿಯವಾಗಿದ್ದವು :- ಉದಾಹರಣೆ-
“ಶುಭ ಮಂಗಳ.. ಸುಮಹೂರ್ತವೇ… ಶುಭವೇಳೆ”
* * *
ಕೊಡಗಿನ ಕಾವೇರಿ…ನೀ..ಬೆಡಗಿನ ವಯ್ಯಾರಿ”
* * *
ಉತ್ತರ ಧೃವದಿಂ.. ದಕ್ಷಿಣಧೃವಕೂ ಚುಂಬಕ ಗಾಳಿಯು ಬೀಸುತಿದೆ…
* * *
ಬೆಸುಗೆ.. ಬೆಸುಗೆ.. ಜೀವನವೆಲ್ಲಾ ಸುಂದರ ಬೆಸುಗೆ..
* * *
ನೀವು ಯಾವ ಹಾಡನ್ನೆÃ ಕೇಳಿ.. ಅಲ್ಲಿ ಮಾಧುರ್ಯ ಹರಿದಾಡುತ್ತಿರುತ್ತದೆ. ಸರಳ ಸುಂದರ ಗೀತೆಗಳನ್ನು ಕವಿಗಳಿಂದ ಬರೆಸುತ್ತಿದ್ದರು. ಅಥವಾ- ಅಂಥಾ ಗೀತೆಗಳನ್ನೆÃ ಕವಿಗಳ ಕಾರ್ಯ ಸಂಕಲನಗಳಿಂದ ಆಯ್ದುಕೊಳ್ಳುತ್ತಿದ್ದರು ಅಲ್ಲೆಲ್ಲಾ ಎದ್ದು ಕಾಣುವುದು… ಶುದ್ಧ ಅಭಿರುಚಿ. ಈಗ ಚಿತ್ರಗೀತೆಗಳ ಅಭಿರುಚಿಯ ಆಗರ. ಅಶ್ಲಿÃಲತೆಯ ಸಾಗರ… ಆದರೆ ಆಗ ಹಾಗಿರಲಿಲ್ಲ ಸಂಸ್ಕೃತಿಯ ಮಹಾಪೂರ. ಶುದ್ಧ ಸಾಹಿತ್ಯದ ಸಾಕ್ಷಾತ್ಕಾರ! ತನ್ಮೂಲಕ ರಸಿಕರಿಗೆ ಸುಂದರ ಮನೋಹರ ಸಿನಿಮಾ ಹಾಡು, ಸುಮಧುರ ಸಂಗೀತ! ಮೂಲತಃ ವಿಜಯ್ ಭಾಸ್ಕರ್ ಸಾಹಿತ್ಯ ಕ್ಷೆÃತ್ರದ ಹಿನ್ನೆಲೆಯಿಂದ ಬಂದವರು: ಶ್ರಿÃರಾಮಪೂಜಾ (೧೯೫೬) ಕಥೆ, ಚಿತ್ರಕಥೆ, ಸಂಭಾಷಣೆ – ಎಲ್ಲಾ ವಿಜಯ ಬಾಸ್ಕರ್ ಅವರದೇ!
ಮುಂದೆ ಅವರೇ ನಿರ್ಧರಿಸಿದರು.. ನನ್ನ ಜಾಯಮನಕ್ಕೆ ಒಗ್ಗುವುದು – ಸಂಗೀತಸೃಜನೆ – ಸ್ವರಪ್ರಸ್ತಾರದ ಸಂಯೋಜನೆ,, ಅದನ್ನೆÃ ಅವರು ತಮ್ಮ ಬದುಕಿನ ವ್ರತವನ್ನಾಗಿ ಮಾಡಿಕೊಂಡರು. ಮನಸ್ಸಿನ ಕೃಷಿ ಮಾಡಿಕೊಂದರು. ಎಲ್ಲ ಬದುಕು, ಏಳಿಗೆ ಪ್ರತಿಯೊಂದನ್ನೂ ಸಂಗೀತದಿಂದಲೇ ಬಯಸಿದರು. ದುಡಿದರು!ಅಹರ್ನಿಶಿ ಸಂಗೀತಕ್ಕಾಗಿ ತಮ್ಮ ಸುಖಭೋಗ ತ್ಯಾಗಮಾಡಿದರು. ಮದ್ರಾಸ್ಸಿನಲ್ಲಿ ಕನ್ನಡ ಚಿತ್ರಗಳಿಗೆ ಸ್ಟಡಿಯೋಗಳು ದೊರಕುತ್ತಿದ್ದರು… ರಾತ್ರಿವೇಳೆಯಲ್ಲಿ ಮಾತ್ರ, ಅದು ತಮಿಳು ಷೂಟಿಂಗ್ ರೆಕಾರ್ಡಿಂಗ್ ಎಲ್ಲವೂ ಸಂಪೂರ್ಣ ಮುಗಿದ ಮೇಲೆನೆ.
ಆದರೆ ವಿಜಯ ಬಾಸ್ಕರ್ ಅಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಇತ್ಯಾತ್ಮಕವಾಗಿ ಚಿಂತನೆ ನೆಡೆಸಿದರು, ಸಕಾರಾತ್ಮಕವಾಗಿ ಸೃಜಿಸಿದವರಾದ ನಮ್ಮೆಲ್ಲರ ನಲ್ಮೆಯ ವಿಜಯ ಭಾಸ್ಕರ್ ಅವರೇ! ಕೇಳಿಸಿ ಕೊಳ್ಳಿ.. ಈ ಹಾಡುಗಳ ಪಟ್ಟಿನೋಡಿ,
(ಅ) ಹಾವಿನ ದ್ವೆÃಷ.. ಹನ್ನೆರಡು ವರುಷ
* * * *
(ಆ) ಕನ್ನಡ ನಾಡಿನ ವೀರ ರಮಣಿಯ ಗಂಡುಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ.
* * * *
ಪಂಚಮವೇದ.. ಪ್ರೆÃಮದ ನಾದ…
ಪ್ರಯಣದ ಸರಿಗಮ ಭಾಣನಂದ.
* * * *
ಸಂಗಮ.. ಸಂಗಮ.. ಅನುರಾಗ ಸಂಗಮ
* * * *
ಆಚಾರವಿಲ್ಲದ ನಾಲಿಗೆ.. ನಿನ್ನ ನೀಚ ಬುದ್ಧಿಯ ಬಿಡುನಾಲಿಗೆ”
* * * *
ಈ ಬಗೆಯ ಎನಿತೆನಿತೋ ಗೀತೆಗಳಿಗೆ ಮಧುರಾತಿ ಮಧುರ ಸ್ವರಪ್ರಸಾರ ನೀಡಿದವರು ಶ್ರಿÃ ವಿಜಯ ಬಾಸ್ಕರ್.
ಚಲನ ಚಿತ್ರಗಳಲ್ಲಿ ಸಂಗೀತ ನೀಡುವವರು ಎರಡು ಮುಖ್ಯ ಜವಾಬ್ದಾರಿಗಳನ್ನು ನಿರ್ವಹಿಸ ಬೇಕಾಗುತ್ತದೆ.
೧. ಹಾಡುಗಳಿಗೆ ಮಧುರ ಸ್ವರ ಪ್ರಸ್ತಾರ ಹಾಕಿ ಮಾದುರ್ಯವೇ ಎಲ್ಲೆಲ್ಲೂ ಮಾರ್ದನಿಸುವ ಹಾಗೆ ಮಾಡುವುದು.

೨.ಚಿತ್ರಸಂಪೂರ್ಣ ಚಿತ್ರಿÃಕರಣವಾದ ಮೇಲೆ ಪ್ರತಿಸನ್ನಿವೇಶವನ್ನೂ ಅರ್ಥಮಾಡಿಕೊಂಡು ಪ್ರತಿ ಚಿತ್ರಿಕೆಗೂ ರೀ ರೆಕಾರ್ಡಿಂಗ್ ಮಾಡುವುದು. ಧ್ವನಿ ಲೇಪನ ಕ್ರಿಯೆ ಇದು. ಈ ಎರಡರಲ್ಲೂ ತಮ್ಮ ೨೫೦ ಚಿತ್ರಗಳಲ್ಲೂ ಸ್ವಂತಿಕೆ ಮೆರೆದವರು – ವಿಜಯ ಬಾಸ್ಕರ್.
ಅವರು ಮುಂಬೈನಲ್ಲಿ ಹಿಂದಿ ಚಿತ್ರರಂಗದ ಪ್ರಖ್ಯಾತ ಸಂಗೀತ ನಿರ್ದೇಶಕರಾದ ನೌಷಾದ್ ಗರಡಿಯಲ್ಲಿ ಪಳಗಿದವರು. ಕನ್ನಡ ಚಿತ್ರಸಂಗೀತದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ತಮ್ಮ ವೈಶಿಷ್ಟö್ಯತೆಯನ್ನು ಮೆರೆದವರು.
ಯಾವುದೇ ಚಿತ್ರದ ಯಶಿಸ್ಸಿನಲ್ಲಿ ಸಂಗೀತದ ಪಾಲೂ ಬಹಳಷ್ಟಿರುತ್ತದೆ. ಅಲ್ಲಿನ ಹಾಡುಗಳು ಗೆದ್ದಾಗ ಚಿತ್ರವೂ ಗೆದ್ದಿರುವುದುಂಟು! ವಿಜಯ ಬಾಸ್ಕರ್ ಅವರು ಸಂಗೀತ ನೀಡಿದ ಬಹುತೇಕ ಚಿತ್ರಗಳು ಯಶಸ್ಸು ಪಡೆದಿದೆ! ವಿಜಯೋತ್ಸವವನ್ನೂ ಆಚರಿಸಿವೆ. ನಿದರ್ಶನಗಳು ಅನೇಕ.
“ಮಾನಸ ಸರೋವರ! ನಿನ್ನ ಮನಸೇ-
ಮಾನಸ ಸರೋವರ!”
* * *
ವೇದಾಂತಿ ಹೇಳಿದನು-
ಹೊನ್ನೆಲ್ಲ ಮಣ್ಣು! ಮಣ್ಣು..
* * *
ಸ್ನೆÃಹದ ಕಡಲಲ್ಲಿ
ನೆನಪಿನ ದೋಣಿಯಲಿ
ಪಯಣಿಗ ನಾನಮ್ಮಾ..
* * *
ಇಂಥ ಯಶೋಗೀತೆಗಳು ಎಷ್ಟೊÃ! ಎಲ್ಲ ಗೆಲುವೂ ಅವರ ಮಾಧುರ್ಯದ ಜೋಳಿಗೆಯಲ್ಲೆÃ!
ನೂರಾರು ಪ್ರಯೋಗಗಳ ಮಾಡಿ ಗೆದ್ದ ಧೀರರು-ವಿಜಯಭಾಸ್ಕರ್ ಸಾವಿರ ಸಾವಿರ ಯುಗಗಳು ಕಳೆದರೂ ಸಾಗಿದೆ ಸಂಗ್ರಾಮ ಹಾಡಿನಲ್ಲಿ ವಿನೂತನ ಪ್ರಯೋಗವಿದೆ. “ನಾಕೊಂದ್ಲ ನಾಕು ನಾಕೆರಡ್ಲ ಏಂಟು “ ಹಾಡಲ್ಲಿ.. ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು

ಸೂಪರ್ ಹೀಟ್ ಸಾಂಗ್ಸ್ ಆಫ್ ವಿಜಯ ಭಾಸ್ಕರ್
೧. ಮೂಡಲ ಮನೆಯ (ಬೆಳ್ಳಿ ಮೋಡ)
೨. ಬಲು ಅಪರೂಪ ನಮ್ ಜೋಡಿ (ಲಗ್ನ ಪತ್ರಿಕೆ)
೩. ಕನ್ನಡ ನಾಡಿನ ವೀರ ರಮಣಿಯ ( ನಾಗರಹಾವು )
೪. ಇಳಿದು ಬಾ ತಾಯಿ ( ಅರಶಿಣ ಕುಂಕುಮ )
೫. ಬೆಸುಗೆ ಬೆಸುಗೆ ಜೀವನ ವೆಲ್ಲಾ (ಬೆಸುಗೆ)
೬. ಜನ್ಮ ನೀಡಿದÀ ಭೂತಾಯಿ (ಪಡವಾರಹಳ್ಳಿ ಪಾಂಡವರು )
೭. ಸ್ನೆÃಹದ ಕಡಲಲ್ಲಿ ( ಶಭಮಂಗಳ)
೮. ಗಗನವು ಏಲ್ಲೊÃ (ಗೆಜ್ಜೆಪೂಜೆ)
೯. ಉತ್ತರ ಧ್ರುವದಿಂ (ಗೆಜ್ಜೆಪೂಜೆ)
೧೦. ಒಲುಮೆ ಸಿರಿಯಾ ಕಂಡು ( ಬಂಗಾರದ ಜಿಂಕೆ)
೧೧. ಕಾಣದ ದೇವರು ಊರಿಗೆ ನೂರು ( ಸುವರ್ಣ ಭೂಮಿ )
೧೨. ತೋಟದಾಗೆ ಹೂವ ಕಂಡೆ (ಚಿರಂಜೀವಿ)
೧೩. ಜಯತು ಜಯ ವಿಠಲ ( ಸಂತ ತುಕಾರಾಮ)
೧೪. ಕಲ್ಲು ಕವಿತೆಯೂ ಹಾಡುವುದು (ಉಯ್ಯಾಲೆ)
೧೫. ಸೂರ್ಯಂಗೂ ಚಂದ್ರಂಗೂ ( ಶುಭ ಮಂಗಳ )
೧೬. ಕೊಡಗಿನ ಕಾವೇರಿ ( ಶರಪಂಜರ )
೧೭. ನೀ ತಂದ ಕಾಣಿಕೆ (ಹೃದಯ ಸಂಗಮ)
೧೮. ತುಟಿಯ ಮೇಲೆ ತುಂಟ ಕಿರು ನಗೆ ( ಮನ ಮೆಚ್ಚಿದ ಮಡದಿ )
೧೯. ಹದಿನಾಲ್ಕು ವರ್ಷ ವನವಾಸ ( ಶರಪಂಜರ)
೨೦. ಮನವೇ ಮಂದಿರ ( ತೂಗು ದೀಪ)

Source – Sakhigeetha.com

LEAVE A REPLY

Please enter your comment!
Please enter your name here