ಆಧುನಿಕ ಕನ್ನಡ ಕಾವ್ಯದ ಒಂದು ಭಾಗವಾಗಿ, ತನ್ನದೇ ಆದ ವಿಶಿಷ್ಟತೆಯಿಂದ, ವಿಭಿನ್ನವಾದ ಅಭಿವ್ಯಕ್ತಿ, ಶೈಲಿಯಿಂದ ಸಂಪೂರ್ಣ ಸಾಹಿತ್ಯನಿಷ್ಠ ಸಂಗೀತದ ಮಾದರಿಯಾಗಿದೆ ಸುಗಮ ಸಂಗೀತ.
ಈ ಸುಗಮ ಸಂಗೀತವು ಪ್ರತಿಭಾವಂತ ಕವಿಗಳಿಂದ ರಚನೆಯಾದ ಕವಿತೆಯನ್ನು ಪ್ರಮುಖ ನೆಲೆಯಾಗಿಸಿಕೊಂಡಿದೆ. ಗೇಯರೂಪದ ಆಧುನಿಕ ಕನ್ನಡ ಭಾವಗೀತೆಯ ಸ್ವರೂಪವನ್ನು ಗುರುತಿಸುವ, ಒಂದು ಕನ್ನಡದ ಕವಿತೆ ಮತ್ತು ಗಾಯನಕ್ಕಿರುವ ಆವಿನಾಭಾವ ಸಂಬಂಧವನ್ನು ತಿಳಿಸುವ, ಸಂಗೀತಕ್ಕೆ ಅನುಗುಣವಾದ ಸಾಹಿತ್ಯಕ ನೆಲೆಯನ್ನು ಸೂಚಿಸುವ ಕಾರ್ಯವೈಖರಿ ಈ ಸುಗಮ ಸಂಗೀತದ್ದೆÃ ಆಗಿದೆ.
೧೯೮೦ ರ ಹೊತ್ತಿನಲ್ಲಿ ಶಾಸ್ರಿÃಯ ಸಂಗೀತಕ್ಕಿಂತ, ಚಿತ್ರಗೀತೆಗಳಿಗಿಂತ ವಿಭಿನ್ನವಾಗಿ ತಂಗಾಳಿಯ ತಂಪಿನಂತೆ, ಮಲ್ಲಿಗೆಯ ಹೂಮೊಗ್ಗು ಅರಳಿ ಕಂಪು ಬೀರಿದಂತೆ ಸಂಗೀತ ಕ್ಷೆÃತ್ರದಲ್ಲಿ ಒಂದು ಹೊಸದಾದ ಬದಲಾವಣೆಯ ಸ್ವರೂಪವನ್ನು ‘ನಿತ್ಯೊÃತ್ಸವ’ ಧ್ವನಿಸುರುಳಿಯ ಮೂಲಕ ಕರ್ನಾಟಕದಾದ್ಯಂತ ಉಂಟು ಮಾಡಿದ್ದು ಸುಗಮ ಸಂಗೀತದ ಘನತೆ, ಹೆಗ್ಗಳಿಕೆ.
ಮೈಸೂರು ಅನಂತಸ್ವಾಮಿಯವರ ಸಂಗೀತ – ಗಾಯನದ ಕವಿ ನಿಸಾರ ಅಹಮದ್ರ ಕವಿತೆಗಳ ‘ನಿತ್ಯೊÃತ್ಸವ’ ಕನ್ನಡಿಗರ ಮನೆ – ಮನಗಳಲ್ಲಿ ಮಿಂಚಿನ ಸಂಚಾರ ಮಾಡಿಸಿತ್ತು ‘ಜೋಗದ ಸಿರಿ ಬೆಳಕಿನಲ್ಲಿ’ ‘ಬೆಣ್ಣೆ ಕದ್ದ ನಮ್ಮ ಕೃಷ್ಣ’ ಮುಂತಾದ ಗೀತೆಗಳು ಕೇಳುಗನ ಮನಸ್ಸಿಗೆ ರಸದೌತಣ ನೀಡಿತ್ತು. ಇದರ ಬೆನ್ನಲ್ಲಿಯೇಬಂದ ‘ಶಿಶುನಾಳ ಶರೀಫ ಸಾಹೇಬರ ಗೀತೆಗಳು’ ‘ಮೈಸೂರುಮಲ್ಲಿಗೆ’ ಮತ್ತು ‘ಮಾವು ಬೇವು’ ಧ್ವನಿಸುರುಳಿಗಳು ಸಂಗೀತ ನಿರ್ದೇಶಕ- ಗಾಯಕ ಸಿ.ಅಶ್ವಥ್‌ರ ಮಹಾಪ್ರತಿಭೆಗೆ ಸಾಕ್ಷಿಯಾದವು. ಸುಗಮ ಸಂಗೀತ ಕ್ಷೆÃತ್ರಕ್ಕೆ ಅಶ್ವಥ್‌ರ ಸೃಜನಶೀಲತೆಯ ಕಾಣಿಕೆಯನ್ನು ನಿಚ್ಚಳವಾಗಿ ತೋರಿಸಿದವು.
ರಸಋಷಿ ಕುವೆಂಪು ಅವರ ಕೆಲವು ಗೀತೆಗಳು, ಶರೀಫ್ ಸಾಹೇಬರ ಕವಿತೆಗಳು ,
ಡಾ||ಕೆ.ಎಸ್.ನರಸಿಂಹಸ್ವಾಮಿಯವರ ಕವಿತೆಗಳು – ‘ಕೋಡಗನ ಕೋಳಿ ನುಂಗಿತ್ತ’ ‘ಹಾವು ತುಳಿದೆಯೇನೆ’ ‘ಗುಡಿಯ ನೋಡಿರಣ್ಣ’ ‘ಅಕ್ಕಿ ಆರಿಸುವಾಗ’, ‘ರಾಯರು ಬಂದರು’ ‘ನಿನ್ನೊಲುಮೆಯಯಿಂದಲೇ’ ‘ಒಂದಿರುಳು ಕನಸಿನಲಿ’ ಮುಂತಾದವು ಸಹೃದಯನ ಪಾಲಿಗೆ ರಸದೌತಣ ಪಡೆದಿದ್ದವು. ಇದೇ ರೀತಿ ಕುವೆಂಪು ಅವರ ಗೀತೆಗಳು ಅಪಾರ ಜನಪ್ರಿಯತೆ.
ಇಂತಹ ಕ್ಷಣಗಳಲ್ಲಿಯೇ ಸುಗಮ ಸಂಗೀತ ಕ್ಷೆÃತ್ರಕ್ಕೆ ಮತ್ತೊಂದು ಮೈಲಿಗಲ್ಲಾದ ನಿತ್ಯ ನೆನಪಿನಲ್ಲಿ ಉಳಿಯುವಂಥ ಧ್ವನಿಸುರುಳಿ (ಈಗ ಧ್ವನಿ ಸಾಂದ್ರಿಕೆಯಾಗಿಯೂ ಆಗಿರುವ) “ಮಾವು ಬೇವು” ಬಂದಿತು. ವಿಶೇಷತೆಗಳನ್ನೆÃ ಮೈತಾಳಿಕೊಂಡು ಕನ್ನಡಿಗರ ಮುಂದಿತ್ತು. ಆ ವಿಶೇಷತೆಗಳೇನೆಂದರೆ- ಮೊಟ್ಟ ಮೊದಲ ಬಾರಿಗೆ ಸುಗಮ ಸಂಗೀತ ಕ್ಷೆÃತ್ರಕ್ಕೆ ಅತ್ಯಂತ ಪ್ರಖ್ಯಾತರಾದ ಭಾರತದ ಚಲನಚಿತ್ರ ಹಿನ್ನಲೆ ಗಾಯಕ “ಪದ್ಮಭೂಷಣ” ಡಾ||ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ್ದು. ಸಿ.ಅಶ್ವಥ್ ಅವರ ಸಂಗೀತ ಮತ್ತು ಚಿತ್ರ ಸಾಹಿತಿಯೂ, ಕವಿಯೂ ಆದ ಡಾ||ದೊಡ್ಡರಂಗೇಗೌಡ ಅವರ ಕಾವ್ಯರಚನೆಗಳು ಇದ್ದದ್ದು.
ಸಂಪೂರ್ಣವಾಗಿ ಕಾವ್ಯ ಸಂವಹನಕ್ಕೆ ಬದ್ಧವಾದ ಸಾಹಿತ್ಯದ ಸತ್ವವನ್ನು ರಾಗದ ಮೂಲಕ ಸಹೃದಯನಿಗೆ ಸುಲಲಿತವಾಗಿ, ನೇರವಾಗಿ ಮನಸ್ಸಿಗೆ ತಲುಪಿಸುವ ಕಾರ್ಯವನ್ನು ಗಾಯಕ ಎಸ್.ಪಿ.ಬಿ. ನಿಚ್ಚಳವಾಗಿಯೂ “ಮಾವು ಬೇವು” ಧ್ವನಿ ಸುರಳಿಯ ಹತ್ತು ಗೀತೆಗಳ ಮೂಲಕ ಹಾಡಿ ತೋರಿಸಿಕೊಟ್ಟಿದ್ದಾರೆ.
ಕವಿ ಡಾ||ದೊಡ್ಡರಂಗೇಗೌಡ ಅವರ ಮನದಾಳದ ಅನೇಕಾನೇಕ ಭಾವನೆಗಳ ಸಾಕಾರಕ್ಕೆ ಸ್ಪಷ್ಟವಾದ ಅರ್ಥಬದ್ಧವಾದ, ಪರಿಣಾಮಕಾರಿಯಾದ ಇಂಬನ್ನು ತಮ್ಮ ಗಾಯನದಿಂದ ಎಸ್.ಪಿ.ಬಿ. ನೀಡಿದ್ದಾರೆ. ಬಹಳ ಮನಮೋಹಕವಾದ ಸ್ವರ ಸಂಯೋಜನೆಗಳನ್ನು ಮಾಡಿ ತುಂಬಾ ಕೋಮಲವಾದ ವಾದ್ಯನ್ನು ಬಳಸಿ- ನುಡಿಸಿದ್ದಾರೆ. ಸಿ.ಅಶ್ವಥ್. (ಹಿನ್ನೆಲೆ ಸಂಗೀತ – ಎಲ್.ವೈದ್ಯನಾಥನ್) “ಮೂಡುತ ರವಿ ರಂಗು ತಂದೈತೆ’’ಯಲ್ಲಿನ ಪ್ರಕೃತಿಯ ಚೆಲುವನ್ನು, ‘ಯಾರಿಗುಂಟು ಯಾರಿಗಿಲ್ಲ’ ಕವಿತೆಯ ಬದುಕಿನ ಸತ್ಯವನ್ನು, ‘ಸುಗ್ಗಿ ವ್ಯಾಳೇಗೆ’ ಹಾಡಿನಲ್ಲಿನ ಗ್ರಾಮ್ಯತೆಯ ಸೊಬಗನ್ನು, ಸುಗ್ಗಿಯ ಸಂಭ್ರಮವನ್ನು, ‘ಈ ವಿರಹ’ ಕಡಲಾಗಿದೆ. ಕವಿತೆಯಲ್ಲಿನ ಗಾಢ ಪ್ರೆÃಮದ ವಿರಹವೇದನೆಯನ್ನು, ‘ಮಾತಾಡೇ ನೀರೇ’ ಪ್ರೆÃಮದ ನಿವೇದನೆಯನ್ನು, ‘ಗಾಳಿ ಗೊಡ್ಡಿದಾ ದೀಪದಂತೆ’ ಕವಿತೆಯ ತಾತ್ವಿಕತೆಯನ್ನು, ‘ಹೂ ತೋಟದ’ ಕವಿತೆಯಲ್ಲಿ ಪ್ರೆÃಮೋಲ್ಲಾಸದ ನಿಚ್ಚಳತೆಯನ್ನು, ‘ ಮುಂಜಾನೆ ಮಂಜೆಲ್ಲ’ ಕವಿತೆಯ ಮನುಷ್ಯನ ವ್ಯಕ್ತಿತ್ವ ಮತ್ತು ನೀತಿ ಔನ್ನತ್ಯವನ್ನು ಸೂಕ್ಷö್ಮತೆಗಳನ್ನು ಹಾಡುವುದರ ಮೂಲಕವೇ ಕೇಳುಗರಿಗೆ ತಲುಪಿಸುವ ಕಾರ್ಯವನ್ನು ಮಾಡಿದ್ದಾರೆ.
ಉಲ್ಲಾಸ, ಉತ್ಸಾಹ, ಭಾವಗಳೊಂದಿಗೆ, ವಿಷಾದ ವಿಷಣ್ಣ ಖೇದ ಭಾವಗಳನ್ನು ಆಯಾ ಕವಿತೆಗಳ ವಸ್ತು ವಿಚಾರಕ್ಕೆ ಅನುಗುಣವಾಗಿ ಅತ್ಯಂತ ಪರಿಣಾಮಕಾರಿಯಾಗಿ ಸ್ವರ ಸಂಯೋಜನೆಗೆ ತಕ್ಕಂತೆ ರಾಗವನ್ನು ಆಧರಿಸಿ ಹಾಡಿ ತಮ್ಮ ಪ್ರತಿಭಾ ಸಾಮರ್ಥ್ಯವನ್ನು ಎಸ್.ಪಿ.ಬಿ. ಅವರು ‘ಮಾವು – ಬೇವು’ ಸುಗಮ ಸಂಗೀತದ ಧ್ವನಿಸುರಳಿ, ಧ್ವನಿಸಾಂದ್ರಿಕೆಯಲ್ಲಿ ಸಾಬೀತು ಪಡಿಸಿದ್ದಾರೆ. ಕೇವಲ ಕರ್ನಾಟಕದಲ್ಲಷ್ಟೆà ಅಲ್ಲದೆ ಪ್ರಪಂಚದ ಆದ್ಯಂತ ಕನ್ನಡ ಸಂಘಗಳಲ್ಲಿ, ಅಮೇರಿಕಾದ ಹದಿನಾರು ರಾಜ್ಯಗಳಲ್ಲಿ ದುಬೈ, ಖತಾರ್, ಬೆಹರೇನ್, ಆಸ್ಟೆçÃಲಿಯಾದಲ್ಲಿಯೂ ‘ಮಾವು – ಬೇವು’ ಭಾವಗೀತೆಯ ಧ್ವನಿಸುರುಳಿ ಅತ್ಯಂತ ಜನಪ್ರಿಯವಾಗಿದೆ. ಡಾ||ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಸ್ವತಃ ಆ ಸ್ಥಳಗಳಿಗೆ ಹೋಗಿ ಸಂಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಆ ಸಂದರ್ಭದಲ್ಲಿ ‘ಗಾಳಿಗೊಡ್ಡಿದಾ’, ‘ಯಾರಿಗುಂಟು ಯಾರಿಗಿಲ್ಲ’ ಭಾವಗೀತೆಗಳನ್ನು ಹಾಡಿ ಕನ್ನಡÀದ ಕೀರ್ತಿಯನ್ನು ಮೆರೆಸಿದ್ದಾರೆ. ಕನ್ನಡ ಸಂಸ್ಕೃತಿಯ ವಕ್ತಾರರಾಗಿದ್ದಾರೆ.
ಮನೆ ಮಾತು ತೆಲುಗು ಆಗಿದ್ದರೂ ಕನ್ನಡದ ಬಗ್ಗೆ ವಿಶೇಷ ಪ್ರಿÃತಿ, ಅಭಿಮಾನ ಡಾ||ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗಿದೆ. ಕನ್ನಡದಲ್ಲಿ ಈಗಾಗಲೇ ನೂರಾರು ಭಾವಗೀತೆಗಳನ್ನು ಹಾಡಿರುವ ಎಸ್.ಪಿ.ಬಿ. ಭಾವಗೀತೆಗಳನ್ನು ಅತ್ಯಂತ ಸೃಜನಶೀಲ, ಸೌಜನ್ಯ, ಸುಸಂಸ್ಕೃತ ಪ್ರತಿಭಾವಂತ ಗಾಯಕಕರು. ನಿರಹಂಕಾರದ ಅಸಾಮಾನ್ಯ ಮಹಾಸಂಗೀತಜ್ಞಾನಿ.
ಪ್ರತಿಯೊಂದು ಹಾಡಿನ ಸಾಲನ್ನು ಅದರ ಅರ್ಥವನ್ನು ತಾವೇ ಆಯಾ ಕವಿ, ಗೀತರಚನೆಕಾರರಿಂದ ನೇರವಾಗಿಯೇ ಕೇಳಿ ತಿಳಿದು, ತಮ್ಮ ಹಾಡಿನ ಪುಸ್ತಕದಲ್ಲಿ ತಾವೇ ಬರೆದುಕೊಂಡು ಅತ್ಯಂತ ನಿಖರವಾಗಿ, ಸ್ಪಷ್ಟವಾಗಿ, ಭಾವಪೂರ್ಣವಾಗಿ, ವಿವೇಕದಿಂದ, ಔಚಿತ್ಯದಿಂದ, ತಾದಾತ್ಮö್ಯತೆಯಿಂದ, ಸ್ವರಜ್ಞಾನದಿಂದ, ಪರಿಪೂರ್ಣವಾಗಿ ಹಾಡುತ್ತಾರೆ ಡಾ||ಎಸ್.ಪಿ.ಬಾಲಸುಬ್ರಹ್ಮಣ್ಯಂ.
ಸಂಗೀತ ನಿರ್ದೇಶಕರೂ, ಗಾಯಕರೂ ಆದ ದಿ||ಜಿ.ವಿ. ಅತ್ರಿಯವರ ‘ವಿಶ್ವಮಾತೆ’ ಧ್ವನಿಸಾಂದ್ರಿಕೆಯಲ್ಲಿ ವರಕವಿ ಬೇಂದ್ರೆಯವರ ‘ವಿಶ್ವಮಾತೆಯ ಗರ್ಭ ಕಮಲ ಸಂಜಾತೆÀ’ ಕವಿತೆಯನ್ನು ಅತ್ಯಂತ ಭಾವಪೂರ್ಣವಾಗಿ, ಕೇಳಿದರೆ ಮೈಮರೆಯುವಷ್ಟು ರೀತಿಯಲ್ಲಿ ಎಸ್.ಪಿ.ಬಿ. ಅವರು ಹಾಡಿದ್ದಾರೆ. ಕವಿಯ ತೀವ್ರವಾದ ಭಾವಕ್ಕೆ ಪರಿಣಾಮಕಾರಿಯಾದ ಗಾನ ಮಾಧುರ್ಯವನ್ನು ನೀಡಿದ್ದಾರೆ. ಒಂದು ಕಾವ್ಯವನ್ನು ಬಹುಜನ ಸಂವಹನ ಸಾಧನವನ್ನಾಗಿ ಮಾಡಿದ್ದಾರೆ. ಭಾವಗೀತೆಯ ವಾಗರ್ಥದ ಸಂವಹನಕ್ಕೆ ಈ ಗಾಯಕರು ಕಾರಣರಾಗಿದ್ದಾರೆ.
ಕವಿ ಡಾ||ಎನ್.ಎಸ್.ಲಕ್ಷಿö್ಮÃನಾರಾಯಣಭಟ್ಟರ ಕವಿತೆಗಳಾದ – ‘ತಪ್ಪು ಯಾರದೋ ಯಾರಿಗೋ ಶಿಕ್ಷೆ’ಯಲ್ಲಿನ ಸತ್ಯ, ಧರ್ಮ ಪ್ರಜ್ಞೆಯನ್ನು ಮತ್ತು ಎಲ್ಲಿದ್ದರೂ ನಿನ್ನದೇ ಧ್ಯಾನ’ ಕವಿತೆಯಲ್ಲಿನ ನಿರ್ಮಲ ಪ್ರಿÃತಿ ಭಾವನೆಗಳನ್ನು ಗಾಯನದ ಮೂಲಕ ಎತ್ತಿ ಮೆರೆಸಿದ್ದಾರೆ ಎಸ್.ಪಿ.ಬಿ. ಅವರು ‘ತರಂಗಲೀಲೆ’ ಭಾವಗೀತೆಗಳ ಧ್ವನಿಸಾಂದ್ರಿಕೆಯಲ್ಲಿ ಎಸ್.ಬಾಲಿ ಅವರ ಸಂಗೀತಕ್ಕೆ ಮಧುರ ಸ್ವರವಾಗಿದ್ದಾರೆ.
‘ರಾಗ ರತಿ’ ಎಂಬ ಭಾವಗೀತೆಗಳ ಧ್ವನಿ ಸುರುಳಿಯಲ್ಲಿ ಡಾ||ಎಸ್.ಪಿ.ಬಿ. ಅವರು ವಿಜಯಭಾಸ್ಕರ್ ಸಂಗೀತ ನಿರ್ದೇಶನದಲ್ಲಿ ಕೆ.ಸಿ.ಶಿವಪ್ಪ ಅವರ ಭಾವ ಗೀತೆಗಳನ್ನು ಹಾಡಿದ್ದಾರೆ. ‘ಮುಗುದೆ ಮಲಗಿಹಳು’, ‘ಮೂಡಿ ಬಂದೆ ಅಂದು ನೀನು’ ‘ಬಾ ಬಾರೆ ಓ ಚೆಲುವೆ’ ‘ನೀಳಕೇಶ’ ‘ಮುನಿಯದಿರು’ ಎಂಬ ಕವಿತೆಗಳಲ್ಲಿನ ಪ್ರೆÃಮ ಭಾವನೆಗಳನ್ನು ಹಾಡುವ ಮೂಲಕ ಸಾಕಾರಗೊಳಿಸಿದ್ದಾರೆ. ರಾಜನ್ ನಾಗೇಂದ್ರ ಸಂಗೀತ ನೇಡಿದ ‘ಷೋಡಶಿ’ ಧ್ವನಿಸಾಂದ್ರಿಕೆಯಲ್ಲಿ ಸಂಗಮೇಶ್ ರಚಿಸಿದ ‘ವೃತ ಕಾಣದಿರು’ ‘ಸೊಬಗಿ ಸಿಂಗಾರಿ’ ಪ್ರೆÃಮದ ಕನಸು ಆಸೆ ಸೊಗಸುಗಳನ್ನು ಗಾಯನದ ಮೂಲವೇ ಸಾಕ್ಷಾತ್ಕಾರಿಸಿ ಶೋತೃಗಳಿಗೆ, ರಸಿಕರಿಗೆ ನೀಡಿದ್ದಾರೆ ಎಸ್.ಪಿ.ಬಿ.ಅವರು.
ಈ ವರೆವಿಗೆ ನಲ್ವತ್ತು ಸಾವಿರ ಗೀತೆಗಳನ್ನು ಹಾಡಿರುವ, ಒಂದೇ ದಿನದಲ್ಲಿ ಹದಿನೆಂಟು ಹಾಡುಗಳನ್ನು ಹಾಡಿ ದಾಖಲೆ ನಿರ್ಮಿಸಿರುವ ಪದ್ಮಶ್ರಿÃ ಡಾ||ಶ್ರಿÃಪತಿ ಪಂಡಿತಾರಾಧ್ಯ ಬಾಲಸುಬ್ರಹ್ಮಣ್ಯಂ ಅವರು ಬಹುಭಾಷಾ ಗಾಯಕರು. “ಕನ್ನಡವೇ ದೇವರು’’ ಭಾವಗೀತೆಗಳ ಧ್ವನಿಸಾಂದ್ರಿಕೆಯಲ್ಲಿ ಕವಿ ಡಾ||ಡಿ.ಭರತ್ ಬರೆದ ‘ಉಸಿರಲಿ ಉಸಿರುಸಿರಲಿ ಎಂದೂ ತುಂಬಿದೆ ನಮ್ಮ ಪ್ರಿÃತಿ ಕನ್ನಡ’ ಎಂಬ ಕವಿತೆಯನ್ನು ಬಹಳ ಸುಶ್ರಾವ್ಯವಾಗಿ ಹಾಡಿ ನಿರಂತರ ಕನ್ನಡಾಭಿಮಾನ ಮೆರೆಸಿದ್ದಾರೆ. ಹೀಗೆ ಸುಗಮ ಸಂಗೀತ ಕ್ಷೆÃತ್ರಕ್ಕೆ ಗಾಯನದ ಕಾಣಿಕೆ ನೀಡುತ್ತ ಭಾವಗೀತೆಯ ಬೆಳವಣಿಗೆ ಹಾಗೂ ಅಪಾರ ಜನಪ್ರಿಯತೆಗೆ ಕಾರಣರಾಗಿದ್ದಾರೆ.
Source – Sakhigeetha.com