ಕೆಲವರಿಗೆ ತಾವು ಮಾಡಬೇಕಾದ ಕರ್ತವ್ಯದ ಬಗ್ಗೆ ಸಾಕಷ್ಟು ಅರಿವು ಇರುತ್ತದೆ ಅದಕ್ಕಾಗಿ ಅವರು ದಿನ ಪ್ರತಿ ಯೋಜನೆಯನ್ನು ಹಾಕಿಕೊಳ್ಳುತ್ತಾರೆ ಆದರೆ ಕೊನೆಗೆ ಅನಿವಾರ್ಯವಾಗಿ ಅವರು ಅನುಸರಿಸುವ ಅವಸರ ಗಡಿಬಿಡಿಯಿಂದಾಗಿ ತಾವು ನಿರ್ವಹಿಸುವ ಕರ್ತವ್ಯದಲ್ಲಿ ನಿರೀಕ್ಷಿತ ಯಶಸ್ಸನ್ನು ಸಾದಿಸುವುದಿಲ್ಲ ಅವರ ಈ ಅಪೂರ್ಣ ಯಶಸ್ಸಿಗೆ ಕಾರಣ ಅವಸರ.ಅವಸರಕ್ಕೆ ಕಾರಣ ಅವರಲ್ಲಿ ಸಮಯ ಪ್ರಜ್ಞೆ ಇಲ್ಲದಿರುವುದು ಆದ್ದರಿಂದ ನಾವು ಮಾಡಬೇಕಾದ ಕಾರ್ಯವೆಂದರೆ ನಾವು ನಾಳೆ ನಿರ್ವಹಿಸಬೇಕಾದ ಕೆಲಸಕ್ಕೆ ದಿನದಲ್ಲಿನ ಸಮಯವನ್ನು ಕರಾರುವಕ್ಕಾಗಿ ವಿಂಗಡಿಸಿ ಒಂದು ವೇಳಾಪಟ್ಟಿಯನ್ನು ಹಾಕಿಕೊಳ್ಳಬೇಕು ಆ ವೇಳಾಪಟ್ಟಿಯಂತೆ ಕಟ್ಟುನಿಟ್ಟಾಗಿ ನಡೆಯಬೇಕು ಅಂದಾಗ ಅಲ್ಲಿ ಅವಸರ ಮಾಡುವ ಪ್ರಶ್ನೆಯೇ ಬರುವುದಿಲ್ಲ. ನಮ್ಮ ಕಾರ್ಯವು ಸರಾಗವಾಗಿ ನಡೆಯುತ್ತದೆ. ಹಲವರು ಈ ರೀತಿ ವೇಳಾಪಟ್ಟಿಯನ್ನು ಹಾಕಿಕೊಳ್ಳುತ್ತಾರೆ ಆದರೆ ಅದರಂತೆ ನಡೆದುಕೊಳ್ಳುವುದಿಲ್ಲ. ಮುಂಜಾನೆ ೧೦-೩೦ ಘಂಟೆ ಆಫೀಸಿಗೆ ಹೊರಡಬೇಕಾಗುತ್ತದೆ ಆದರೆ ಅವರು ಹಾಸಿಗೆಯಿಂದ ಮೇಲೇಳುವುದು ೯-೩೦ ಕ್ಕೆ ಆಗ ಶುರುವಾಯಿತೆನ್ನಿ ಅವರ ಗಡಿಬಿಡಿ ಬೆಡ್‌ಕಾಫಿ ಕುಡಿಯುವುದು, ಹಲ್ಲುಜ್ಜುವುದು, ಮುಖ ತೊಳೆಯುವುದು, ಸ್ನಾನ ಮಾಡುವುದು ತಿಂಡಿ ತಿನ್ನುವುದು, ಬಟ್ಟೆ ಹಾಕಿಕೊಳ್ಳುವುದು ಎಲ್ಲವೂ ಗಡಿಬಿಡಿಯಾಗಿಯೇ! ಮಧ್ಯೆ ಮನೆ ಗಡಿಯಾರದ ಮುಳ್ಳುಗಳು ಮುಂದೋಡುತ್ತಿರುವ ಭಾಸವಾಗಿ ಉಧ್ವೆÃಗದೊಡನೆ ರಕ್ತದೊತ್ತಡ ಏರುತ್ತಿರುತ್ತದೆ. ರಕ್ತದೊತ್ತಡ ಹೆಚ್ಚುತ್ತಿದ್ದಂತೆ ಉದ್ವೆÃಗವು ಹೆಚ್ಚಾಗಿ ಎದುರು ಕಂಡವರ ಮೇಲೆ ಹರಿಹಾಯುತ್ತಿರುತ್ತಾರೆ. ಗಡಿಬಿಡಿಯ ಕಾರಣದಿಂದಾಗಿ ಆ ದಿನದ ಕಾರ್ಯವು ಸುರಳೀತವಾಗಿರುವುದಿಲ್ಲ. ಮನೆಯಲ್ಲಿ ಶಾಂತಿ ಭಂಗ ಮಾಡಿಕೊಳ್ಳುವುದು ತಪ್ಪುವುದಿಲ್ಲ, ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳು ಮತ್ತು ತಾಯಂದಿರು ಒಂದು ವೇಳಾಪಟ್ಟಿಯನ್ನು ರೆಡಿಮಾಡಿ ಅದರ ಪ್ರಕಾರ ಬೆಳಗ್ಗೆ ಬೇಗ ಎದ್ದು ತಮ್ಮ ಕರ್ತವ್ಯವನ್ನು ಮುಗಿಸಿದರೆ ಮಕ್ಕಳು ಶಾಲೆಗೆ ಸರಿಯಾದ ಸಮಯಕ್ಕೆ ತಲುಪಬಹುದು. ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಅವಸರವು ಕೆಲವೊಮ್ಮೆ ಗಂಭೀರ ಅನಾಹುತಕ್ಕಿÃಡು ಮಾಡುತ್ತದೆ. ಅವಸರದಿಂದ ಉದ್ವೆÃಗ, ಮಾನಸಿಕ ಗೊಂದಲ, ಅನ್ಯಮನಸ್ಕತೆ, ಚಿತ್ತಚಂಚಲತೆಯುಂಟಾಗಿ ನಾವು ವಿವೇಕವನ್ನೆÃ ಕಳೆದುಕೊಳ್ಳುತ್ತೆÃವೆ. ಆದ್ದರಿಂದ ಯಾವುದೇ ಕೆಲಸವನ್ನು ಶಾಂತ ಚಿತ್ತದಿಂದ ಯೋಚಿಸಿಮಾಡಬೇಕು. ಸುಧೀರ್ಘ ಅವಧಿಯ ಕೆಲಸವನ್ನು ಕ್ಷಣಾರ್ಧದಲ್ಲಿ ಮಾಡಭೇಕೆಂಬ ಹುಚ್ಚುಹಂಬಲವು ಬೇಡ. ಸಮಯಕ್ಕೆ ಸರಿಯಾಗಿ ನಮ್ಮ ಕೆಲಸವನ್ನು ನಿರ್ವಹಿಸಿ ಸಫಲತೆಯ ತೃಪ್ತಿಯನ್ನು ಅನುಭವಿಸುವುದೇ ಜಾಣತನ. ಆದ್ದರಿಂದ ಕೇವಲ ಕರ್ತವ್ಯ ಪ್ರಜ್ಞೆಯೊಂದಿದ್ದರೆ ಸಾಲದು, ಅದರ ಜೊತೆಗೆ ಸಮಯ ಪ್ರಜ್ಞೆಯು ಇರಬೇಕು.
Source – Sakhigeetha.com