ವಾಟ್ಸಪ್‌ನಲ್ಲಿ ತೂರಿಬಂದ ಒಂದು ಸಂದೇಶ ವಿಶೇಷವಾಗಿ ನನ್ನ ಗಮನ ಸೆಳೆಯಿತು. ಅದನ್ನು ಸಮಾನವಾಗಿ ಆಲೋಚಿಸುವ ಗೆಳೆಯರೊಂದಿಗೆ ಹಂಚಿಕೊಳ್ಳಬೇಕು ಎನಿಸಿತು. ಒಂದು ಸಣ್ಣ ಟಿಪ್ಪಣಿಯೊಂದಿಗೆ ಸುಮಾರು ನೂರು ಜನ ಗೆಳೆಯರಿಗೆ ಅದನ್ನು ರವಾನಿಸಿದೆ. ಸಂದೇಶದಲ್ಲಿ ಒಂದು ತೈಲ ವರ್ಣಚಿತ್ರ ಇತ್ತು. ಅದು ಪ್ರಾಚೀನ ಅಥೆನ್ಸ್ನಲ್ಲಿದ್ದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಬಂಧಿಸಿದ್ದಾಗಿತ್ತು. ಸಂಸತ್ ಭವನದ ನಡುವೆ ಇದ್ದ ಪ್ರಾಂಗಣದಲ್ಲಿ ನೂರಾರು ಜನ ನೆರೆದಿದ್ದಾರೆ. ಅವರ ನಡುವೆ ಒಬ್ಬ ಎದ್ದುನಿಂತು ಧೀರೋದಾತ್ತನಂತೆ ಒಂದು ಕೈ ಮೇಲೆತ್ತಿ ತನ್ನ ಅಭಿಪ್ರಾಯವನ್ನು ಮಂಡಿಸುತ್ತಿದ್ದಾನೆ. ಉಳಿದವರು ಅವನ ಮಾತುಗಳನ್ನು ಕುತೂಹಲ ಆಸಕ್ತಿಗಳಿಂದ ಆಲಿಸುತ್ತಿದ್ದಾರೆ. ಚಿತ್ರದ ಕೆಳಗಿರುವ ಸಂದೇಶ ಇಂತಿದೆ: “ವಿಶ್ವದ ಮೊದಲ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದ್ದ ಪ್ರಾಚೀನ ಅಥೆನ್ಸ್ನಲ್ಲಿ `ಆಸ್ಟಾçಸಿಸಮ್’ ಎಂದು ಕರೆಯಲಾಗುತ್ತಿದ್ದ ಒಂದು ಪದ್ಧತಿಯಿತ್ತು. ಅದರ ನಿಯಮದಂತೆ ಅಥೆನ್ಸ್ನ ಪ್ರಜೆಗಳೆಲ್ಲ ವರ್ಷದಲ್ಲಿ ಒಂದು ದಿನ ಒಟ್ಟಾಗಿ ಸೇರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ವಿನಾಶಕಾರಿ, ಗಂಡಾಂತರ ಎನಿಸುವ ರಾಜಕಾರಣಿಯನ್ನು ಆಯ್ಕೆಮಾಡಲು ಮತ ಚಲಾಯಿಸುತ್ತಿದ್ದರು. ಅದರಲ್ಲಿ ಗೆಲ್ಲುತ್ತಿದ್ದ ರಾಜಕಾರಣಿಯನ್ನು ಹತ್ತು ವರ್ಷಗಳ ಕಾಲ ಅಥೆನ್ಸ್ನಿಂದ ಗಡೀಪಾರು ಮಾಡಲಾಗುತ್ತಿತ್ತು.” ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕನಾದ, ಬಲಿಷ್ಠನೂ ದುರ್ಜನನೂ ಜನಮೆಚ್ಚಿಕೆಯಿಲ್ಲದವನೂ ಆದ ರಾಜಕಾರಣಿಯನ್ನು ದೇಶದಿಂದ ಹೊರಗಟ್ಟಲು ಅಥೆನ್ಸ್ನವರು ಅನುಸರಿಸುತ್ತಿದ್ದ ಕ್ರಮವನ್ನು ನಾವೂ ಅಳವಡಿಸಿಕೊಂಡಲ್ಲಿ ನಮ್ಮ ಭ್ರಷ್ಟ, ದುಷ್ಟ, ನೀಚ, ಘಾತುಕ ರಾಜಕಾರಣಿಗಳಿಂದ ರಾಜ್ಯವನ್ನೂ ರಾಷ್ಟçವನ್ನೂ ಜನತಂತ್ರ ವ್ಯವಸ್ಥೆಯನ್ನೂ ಉಳಿಸಿಕೊಳ್ಳಬಹುದಲ್ಲವೇ? ಎನ್ನುವ ಟಿಪ್ಪಣಿಯನ್ನು ಈ ಸಂದೇಶದ ಜೊತೆಗೆ ಕಳಿಸಿದ್ದೆ. ಬಹಳಷ್ಟು ಜನ ಸಂದೇಶದ ಬಗೆಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ಕೆಲವರು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲಿಲ್ಲ. ಅವರು ಓದಿಕೊಂಡಿದ್ದಾರೆನ್ನುವುದಕ್ಕೆ ಸಾಕ್ಷಿಯಾಗಿ ನೀಲಿಬಣ್ಣದ ಎರಡು `ಸರಿ’ ಗುರುತುಗಳು ಗೋಚರಿಸಿದವು.
ಈ ಲೇಖನ ಬರೆಯಲು ನನ್ನನ್ನು ಪ್ರೆÃರೇಪಿಸಿದ ಒಂದು ಸಂಗತಿ–ಐದಾರು ವರ್ಷಗಳ ಕಾಲ ನನ್ನ ಸಹೋದ್ಯೊÃಗಿಯಾಗಿದ್ದ, ಅಧ್ಯಯನಶೀಲ ಮತ್ತು ವಿಚಾರವಂತ ನಿವೃತ್ತ ಕನ್ನಡ ಅಧ್ಯಾಪಕರೊಬ್ಬರು ಸಂದೇಶಕ್ಕೆ ಪ್ರತಿಕ್ರಿಯಿಸಿದ ರೀತಿ. “ಭಾರತದಲ್ಲಿ ಎಲ್ಲವೂ ಕನಸೇ. ಮೇರಾ ದೇಶ್ ಮಹಾನ್ ಎಂಬ ಮಾತೇ ಹಸಿ ಸುಳ್ಳಾಗಿದೆ. ಭಾರತದ ಮೌಲ್ಯ ಇಂದು ಭ್ರಷ್ಟತೆಯೇ ಆಗಿದೆ. ಭಾರತಕ್ಕೆ ನಿಜಕ್ಕೂ ಭವಿಷ್ಯವಿಲ್ಲ. ಇದನ್ನು ನೋಡಲು ಮುಂದೆ ನಾವೂ ಇರುವುದಿಲ್ಲ…” ಇತ್ತಿÃಚಿನ ವರ್ಷಗಳಲ್ಲಿ ದೇಶದಲ್ಲಿ ನಡೆಯುತ್ತಿರುವ, ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ಸ್ನೆÃಹಿತರ ಮನಸ್ಸನ್ನು ಆವರಿಸಿಕೊಂಡಿರುವ ಭಯ, ಆತಂಕ, ನಿರಾಶೆ, ವಿಷಾದ ಇವೆಲ್ಲವೂ ಸಕಾರಣವಾದದ್ದು ಅನ್ನಿಸುತ್ತದೆ. ಭಾರತದ ಭವಿಷ್ಯ ಉಜ್ವಲವಾಗಿರಬೇಕೆಂದು ಬಯಸುವವರು, ಅದನ್ನು ಮಾತು ಭಾಷಣ ಆಶ್ವಾಸನೆಗಳಲ್ಲಿ ತುಂಬಿ ತುಳುಕಿಸುವವರು ದೇಶದ ಅಂಥ ಉಜ್ವಲ ಭವಿಷ್ಯ ಯುವಜನತೆಯ ಭವಿಷ್ಯದ ಮೇಲೆ ನಿಂತಿದೆ ಎನ್ನುವ ಕನಿಷ್ಟ ಆಲೋಚನೆಯನ್ನೂ ಮಾಡಿದಂತಿಲ್ಲ. ಶಿಕ್ಷಣ ಸಂಸ್ಥೆಗಳೆನ್ನುವ ಕಾರ್ಖಾನೆಗಳಿಂದ ಪ್ರತಿವರ್ಷ ಲಕ್ಷಾಂತರ ಸಂಖ್ಯೆಯ ಯುವಜನರು ಪದವೀಧರರಾಗಿ ಹೊರಬರುತ್ತಿದ್ದಾರೆ. ಬದುಕಿಗೆ ಕಿಂಚಿತ್ತೂ ಉಪಯುಕ್ತವಾಗದ ಸಂಗತಿಗಳನ್ನು ತಲೆಯೊಳಗೆ ತುಂಬಿಕೊಂಡು ಹೊರಬರುವ ಅವರು ವಾಸ್ತವ ಪ್ರಪಂಚಕ್ಕೆ ಮುಖಾಮುಖಿಯಾದಾಗ ದಿಗ್ಭಾçಂತರಾಗುತ್ತಾರೆ. ಕನಸುಗಳಿಲ್ಲದ, ಮಹತ್ವಾಕಾಂಕ್ಷೆಗಳಿಲ್ಲದ, ಗುರಿಗಳಿಲ್ಲದ, ಛಲವಿಲ್ಲದ, ಸಂಕಲ್ಪವಿಲ್ಲದ ಆ ಬರಡು ಭೂಮಿಗಳಲ್ಲಿ ಯಾವ ಫಲವನ್ನು ತಾನೇ ನಿರೀಕ್ಷಿಸಲಾದೀತು? ಶ್ರಿÃಮಂತ ಕುಟುಂಬಕ್ಕೆ ಸೇರಿದವರಾಗಿದ್ದರೆ ಅಪ್ಪ ಮಾಡಿಟ್ಟ ಆಸ್ತಿಯನ್ನು ಅನುಭವಿಸುತ್ತ, ಶ್ರಿÃಮಂತಿಕೆಯ ಮೋಜು ಮತ್ತು ವ್ಯಸನಗಳಿಗೆ ಬಲಿಯಾಗಿ ಸಮಾಜಕ್ಕೆ ಭಾರವಾಗುತ್ತಾರೆ; ದುಷ್ಟಶಕ್ತಿಗಳ ಸೆಳೆತಕ್ಕೆ ಒಳಗಾದರೆ ಸಮಾಜಘಾತುಕರಾಗುತ್ತಾರೆ. ಅನೇಕರನ್ನು ಅನೇಕ ರೀತಿಗಳಲ್ಲಿ ಕೆಡಿಸುತ್ತಾರೆ. ಹಾಗೆಯೇ ಮಧ್ಯಮ, ಬಡಕುಟುಂಬಗಳಿಗೆ ಸೇರಿದವರು ಬದುಕಿನಲ್ಲಿ ನೆಲೆ ನಿಲ್ಲುವ, ತಮ್ಮ ಕುಟುಂಬಗಳಿಗೆ ಆಧಾರವಾಗಬೇಕೆನ್ನುವ ಹಂಬಲದಿಂದ ಉದ್ಯೊÃಗಗಳನ್ನು ಹುಡುಕುತ್ತಾ, ದಣಿಯುತ್ತಾ, ನಿರಾಶರಾಗುತ್ತ ಹತಾಶೆಯ ಅಂಚಿಗೆ ಸರಿಯುತ್ತಾರೆ. ಅಂಥವರು ಮುಂದೆ ಒಳ್ಳೆಯದಾದೀತು ಎನ್ನುವ ಭರವಸೆಯಿರಿಸಿಕೊಂಡು ಮಾಲ್‌ಗಳಂಥ ಐಷಾರಾಮಿ ಪ್ರಪಂಚದಲ್ಲಿ, ಅಂಥದೇ ಇನ್ನೊಂದು ತಾಣದಲ್ಲಿ ತಿಂಗಳಿಗೆ ಐದರಿಂದ ಹದಿನೈದು ಸಾವಿರ ಸಂಬಳಕ್ಕೆ ದುಡಿಯುತ್ತ ಬದುಕುವ ಆಸಕ್ತಿಯನ್ನೆÃ ಕಳೆದುಕೊಳ್ಳುತ್ತಾರೆ. ಸಂಸಾರಕ್ಕೂ ಒತ್ತಾಸೆಯಾಗಲು ಸಾಧ್ಯವಾಗದೆ, ತಮ್ಮ ಖರ್ಚುವೆಚ್ಚಗಳಿಗೂ ಸರಿದೂಗಿಸಿಕೊಳ್ಳಲಾಗದೆ ಒದ್ದಾಡುತ್ತಾರೆ. ಅಂಥವರ ಅತಿ ಸೂಕ್ಷö್ಮತೆಯೇ ಅವರನ್ನು ಖಿನ್ನತೆಗೂ ಅಲ್ಲಿಂದ ಆತ್ಮಹತ್ಯೆಗೂ ದೂಡಿದರೆ ಅಚ್ಚರಿಯಿಲ್ಲ. ಯುವ ಸಬಲೀಕರಣದಂಥ ಇಲಾಖೆಗಳು ಕೋಟಿಗಟ್ಟಲೆಯ ಯೋಜನೆಗಳನ್ನು ಸಿದ್ಧಪಡಿಸಿ ನನಗಿಷ್ಟು ನಿನಗಿಷ್ಟು ಅಂತ ತಿಂದುಹಾಕಿವೆಯೇ ಹೊರತು, ಯುವಜನರ ಸಬಲೀಕರಣವನ್ನಾಗಲೀ ಉದ್ಧಾರವನ್ನಾಗಲೀ ಮಾಡಿದ ಉದಾಹರಣೆಗಳು ಗೋಚರವಾಗುತ್ತಿಲ್ಲ. ಯುವಜನರ ಭವಿಷ್ಯ ನಿರ್ಮಾಣದ ಬಗೆಗೆ ಚಿಂತನೆಯನ್ನೆÃ ಮಾಡದೆ, ಅವರಿಗೆ ನೆರವಾಗುವ ಯಾವ ಯೋಜನೆಗಳನ್ನೂ ಅನುಷ್ಠಾನಕ್ಕೆ ತರದೆ ಬರೀ ಭಾಷಣ ಹೊಡೆದುಕೊಂಡು, ಭರವಸೆಗಳನ್ನು ಜಡಿದುಕೊಂಡು ವಿಧಾನಸಭೆ, ಲೋಕಸಭೆ ಅವಧಿಗಳನ್ನು ಪೂರೈಸಿದರೆ ಅದರಿಂದ ಭಾರತದ ಭವಿಷ್ಯ ರೂಪಿತವಾಗುವುದೇ?
ಇದಕ್ಕಿಂತಲೂ ಭಯಂಕರವಾದ, ಆಘಾತಕಾರಿಯಾದ, ಭಾರತದ ಭವಿಷ್ಯವನ್ನೆà ಸರ್ವನಾಶಕ್ಕೆ ಈಡುಮಾಡುಬಲ್ಲ ಸಂಗತಿಯೆಂದರೆ- ಭಾರತ ಸಂವಿಧಾನದ ಮೂರು ಕಣ್ಣುಗಳೆಂದೇ ಭಾವಿಸಲಾಗಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಮಹಾಭ್ರಷ್ಟಾಚಾರಗಳನ್ನೆಸಗುತ್ತ, ದೊಡ್ಡದೊಡ್ಡ ಆರೋಪಗಳು ಸಾಬೀತಾಗುತ್ತ ದೇಶವನ್ನು ಅಧಃಪತನದ ದಾರಿಯಲ್ಲಿ ವೇಗವಾಗಿ ಸಾಗುವಂತೆ ಮಾಡಿರುವುದು. ರಾಷ್ಟಿçÃಯ ಪಕ್ಷಗಳೆಂದು ಮೆರೆಯುತ್ತಿರುವಂಥವೇ ಅಪರಾಧದ ಆರೋಪ ಹೊತ್ತವರನ್ನೂ, ಅಪರಾಧಕ್ಕಾಗಿ ಸೆರೆಮನೆ ವಾಸ ಅನುಭವಿಸಿದವರನ್ನೂ ಅವರ ಬಳಿ ಕೊಳ್ಳೆ ಹೊಡೆದು ಇಟ್ಟುಕೊಂಡಿರುವ ಅಪಾರ ಪ್ರಮಾಣದ ಹಣ ಇದೆ, ಅದು ಚುನಾವಣೆಯಲ್ಲಿ ಅನುಕೂಲಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ರತ್ನಗಂಬಳಿ ಹಾಸಿ ಬರಮಾಡಿಕೊಂಡು, ಭಕ್ತಿಪೂರ್ವಕವಾಗಿ ಟಿಕೆಟ್ ಕೊಟ್ಟು, ಚುನಾವಣೆಗಳಲ್ಲಿ ಗೆಲ್ಲಿಸಿ, ಮಂತ್ರಿಸ್ಥಾನವನ್ನೂ ಕೊಟ್ಟು ಮೆರೆಸುತ್ತಿರುವುದ;. ಅಂಥವರು ಖರ್ಚು ಮಾಡಿದ ಹಣವನ್ನು ಬಡ್ಡಿ ಸಮೇತ ಸಂಪಾದಿಸಿಕೊಳ್ಳಲು ಅನುಸರಿಸುವ ಹಗಲು ದರೋಡೆಯನ್ನು ಕಂಡೂ ಕಾಣದಂತೆ ಕೇಳಿಸಿದರೂ ಕೇಳಿಸದಂತೆ ಸುಮ್ಮನಿದ್ದು, ಅಂಥ ಭ್ರಷ್ಟಾಚಾರದ ರಕ್ತಬೀಜಾಸುರ ಸಂತತಿಯ ಕಬಳಿಕೆಗೆ ಅನುವು ಮಾಡಿಕೊಡುವುದು. ಈ ಬಕಾಸುರ ರಾಜಕಾರಣಿಗಳು ಐದು ಹತ್ತು ವರ್ಷಗಳ ಹಿಂದೆ ಯಾವ ಸ್ಥಿತಿಯಲ್ಲಿದ್ದರು? ಇಷ್ಟೊಂದು ಕಡಿಮೆ ಅವಧಿಯಲ್ಲಿ ಅವರ ಆದಾಯ ಕೋಟಿ ಕೋಟಿ ಏರಿಕೆಯಾಗುವುದು ಸಾಧ್ಯವೇ? ಎಂದು ವರಮಾನ ತೆರಿಗೆಯಾಗಲೀ ಚುನಾವಣಾ ಆಯೋಗವಾಗಲೀ ನ್ಯಾಯಾಂಗವಾಗಲೀ ಗಂಭೀರವಾಗಿ ಚಿಂತನೆ ಮಾಡಿ, ಅವರ ಭ್ರಷ್ಟತೆಯ ಬೇರುಗಳನ್ನು ಕತ್ತರಿಸುತ್ತಿಲ್ಲವಾದ್ದರಿಂದ ಅವರ ಪೊಗರು, ಧಿಮಾಕು ಏರುಮುಖಿಯಾಗೇ ನಡೆದಿದೆ. ಅಲ್ಲೊಬ್ಬರು ಇಲ್ಲೊಬ್ಬರು ಸಾಮಾಜಿಕ ಕಾರ್ಯಕರ್ತರೋ ಪತ್ರಕರ್ತರೋ ಅವರ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಹೊರಟರೆ ಅಂಥವರನ್ನು ಕೊಲೆ ಮಾಡಿ ಆರೋಪದಿಂದ ನುಸುಳಿಕೊಳ್ಳುವ ರಾಕ್ಷಸಬಲವೂ ಅವರಿಗಿದೆ. ಹೆಸರು, ಹಣ, ಆಸ್ತಿ, ಗಂಭೀರ ಅಪರಾಧ ಪ್ರಕರಣಗಳಿಂದ ರಕ್ಷಣೆ, ಕಾನೂನನ್ನು ತನಗೆ ಬೇಕಾದಂತೆ ಬಾಗಿಸಿಕೊಳ್ಳುವುದು ಇತ್ಯಾದಿ ಎಲ್ಲವೂ ರಾಜಕಾರಣದಿಂದಲೇ ಸಾಧ್ಯ ಎನ್ನುವ ಬಲವಾದ ನಂಬಿಕೆಯಿಂದ ಅಜ್ಞಾನಿಗಳು, ಅವಿವೇಕಿಗಳು, ಭಂಡರು, ಅರೆಹುಚ್ಚರು, ಅರುಳು ಮರಳಿನವರು ಕೂಡ ರಾಜಕೀಯದತ್ತ ಆಕರ್ಷಿತರಾಗುತ್ತಿದ್ದಾರೆ. ರಾಜ್ಯ ವಿಧಾನಸಭೆಗಳಿಗೆ, ಲೋಕಸಭೆಗೆ, ಸ್ಥಳೀಯ ಆಡಳಿತ ಸಂಸ್ಥೆಗಳಾದ ನಗರಪಾಲಿಕೆ, ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್‌ಗಳಿಗೆ ಆಯ್ಕೆಯಾಗಿ ಬರುವವರಲ್ಲಿ ಎಷ್ಟೊಂದು ಮಂದಿ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ತಗುಲಿಕೊಂಡಿರುತ್ತಾರೆ, ರೌಡಿಗಳಾಗಿರುತ್ತಾರೆ ಎನ್ನುವ ಅಂಕಿಅಂಶಗಳೇ ನಮ್ಮ ಬೆಚ್ಚಿಬೀಳಿಸುತ್ತವೆ. ಅವರು ಮಾಡಿರುವ, ಮಾಡಲಿರುವ ಸರ್ವಾಪರಾಧಗಳಿಗೂ ರಾಜಕೀಯ ಅಧಿಕಾರವೇ ಶ್ರಿÃರಕ್ಷೆಯಾಗಿರುವುದರಿಂದ ಅಲ್ಲಿಗೆ ಆಯ್ಕೆಯಾಗಲು ಅವರು ಎಷ್ಟಾದರೂ ಹಣ ಚೆಲ್ಲಬಲ್ಲರು, ಯಾವುದೇ ಅಡ್ಡದಾರಿಯಲ್ಲಾದರೂ ಸಾಗಬಲ್ಲರು. ಒಂದು ಸಾರಿ ಆಯ್ಕೆಯಾದರಂತೂ ಮುಗಿದೇ ಹೋಯಿತು! ಅದು ಅವರಿಗೆ ಅಜೀರ್ಣವಾಗುವಂತೆ ಮೇಯಲು ಸೊಂಪಾದ ಹುಲ್ಲುಗಾವಲು! ಅಲ್ಲಿ ಕಬಳಿಸುವುದು, ಮತ್ತೆ ಚುನಾವಣೆಯಲ್ಲಿ ಸುರಿಯುವುದು, ಆಯ್ಕೆಯಾಗುವುದು, ಮತ್ತೆ ಮೇಯುವುದು. ಬೇರೆಲ್ಲೂ ಹೋಗುವುದು ಬೇಡ, ಬರೀ ಕರ್ನಾಟಕದ ಉದಾಹರಣೆ ತೆಗೆದುಕೊಂಡರೂ ಸಾಕು. ಸ್ವಾತಂತ್ರö್ಯ ಬಂದಾಗಿನಿಂದ ನಮ್ಮ ರಾಜಕಾರಣಿಗಳು ರಾಮನ ಲೆಕ್ಕದಲ್ಲಿ, ಕೃಷ್ಣನ ಲೆಕ್ಕದಲ್ಲಿ ಎಷ್ಟೆಷ್ಟು ಸಂಪಾದನೆ ಮಾಡಿದಾರೆನ್ನುವ ನಿಖರ ಲೆಕ್ಕ ತೆಗೆದುಕೊಂಡರೆ ಹಳ್ಳಿಗಳು ದೈನೇಸಿ ಸ್ಥಿತಿಗೆ ತಲುಪುತ್ತಿರಲಿಲ್ಲ, ಯುವಕ ಯುವತಿಯರು ಬದುಕು ಕಟ್ಟಿಕೊಳ್ಳಲಾಗದ ಅಸಹಾಯಕತೆಯಲ್ಲಿ ನರಳುತ್ತಿರಲಿಲ್ಲ, ಕಾಡುಗಳು ಬೋಳಾಗುತ್ತಿರಲಿಲ್ಲ, ರೈತರ ಆತ್ಮಹತ್ಯೆ ನಡೆಯುತ್ತಿರಲಿಲ್ಲ, ದರ ಏರಿಕೆ ನಿತ್ಯ ನಿರಂತರವಾಗುತ್ತಿರಲಿಲ್ಲ; ಕರ್ನಾಟಕದ ಹಳ್ಳಿ ನಗರ ಎನ್ನದೆ ಸಮಗ್ರ ಅಭಿವೃದ್ಧಿ ಕಂಡುಬಿಡುತ್ತಿತ್ತು. ಸಮಗ್ರ ಅಭಿವೃದ್ಧಿಗೆ ಮೀಸಲಾದ ಹಣ ರಾಜಕಾರಣಿಗಳ ತೀರದ ದಾಹದಲ್ಲಿ ಎಲ್ಲೊà ಸುರಿಯಲ್ಪಟ್ಟಿದೆ. ಅವರು ತಿಂದು ತೇಗುತ್ತಿರುವ, ಹೂಸುತ್ತಿರುವ ದುರ್ವಾಸನೆ ಇಡೀ ರಾಜ್ಯವನ್ನು ಆವರಿಸಿಕೊಂಡಿದೆ.
ಇನ್ನೊಂದು ಕಡೆ ರಾಜಕಾರಣಿಗಳು ಕಂಡ ಕಂಡ ಹಾಗೇ ಇಷ್ಟೆಲ್ಲ ಗುಳುಂ ಮಾಡುತ್ತಿದ್ದಾರಲ್ಲ, ನಾವೇಕೆ ಸುಮ್ಮನಿರಬೇಕು ಎಂದು ಶಾಸಕಾಂಗಕ್ಕೆ ಸಮೀಪಸ್ಥರಾಗಿರುವ ಕರ‍್ಯಾಂಗದವರೂ ನಿಧಾನಕ್ಕೆ ಎಡಗೈ ಬಲಗೈ ಎರಡರಿಂದಲೂ ಬಾಚಲಾರಂಭಿಸಿ ಹಣ ಆಸ್ತಿ ಐಷಾರಾಮದಲ್ಲಿ ರಾಜಕಾರಣಿಗಳನ್ನೂ ಮೀರಿಸುವ ಮಟ್ಟಕ್ಕೆ ಏರಿದರು. ರಾಜಕಾರಣಿಗಳು ಚಾಪೆ ಕೆಳಗೆ ನುಸುಳಿದರೆ ಇವರು ರಂಗೋಲಿ ಕೆಳಗೇ ನುಸುಳುವ ಚಾಣಾಕ್ಷರು. ಇವರು ಆದಾಯ ಮೀರಿ ಗಳಿಸಿರುವ ಆಸ್ತಿ ಲೋಕಾಯುಕ್ತರ ದಾಳಿ, ಎಸಿಬಿ ದಾಳಿಯ ಸಂದರ್ಭದಲ್ಲಿ ಬಹಿರಂಗಗೊಳ್ಳುತ್ತದೆ. ಐ.ಎ.ಎಸ್. ಕೆ.ಎ.ಎಸ್. ಗಳಿಗಿಂತ ಅಡ್ಡದಾರಿಯ ಗಳಿಕೆಯಲ್ಲಿ ಗುಮಾಸ್ತರು ಕೂಡ ಹಿಂದೆ ಬೀಳಲಿಲ್ಲ. ಇವರನ್ನೆಲ್ಲ ಕಾನೂನಿನ ಅಸ್ತçದಿಂದಲೇ ದಂಡಿಸಬಹುದಾದ ಅಧಿಕಾರವಿರುವ ನ್ಯಾಯಾಂಗವಾದರೂ ಈ ಮನೆಹಾಳರ ಸೊಂಟ ಮುರಿದೀತೆ ಎಂದರೆ ಲೋಕಾಯುಕ್ತರಿಂದ ಮೊದಲುಗೊಂಡು ಅನೇಕ ನ್ಯಾಯಾಧೀಶರ ಮೇಲೇ ಗಂಭೀರ ಆರೋಪಗಳಿವೆ. ಅನುಕೂಲಕರ ತೀರ್ಪು ಕೊಡುವುದಾಗಿ ಕೋಟಿಗಟ್ಟಲೆ ಲಂಚ ಪಡೆಯುವಾಗಲೇ ಸಿಕ್ಕಿಬಿದ್ದಿದ್ದಾರೆ. ಆದರೆ ಕಪ್ಪು ವ್ಯವಹಾರವನ್ನು ಜಾಣ್ಮೆಯಿಂದ ನಿಭಾಯಿಸುತ್ತ ಸಿಕ್ಕಿಬೀಳದ ತಿಮಿಂಗಿಲಗಳು ಅಲ್ಲಿ ಇನ್ನೆಷ್ಟಿವೆಯೋ? ಹಣ ಇಲ್ಲದವರಿಗೆ ನ್ಯಾಯ ಸಿಗುವುದಿಲ್ಲ. ಹಣ ಉಳ್ಳವರು ಅನ್ಯಾಯವನ್ನೆÃ ನ್ಯಾಯವಾಗಿ ಪರಿವರ್ತನೆ ಮಾಡಿಕೊಳ್ಳಬಲ್ಲರು ಎನ್ನುವುದು ರಹಸ್ಯವಾಗೇನೂ ಉಳಿದಿಲ್ಲ. ಸಂವಿಧಾನದ ನಾಲ್ಕನೆಯ ಅಂಗ ಅಂತಲೋ ಕಣ್ಣು ಅಂತಲೋ ಸ್ವಯಂ ಘೋಷಿಸಿಕೊಂಡು ಅದನ್ನು ಎಲ್ಲರೂ ಒಪ್ಪಿಕೊಂಡಂತೆ ಆಗಿಬಿಟ್ಟಿರುವ ವಿದ್ಯುನ್ಮಾನ, ಪತ್ರಿಕೆ ಎರಡನ್ನೂ ಒಳಗೊಂಡಿರುವ ಮಾಧ್ಯಮ ತನಿಖಾ ವರದಿಗಳನ್ನು ಪ್ರಕಟಿಸಿ ಭಾರೀ ಹಗರಣಗಳನ್ನೆÃ ಬಯಲಿಗೆಳೆದ ಪ್ರಖ್ಯಾತಿಯಿಂದ ಈಗ ಕಾಸಿಗಾಗಿ ಸುದ್ದಿ ಪ್ರಕಟಿಸುವ, ಪ್ರಸಾರ ಮಾಡುವ ಕುಖ್ಯಾತಿಗೆ ಇಳಿದುಬಿಟ್ಟಿದೆ. ಕೆಲವಂತೂ ಒಂದು ಪಕ್ಷದ ಪರವಾಗಿಯೇ, ಜಾತಿ ಮತಗಳ ಪರವಾಗಿಯೇ ತುತ್ತೂರಿಯೂದುತ್ತ ಉಳಿದವುಗಳ ಸಣ್ಣ ಪುಟ್ಟ ಹುಳುಕುಗಳನ್ನೆÃ ಭೂತಗನ್ನಡಿಯಲ್ಲಿ ತೋರಿಸುತ್ತ, ಪ್ರಚಾರದ ಭರಾಟೆಯಲ್ಲಿ ಅನಾರೋಗ್ಯಕರ ಪೈಪೋಟಿಗೂ ಇಳಿದು ತಿಮ್ಮಿಯನ್ನು ಬೊಮ್ಮಿಯೆಂದೂ ಬೊಮ್ಮಿಯನ್ನು ತಿಮ್ಮಿಯೆಂದೂ ಬಿಂಬಿಸುತ್ತಿವೆ. ಇದು ಎಷ್ಟು ಅತಿರೇಕಕ್ಕೆ ಹೋಗಿದೆಯೆಂದರೆ ಕನ್ನಡದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಎಂದು ಘೋಷಿಸಿಕೊಳ್ಳುವ ಪತ್ರಿಕೆಯೂ ಚುನಾವಣೆಯ ಈ ದಿನಗಳಲ್ಲಿ ತಾನು ಕಾಸಿಗಾಗಿ ಸುದ್ದಿ ಪ್ರಕಟಿಸುವುದಿಲ್ಲ ಎಂದು ಜನರನ್ನು ನಂಬಿಸುವಂತಾಗಿದೆ. ದೇಶದ ಮತ್ತು ಜನರ ಹಿತವನ್ನೆÃ ದೃಷ್ಟಿಯಲ್ಲಿರಿಸಿಕೊಂಡು ಸತ್ಯಾಂಶಗಳನ್ನು ಆಧರಿಸಿ ತನಿಖಾ ವರದಿಗಳನ್ನು ಬರೆದವರನ್ನು, ಪ್ರಕಟಿಸಿದ ಸಂಪಾದಕರನ್ನು ನಿರ್ದಯವಾಗಿ ಹತ್ಯೆ ಮಾಡಿ, ಸತ್ಯದ ಬಾಯನ್ನು ಶಾಶ್ವತವಾಗಿ ಮುಚ್ಚಿಬಿಡುವ ಹೀನ ಕೃತ್ಯಗಳೂ ಎಗ್ಗಿಲ್ಲದೆ ನಡೆಯುತ್ತಿವೆ. ಸುಳ್ಳರೂ ವಂಚಕರೂ ಕೊಲೆಗಡುಕರೂ ಭ್ರಷ್ಟರೂ ಸ್ವಜನ ಮತ್ತು ಸ್ವಜಾತಿ ಪಕ್ಷಪಾತಿಗಳೂ ಮತಾಂಧರೂ ಮದಾಂಧರೂ ದರೋಡೆಕೋರರೂ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ರಾಜಕಾರಣಿಗಳಾಗಿ ಅಂದಾದುಂದಿ ದರ್ಬಾರು ನಡೆಸುತ್ತಿರಬೇಕಾದರೆ, ಶಾಸಕಾಂಗದ ದಾರಿತಪ್ಪಿದ ನಡೆಯೇ ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗಗಳಿಗೆ ಕೆಟ್ಟ ಮಾದರಿಯಾಗಿರಬೇಕಾದರೆ, ಅಷ್ಟಿಷ್ಟು ವಿಚಾರವಂತರೂ ಪ್ರಜ್ಞಾವಂತರೂ ಆಗಿರುವವರಿಗೆ “ಈ ದೇಶಕ್ಕೆ ಭವಿಷ್ಯ ಇದೆಯೇ?” ಎನ್ನುವ ಅನುಮಾನ ಬರುವುದಿಲ್ಲವೇ?
ವಿಳಾಸ
ಡಾ. ಬೈರಮಂಗಲ ರಾಮೇಗೌಡ
#೮೪, ಚಿತ್ತಾರ, ೪ನೇ ತಿರುವು
ಪುಷ್ಪಗಿರಿನಗರ, ಹೊಸಕೆರೆಹಳ್ಳಿ – ಅಂಚೆ
ಬನಶಂಕರಿ ೩ನೇ ಹಂತ, ಬೆಂಗಳೂರು- ೫೬೦೦೮೫
ಸಂ.ದೂ. ೯೩೪೧೨೫೮೧೪೨
ಮಿಂಚಂಚೆ: bಡಿg೧೬೫೫@gmಚಿiಟ.ಛಿom
Source – Sakhigeetha.com