ವಾಗ್ಬಾಣ – ಢೋಂಗಿ ಗುರುಗಳು ಕಾನೂನಿಗೆ ಅತೀತರೇನಲ್ಲ….! ದು ಗು ಲಕ್ಷ್ಮಣ್

0
832

ಮತ್ತೊಬ್ಬ ಸ್ವಘೋಷಿತ ದೇವಮಾನವ ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿದ್ದಾನೆ. ತನ್ನನ್ನು ದೇವಮಾನವನೆಂದು ಕರೆಸಿಕೊಂಡು ಅಸಂಖ್ಯಾತ ಹಿಂಬಾಲಕರನ್ನು ಹೊಂದಿದ್ದ, ಅಪಾರ ಸಂಪತ್ತನ್ನು ಕ್ರೂಢೀಕರಿಸಿದ್ದ, ಉನ್ನತ ಮಟ್ಟದ ರಾಜಕೀಯ ಸಂಪರ್ಕವನ್ನು ಸಾಧಿಸಿದ್ದ ಅಸಾರಾಂ ಬಾಪು ಅತ್ಯಾಚಾರಣ ಪ್ರಕರಣವೊಂದರಲ್ಲಿ ಅಪರಾಧಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸಬೇಕಾಗಿ ಬಂದಿದೆ. ಅಸಾರಾಂ ಬಾಪು ವಿರುದ್ಧ ಅತ್ಯಾಚಾರ ಪ್ರಕರಣವೋಂದೇ ಅಲ್ಲ, ಅಕ್ರಮ ಭೂಕಬಳಿಕೆ, ಬೆದರಿಕೆಯೊಡ್ಡಿದ್ದು ಹಾಗೂ ಕೊಲೆಗೆ ಪ್ರಚೋದನೆ ನೀಡಿದ ಆರೋಪ ಪ್ರಕರಣಗಳೂ ವಿಚಾರಣೆಗಾಗಿ ಕಾದಿವೆ ಜಗತ್ತಿನಾದ್ಯಂತ ೪೦೦ಕ್ಕೂ ಹೆಚ್ಚು ಆಶ್ರಮಗಳನ್ನು ಹೊಂದಿರುವ ಅಸಾರಾಂ ಬಾಪು ೨೦೧೩ರಲ್ಲಿ ಶಾಲಾ ಬಾಲಕಿಯೊಬ್ಬಳ ಮೇಲೆ ಅಸಾರಾಂ ಮತ್ತು ಆತನ ಪುತ್ರ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರವೆಸಗಿದ ಆರೋಪವೂ ಅಂಟಿಕೊಂಡಿತ್ತು.
ಯಾರು ಈ ಅಸಾರಾಂ ಬಾಪು?
ಅಸಾರಾಂ ಬಾಪು ಅವರ ನಿಜವಾದ ಹೆಸರು ಅಸುಮಲ್ ಸಿರುಮಲಾನಿ ಆದರೆ ಅಸಾರಾಂ ಬಾಪು ಎಂದೇ ಚಿರಪರಿಚಿತ ಈಗಿನ ಪಾಕಿಸ್ತಾನದ ಸಿಂಧ್‌ನಲ್ಲಿ ೧೯೪೧ರಲ್ಲಿ ಜನಿಸಿದ ಅಸಾರಾಂ, ೧೯೪೭ರ ವಿಭಜನೆಯ ಬಳಿಕ ಅಹ್ಮದಾಬಾದ್ಗೆ ಬಂದಿದ್ದರು. ‘ಸಂತ’ ಅಸಾರಾಂ ಬಾಪುಕೀ ಜೀವನ್ ಜಂಕಿ’ ಎಂಬ ಆತನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಂತೆ, ಆತ ಆಧ್ಯಾತ್ಮಿಕ ಜ್ಞಾನಕ್ಕಾಗಿ ಹಲವಾರು ಗುರುಗಳನ್ನು ಹುಡುಕಿದನಂತೆ ೧೯೭೨ರಲ್ಲಿ ಗುಜರಾತ್‌ನ ಸಬರ್ಮತಿ ನದಿಯ ಬಳಿಯಿರುವ ಮೊಟೆರಾ ಎಂಬ ಹಳ್ಳಿಯಲ್ಲಿ ಗುಡಿಸಲು ಕಟ್ಟಿಕೊಂಡು ಅಲ್ಲಿ ಪ್ರವಚನ ನೀಡುತ್ತಿದ್ದ. ಮೊದಲು ೫-೧೦ ಮಂದಿ ಇದ್ದ ಭಕ್ತರ ಸಂಖ್ಯೆ ಲಕ್ಷಗಳಲ್ಲಿ ಏರಿಕೆಯಾಗುತ್ತಾ ಹೋಯಿತು. ಜನಪ್ರಿಯತೆಯೂ ಏರಿತು. ಆಶ್ರಮದ ವತಿಯಿಂದ ೪೦ ವಸತಿ ಶಾಲೆಗಳು, ವಿವಿಧ ಭಾಷೆಯ ನೂರಕ್ಕೂ ಹೆಚ್ಚು ಪತ್ರಿಕೆಗಳು / ನಿಯತ ಕಲಿಕೆಗಳು ಹಾಗೂ ಆಯುರ್ವೇದ ಸಂಸ್ಥೆಯೂ ನಡೆಯುತ್ತಿದೆ.
ಹಣ, ಖ್ಯಾತಿ, ಪ್ರಸಿದ್ಧ ಎಂಥವರ ತಲೆಯನ್ನು ತಿರುಗಿಸಿಬಿಡುತ್ತದೆ. ಅಸಾರಾಂ ಕೂಡ ಈ ಮಾತಿಗೆ ಹೊರತಾಗಲಿಲ್ಲ. ಪ್ರಸಿದ್ಧಿಯ ಉತ್ತುಂಗದಲ್ಲಿರುವಾಗಲೇ ಜೋಧ್‌ಪುರದಲ್ಲಿ ೧೬ ವರ್ಷದ ಹುಡುಗಿಯ ಜೊತೆ ಅಸಹಜ ಸೆಕ್ಸ್ಗೆ ಒತ್ತಾಯಿಸಿ, ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ. ಆಗ ಅಸಾರಾಂ ವಯಸ್ಸು ಕೇವಲ ೭೬. ಈ ವಯಸ್ಸಿನಲ್ಲಿ ಇದೆಲ್ಲ ಬೇಕಿತ್ತಾ ಎಂಬ ಪ್ರಶ್ನೆ ಸಹಜ. ಹುಣುಸೆಮರಕ್ಕೆ ಮುಪ್ಪು ಬರುವುದಿಲ್ಲವಂತೆ. ಅಸಾರಾಂದೂ ಎಂತಹದೂ ಎಂಬುದು ನಮ್ಮೆಲ್ಲರನ್ನೂ ದಂಗುಬಡಿಸುವ ಪ್ರಶ್ನೆ.
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿ ಬಂಧನಕ್ಕೊಳಗಾಗಿದ್ದರೂ ಪ್ರಕರಣದಿಂದ ಬಚಾವಾಗಲು ಅಸಾರಾಂ ನಾನಾ ಕುತಂತ್ರ ನಡೆಸಿದ್ದುಂಟು. ತನಗೆ ಅನಾರೋಗ್ಯ ಕಾಡುತ್ತಿದೆ, ಹಾಗಾಗಿ ಜಾಮೀನು ನೀಡಬೇಕೆಂದು ರಾಜಸ್ಥಾನ ಹೈಕೋರ್ಟ್ಗೆ ಮೊರೆ ಹೋದಾಗ ಆ ಅರ್ಜಿ ತಿರಸ್ಕೃತವಾಗಿತ್ತು. ಅಸಾರಾಂ ಜಾಮೀನು ಅರ್ಜಿಯಲ್ಲಿ ಸುಳ್ಳು ಆರೋಗ್ಯ ಪ್ರಮಾಣ ಪತ್ರ ನೀಡಿದ್ದಾರೆಂದು ಕೋರ್ಟ್ ೧ ಲಕ್ಷ ರೂ. ದಂಡ ವಿಧಿಸಿತ್ತು. ೨೦೦೮ರಲ್ಲಿ ಈ ಮಕ್ಕಳ ಪೋಷಕರ ಆಗ್ರಹದ ಮೇರೆಗೆ ಸಿ.ಐ.ಡಿ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕೋರ್ಟ್ಗೆ ವರದಿ ಸಲ್ಲಿಸಿದೆ. ಆ ಸಂಬಂಧ ವಿಚಾರಣೆಯೂ ನಡೆದಿದೆ.
ಕಾನೂನಿನ ಮುಂದೆ ಎಲ್ಲರೂ ಒಂದೇ
ಆಧ್ಯಾತ್ಮಿಕ ಗುರುವೇ ಇರಬಹುದು, ಮಠದ ಸ್ವಾಮಿಜಿಯೇ ಆಗಿರಬಹುದು, ಪ್ರಭಾವಿ ವ್ಯಕ್ತಿಯೇ ಇರಬಹುದು. ಆದರೆ ಯಾರೂ ಕಾನೂನಿಗೆ ಅತೀತರಲ್ಲ. ಕಾನೂನಿನ ಮುಂದೆ ಎಲ್ಲರೂ ಒಂದೇ. ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಅಸಾರಾಂ ಬಾಪುಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಜೋಧ್‌ಪುರ ನ್ಯಾಯಾಲಯ ಈಗ ಇಡೀ ದೇಶಕ್ಕೆ ರವಾನಿಸಿರುವ ಸಂದೇಶ ಕೂಡ ಇದೇ. ಅತಿ ದುರ್ಬಲದಾದ ವ್ಯಕ್ತಿಗಳೂ ಕೆಲವೊಮ್ಮೆ ಬಲಿಷ್ಠ, ಪ್ರಭಾವಿ ವ್ಯಕ್ತಿಗಳ ವಿರುದ್ಧ ಕಾನೂನು ಸಮರ ಸಾರಿ ಗೆಲ್ಲಲು ಸಾಧ್ಯ ಎಂಬುದು ಈ ತೀರ್ಪಿನಿಂದ ಹೊರಹೊಮ್ಮಿರುವ ಇನ್ನೊಂದು ಸಂದೇಶ. ಅಸಾರಾಂ ಬಾಪು ಮತ್ತವರ ಬೆಂಬಲಿಗರು ನ್ಯಾಯಾಂಗದ ವಿಚಾರಣೆಯನ್ನು ಹಾದಿ ತಪ್ಪಿಸಲು ನಾನಾ ಬಗೆಯ ಕುತಂತ್ರ ನಡೆಸಿದ್ದರು. ಸಾಕ್ಷಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ಮೂವರು ಸಾಕ್ಷಿಗಳನ್ನು ಕೊಲೆ ಮಾಡಲಾಗಿತ್ತು. ಆದರೂ ಅಂತಿಮವಾಗಿ ನ್ಯಾಯವೇ ಗೆದ್ದಿದೆ.
ಹರ್ಯಾಣದಲ್ಲಿ ಡೇರಾ ಸಚ್ಚಸೌಧವೆಂಬ ಸಿಖ್‌ಪಂಥ ಕಟ್ಟಿ ದೊಡ್ಡ ಸಾಮ್ರಾಜ್ಯವನ್ನೆÃ ನಿರ್ಮಿಸಿದ್ದ ರಾಮ್‌ರಹೀಮ್ ಗುರ್ಮಿತ್‌ಸಿಂಗ್ ಎಂಬ ಅತ್ಯಾಧುನಿಕ ಆದ್ಯಾತ್ಮಿಕ ಗುರು ಮಾತ್ರವಾಗಿರದೆ ಕಲಾವಿದ, ಸಿನಿಮಾ ನಿರ್ದೇಶಕ, ಸಂಗೀತ ನಿರ್ದೇಶಕ, ನಿರ್ಮಾಪಕನೂ ಆಗಿದ್ದ. ಆದರೇನು, ಆತನೆಸಗಿದ ಒಂದೊಂದೇ ಬಾನಗಡಿಗಳು ಬಯಲಾಗಿ, ಕೊನೆಗೆ ಬಂಧನಕ್ಕೊಳಗಾಗ ಬೇಕಾಯಿತು. ಆತನಿಗೆ ಕೋರ್ಟ್ ಶಿಕ್ಷೆ ಘೋಷಿಸಿದಾಗ, ಆತನ ಬೆಂಬಲಿಗರು ವ್ಯಾಪಕ ಹಿಂಸಾಚಾರ ನಡೆಸಿ, ೩೮ ಮಂದಿ ಅಮಾಯಕರ ಸಾವಿಗೆ ಕಾರಣರಾಗಿದ್ದರು.
ರಾಂರಹೀಂ, ಅಸಾರಾಂ ಬಾಪುರಂತಹ ಢೋಂಗಿ ಗುರುಗಳು ಈ ಕಾಲದಲ್ಲಷ್ಟೆÃ ಅಲ್ಲ, ಹಿಂದೆಯೂ ಇದ್ದರು. ೧೯೩೮ರಷ್ಟು ಹಿಂದೆಯೇ ಸಿರಿಗೆರಿಯ ಹಿಂದಿನ ಗುರುಗಳಾಗಿದ್ದ ಶ್ರಿÃ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ದಿನಚರಿಯಲ್ಲಿ ಇಂತಹ ಲಂಪಟ ‘ಧರ್ಮ ದುರಂಧರ’ರ ಬಗ್ಗೆ ನಿಷ್ಠುರವಾಗಿ ದಾಖಲಿಸಿದ ನುಡಿಗಳು ಹೀಗಿವೇ: “ ಅಂiÉÆ್ಯÃ ಮೂಡಭಕ್ತರೇ! ನಿಮ್ಮ ಭಕ್ತಿಗೆ ಸರಿಯಾದ ಗುರುಗಳನ್ನು ಪಡೆದಿರುವಿಕೆ ನಿಮಗೇನು ಹುಚ್ಚು ಹಿಡಿದಿದೆ? ಭ್ರಷ್ಟರನ್ನು ಪೂಜಿಸಿಪರಮೇಶ್ವರನ ರಾಜ್ಯದಲ್ಲಿ ಅಸತ್ಯಕ್ಕೆ ಬೆಲೆಯನ್ನೆÃರಿಸುತ್ತಿರುವಿರಲ್ಲಾ! ಅಂiÉÆ್ಯÃ, ನಿರ್ದಯಿ ಗುರುವರ್ಗವೇ! ಪಾಪವನ್ನು ಮಾಡಿ ಜಗತ್ತನ್ನು ಹಾಳುಮಾಡುತ್ತಿರುವಿರಲ್ಲಾ! ವ್ಯಭಿಚಾರಿಗಳು ಗುರುಗಳೆಂದು ಹೇಳಿಸಿಕೊಳ್ಳಲು ನಾಚಿಕೆಯಾಗುವುದಿಲ್ಲವಲ್ಲಾ! ಅಧಮ ಗುರುವರ್ಗ! ಪತಿತ ಗುರುವರ್ಗ! ಅಧಮರೇ ಶೀಘ್ರವಾಗಿ ತೊಲಗಿರಿ.”
ಹಿಂದುಗಳಲ್ಲಷ್ಟೆÃ್ಲ ಅಲ್ಲ…!
ಹಿಂದು ಸಮುದಾಯದಲ್ಲಿ ಮಾತ್ರ ಇಂತಹ ಢೋಂಗಿ ಗುರುಗಳಿದ್ದಾರೆಂದು ಮುಸ್ಲಿಂ, ಕ್ರೆöÊಸ್ತರು ಬೆನ್ನುತಟ್ಟಿಕೊಳ್ಳುವ ಸ್ಥಿತಿಯೇನಿಲ್ಲ. ಆ ಸಮುದಾಂiÀiಗಳಲ್ಲೂ ಅಂತಹ ಢೋಂಗಿಗಳು ಹೇರಳವಾಗಿದ್ದಾರೆ. ಇಡೀ ಕ್ಯಾಥೋಲಿಕ್ ಚರ್ಚ್ ಲೈಂಗಿಕ ಅತ್ಯಾಚಾರ ಹಾಗೂ ಕಾಮಕಾಂಡಗಳಲ್ಲಿ ಸಿಲುಕಿ ತೊಳಲಾಡುತ್ತಿದೆ. ಕೇರಳದಲ್ಲಿ ಒಂದು ಡಜನ್‌ಗೂ ಹೆಚ್ಚು ಫಾದ್ರಿಗಳು, ಬಿಷಪ್‌ಗಳು ಅತ್ಯಾಚಾರ ಆರೋಪ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ೨೦೦೯ರ ಫೆಬ್ರವರಿಯಲ್ಲಿ ಡಾ.ಸಿಸ್ಟರ್ ಜೆಸ್ಮೆ ಎಂಬ ನನ್ ಬರೆದ ‘ಅಮೇನ್ : ಆಟೋಗ್ರಫಿ ಆಫ್ ಎ ನನ್’ ಎಂಬ ಕೃತಿಯಲ್ಲಿ ತನ್ನ ಸೀನಿಯರ್‌ಗಳು ಹೇಗೆ ಶಾರೀರಿಕವಾಗಿ, ಮಾನಸಿಕವಾಗಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಬಹಿರಂಗಪಡಿಸಿದ್ದರು. ಇದು ಇಡೀ ಕೇರಳದ ಚರ್ಚ್ಗಳನ್ನು ಬೆಚ್ಚಿ ಬೀಳುವಂತೆ ಮಾಡಿತ್ತು.
ಇನ್ನು ಮುಸ್ಲಿಂ ಇಮಾಮ್‌ಗಳೂ, ಮೌಲಾನಾಗಳು ಮೌಲ್ವಿಗಳು ನಡೆಸುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುವುದೇ ಇಲ್ಲ. ಏಕೆಂದರೆ ಆ ಜನಾಂಗದಲ್ಲಿ ‘ಬಹುಪತ್ನಿತ್ವ ಪದ್ಧತಿ’ ಮುಸ್ಲಿಂ ಧಾರ್ಮಿಕ ಗುರುಗಳ ಪಾಲಿಗೆ ತಮ್ಮನ್ನು ಇಂತಹ ಆರೋಪಗಳಿಂದ ರಕ್ಷಿಸಿಕೊಳ್ಳಲು ಒಂದು ವಜ್ರ ಕವಚವೇ ಆಗಿ ಬಿಟ್ಟಿದೆ!
ಅತ್ಯಾಚಾರಿ ಬಾಬಾಗಳು, ಫಾರ‍್ಗಳು,ಮುಲ್ಲಾ ಮೌಲ್ವಿಗಳು ಎಲ್ಲೆಡೆಯೂ ಇದ್ದಾರೆ. ಇಂಥವರು ಪ್ರಭಾವಿಗಳಾಗಿರುವುದರಿಂದ ತಮ್ಮ ತೆವಲು ತೀರಿಸಿಕೊಳ್ಳಲು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಢೋಂಗಿ ಗುರುಗಳು ತಮ್ಮ ನಾಟಕ ಬಯಯಲಾಗದಂತೆ ಎಚ್ಚರವಹಿಸಿದಷ್ಟೆÃ ಅವರನ್ನು ಕುರುಡಾಗಿ ನಂಬುವ ಭಕ್ತಗಡಣವೂ ಎಚ್ಚರವಹಿಸಿದರೆ, ಪ್ರಜ್ಞಾವಂತಿಕೆ ಮೆರೆದರೆ ಈ ಧಾರ್ಮಿಕ ಢೋಂಗಿಗಳ ಆಟಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಬಹುದು.
ಅಂತಹ ನಿರಂತರ ಎಚ್ಚರ ಭಕ್ತಸಮೂಹದಲ್ಲಿ ಅರಳಬೇಕಾಗಿದೆ. ನಕಲಿ ಗುರುಗಳನ್ನು ಸಂದೇಹಿಸಿದರೆ ಯಾವ ಪಾಪವೂ ತಟ್ಟದು ಎಂಬ ನಂಬಿಕೆ ಜನರಲ್ಲಿ ಬಲಿಯಬೇಕಾಗಿದೆ.ಪಾಪಿ ಗುರುಗಳ ಸಂಖ್ಯೆ ಹೆಚ್ಚದಂತೆ ನಿಯಂತ್ರಿಸುವ ಹೊಣೆಗಾರಿಕೆಕೂಡ ನಮ್ಮದೆ ಆಗಿದೆ. ಇದು ಜನತೆಯ ನೈತಿಕ ಜವಾಬ್ದಾರಿಯಾಗಿದೆ.

Source – Sakhigeetha.com

LEAVE A REPLY

Please enter your comment!
Please enter your name here