ಸಂಬಂಧಗಳ ಗಟ್ಟಿ ಬೆಸುಗೆಗೆ ಭಾವನೆಗಳು ಅತ್ಯವಶ್ಯ. ಭಾವನೆಗಳೇ ಇಲ್ಲದೆ ಮನುಷ್ಯ ಬದುಕಲಾರ ಮಾನವ ಜೀವಿಗೆ ಭಾವನೆಗಳೇ ಆದಿ ಅಂತ್ಯ. ನಾವುಗಳು ಗರ್ಭದಲ್ಲಿರುವಾಗಲೇ ಅಮ್ಮನೊಂದಿಗೆ ಕರುಳ ಬಂಧವನ್ನು ಏರ್ಪಡಿಸಿಕೊಳ್ಳುತ್ತೇವೆ ಅಪ್ಪನೊಂದಿಗೆ ರಕ್ತ ಸಂಬಂಧವನ್ನು ಉಳಿಸಿಕೊಳ್ಳೂತ್ತೇವೆ ಆದರೆ ಆನಂತರ ಸಿಗುವ ಎಲ್ಲರೊಂದಿಗೂ ನಾವು ಬೆಳೆಸಿಕೊಳ್ಳುವುದು ಭಾವಸಂಬಂಧವನ್ನ. ಹೌಧು ಮಿಕ್ಕವರೆಲ್ಲರೊಂದಿಗೂ ನಾವು ಭಾವನೆಗಳೊಂದಿಗೆ ಬಂಧಿಯಾಗಿರುತ್ತೇವೆ. ಹಾಗಾದರೆ ಈಭಾವನೆ ಅಂದ್ರೆ ಏನು ಅನಿಸಿಕೆಯಾ…? ಅಭಿಪ್ರಾಯವಾ…?
ಭಾವನೆಗೆ ಒಂದು ಚೌಕಟ್ಟಿಲ್ಲ ನಮ್ಮ ಮನದಾಳದಲ್ಲಿ ಮೂಡುವ ಸುಂದರ ಮೌಲ್ಯಗಳು ಅವು. ಕೆಲವರು ಭಾವ ಜೀವಿಗಳು ಅಂದರೆ ಹೆಚ್ಚು ಸಂಬಂಧಗಳಿಗೆ ಜೋತುಬೀಳುತ್ತಾರೆ. ನಮ್ಮ ಸುತ್ತಲಿರುವ ಎಲ್ಲರೂ ನಮ್ಮವರೇ ಅನ್ನುತ್ತಾ ಅವರ ನೋವು ನಲಿವುಗಳಿಗೆ ಭಾಗಿಯಾಗುತ್ತಾರೆ. ಮನುಷ್ಯ ಸಂಘಜೀವಿಯಾಗಿದ್ದಾನೆ ಎಂದರೆ ಅದಕ್ಕೆ ಮೊದಲ ಕಾರಣ ಈ ಭಾವನೆಗಳು. ಭಾವನೆಗಳಿಲ್ಲದೆ ಇರುವ ಮನುಷ್ಯ ಬಹುಬೇಗ ಮೃಗವಾಗುತ್ತಾನೆ.
ಇಂತಹ ಭಾವನೆಗಳನ್ನ ನಾ ನಿನ್ನ ನೋಡಬೇಕು ನಾ ನಿನ್ನ ಜೊತೆ ಮಾತನಾಡಬೇಕು ಎಂದರೆ ಇದು ಸಾಧ್ಯವೇ..ಹೌದು ಸಾಧ್ಯ…! ಹೇಗೆ ಅಂತೀರಾ…. ಭಾವನೆಗಳನ್ನು ಸಂಧಿಸಲು ಭಾವಗೀತೆಗಳು ಸಹಾಯ ಮಾಡುತ್ತವೆ. ನಮ್ಮ ಮನಸ್ಸಿನ ಭಾವನೆಗಳಿಗೆ ಒಂದು ರೂಪ, ಚಿತ್ರಣ ಕೊಡುವುದೇ ಈ ಭಾವಗೀತೆ. ಭಾವಗೀತೆಗಳು ನಮ್ಮನ್ನೇ ನಮಗೆ ಪರಿಚಯಿಸುತ್ತವೆ. ನಮ್ಮೊಳಗೆ ನಮಗೇ ತಿಳಿಯದೆ ಅವಿತು ಕುಳಿತಿರುವ ನಗು ಅಳು ನಿಟ್ಟುಸಿರು ನಿರಾಸೆ ಕನಸು, ಎಲ್ಲವಕ್ಕೂ ಒಂದು ಆಕಾರಕೊಟ್ಟು ಕಾವ್ಯದ ಮೂಲಕ ಹೊರಬರುವ ಕವನ ಪ್ರಕಾರ ಈ ಭಾವಗೀತೆಗಳು.
ನಮ್ಮ ಮನಸ್ಸಿನಲ್ಲಿ ಮೂಡುವ ಭಾವನೆಗಳು ಶಾಶ್ವತವಾದವಲ್ಲ, ಒಮ್ಮೊಮ್ಮೆ ಅಳುವ ಮನಸ್ಸೇ ಮತ್ತೆಲ್ಲೋ ನಮ್ಮ ಪ್ರೀತಿಪಾತ್ರರೊಂದಿಗೆ ಅಂದರೆ ಸ್ನೇಹಿತರು ಸಂಬಂಧಿಕರೊಂದಿಗೆ ಕೂತು ಹರಟುವಾಗ ಆಗತಾನೆ ಅರಳಿದ ಮಲ್ಲಿಗೆಯ ಮೊಗ್ಗಾಗುತ್ತದೆ. ಹಾಗೇ ಖುಷಿಯ ಕ್ಷಣಗಳು ಹೆಚ್ಚಾದಂತೆ ಹಿಂದೆಂದೋ ದಾಟಿ ಬಂದ ಸಂಕಟದ ದಿನಗಳನೆನಪಾಗಿ ಕಣ್ಣು ಹನಿಗೂಡುತ್ತದೆ . ಐ ಡೋಂಟ್ ಕೇರ್ ಅನ್ನುವವರೂ ಭಾವಗೀತೆಗಳ ಪರವಶತೆಗೆ ಮಾರುಹೋಗಿ ಅವರನ್ನೇ ಅವರು ಮತ್ತೊಮ್ಮೆ ಅವರೊಳಗೆ ಭೇಟಿಯಾಗುತ್ತಾರೆ. ನಗು ಅಳು ಎಲ್ಲವೂ ನಮ್ಮ ಜೀವನದ ಎರಡು ಮುಖವಾಡಗಳು ಯಾವೂ ಶಾಶ್ವತವಲ್ಲ ನಗುವಿದ್ದಾಗ ಅತ್ತಂತಹ ದಿನಗಳನ್ನು ನೆನೆಯುತ್ತೇವೆ ಹಾಗೆ ಅಳು ಬಂದಾಗ ಅಷ್ಟು ನಗು ತುಂಬಿದ್ದ ಜೀವನ ಹೀಗಾಯ್ತೆ ಎಂಬ ಪ್ರಶ್ನೆಯನ್ನೂ ಮೂಡಿಸುತ್ತದೆ. ತಮ್ಮೊಳಗೆ ಮೂಡಿದ ಪ್ರತಿ ಅನಿಸಿಕೆ ಅಭಿಪ್ರಾಯ ಹಾಗೂ ಅನುಭವಗಳನ್ನು ಮೇಳೈಸಿದರೆ ಹುಟ್ಟುವುದೇ ಭಾವನೆಗಳು ಹೀಗೆ ಮೂಡುವ ಭಾವನೆಗಳನ್ನೇ ಕವನಗಳಾಗಿ ಮಾಡಿ ನಮ್ಮ ಸಾಕಷ್ಟು ರಚನಕಾರರು ಅದ್ಭುತ ಭಾವಗೀತೆಗಳನ್ನು ರಚಿಸಿದ್ದಾರೆ.
ಭಾವಗೀತೆ ಎಂಬ ಪದ ಪಾಶ್ಚಾತ್ಯದ “ಲಿರಿಕ್ “ ಎಂಬ ಪದ್ಯ ಪ್ರಕಾರಕ್ಕೆ ಕನ್ನಡದ ಭಾವಗೀತೆಯೆಂಬ ಪದವನ್ನು ಬಳಸಲಾಗಿದೆ.ಲಿರಿಕ್ ನ ಮುಖ್ಯ ಲಕ್ಷಣವೆಂದರೆ ‘ಕವಿ ತನಗೆ ಅನ್ನಿಸಿದ ಅನುಭವವನ್ನು ನೇರವಾಗಿ ಹೇಳುವುದು’ ಜೊತೆಗೆ ಹಾಡಿನ ಗುಣವೂ ಅದರ ಒಳಗೇ ಹಾಸುಹೊಕ್ಕಾಗಿರುತ್ತದೆ. ಇನ್ನು ನಮ್ಮ ಕನ್ನಡದಲ್ಲಿ ಭಾವಗೀತೆಗಳ ಸಾಗರವೇ ಇದೆ ಅದರಲ್ಲೂ ಈ ಭಾವಸಾಗರವನ್ನು ತಮ್ಮೊಳಗೆ ಆವಾಹಿಸಿಕೊಂಡು ಅನುಭವಿಸಿ ಹಾಡುವ ಗಾಯಕರಂತು ಎಲ್ಲರ ಮೆಚ್ಚುಗೆಗ ಪಾತ್ರರಾಗಿದ್ದಾರೆ. ಸಿನೆಮಾ ಗಾಯಕರಿಗಿಂತ ಒಂದು ಕೈ ಹೆಚ್ಚೇ ಈ ವರ್ಗದ ಗಾಯಕರಿಗೆ ಅಭಿಮಾನಿಗಳಿದ್ದಾರೆ.
ತಾಯಿಯ ವಾತ್ಸಲ್ಯವಿರಲೀ.. ಬಾಲ್ಯದ ನೆನಪುಗಳಾಗಲೀ.. ಪತಿ-ಪತ್ನಿಯರ ಪ್ರೀತಿಯಾಗಲೀ, ಪ್ರಕೃತಿಯ ಸೊಬಗನ್ನಾಗಲೀ, ನಮ್ಮೊಳಗಿನ ಸುಪ್ತ ಕನಸುಗಳಾಗಲಿ, ನೆರವೇರದ ಆಸೆಗಳಾಗಲೀ, ನೋವಿನ ಅನುಭವಗಳಾಗಲೀ, ಸ್ನೇಹದ ಸವಿಯನ್ನಾಗಲೀ, ಪ್ರತಿಯೊಂದನ್ನೂ ಈ ಭಾವಗೀತೆ ತನ್ನೊಳಗಿರಿಸಿಕೊಂಡಿರುತ್ತದೆ ಆದ್ದರಿಂದಲೇ ನಮಗೆ ಆ ಭಾವಗೀತೆಗಳೆಂದರೆ ಅಷ್ಟು ಆಪ್ಯಾಯಮಾನ ಅನ್ನಿಸುವುದು. ಈ ಭಾವಗೀತೆಗಳು ಯಾರೋ ಒಬ್ಬರಿಗಾಗಿ ಬರೆದವುಗಳಲ್ಲ ಬದಲಾಗಿ ಎಲ್ಲರಿಗೂ ಅನ್ವಯವಾಗುವಂತಹ ಕವನಗಳು ಎಲ್ಲರಲ್ಲಿಯೂ ಯಾವುದೋ ಒಂದು ಭಾವವಿರುತ್ತದೆ ಅದನ್ನ ಹೊರತೆಗೆಯಲು ಈ ಭಾವಗೀತೆಗಳು ಸಹಕಾರಿಯಾಗುತ್ತವೆ. ಭಾವಗೀತೆಗಳನ್ನು ಕೇಳುವುದರಿಂದ ನಮ್ಮ ಮನ ಹಗುರಾಗುವುದರೊಂದಿಗೆ ನಮ್ಮ ಅಂತರಂಗವನ್ನ ನಮಗೇ ಪರಿಚಯಿಸುತ್ತವೆ. ಸಂಗೀತಕ್ಕೆ ಪ್ರಾಣಿ–ಪಕ್ಷಿಗಳನ್ನು ಮನವೊಲಿಸುವ ಶಕ್ತಿ ಇದೆ ಎಂದು ಕೇಳಿದ್ದೇವೆ ಅದು ಸತ್ಯವೂ ಹೌದು. ಭಾವಗೀತೆಗಳು ಆಧುನಿಕತೆಯ ಮೆರುಗಿಗೆ ಬೆರಗಾಗಿರುವ ನಮ್ಮ ಜೀವನ ಶೈಲಿಯನ್ನು ಬದಲಿಸಿ ಮನುಷ್ಯನಲ್ಲಿ ಜೀವನ ಪ್ರೀತಿಯನ್ನು ಹುಟ್ಟಿಸುವುದರೊಂದಿಗೆ ಬದುಕನ್ನು ಕಾಣುವ ರೀತಿಯನ್ನು ಬದಲಾಯಿಸುತ್ತದೆ.
ಕವಿಗಳ ಹೃದಯಾಂತರಾಳದಿಂದ ಸಮಯ ಸಂದರ್ಭಗಳಿಗೆ ಅನುಗುಣವಾಗಿ ಓತಪ್ರೊÃತವಾಗಿ ಚಿಮ್ಮುವ ಭಾವ ಕಾರಂಜಿಗಳೇ ಭಾವಗೀತೆಗಳು; ಎಲ್ಲಿ ಅನುಭವದ ಕೆನೆಯನ್ನು ಹೇಳುವ ವಾಗರ್ಥಗಳು ಪದಪದಗಳಲ್ಲಿ ಆಕಾರ ಪಡೆಯುತ್ತವೆಯೋ ಅಲ್ಲಿ ಧ್ವನಿ ಪೂರ್ಣ ಭಾವಗೀತೆಗಳು ಅಂiÀiÁಚಿತವಾಗಿ ಪಲ್ಲವಿಸುತ್ತದೆ; ಅವುಗಳೇ ಕವಿಗಳ ಪ್ರತಿಭಾ ಕಾವ್ಯ ಕಾಣ್ಕೆಗಳು ! ರಸಿಕರ ಪಾಲಿಗೆ ಆನಂದ ನೀಡುವ ಹೃದಯ ಸ್ಪರ್ಶಿ ಭಾವ-ತಂತುಗಳು, ಆದ್ದರಿಂದಲೇ ಭಾವಗೀತೆಗಳು ಸಾರ್ವಕಾಲಿಕ ಗೀತೆಗಳಾಗಿ ಇನ್ನೂ ಈ ಆಧುನಿಕ ಆಡಂಬರದ ಕಾಲದಲ್ಲಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಇನ್ನು ಈ ಸುಂದರ ಭಾವ ಗೀತೆಗಳನ್ನು ಬರೆದ ನಮ್ಮ ಎಲ್ಲ ಕವಿವರೇಣ್ಯರಿಗೆ ನಮ್ಮ ಅನಂತ ವಂದನೆಗಳು.
ನಾವಿಡುವ ಕಣ್ಣೀರು ತೊರೆಯಾಗಿ ಹರಿಯಲಾರದು…
ನಾವು ಮಾಡುವ ದಾನ ಬಡತನವ ತೊಲಗಿಸದು…
ನಾವು ಆಡುವ ಮಾತನ್ನು ಮೂಕನಿಗೆ ನೀಡಲಾಗದು….
ಆದರೆ ಕವಿಗಳು ಆಸ್ವಾಧಿಸಿ ನಮಗೆ ಹಂಚಿರುವ ಈ ಭಾವನೆಗಳೆಂಬ ಭಾವಗಂಗೆಯಂತೆ ಸದಾ ತುಂಬಿಹರಿವ ಈ ಕವನಗಳನ್ನು ಎಂದೆಂದಿಗೂ ಮರೆಯಲಾಗದು….
Source – Sakhigeetha.com