ಬ್ಯಾನಿ ಮೂಳಗ ಆಮ್ರದ ಹಳವಂಡ …..!

0
835

unnamed

ನನ್ನ ಆತ್ಮಿÃಯ ಮಿತ್ರರೋಬ್ಬರು ಇಂಗ್ಲಿÃಷಿನ “ ನಾಸ್ಟಾಲ್ಜಯಾ” ಪದಕ್ಕೆ ಸಮಾಂತರದ ಕನ್ನಡ ಶಬ್ದ ಹೇಳಬೇಕೆಂದು ನನಗೆ ದೂರವಾಣಿಯಿಂದ ಕೇಳಿದರು. ತಕ್ಷಣ ನನ್ನ ನೆನಪಿನ ಪುಟ್ಟಿಯಿಂದ “ಹಳವಂಡ ಎಂಬ ಗ್ರಾಮೀಣ ಬಳಕೆಯ ಶಬ್ದ ಹೆಕ್ಕಿತೆಗೆದು ಹೇಳಿದೆ. ಅಚ್ಚರಿಯೆಂದರೆ ಗದಗ ಜಿಲ್ಲೆಯ ರೋಣದ ಮೂಲದಿಂದ ಬಂದ ನ್ನ ಹೆಂಡತಿ; ಈ “ಹಳವಂಡ” ಪದ ಬಳಕೆಯಾಗಿದ್ದ ೫೦ ವರ್ಷಹಿಂದಿನ ಕನ್ನಡ ಗಾದೆ…. ಬ್ಯಾನಿ ಮೂಳಗ ಆಮ್ರದ ಹಳವಂಡ” ಹೇಳಿದಳು. ಅದನ್ನು ಆ ನ್ನ ಮಿತ್ರರು ತುಂಬ ಗೌರವದಿಂದ ದಾಖಲಿಸಿಕೊಂಡರು.

ಇತ್ತಿÃಚಿನ ನಗರೀಕರಣ, ರೈಲೀಕರಣ, ವಿಮಾನೀಕರಣ, ಮೊಬೈಲೀಕರಣಗಳ ಭೂತ ಪ್ರವೇಶದಿಂದ ನಮ್ಮ ಮೂಲಭೂತವಾದ ಶಬ್ದಗಳು, ನುಡಿಗಟ್ಟುಗಳು, ವಿಚಾರಗಳು, ಬದುಕಿನ ಶೈಲಿಗಳು, ನಮ್ಮತನದ ಕಂಪುತಂಪುಗಳು ಹೇಳಹೆಸರಿಲ್ಲದಂತೆ ಸಾಯುತ್ತಿವೆ. ಉದಾಹರಣೆಗೆ ಇಂದಿಗೆ ಅರವತ್ತು ವರ್ಚಗಳ ಹಿಮದೆ ಹುಬ್ಬಳಿಯಲ್ಲಿ ಢಾಣಾಢಂಗುರವಾಗಿ ಬಳಕೆಯಲ್ಲಿದ್ದ “ಅಲ್ಲಿಕೇರಿ” ಎಂಬ ಶಬ್ದ, “ಪಿಕ್‌ನಿಕ್” ಎಂಬ ಕಡಲಾಚೆಯ ಚಲುವಿಯ ಆಕ್ರಮಣದಿಂದ ಅತ್ತುಹೋತು. ವಿಜಾಪೂರ-ರಾಯಚೂರ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಇದೇ ಅರ್ಥದ “ಕೊಂತಿರೊಟ್ಟಿ” ಪದವೂ ಕಂಬಿಕಿತ್ತು ಹೋತು. ಹಳೇಹುಬ್ಬಳ್ಳಿಯ ನಮ್ಮ ಓಣಿಯ ಹೆಣ್ಣುಮಕ್ಕಳೆಲ್ಲ ಬೆಳಿಗ್ಗೆ ಭೆಟ್ಟಿಯಾದಾಗ ….. “ನ್ಯಾರೀ ಏನ ಮಾಡೀದೇ ಅನ್ನಕ್ಕಾ…..” ಅಂತ ಕೇಳುತ್ತಿದ್ದರು. ಆದರೆ ಇಂಡಿಯಾದ ಮೇಲೆ ಬಾಂಬ ದಾಳಿ ನಡೆದಂತೆ; “ಬ್ರೆಕ್‌ಫಾಸ್ಟ” ಪದ ಏರಿಬಂದು “ನ್ಯಾರಿ” ಪದ ಮೋರಿ ಸೇರಿತು.
ಏನ್ಮಜಾ ಅಂತೀರಿ? ೧೯೬೪-೬೫ ರ ಸಾಲಿನಲ್ಲಿ ಇಲಕಲ್ಲ ಕಾಲೇಜಿನಲ್ಲಿ ಓದುತ್ತಿದ್ದ ರಾಯಚೂರ ಜಿಲ್ಲಿಯ ಹಳ್ಳಿಯ ವಿದ್ಯಾರ್ಥಿಯೊಬ್ಬ ನನಗೆ ಹೇಳಿದ- “ಸರ್…. ನಾನು ಭಾರೀಭಾರೀ ಯಕ್ರಲಾಡೀದ್ನಿರಿ….. ಆದ್ರೂ ನಾಪಾಸಾದ್ನಿರಿ….”. ಈ “ಯಕ್ರಲಾಡು” ಎಂಬ ಶಬ್ದದ ಶಕ್ತಿಗೆ ಸಮಾಂತರವಾದ ಪದ ಇಂಗ್ಲಿÃಷಿನಲ್ಲಿ ನನಗೆ ಎನ್ನೂ ಸಿಕ್ಕಿಲ್ಲ. ಇದಲ್ಲದೇ ಇಂಗ್ಲಿÃಷಿನ…. “ಅರ್ಜಂಟ್ಲಿ”…. “ಕ್ವಿ ಕ್ಲಿ’….”ಇಮ್ಮಿÃಡಿಯೇಟ್ಲಿ”…. ಈ ಎಲ್ಲ ಶಬ್ದಗಳನ್ನೂ ಮೀರಿಸಿದ ಒಂದು ಪದ ನಾವು ಕನ್ನಡದಲ್ಲಿ ಬಳಸುತ್ತಿದ್ದೆವು. “ರಾತ್ರಿ ನನ್ನ ಎದಿ ಶಬ್ದಗಳನ್ನೂ ಮೀರಿಸಿದ ಒಂದು ಪದ ನಾವು ಕನ್ನಡದಲ್ಲಿ ಬಳಸುತ್ತಿದ್ದೆವು. “ರಾತ್ರಿ ನ್ನ ಎದಿ ! ಈ “ಬುದುಂಗನೇ” ಎಂಬ ಶಬ್ದದ ತೀವ್ರತೆ-ರಭಸತೆ ಸಾರಿ ಹೇಳುವ ಪದದ ಎದುರಿಗೆ ಇಂಗ್ಲಿÃಷಿನ “ಅರ್ಜಂಟ್ಲಿ”, “ಕ್ವಿ ಕ್ಲಿ” ಗಳಲ್ಲೆ ಸಪ್ಪಟ ಸಪ್ಪನಬ್ಯಾಳಿ!
೫೦ ವರ್ಷಗಳ ಹಿಂದೆ ಇಲಕಲ್ಲಿನಲ್ಲಿ ಯಾರಿಗಾದರೂ ಬೈಯುವಾಗ….. “ಕುರ್ಸಾವಾಗ….” ಅಂತ ಬಯ್ಯುತ್ತಿದ್ದರು. ಈ “ಕುರ್ಸಾಲಿ” ಅಂದರೇನು ಅಂತ ಕೇಳಿದೆ. ಉತ್ತರ ಸಿಕ್ತು. ಆಗ ಜಾತಿ-ಕುಲಗಳು ತುಂಬಾ ಬಲಢ್ಯವಾಗಿದ್ದ ಕಾಲ. ಉದಾ- ಪಟ್ಟಸಾಲಿ, ಪಂಚಮಸಾಲಿ, ಅಗಸಾಲಿ, ಕುರುಂಸಾಲಿ ಇಂತ ನೂರಾರು ಜಾತಿಗಳು. ಇವರಲ್ಲಿ ಪರಸ್ಪರ ಮದುವೆ ನಿಷಿದ್ಧವಾಗಿತ್ತು. ಒಂದು ಜಾತಿಯ ಹುಡುಗ ತನ್ನ ಜಾತಿಯ ಚೌಕಟ್ಟನ್ನು ಮೀರಿ ಇನ್ನೊÃಂದು ಜಾತಿಯ ಹುಡುಗಿಯನ್ನು ಲವ್ ಮಾಡಿದಾಗ ಅವರಿಗೆ ಹುಟ್ಟಿದ ಕೂಸಿನ ಜಾತಿ ಯಾವುದು? .ಅಂಥಾ ಮಿಶ್ರಜಾತಿಯವರಿಗೆ ಹುಟ್ಟಿದ ಮಕ್ಕಳು; ಆ ಜಾತಿಯೂ ಅಲ್ಲ, ಈ ಜಾತಿಯೂ ಅಲ್ಲ; ಅದು “ಕುರ್ಸಾಲಿ” ಆಗುತ್ತಿತ್ತು! ಆದ್ದರಿಂದ ಆಗ “ಲೇ ಕುರ್ಸಾಲ್ಯಾ” ಎಂಬುದು ಜನಪ್ರಿಯ ಪ್ರಿÃತಿಯ ಬೈಗುಳವೂ ಆಗಿತ್ತು. ಯಾರಾದರೂ ಗೆಳೆಯರು ಪ್ರಿÃತಿಯಿಂದ “ಕುರ್ಸಾಲ್ಯಾ” ಅಂತ ಬೈದರೆ ಹಾಗೆ ಬೈಸಿಕೊಂಡವನು ಖುಶಿಯಿಂದ ಮುಳುಮುಳು ನಗುತ್ತಿದ್ದ.
ಇತ್ತಿÃಚೆಗೆ ನಗರೀಕರಣದಿಂದ ಸಿಮೆಂಟ್ ಬಿಲ್ಡಿಂಗುಗಳ ಬ್ರಹ್ಮಾಂಡ ರಾಕ್ಷಸರ ಪ್ರವೇಶವಾಯಿತು. ಇದರಿಂದ ನಮ್ಮ ಹಳೆಯ ಮಣ್ಣಿನ ಮೇಲ್ಮುದ್ದಿಯ ಮನೆಗಳಲ್ಲಿ ಸಹಜವಾಗಿ ಪ್ರಯೋಗದಲ್ಲಿದ್ದ ಆ ಅಚ್ಚಗನ್ನಡದ ಹಳೇ ಶಬ್ದಗಳು ಈಗ ಗುಳೇಎದ್ದು ಗುಟಕ್ ಅಂದವು. ಸಿಮೆಂಟ ಬಿಲ್ಡಿಂಗುಗಳ ಇಂಜಿನೀಯರ ಶೈಲಿಯ ಸಿಂಗಲ್ ಬೆಡ್ ರೂಮ್, ಡಬಲ್ ಬೆಡ್ರೂಮ, ಡ್ರಾಯಿಂಗ್ ರೂಮ್, ಲಿವಿಂಗ ರೂಮ್, ಕಿಚೆನ್, ಬಾತ್ರೂಮ ಇತ್ಯಾದಿ ಶಬ್ದಗಳ ಹೊಸಯುಗ ಪ್ರವೇಶವಾದ ಮೇಲೆ; ನಮ್ಮ ಹಳೇ ಮನೆಗಳ….”ಅಂಕಣ”, “ಬಂಕಣ”, “ತಳಪಾಯ”, “ಪಡಪಾಯ”, “ಜಂತಿ” “ಪಡಜಂತಿ”, “ಬೋದು”, ಕಟ್ಟಿ”, “ಹೋಳಗಟ್ಟಿ”, “ಹುಸಿ”, “ನಾಗೊಂದಿ”, “ತೊಲಿ”, “ಕಂಬ”, “ಗೊಂಬಿ”, “ಕಾಲ್ದಿÃವಿಗಿ”, “ನೆಲವು’, “ಅಡ್ಡೂಣಿಗಿ”, “ಕ್ವಾಟೀಕಾಣಿ”, “ಬೋದು”, “ಪಾತಾಳಂಕಣ”, “ಮೇಲಂಕಣ”, “ಗ್ವಾದ್ಲಿ” “ಒಳಟ್ಟ”, “ಹದ್ಲಿಕ್ವಾಣಿ”, “ಗೂಟ”, “ಸರಗೂಟ”, “ಜಗಲಿ”, “ಹರನಾಳಿಗಿ”, “ಪಾಗಲಗೂಟ”, “ಲಾವಂಡಿಗಿ”, “ಅಗುಳಿ”, ಚಿಲಕ”, “ಬೆಳಕಿಂಡಿ”, “ಹೊಚ್ಚಲ”, “ಬಳತ”, “ಕಣ್ಣಿ”, “ಬಾಯ್ಚಿಕ್ಕಾ”, “ಗುದ್ದಿ”, “ಜಂತಗುಂಟಿ”, “ಮಡಿಗುಂಟಿ”, “ಗ್ವಾರಿ”, “ಬ್ಯಾಕೋಲು”, ಕಾಳು ತೂರುವ “ಮೆಟ್ಟು”, “ಕಲಗಂಚು”, “ಲ್ಯಾವಿಗಂಟು” …… ಇಂಥಾ ಸಾವಿರಾರು ಶಬ್ದಗಳು ಇಂದಿನ ನಿರ್ಜೀವ ಇಂಜಿನೀಯರ ಶೈಲಿಯ ಮನೆಗಳಲ್ಲಿ ಮಾಯವಾದವು.
ಅಂದಿನ ಆ ಕೂಡುಘರಾಣೇದ ಆ ಮನೆಗಳಲ್ಲಿ ಹತ್ತಾರು ಜೀವಂತ ರೂಮುಗಳಿರುತ್ತಿದ್ದವು. ನಮ್ಮ ಮನೆಯಲ್ಲಿ ಹದಿಮೂರು ಕ್ವಾಣಿಗಳು ಎರಡು ಅಡಗೀಮನೆಗಳು, ಒಮದು ದೊಡ್ಡಬಚ್ಚಲ ಮನೆ, ದಂದಕ್ಕಿ ಇದ್ದವು. ಗುಬ್ಬಿಗಳಿಗೆ ಸ್ನಾನ ಮಾಡಲು ಚಿಕ್ಕ ಕಲ್ಬಾನಿ ಇತ್ತು. ಕ್ವಾಣಿಗಳಲ್ಲಿ…. “ಅಜ್ಜನಕ್ವಾಣಿ”, “ಕಾಕಾನ ಕ್ವಾಣಿ”, “ದೊಡ್ಡಪ್ಪನಕ್ವಾಣಿ”, “ಚಿಗವ್ವನ ಕ್ವಾಣಿ”, “ಹದ್ಲಿಕ್ವಾಣಿ”, “ಕ್ವಾಟಿ ಕ್ವಾಣಿ”…… ಇಂಥಾ ಹತ್ತಾರು ಕ್ವಾಣಿಗಳೊಂದಿಗೆ ಒಣದು “ದೆವ್ವನ ಕ್ವಾಣಿ”ಯೂ ಇರುತಿತ್ತು. ಆ ಕ್ವಾಣಿಯಲ್ಲಿ ಹಿಂದೆ ಸತ್ತವರೆಲ್ಲ ದೆವ್ವವಾಗಿ ಚಕ್ಕಾ ಆಡುತ್ತ, ಹರಟೆ ಹೊಡೆಯುತ್ತ ಕದ್ದುಮುಚ್ಚಿ ಕುಳಿತಿರುತ್ತಿದ್ದರು. ನನಗೆ ನ್ನ ಅಕ್ಕ ಗುರಕ್ಕನಿಗೆ ಆ ದೆವ್ವಗಳು ಕವನೆಳ್ಳು ಸ್ಪಷ್ಟವಾಗಿ ಕಾಣುತ್ತಿತ್ತು. ಒಮ್ಮೊಮ್ಮೆ ಮಾತೂ ಕೇಳುತ್ತಿತ್ತು. ಅಂದಿನ ಈ ಲೈಟಿನ ಯುಗದಲ್ಲಿ ಪಾಪ ಆ ಹಾಳುಹಳೇ ದೆವ್ವಗಳಿಗೆ ನಿರುಂಬ್ಳಾಗಿ ಇರಲು ಜಾಗ ಇತ್ತು. ಇಂದಿನ ಈ ಲೈಟಿನ ಯುಗದಲ್ಲಿ ಪಾಪ ಆ ಹಾಳುಹಳೇ ದೆವ್ವಗಳೆಲ್ಲ ಗುಳೇ ಎದ್ದು ಹೋಗಿಬಿಟ್ಟುವು! ದೆವ್ವಗಳ ಸಂತತಿ ನಾಶವಾಗಿ ಹೋತು. ಹುಂಚಿಮರದ ದೆವ್ವ, ಕುಂಬಳಕಾಯಿಯಲ್ಲಿ ಕುಂತ ದೆವ್ವ, ಜೋಗತೆರ ಬಾವಿ ದೆವ್ವ, ಅಗಸೀದೆವ್ವ ಎಲ್ಲಾ ಇಲ್ಲವಾದವು.
ಓ…… ಈಗ ನಾವು ಮನುಷ್ಯರೇ ಸ್ಪೆÃಶಲ್ ದೆವ್ವ ಆಗಿರುವಾಗ ಆ ಹಳೇ ದೆವ್ವಗಳ ಅವಶ್ಯಕತೆಯಾದರೂ ಏನಿದೆ ಹೇಳ್ರಿÃ?

unnamed

Source – Sakhigeetha.com

LEAVE A REPLY

Please enter your comment!
Please enter your name here