ಉಪ್ಪು ಖಾರ ತಿನ್ನುವ ಮಾನವರು ನಾವು; ಎಡವುವುದು ಸಹಜ; ಮತ್ತೆÃ ಮತ್ತೆÃ ಎಡವಿದಲ್ಲೆÃ ಎಡವುವುದು ಎಳ್ಳಷ್ಟೂ ಸರಿಯಲ್ಲ.. ತಪ್ಪು ಮಾಡುವುದು ಮನುಷ್ಯರ ಗುಣಧರ್ಮ, ಮಾಡಿದ ತಪ್ಪನ್ನು ತಿದ್ದಿಕೊಳ್ಳುವುದರಲ್ಲಿದೆ ನರನ ಕಲ್ಯಾಣ!
ಕವಿ ವಾಣಿ ಅನುರಣಿಸಿದೆ: “ಕೆಟ್ಟ ಸಂಗ ಕೆಟ್ಟದ್ದನಲ್ಲದೆ ಒಳ್ಳೆಯದನೆಂದೂ ತರದು!”; ಕರ್ನಾಟಕದ ಜನತೆ ಈಗ ಅತ್ಯಂತ ಜಾಗರೂಕವಾಗಿ ಹೆಜ್ಜೆ ಇಡಬೇಕು; ನಮ್ಮ ಮುಂದೆ ಇರುವುದೇ ಎರಡು, ಮೂರು ಆಯ್ಕೆ! ಈಗ ಶ್ರಿÃ ಸಾಮಾನ್ಯರು ಎಡವಿದರೆ- ಮತ್ತೆ ಐದು ವರ್ಷ ಪರಿತಾಪವನ್ನು ಪಡಬೇಕಾಗುತ್ತದೆ.
ಬೇವಿನೊಡನಾಟದಿಂದ ಕಹಿಯ ಸಂಸರ್ಗ ಮಾತ್ರ ಸಾಧ್ಯ. ಮಾವನ್ನು ಆಯ್ಕೆ ಮಾಡಿದರೆ-ಜೀವನಕ್ಕೆ ಸಿಹಿಯ ಸಾನ್ನಿಧ್ಯ!
“ನಮಗೂ ಈ ರಾಜಕಾರಣಕ್ಕೂ ಸಂಬಂಧ ಏನೇನೂ ಇಲ್ಲ” ಎಂದು ನಮ್ಮ ಪಾಡಿಗೆ ನಾವು ಸುಮ್ಮನಿರಲಾಗದು. ನಿರ್ಧಾರಗಳು ನಮ್ಮ ಬಾಳಿನ ಮಾರ್ಗಗಳನ್ನೆÃ ಬದಲಿಸಯಾವು! ಚಿಂತನೆ ಮುಖ್ಯ. ನಮ್ಮ ಜವಾಬ್ದಾರಿಗಳನ್ನು ನಾವು ನಿರ್ವಹಿಸುವುದೂ ತುರ್ತು ಅಗತ್ಯ “ಎಣ್ಣೆ ಬಂದಾಗ ಕಣ್ಣು ಮುಚ್ಚಿಕೂಡಬಾರದು!” ಎಂಬುದು ನಮ್ಮ ಹಿರಿಯರು ಹೇಳುತ್ತಾ ಬಂದ ನಾಣ್ನುಡಿ!
ಈಗ ನಾಗರೀಕರು ಪುಡಿ ಕಾಸಿನ ಗೀಳಿಗೆ ಬಿದ್ದರೆ-ಅದೇ ಕೇಡು,”ಮತ” ಅಮೂಲ್ಯ; ಅದನು ಮಾರಿಕೊಂಡರೆ-ಬದುಕು ಕೊಳಕು! ಇಂದಿನ ಒಂದು ಪುಟ್ಟ ನಡೆ ಮುಂದಿನ ನಮ್ಮೆಲ್ಲರ ಬದುಕಿಗೆ ಪರಿತಾಪ ತರಬಲ್ಲದು. ಎಚ್ಚರಿಕೆ ಅತ್ಯಗತ್ಯ. ಆಲೋಚನೆಯೂ ಅನಿವಾರ್ಯ; ತೀರ್ಮಾನಗಳು ಶುದ್ಧವಾಗಿದ್ದರೆ ಪ್ರಬುದ್ಧವಾಗಿದ್ದರೆ ನಾಗರೀಕ ಬದುಕು ಸಂಕಟಕ್ಕೆ ಸಿಲುಕದು.
ಜಾತಿಯನ್ನು ನೋಡಿ, ಧನ ಬಲವ ನೋಡಿ, ಮುಂದೆ ಈ ಹಣವಂತ ನಮಗೆ ಆಸರೆಯಾದನು ಎಂಬ ಆಮಿಷಕ್ಕೆನಾವು ಒಳಗಾಗಿ ಗುಣವಂತರ ಕಡೆಗಣಿಸಿದರೆ-ಪ್ರಜಾಪ್ರಭುತ್ವಕ್ಕೆÃನೆ ಅಪಾಯ.
ಯಾರು ಜನಪರವಿರುತ್ತಾರೋ ಅಂಥವರ ಆಯ್ಕೆ ಸೂಕ್ತ. ದಿನ ದಿನವೂ ಚುನಾವಣೆಯನ್ನು ನಡೆಸಲಾಗದು. ಸಾಮಾನ್ಯರು ಕುಬ್ಜರಾಗಬಾರದು. ಆಮಿಷಗಳ ಸೆಳೆತಗಳೇ ಹಾಗೇ, ಅವು ನಮ್ಮ ಒಟ್ಟಾರೆ ಆಶಯಗಳಿಗೇ ಉರುಲಾಗುತ್ತವೆ. ಮುಂದೆ ಕ್ಷೆÆÃಭೆಯನ್ನೂ ಸೃಷ್ಟಿಸುತ್ತವೆ!
ಪ್ರಜೆಗಳಿಗೆ ಈಗ ಸವಾಲು; ಮನಮಂಥನ ಆಗಲೇಬೇಕು. ಬುದ್ಧಿ ಪ್ರಖರವಾಗಿ ನಮ್ಮ ಕಣ್ಣೆದುರಿನ ವ್ಯಕ್ತಿಗಳಲ್ಲಿ ಆದರ್ಶ ವ್ಯಕ್ತಿತ್ವಗಳು ಎಲ್ಲಿಹವೋ ಅಂಥವುಗಳನ್ನೆÃ ಆಯ್ದು ಪ್ರಜಾತಂತ್ರಕ್ಕೆ ಮಾನ್ಯತೆಯನ್ನು ನೀಡಬೇಕು. ಇಲ್ಲವಾದರೆ ಮತ್ತೆ ಕತ್ತಲ ಸಂಸರ್ಗವೇ ಗಟ್ಟಿಯಾಗಿ ವರುಷ ವರುಷ ನರಳಾಟವಾದೀತು! ಎಲ್ಲ ಸಮಸ್ಯೆಗಳಿಗೂ ಪರಿಹಾರಗಳು ಇದ್ದೆÃ ಇವೆ. ಪ್ರಮೇಯಗಳು ಬಂದಾಗ ತಿಮಿರ ಮುತ್ತಿ ಕತ್ತಲು!
ಅಜ್ಞಾನ ಯಾವತ್ತೂ ಕತ್ತಲು. “ಇವನು ನಮ್ಮವನು; ಇವನು ನಮ್ಮ ಜಾತಿಯವನು; ಇವನು ನಮ್ಮ ನೆಂಟ.” ಹೀಗೆ ಏನೇನೋ ಪ್ರಲೋಭನೆಗಳ ಕಡೆಗೆ ವಾಲಿದರೆ, ಮತ್ತೊಮ್ಮೆ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೇ ಧಕ್ಕೆ ಆಗುತ್ತದೆ.
ಮತ ನೀಡಬೇಕು ಪ್ರಜೆಗಳು ಸಮರ್ಥರಿಗೆ, ಯಾರು ಆಡಳಿತ ರಥದ ಚುಕ್ಕಾಣಿಯನ್ನು ಹಿಡಿಯಲು ಶಕ್ತರು ಯಾರಿಂದ ಪ್ರಜೆಗೆ ಒಟ್ಟಾರೆ ಸಮುದಾಯಕ್ಕೆ ತನ್ನೂಲಕ ಈ ನಾಡಿಗೆ (ರಾಜ್ಯಕ್ಕೆ) ಸೂಕ್ತವೆಂಬುದನ್ನು ಮತ್ತೆ ಮತ್ತೆ ಯೋಚಿಸಿ ವ್ಯಕ್ತಿಗಿರುವ ಪ್ರಗಲ್ಭವಾದ “ಮತ”ವೆಂಬ ಅಮೂಲ್ಯ ಮಾಲೆಯನ್ನು ಧೀರರ ಕೊರಳಿಗೆ ಹಾರವನ್ನಾಗಿಸಬೇಕು.
ಎಲ್ಲಿ ಶುಭ ಚಿಂತನ-ಮಂಥನ
ಅಲ್ಲಿ ಕಾರ್ಯಾಚರಣೆಗೆ ಶುಭ ತೋರಣ!
ಎಲ್ಲೆಲ್ಲ ವಿಚಾರ-ವಿಮರ್ಶೆಗೆ ಆದ್ಯ ಗಮನ
ಅಲ್ಲಲ್ಲಿ ಆಯ್ಕೆಗೆ ಕಂಡೀತು ಸಮರ್ಥ ಹೂರಣ!
ಈಗ ಸುವರ್ಣ ಅವಕಾಶ ಒದಗಿ ಬಂದಿದೆ. ಅದನ್ನು ಸರಿಯಾಗಿ ಮತದಾರ ತನ್ನ ಪ್ರಜ್ಞೆಯನ್ನು ಜೋಪಾನವಾಗಿ ಹರಿತವಾಗಿ ಆಯ್ಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿದರೆ ಆಗ ನವ ನಿರ್ಮಾಣ!
ಸುಮ್ಮನೆ ದಡದಲ್ಲಿ ನಿಂತುನೋಡುವುದಲ್ಲ. ಇಳಿಯಬೇಕು ಕಣಕ್ಕೆ. ಈಜಬೇಕು ಬಾಳಿನ ಹೊಳೆಯಲ್ಲಿ ಪ್ರವಾಹ ಬಂದಾಗ, ನಮ್ಮ ಜಾಣ್ಮೆ ನಮ್ಮ ನಮ್ಮ ಕೈಯಲ್ಲಿರಬೇಕು. ಎತ್ತ ಸಮಗ್ರ ದೃಷ್ಟಿ ಕೋನ… ಅತ್ತ ಶುಭದ ಅನಾವರಣ!
ಡಾ||ದೊಡ್ಡರಂಗೇಗೌಡ
Source – Sakhigeetha.com