ಬಂಗಾರದ ವ್ಯಕ್ತಿತ್ವ : ಬೆಳೆಸಿಕೊಳ್ಳವ ಬಗೆ ಹೇಗೆ?

0
940

images (4)

ನಿಮ್ಮ ವ್ಯಕ್ತಿತ್ವ ಅಭಿವೃದ್ಧಿಗೊಂಡಿದ್ದರೆ, ಅದು ಪ್ರಕಾಶಿಸುವುದಲ್ಲದೆ, ತೇಜಸ್ಸಿನಿಂದ ಕೂಡಿರುತ್ತದೆ. ಅಲ್ಲದೇ ನಿಮ್ಮ ವ್ಯಕ್ತಿತ್ವದ ಆಕರ್ಷಣೆಗೊಳಗಾಗಿ, ಜನರು ನಿಮ್ಮ ಸುತ್ತಲೂ ನೆರೆದಿರುತ್ತಾರೆ ಹಾಗೂ ನಿಮ್ಮ ಅಭಿಪ್ರಾಯಗಳನ್ನು ಶ್ಲಾಘಿಸುತ್ತಾರೆ. ನಿಮ್ಮ ಸಮ್ಮುಖದಲ್ಲಿರುವುದೆಂದರೆ ಅನೇಕರಿಗೆ ತಮ್ಮ ಜೀವನದಲ್ಲಿ ಭರವಸೆ ಮತ್ತು ಸ್ಫೂರ್ತಿ ತುಂಬಿದಂತೆ ಎಂದು ಭಾವಿಸುತ್ತಾರೆ. ನೀವು ಸ್ಪರ್ಧೆಯಲ್ಲಿ ಭಾಗವಹಿಸದ ನಾಯಕರಾಗಿರುತ್ತಿÃರಿ.
ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಜೀವನದಲ್ಲಿ ಸಂತೋಷವನ್ನು ಅನುಭವಿಸುವ ಉದ್ದೆÃಶದಿಂದ ಅಭಿವೃದ್ಧಿಗೊಳಿಸಿಕೊಳುತ್ತಾನೆ. ವ್ಯಕ್ತಿತ್ವವನ್ನು ಅಭಿವೃದ್ಧಿಕೊಳ್ಳುತ್ತಿರುವ ವ್ಯಕ್ತಿ ಸ್ವಾವಲಂಭಿಯಾಗಿರುತ್ತಾನೆ. ಅಲ್ಲದೆ, ಆತ ಸಂತೋಷಕರವಾಗಿ ಮತ್ತು ಸ್ವತಂತ್ರವಾಗಿ ಜೀವಿಸುತ್ತಾನೆ. ತನ್ನ ಸಂತೋಷವನ್ನು ಹಾಗೂ ಸಾಮಾಜಿಕ ಯಶಸ್ಸನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾನೆ.
ವ್ಯಕ್ತಿತ್ವ ವಿಕಾಸದತ್ತ ಆಸಕ್ತಿ ವಹಿಸಿರುವ ವ್ಯಕ್ತಿಯಲ್ಲಿ ಸಂಪತ್ತು ಅಥವಾ ಆರ್ಥಿಕವಾಗಿ ಸದೃಢತೆ ಇಲ್ಲದಿದ್ದರೂ, ಹೃದಯ ವೈಶಾಲ್ಯ ಇರುತ್ತದೆ. ಅಲ್ಲದೆ, ತನ್ನ ಬಗ್ಗೆ ವಿಶ್ವಾಸವಿಟ್ಟು ಬರುವವರಿಗೆ ಅನುಕಂಪವನ್ನು ತೋರಿಸುವುದಲ್ಲದೆ, ಅಗತ್ಯ ಬಿದ್ದರೆ ಆಶ್ರಯವನ್ನು ಕಲ್ಪಿಸಿಕೊಡುತ್ತಾನೆ.
ಬಂಗಾರದ ವ್ಯಕ್ತಿತ್ವದವರು ಅಹಂಕಾರದಿಂದ ವರ್ತಿಸುವುದಿಲ್ಲ. ಕೋಪತಾಪಗಳನ್ನು ನಿಯಂತ್ರಣದಲ್ಲಿರಿಸಿ ಕೊಂಡಿರುತ್ತಾರೆ ಮತ್ತು ಮಾನವೀಯತೆಗೆ ಹೆಚ್ಚು ಬೆಲೆ ಕೊಡುತಾರೆಯೇ ಹೊರತು; ಜಾತಿ ಮತಗಳಿಗೆ ಹೆಚ್ಚು ಬೆಲೆ ಕೊಡುವುದಿಲ್ಲ. ಎಲ್ಲ ಸಂದರ್ಭಗಳಲ್ಲೂ ಪ್ರಜ್ಞಾಪೂರ್ವಕವಾಗಿ ವರ್ತಿಸುತ್ತಾರೆ.
ಬದುಕು ಭಾವನೆಗಳ ನಡುವೆ ಘರ್ಷಣೆ ಗಲಾಟೆಗೆ ಅವಕಾಶ ನೀಡುವುದಿಲ್ಲ. ಕಷ್ಟ ಬಂದಾಗ ಎದೆಗುಂದುವುದಿಲ್ಲ. ಸುಖ ಬಂದಾಗ ಅಹಂನಿಂದ ನಡೆದುಕೊಳ್ಳುವುದಿಲ್ಲ. ಸುಖ ದುಃಖಗಳೆರಡರಲ್ಲಿಯೂ ಮಾನಸಿಕ ಸಮತೋಲನವಿರುತ್ತದೆ. ಸೋಲು, ಗೆಲುವು ಎರಡನ್ನೂ ಸಮಾಧಾನಕರವಾಗಿಯೇ ಒಪ್ಪಿಕೊಳ್ಳುತ್ತಾರೆ.
ಅಭಿವೃದ್ಧಿಗೊಂಡ ವ್ಯಕ್ತಿತ್ವ
ಅಭಿವೃದ್ಧಿಗೊಂಡ ವ್ಯಕ್ತಿತ್ವ ತನಗಾಗಿಯೇ ಮೀಸಲಾಗಿರುವುದಿಲ್ಲ. ಇತರರಿಗೂ ವಿಸ್ತಾರಗೊಂಡಿರುತ್ತದೆ. ಅಲ್ಲದೆ, ಇವರು ಸ್ವಾನುಭವದ ಉಪಾಧ್ಯಾಯರಾಗಿರುತ್ತಾರೆ. ಅನೇಕರಿಗೆ ಅನೇಕ ವಿಷಯಗಳಲ್ಲಿ ಮಾಹಿತಿ ಶಿಕ್ಷಣ ಸಂವಹನ ನೀಡುವಂತಹ ಸಾಮರ್ಥ್ಯವನ್ನು ಹೊಂದಿರುತ್ತಾರೆ.
ತಾವು ಇತರರಿಗೆ ಮಾದರಿಯಾಗಿರುವುದಲ್ಲದೆ ಆದರ್ಶವನ್ನು ಪರಿಪಾಲಿಸುವಂತಹ ಪ್ರವೃತ್ತಿಯಿಂದ ಕೂಡಿರುತ್ತಾರೆ. ಅಲ್ಲದೆ, ಇವರ ಧೈರ್ಯ ಮತ್ತು ಸ್ಫೂರ್ತಿ ಇತರರಿಗೆ ಉದಾಹರಣೆಯಾಗಿರುತ್ತದೆ.
ದೇಶಕ್ಕಾಗಿ ಜನರ ಕಲ್ಯಾಣಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗಿರುತ್ತಾರೆ. ಇವರಲ್ಲಿ ಸ್ವಲ್ಪಮಟ್ಟಿಗೆ ರಾಜಕೀಯ ವ್ಯಕ್ತಿಗಳಲ್ಲಿರಬಹುದಾದ ನಾಯಕತ್ವದ ಗುಣಗಳಿರುತ್ತವೆ.
ಇವರಲ್ಲಿ ಇಚ್ಚಾಶಕ್ತಿ ಮತ್ತು ಯೋಜನೆ ಇರುತ್ತದೆ. ಸಮಾನಮನಸ್ಕರನ್ನು ಸಂಘಟಿಸಿ, ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ದುರಾಸೆ ದುಶ್ಚಟಗಳಿರುವುದಿಲ್ಲ. ನೈತಿಕತೆಯ ನೆಲೆಗಟ್ಟಿನ ಮೇಲೆ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಅಲ್ಲದೆ, ನಾನೇ ಹೆಚ್ಚು; ಇನ್ನೊಬ್ಬರು ಕಡಿಮೆ ಎಂಬ ಮನೋಭಾವನೆ ಇರುವುದಿಲ್ಲ.
ಇವರಲ್ಲಿ ಉದಾರತೆ, ಅನುಕಂಪ, ಎಲ್ಲರಲ್ಲೂ ಒಂದಾಗುವ ಪ್ರವೃತ್ತಿ ಇರುತ್ತದೆ. ಸಮಯ ಸಂದರ್ಭ, ಸನ್ನಿವೇಶಗಳನ್ನು ಅರ್ಥ ಮಾಡಿಕೊಂಡು ವ್ಯವಹರಿಸುವ ಕೌಶಲ್ಯವಿರುತ್ತದೆ. ಇವರು ತಮ್ಮ ಸ್ನೆÃಹ ವಲಯದಲ್ಲಿ ಜನಪ್ರಿಯ ವ್ಯಕ್ತಿಯಾಗಿರುತ್ತಾರೆ. ತಮ್ಮ ತಪ್ಪು ಒಪ್ಪುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ತಮ್ಮಿಂದ ಗೊತ್ತಿಲ್ಲದೆ, ತೊಡಕು ತೊಂದರೆ ಆಗಿದ್ದರೆ, ಕ್ಷಮಾಪಣೆ ಕೇಳುವುದಲ್ಲದೆ, ಮುಂದೆ ಅಂಥ ತಪ್ಪುಗಳು ಸಂಭವಿಸದಂತೆ ಜಾಗೃತಿ ವಹಿಸುತ್ತಾರೆ.
ಪ್ರತಿದಿನ ಹೊಸ ಆಲೋಚನೆ, ಚಿಂತನೆಗಳಲ್ಲಿ ತೊಡಗುವುದಲ್ಲದೆ ತಮ್ಮ ಜೀವನದ ವಿಕಾಸದಲ್ಲಿ, ಅಂತರ್ಮುಖತೆ ಹಾಗೂ ಬಹಿರ್ಮುಖತೆಗಳೆರಡನ್ನು ಅಳವಡಿಸಿಕೊಂಡಿರುತ್ತಾರೆ. ಪ್ರತಿ ದಿನವೂ ಪ್ರಗತಿಯ ಬಗ್ಗೆಯೇ ಆಲೋಚಿಸುತ್ತಾರೆ.
ಇವರ ಮಾತು ನಡವಳಿಕೆ ಇತರರ ಮೇಲೆ ಪ್ರಭಾವವನ್ನು ಬೀರುವುದಲ್ಲದೆ, ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸಿ, ಪ್ರೊÃತ್ಸಾಹವನ್ನು ನೀಡುತ್ತಾರೆ. ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ವರ್ತಿಸುವುದಲ್ಲದೆ, ನೋವು ಉಂಟು ಮಾಡುವ ಮಾತುಗಳನ್ನು ಆಡುವುದಿಲ್ಲ.
‘ಅಭಿವೃದ್ಧಿಯೇ ಜೀವನ’ ಎಂದು ಭಾವಿಸಿರುವ ಇವರು, ಮೂಢನಂಬಿಕೆಗಳನ್ನು ನಿವಾರಿಸುವಲ್ಲಿ ಮುಕ್ತ ಪಾತ್ರ ವಹಿಸುತ್ತಾರೆ. ವೈಜ್ಞಾನಿಕ ಮನೋಭಾವನೆಯನ್ನು ತಾವು ಮೊದಲು ಅರ್ಥೈಸಿಕೊಂಡು, ಇತರರು ಅದನ್ನು ಪಾಲಿಸುವಂತೆ ಪ್ರಯತ್ನಿಸುತ್ತಾರೆ.
ಜ್ಞಾನ ವಿಜ್ಞಾನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಆಚರಿಸುತ್ತಾರೆ. ಒಟ್ಟಾರೆ, ಇವರ ವ್ಯಕ್ತಿತ್ವ ‘ಬಂಗಾರದ ವ್ಯಕ್ತಿತ್ವ’ವಾಗಿರುತ್ತದೆ.

Source – Sakhigeetha.com

LEAVE A REPLY

Please enter your comment!
Please enter your name here