* ಪ್ರಾಮಾಣಿಕ ಜೀವನಾನುಭವಗಳು * * ಡಾ||ದೊ.ರಂ.ಗೌಡ

0
864

ಕಾವ್ಯ ಕವಿಯ ಜೀವ ಧ್ವನಿ; ಮಾತು ಅವನ ನಾಲಗೆಯ ಖನಿ; ಗೀತೆ ಅವನ ಅಂತರಂಗದ ಭಾವ ವಾಹಿನಿ; ಅಭಿರುಚಿ ಅವನ ಸಂಸ್ಕಾರದ ಸರಿತೆ! ಓದು ಅವನ ಗ್ರಹಿಕೆ. ಬರಹ ಅವನ ಪ್ರತಿಭಾ ಶಿಖೆ.
ಈ ಹೊತ್ತು ಕವಿತೆ ಬರೆಯುವವರ ಸಂಖ್ಯೆ ಹೆಚ್ಚಿದೆ. ಮುದ್ರಣವಾಗುತ್ತಿರುವ ಕಾವ್ಯ ಸಂಕಲನಗಳ ಪ್ರಮಾಣವೂ ಅಸಂಖ್ಯೆ! ಗುಣ ಗ್ರಾಹಿಯಾಗಿ ಹೆಕ್ಕಿದಾಗ ಗಟ್ಟಿ ಕಡಿಮೆ, ಜೊಳ್ಳು ಅಗಣಿತ.
ಬಡೇನಹಳ್ಳಿ ಟಿ.ಗೋವಿಂದಯ್ಯ ಅವರು ವಿಶ್ರಾಂತ ಉಪನ್ಯಾಸಕರು. ಕ್ರಿಯಾಶೀಲರು; ಸಮಾಜಮುಖಿ ಕಾರ್ಯಗಳಲ್ಲಿ ಸಣ್ಣ ಪುಟ್ಟ÷ ಸೇವೆ ಮಾಡುವುದರಲ್ಲಿ ತಾವು ಧನ್ಯತೆಯನ್ನು ಕಂಡುಕೊಂಡವರು. ನಿವೃತ್ತರಿಗಾಗಿ ಸೂಕ್ತ ಭವನ ನಿರ್ಮಿಸಿದ ಪರೋಪಕಾರಿಗಳು.
ಸಂಘಟನೆಯಲ್ಲಿ ಪ್ರವೀಣರು! ಎಲ್ಲಕಿನ್ನ ಮಿಗಿಲಾಗಿ ಜನಾನುರಾಗಿಗಳು. ವೃದ್ಧರಿಗೆ ನೆಮ್ಮದಿ ಜೀವನ ನಡೆಸುವಲ್ಲಿ ನೆರವಾದವರು. ದೈವ ಭಕ್ತರು. ಶ್ರಿÃ ಸ್ವಾಮಿ ವಿವೇಕಾನಂದರ ಹೆಸರಲ್ಲಿ ಸಂಘ ಕಟ್ಟಿ ಗ್ರಾಮೀಣರ ಸರಳಾಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ನೈಜ ಶ್ರಮ ಜೀವಿಗಳು.
ತಾವು ಜೀವನದಲ್ಲಿ ಕಂಡುಂಡ ನೋವು ನಲಿವುಗಳನ್ನೆÃ ಅಭಿವ್ಯಕ್ತಿಸುತ್ತಾ ಕಾವ್ಯ ಮಾಲೆ ಕಟ್ಟುವಲ್ಲಿ ಆಸಕ್ತರು. ತಮ್ಮ ಸಹಜ ಅಂತರಾಳದ ಅನಿಸಿಕೆಗಳಿಗೆ ಪ್ರಾಮಾಣಿಕವಾಗಿ ರೂಪುಕೊಡುವಲ್ಲಿ ನಿರಂತರವಾಗಿ ಪ್ರಯತ್ನ ಪಡುತ್ತಿರುವ ಕಷ್ಟ ಜೀವಿಗಳು. ಪ್ರವಾಸ ಪ್ರಿಯರು. ತಾವು ಹೇಳಿದೆಲ್ಲಾ ಪಡೆದ ಅನುಭವಗಳನ್ನೆಲ್ಲಾ ಕವಿತೆ ಮಾಡುವ ಅಭೀಪ್ಸೆಯುಳ್ಳವರು, ಕನ್ಯಾಕುಮಾರಿಯನ್ನು ನೋಡಿ “ಕಡಲ ತಡಿಯಲ್ಲಿ” ಎಂಬ ಪದ್ಯ ಬರೆದಿದ್ದಾರೆ. ಕಲಾವಿದರ ಬಗೆಗೆ ಸದಾಭಿಪ್ರಾಯ ಹೊಂದಿದವರಾಗಿದ್ದಾರೆ. ಡಾ||ರಾಜ್ ಬಗ್ಗೆ, ಬಾಲಣ್ಣನ ಬಗೆ,್ಗ ನರಸಿಂಹರಾಜು ಬಗ್ಗೆ, ಮನ ತುಂಬಿ ಅಭಿವ್ಯಕ್ತಿಸಿದ್ದಾರೆ. ಒಳ್ಳೆಯ ಕಥನ ಕವನ ಬರೆದಿದ್ದಾರೆ. (ಅಳಿಲಿನ ಅಳಲು) ಗಿಡದ ಕುಡಿ ಚಿವುಟಿದಾಗ, ನಮ್ಮೂರ ರಸ್ತೆ – ಇವು ಪ್ರಾದೇಶಿಕ ವಿಷಯಗಳನ್ನು ಕುರಿತ ಕವಿತೆಗಳು.
ಪರಿಸರದ ಅವನತಿ, ಸ್ವಾತಂತ್ರö್ಯ ದಿನಾಚರಣೆ, ವೃದ್ಧಾಶ್ರಮಗಳು ಇವು ಸಾರ್ವಜನಿಕ ವಿಷಯಗಳು.
ಅಬ್ದುಲ್ ಕಲಾಂ, ಸಿದ್ಧಗಂಗಾಶ್ರಿÃ ಅವರುಗಳನ್ನು ಕುರಿತು ಗೌರವ ಸಮರ್ಪಣೆಯನ್ನು ಕವಿ ತಮ್ಮ ನುಡಿ ನಮನದಲ್ಲಿ ಸಲ್ಲಿಸಿರುವ ಹೃತ್ಪೂರ್ವಕ ಗೀತೆಗಳು
ಅನ್ಯಾಯದ ವಿರುದ್ಧ ಪ್ರತಿಭಟನೆಯ ರೀತಿ ಬರೆದ
“ರೈಟಿಗಾಗಿ ಹೋರಾಟ” ದ ಕವಿತೆ.
“ಸೂರ್ಯನೆದುರಲಿ” ಮಿನುಗುತಿಹ
ಒಂದು ಚಿಕ್ಕ ಹಣತೆ ನಾನು-
ಕಾಯಕವೇ ಕೈಲಾಸವೆಂದು ನಂಬಿ
ಕೈಲಾದ ಸೇವೆ ಮಾಡುತ್ತಾ ಬದುಕಿಹನು.
* * *
ಶಿಕ್ಷಣವು ಆಗಿಹುದು ವ್ಯಾಪಾರೀಕರಣ
ಹಣಗಳಿಸುವ ಖದೀಮರಿಗೆ ಬೇಕು
ಇಂತಹ ವಾತಾವರಣ
* * *
ಕಡಿದೂ ಕಡಿದೂ ಕಾಡು
ಹಾಳಾಯಿತು ನೋಡು-
ಪ್ರಕೃತಿಯಬೀಡು!
ಇಂಥ ಪ್ರತಿಕ್ರಿಯೆಗಳು ಈ ಕೃತಿಯಲ್ಲಿ ಹಲವಾರಿವೆ. ಅಲ್ಲೆಲ್ಲಾ ಕವಿ ಗೋವಿಂದಯ್ಯನವರ ಆರೋಗ್ಯಕರ ಮನಸ್ಸಿದೆ!
ನಿವೃತ್ತ ಜೀವನ ನಡೆಸುತ್ತಿರುವ ಕವಿ ಶ್ರಿÃ ಗೋವಿಂದಯ್ಯನವರು ವೃಥಾ ಕಾಲ ಕಳೆಯದೆ ಕಾವ್ಯದ ಕಡೆ ಅಭಿಮುಖವಾಗಿರುವುದು ಸಂತೋಷದ ವಿಷಯ,
ಒಳ್ಳೆಯ ಮನಸ್ಸಿನ, ಒಳ್ಳೆಯ ಪ್ರತಿ ಸ್ಪಂದನಗಳ ನೀಡುವ ಕವಿ ಗೋವಿಂದಯ್ಯ ಅವರು ಇನ್ನೂ ಮಹತ್ತಿನದನ್ನು ಕನ್ನಡಕ್ಕೆ ಕೊಡಬೇಕು. ಅವರ ಭಾವನೆಗಳು ನಮ್ಮ ನಾಡಿನಲ್ಲಿ ಬೆಳಕಾಗಬೇಕು.
ಕವಿ ಎಂದರೆ – ಸಮಾಜದ ಸಾಂಸ್ಕçೃತಿಕ ರೂವಾರಿ ಎಂದು ಸಾರಿ ಹೇಳಲು ನಮ್ಮ ನಲ್ಮೆಯ ಕವಿ ಗೋವಿಂದಯ್ಯನವರ ಜೀವನಾನುಗಳು ಮಾದರಿಯಾಗಿದೆ.

* ಡಾ||ದೊ.ರಂ.ಗೌಡ.

Source – Sakhigeetha.com

LEAVE A REPLY

Please enter your comment!
Please enter your name here