ನಮಗೆ ಒಂದು ಭವ್ಯ ಪರಂಪರೆ ಇದೆ! ನಾವು ಮುಂದೆ ಮುಂದೆ ಹೋಗುವ ಭರದಲ್ಲಿ ಬೆನ್ನ ಹಿಂದಿನ ಬೆಳಕಿನತ್ತ ಗಮನ ನೀಡುತ್ತಿಲ್ಲ. ಒಂದು ಪಕ್ಷ ಹಿಂತಿರುಗಿ ನೋಡಿದ್ದೆÃ ಆದರೆ – ಆ ಅಭಿಜಾತ ಕಾವ್ಯಗಳ ಸಾರ… ಯಾಂತ್ರಿಕ ಜೀವನಕ್ಕೆ ಅಮೃತಬಿಂದುಗಳಾಗಿ ಹೊಸ ಹೊಸ ಚೈತನ್ಯ ನೀಡಬಲ್ಲವು.
ಈ ವೃತ್ತವು ಪಂಪನು ಬರೆದಿರುವ ‘ವಿಕ್ರಮಾರ್ಜುನ ವಿಜಯಂ’ ಎನ್ನುವ ಕಾವ್ಯದಲ್ಲಿ ಬರುತ್ತದೆ. ಆ ವೃತ್ತವು ಹೀಗಿದೆ : (ಅರ್ಥಗ್ರಹಿಕೆಯ ದೃಷ್ಟಿಯಿಂದ ಇಲ್ಲಿ ವೃತ್ತವನ್ನು ಬಿಡಿಸಿ ನೀಡಿ ವಿವರಣ ಚಿಹ್ನಗಳನ್ನು ಬಳಸಲಾಗಿದೆ.)
ಚಲದೊಳ್ ದುರ್ಯೋಧನಂ, ನನ್ನಿಯೊಳ್ ಇನತನಯಂ, ಗಂಡಿನೊಳ್ ಭೀಮಸೇನಂ, ಬಲದೊಳ್ ಮದ್ರೆÃಶನ್, ಅತ್ಯುನ್ನತಿಯೊಳ್ ಅಮರ ಸಿಂಧೂದ್ಭವಂ, ಚಾಪವಿದ್ಯಾ ಬಲದೊಳ್ ಕುಂಭೋದ್ಭವಂ, ಸಾಹಸದ ಮಹಿಮೆಯೊಳ್ ಫಲ್ಗುಣಂ, ಧರ್ಮದೊಳ್ ನಿ ರ್ಮಲಚಿತ್ತಂ ಧರ್ಮಪುತ್ರಂ, ಮಿಗಿಲ್ ಇವರ್ಗಳಿನ್, ಭಾರತಂ ಲೋಕಪೂಜ್ಯಂ. (ವಿಕ್ರಮಾರ್ಜುನ ವಿಜಯಂ ಆಶ್ವಾಸ ೧, ಪದ್ಯ ೬೪)
ಪಂಪನು ಮಹಾಭಾರತವು ಏಕೆ ಲೋಕಪೂಜ್ಯ ಗ್ರಂಥವಾಗಿದೆ ಎನ್ನುವುದನ್ನು ಈ ಪದ್ಯದಲ್ಲಿ ಹೇಳುತ್ತಿದ್ದಾನೆ. ಇಲ್ಲಿ ಕೆಲವು ಸೂಕ್ಷö್ಮಗಳಿವೆ. ಅದನ್ನು ಗಮನಿಸುವುದಕ್ಕೆ ಮೊದಲು ಈ ಪದ್ಯದ ಅರ್ಥಗ್ರಹಿಕೆಯನ್ನು ಗಮನಿಸೋಣ.
ಛಲದಲ್ಲಿ-ಅಭಿಮಾನದಲ್ಲಿ ದುರ್ಯೋಧನ, ಸತ್ಯವಂತಿಕೆ-ಸತ್ಯಸಂಧತೆಯಲ್ಲಿ ಸೂರ್ಯಪುತ್ರನಾದ ಕರ್ಣ, ಗಂಡಸುತನದಲ್ಲಿ ಭೀಮಸೇನ, ಬಲದಲ್ಲಿ ಮದ್ರೆÃಶನಾದ ಶಲ್ಯ, ಅತ್ಯಂತ ಉನ್ನತವಾದ ಸಮಗ್ರ ವ್ಯಕ್ತಿತ್ವದಲ್ಲಿ ಅಮರಗಂಗಾನದಿಯ ಪುತ್ರನಾದ ಭೀಷ್ಮ, ಬಿಲ್ವಿದ್ಯಾಬಲದಲ್ಲಿ ಕುಂಭದಲ್ಲಿ ಜನಿಸಿದ ದ್ರೊÃಣ, ಸಾಹಸದ ಮಹಿಮೆಯಲ್ಲಿ ಫಲ್ಗುಣನಾದ ಅರ್ಜುನ, ಧರ್ಮದ ವಿಚಾರದಲ್ಲಿ ನಿರ್ಮಲಿನ ಮನಸ್ಕನಾದ ಧರ್ಮಪುತ್ರ – ಇವರುಗಳು ಅಧಿಕರು, ಇವರುಗಳಿಂದ ಭಾರತವು ಲೋಕಪೂಜ್ಯವಾಗಿದೆ.
ಈ ಪದ್ಯದಲ್ಲಿ ಜೈನಕವಿಯಾದ ಪಂಪನು ಜೈನೇತರ, ವೈದಿಕ ಕೃತಿಯಾದ ಮಹಾಭಾರತ ಎನ್ನುವ ಮಹಾಕಾವ್ಯವು ಏಕೆ ಲೋಕಪೂಜ್ಯವಾಗಿದೆ ಎನ್ನುವುದಕ್ಕೆ ಕಾರಣಗಳನ್ನು ನೀಡುತ್ತಿದ್ದಾನೆ. ಅವನು ನೀಡಿರುವ ಎಂಟು ಪಾತ್ರಗಳೂ ಒಂದೊಂದು ಮೌಲ್ಯಗಳ ಗಣಿಯಾಗಿವೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಇಲ್ಲಿ ಕೌರವರ ಕಡೆ – ದರ್ಯೋಧನ, ಕರ್ಣ, ಭೀಷ್ಮ, ಶಲ್ಯ, ದ್ರೊÃಣ – ಈ ಐದು ಪಾತ್ರಗಳನ್ನೂ, ಪಾಂಡವರ ಕಡೆ – ಭೀಮಸೇನ, ಅರ್ಜುನ, ಧರ್ಮಪುತ್ರ – ಈ ಮೂರು ಪಾತ್ರಗಳನ್ನೂ ಹೆಸರಿಸುತ್ತಾನೆ.
ಕೃಷ್ಣ ಮತ್ತು ದ್ರೌಪದಿಯ ಪಾತ್ರಗಳ ಹೆಸರಿನ ಉಸಾಬರಿಗೂ ಹೋಗುವುದಿಲ್ಲ. ಕೃಷ್ಣನು ವೈದಿಕ ದೈವವೆಂದೂ, ಇಲ್ಲಿನ ಎಲ್ಲವೂ ಪುರುಷಪಾತ್ರಗಳಾದದ್ದರಿಂದ ದ್ರೌಪದಿ ಸ್ತಿçÃಪಾತ್ರ ಎನ್ನುವ ಕಾರಣಕ್ಕೆ ಜೈನನಾದ ಪಂಪ ಅವರನ್ನು ಸೂಚಿಸಿಲ್ಲ ಎಂದೂ ವಿಮರ್ಶಕರ ಅಭಿಪ್ರಾಯ. ಇದನ್ನÄ ಕುರಿತ ಚರ್ಚೆಗಳು ಇನ್ನೂ ನಿಂತಿಲ್ಲ. ಇಲ್ಲಿ ಭೀಮಸೇನ, ಶಲ್ಯ, ದ್ರೊÃಣ ಹಾಗೂ ಅರ್ಜುನ ಈ ನಾಲ್ಕು ಪಾತ್ರಗಳ ಮೌಲ್ಯ ಪರಾಕ್ರಮವೇ ಆಗಿದೆ. ಪರಾಕ್ರಮ ದೇಹಬಲ ಹಾಗೂ ಬಾಹುಬಲಗಳಿಂದ ಉಂಟಾಗತಕ್ಕದ್ದು. ಬಹುಶಃ ಇದಕ್ಕೆ ಪರಾಕ್ರಮವೇ ಮೌಲ್ಯವಾಗಿದ್ದ ವೀರಯುಗದ ಕಾಲಘಟ್ಟದಲ್ಲಿ ಪಂಪ ಇದ್ದದ್ದೆà ಕಾರಣ. ಆದರೆ ಅವನು ಹೇಳುವ ಉಳಿದ ಪಾತ್ರಗಳ ಮೌಲ್ಯಗಳಾದ ಅಭಿಮಾನ, ಸತ್ಯಸಂಧತೆ, ಉನ್ನತ ವ್ಯಕ್ತಿತ್ವ ಹಾಗೂ ಧಾರ್ಮಿಕತೆ ಎನ್ನುವ ಮೌಲ್ಯಗಳು ಹೃದಯವಂತಿಕೆ, ನಡೆವಳಿಕೆಗಳ ಮೂಲಕ ಪಡೆದುಕೊಳ್ಳುವ ಮೌಲ್ಯಗಳಾಗಿವೆ. ಬಹುಶಃ ಪಂಪನನ್ನು ಹೃದಯವಂತಿಕೆಯ ಪಾತ್ರಗಳು ಕಲಕಿದಂತೆ ಪರಾಕ್ರಮದ ಪಾತ್ರಗಳು ಕಲಕಿಲ್ಲ.
ಮುಂದಿನ ಪ್ರಶ್ನೆ ಭಾರತಂ ಲೋಕಪೂಜ್ಯಂ ಎನ್ನುವ ಪದಪುಂಜಕ್ಕೆ ಸಂಬಂಧಿಸಿದುದು. ಒಟ್ಟಾರೆ ಇಲ್ಲಿ ಎರಡು ರೀತಿಯ ಅರ್ಥಗ್ರಹಿಕೆಗಳ ಸಾಧ್ಯತೆಯಿದೆ. ಆಯಾ ಮೌಲ್ಯಗಳಿಗೆ ಸಂಕೇತಗಳಾದ ಆ ಎಂಟು ಪಾತ್ರಗಳಿಂದ ಮಹಾಭಾರತ ಎನ್ನುವ ಹೆಸರಿನ ಮಹಾಕಾವ್ಯವು ಜಗದ್ವಂದ್ಯವಾಗಿದೆ ಎನ್ನುವುದು ಒಂದು ಅರ್ಥ. ಅಭಿಮಾನ, ಸತ್ಯಸಂಧತೆ, ಉನ್ನತ ವ್ಯಕ್ತಿತ್ವ, ಧಾರ್ಮಿಕತೆ ಹಾಗೂ ಪರಾಕ್ರಮ ಮುಂತಾದ ಮೌಲ್ಯಗಳನ್ನು ಮೈಗೂಡಿಸಿಕೊಂಡು ಜೀವಿಸುತ್ತಿರುವ ಅಂತಹ ವ್ಯಕ್ತಿಗಳಿಂದ ಭಾರತ ದೇಶವು ಲೋಕಪೂಜ್ಯವಾಗಿದೆ ಎನ್ನುವುದು ಇನ್ನೊಂದು ಅರ್ಥಸಾಧ್ಯತೆ.
ಇಲ್ಲಿ ಭಾರತ ಎಂದರೆ ‘ಜಯ’ ಎನ್ನುವ ಹೆಸರಿನ ಮಹಾಭಾರತ ಎನ್ನುವ ಮಹಾಕಾವ್ಯ ಮತ್ತು ಭೌಗೋಳಿಕ ವಿಸ್ತಾರ ಪ್ರದೇಶದ ದೇಶವಾದ ಭಾರತ ಎನ್ನುವ ರಾಷ್ಟç ಎಂಬ ಪರಿಕಲ್ಪನೆ ಕವಿ ಪಂಪನಿಗಿದ್ದಂತಿದೆ. ನಮ್ಮ ದೇಶಕ್ಕೆ ಭಾರತ ಎನ್ನುವ ಹೆಸರು ಬರುವುದಕ್ಕೆ ಕಾರಣ ಇದೇ ಮಹಾಭಾರತ ಕೃತಿಯ ಶಕುಂತಲೋಪಾಖ್ಯಾನದಲ್ಲಿ ಬರುವ ದುಷ್ಯಂತ ಶಕುಂತಲೆಯ ಪುತ್ರನಾದ ಭರತನ ಪಾತ್ರ. ಈ ಅಂಶವು ಭಾರತ ದೇಶ ಎನ್ನುವ ಅರ್ಥಗ್ರಹಿಕೆಗೆ ಪುಷ್ಠಿಯನ್ನು ನೀಡುತ್ತದೆ. ದುಷ್ಯಂತ ಶಕುಂತಲೆಯ ಪುತ್ರ ಭರತನ ಹೆಸರು ಈ ದೇಶಕ್ಕಿದೆ ಎನ್ನುವ ಅಂಶದ ಹಿನ್ನೆಲೆಯಲ್ಲಿ ಈ ಪದ್ಯದಲ್ಲಿ ಕವಿ ಬಳಸಿರುವ – ಇನತನಯ, ಸಿಂಧೂದ್ಭವ, ಕುಂಭೋದ್ಭವ, ಧರ್ಮಪುತ್ರ – ಈ ಪ್ರಯೋಗಗಳನ್ನು ಗಮನಿಸಿ. ಜೈನಕವಿಯಾದ ಅವನು ಭಾರತ ದೇಶದ ಬಗ್ಗೆ ತನ್ನ ಸಮಗ್ರ ನಿಷ್ಠೆಯನ್ನು ಇಲ್ಲಿ ವ್ಯಕ್ತಪಡಿಸಿದ್ದಾನೆ. ಇದು ಭಾರತ ಬಹುಸಂಸ್ಕೃತಿಗಳುಳ್ಳ ಬಹುತ್ವದ ರಾಷ್ಟç ಎನ್ನುವುದಕ್ಕೆ ನಿದರ್ಶನವಾಗಿದೆ.
ಈ ಸಂದರ್ಭದಲ್ಲಿ ಕನ್ನಡದ ಇನ್ನೊಬ್ಬ ಶ್ರೆÃಷ್ಠ ಕವಿ ಕುಮಾರವ್ಯಾಸನು ತನ್ನ ಕೃತಿಗೆ ನೀಡಿರುವ ಹೆಸರನ್ನು ಗಮನಿಸೋಣ – ಕರ್ಣಾಟ ಭಾರತ ಕಥಾಮಂಜರೀ. ಇಲ್ಲಿ “ಕರ್ಣಾಟ” ಎಂದರೆ “ಕರ್ನಾಟಕ”À ಎನ್ನುವ ಭೌಗೋಳಿಕ ಪ್ರದೇಶ, ಕನ್ನಡ ಭಾಷೆ. ಹಾಗೆಯೇ ಭಾರತ ಎಂದರೆ ಭಾರತ ದೇಶ, ವ್ಯಾಸರ ಮಹಾಭಾರತ ಮತ್ತು ಸಂಸ್ಕೃತ. ಹೀಗಾಗಿ “ಕರ್ಣಾಟ ಭಾರತ ಕಥಾಮಂಜರಿ” ಎಂದರೆ ಕನ್ನಡ ಸಂಸ್ಕೃತಗಳ ಮುಖಾಮುಖಿ, ಕರ್ನಾಟಕ ಹಾಗೂ ಭಾರತಗಳ ಮುಖಾಮುಖಿ, ಕುಮಾರವ್ಯಾಸ ಹಾಗೂ ವೇದವ್ಯಾಸರ ಮುಖಾಮುಖಿ. ಈ ಅಂಶವು ಪಂಪನ ವಿಶಿಷ್ಟ ಪ್ರಯೋಗವಾದ ‘ಭಾರತಂ ಲೋಕಪೂಜ್ಯಂ’ ಎನ್ನುವುದರ ಅರ್ಥಗ್ರಹಿಕೆಗಳ ಸಾಧ್ಯತೆಗಳಿಗೆ ಪೋಷಕವಾಗಿ ಬಂದಿದೆ ಎನ್ನುವುದನ್ನು ಗಮನಿಸಬಹುದು.
ಇನ್ನು ಕೆಲವು ತಾಂತ್ರಿಕ ವಿಚಾರಗಳ ಸೂಕ್ಷö್ಮಗಳನ್ನು ಗಮನಿಸಿ: ೧. ಇಲ್ಲಿ ಮೊದಲು ದುರ್ಯೋಧನನ ಪಾತ್ರದ ಪ್ರಸ್ತಾಪ ಹಾಗೂ ಕೊನೆಯಲ್ಲಿ ಧರ್ಮಪುತ್ರನ ಪಾತ್ರದ ಪ್ರಸ್ತಾಪ ಬಂದಿದೆ. ೨. ಆರು ಪಾತ್ರಗಳು ಕ್ಷತ್ರಿಯರು, ಒಂದು ಬ್ರಾಹ್ಮಣ ಪಾತ್ರ ಹಾಗು ಒಂದು ಸೂತನೆಂಬ ಭ್ರಮೆಯ ಕ್ಷತ್ರಿಯ ಪಾತ್ರ. ೩. ನನ್ನಿ ಎಂದರೆ ಸತ್ಯ ಎಂಬ ಮೌಲ್ಯ. ಸತ್ಯ ಜೈನಧರ್ಮದ ಪಂಚಾಣುವ್ರತಗಳಲ್ಲಿ ಒಂದು.
ಈ ಪದ್ಯವು “ವಿಕ್ರಮಾರ್ಜುನ ವಿಜಯಂ” ಕಾವ್ಯದ ಕೊನೆಯಲ್ಲಿ ಬರುತ್ತದೆ. ಇಡೀ ಸಮಸ್ತಭಾರತವನ್ನು ಓದಿದ ನಂತರ ಪಂಪ ಓದುಗರಿಗೆ ಈ ಪದ್ಯವನ್ನು ಕುರಿತ ತನ್ನ ಅಭಿಪ್ರಾಯವನ್ನು ಕೂಲಂಕóಷವಾಗಿ ಚಿಂತನ-ಮಂಥನ ಮಾಡಲು ಅವಕಾಶ ನೀಡಿದ್ದಾನೆ.
# ಕೆ. ಎಸ್. ಮಧುಸೂದನ
***
Source – Sakhigeetha.com