ನಮ್ಮ ಸಂಸ್ಕೃತಿಯ ಮೂಲಧಾತು ಜಾನಪದವೇನು? – ದೊ.ರಂ.ಗೌಡ

0
852

ಹಳ್ಳಿಗರ ಬದುಕಿನಲ್ಲಿ ಸಮೃದ್ಧವಾದ ಜೀವನ ಮೌಲ್ಯಗಳಿವೆ; ಅವುಗಳನ್ನು ನಾವು ಯಾವತ್ತೂ ಪಾಲಿಸಬಹುದು.
ಹಿರೀಕರ ಮರೀಬ್ಯಾಡ|
ಸರೀಕರ ತೊರೀಬ್ಯಾಡ||
ನೆರೆದೋರ ಮುಂದೆ ಮರೀಬ್ಯಾಡ ಪುಟ್ಟ ತಿಮ್ಮಾ…||
ದೊರೆ ತನಕ ದೂರ ಹೊಯ್ಯಬ್ಯಾಡ|

 

ಊರ ಹಿರಿಯರಿಗೆ ತಲೆ ಬಾಗು; ಸಮಾಜದಲ್ಲಿನ ವಯೋವೃದ್ಧರಿಗೆ, ಜ್ಞಾನ ವೃದ್ಧರಿಗೆ-ಗೌರವ; ಕೊಡುವರಿಗೆ ಸ್ನೆÃಹಿತರ ಯಾವತ್ತೂ ಕೈ ಬಿಡಬೇಡ. ನಿನ್ನ ಕಷ್ಟ ಸುಖಗಳಿಗೆ ಆಗುವವರು ಎಂದೆಂದೂ ಅವರೇನೆ|
ಹೆತ್ತೊರ‍್ನ ಜರಿಯೋದುಂಟೇ||
ಹೊತ್ತೊರ‍್ನ ಮರೆಯೋದುಂಟೇ||
ಸಾಕಿ ಸಲಹದರ‍್ನ ತೊರೆಯೋದುಂಟೇ||
-||ಎಲೋ ಗೆಣೆಯಾ||
ಕಳ್ಳು ಬಳ್ಳಿ ಸಂಬಂಧ ಕಳಚೋದುಂಟೇ?
ತಾಯಿಯನ್ನು, ತಂದೆಯನ್ನು, ಬಂಧುವನ್ನು, ಬಳಗವನ್ನು, ನಾವು ಎಂತಾದರೂ ಸಂಪೂರ್ಣ ಮರೆಯಬಹುದೇನು? ಆ ಅಕ್ಕರೆಯ ಅನುಬಂಧಗಳು ಅಪೂರ್ವವಾದವು; ಅನನ್ಯವಾದವು. ಆ ಎಲ್ಲ ವಾತ್ಸಲ್ಯದ ಸಂಬಂಧಗಳಿಗೆ ಬೆಲೆ ಕಟ್ಟಲಾಗದು. ಅವು ಸಾರ್ವಕಾಲಿಕ; ಮೌಲಿಕ. ಅವು ಗುಣಾತ್ಮಕವೂ ಹೌದು; ಧನಾತ್ಮಕ ಹೌದು.

ಬಾಲ್ಯದಲ್ಲಿ ನಮ್ಮೆಲ್ಲರ ಬದುಕನ್ನೂ ರೂಪಿಸುವ ಮಹಾನುಭಾವರು-ನಲ್ಮೆಯ ಗುರುಗಳು; ಊರ ಹಿರೀಕರು ಅವರನ್ನು “ಓಚಯ್ಯಗಳು” ಅನ್ನುತ್ತಿದ್ದರು. ಓಚರು ಎಂದರೆ ವಿದ್ಯೆಯನ್ನು ನೀಡುವ ಗುರುಗಳು. ಎಳೆಯರ ಪಾಲಿಗೆ ಆದರ್ಶ ಪುರುಷರು. ಸ್ವಾತಂತ್ರಾö್ಯನಂತರದಲ್ಲಿ… ಅವರನ್ನು ನಾವು “ಮೇಷ್ಟುç” ಎಂದು ಕರೆಯವುದೂ ವಾಡಿಕೆ. ಇಂಗ್ಲಿÃಷಿನ ಒಚಿsಣeಡಿ(ಮಾಸ್ಟರ್) ಹೋಗಿ “ಮಾಸ್ತರ” ಆಗಿ “ಮೇಷ್ಟುç” ಪದ ಬಳಕೆಗೆ ಬಂದಿದೆ. ಅಂಥ ಹಿರಿಯ ಜೀವಗಳನ್ನು ಕುರಿತ ಜಾನಪದಗೀತೆ ಹೀಗಿದೆÉ
ಗುರುವೆಂಬ ಪದ ಕೇಳೋ|
ಅರಿವಿನ ಮುದ ತಾಳೋ||
ತೆರೆದು ಕೊಟ್ಟಾರೋ ಬುದ್ಧಿÃಯ ಕಣ್ಮುಂದೆ ||ಎಲೆಹೈದ||
ಗುರುಪಾದಕೆ ನೀನು ಅಡ್ಡಬೀಳೋ||
* * *

ಅಂದೇ ದಾಸರು ತಮ್ಮ ಕೀರ್ತನೆಗಳಲ್ಲಿ ಮನೋಜ್ಞವಾಗಿ ಹೇಳಿದ್ದಾರೆ-
ಗುರುವಿನ ಗುಲಾಮನಾಗುವತನಕ
ದೊರೆಯದಣ್ಣಾ ಮುಕುತಿ! ಅಂತ- ಮೃಗವಾದ ಮನುಷ್ಯನನ್ನು ಪಳಗಿಸಿ ತಿದ್ದಿ-ತೀಡಿ ಹದಮಾಡುವವರೇ ಗುರುಗಳು!!
ಜಾನಪದೀಯರು ನಿರಕ್ಷರಕುಕ್ಷಿಗಳಾಗಿರಬಹುದು! ಆದರೆ ಕವಿರಾಜ ಮಾರ್ಗಕಾರನ ಪ್ರಕಾರ…. “ಕುರಿತೋದದೆಯುಂ- ಕಾವ್ಯ ಪ್ರಯೋಗ ಪರಿಣತ ಮತಿಗಳ್” ಅಂದರೆ ಯಾವುದೇ ಶಾಲಾ ಕಾಲೇಜುಗಳಲ್ಲಿ ಓದಿ- ಪದವಿಗಳ ಪಡೆಯದೇ ಹೋದರೂ…. ಹಳ್ಳಿಗರು… ಅನುಭಸ್ಥರು. ತಿಳಿವಳಿಕೆ ಪಡೆದವರು; ನೋವು-ನಲಿವುಂಡವರು, ಏಳು ಬೀಳು ಕಂಡವರು, ಒಟ್ಟಾರೆ ಬವಣೆ ಬದುಕನ್ನು ಅನುಭವಿಸಿದವರು.. ಅವರು.. ಸಾಕಷ್ಟು ಸಂಕ್ರಾಂತಿಗಳ ನೋಡಿದರು ಅವರು. ಅವರ ಮಾತೆಲ್ಲಾ ಅನುಭವದ ಅಮೃತದಂಥಾ ನುಡಿ!

ಬಾಳೆಯ ಬಗೆದು ಹಾಕು|
ತೆಂಗನ್ನು ತೇಲಿಸಿ ಹಾಕು||
ಹುಳುಕ ಕಾಳುಗಳ ದೂರ ಬಿಸಾಕೋ-ತಮ್ಮಾ||
ಜಳ್ಳು ತೂರಿ, ಗಟ್ಟಿ ಕಾಳು-ನಾಟಿ ಹಾಕೋ!
* * *
ಇಂಥವು ಅವೆಷ್ಟೊÃ ಇವೆ. ಅವೆಲ್ಲವೂ ಸಾವಿರದ ಜಾನಪದ ಗೀತೆಗಳು. ಸತ್ತಂಥ ಇಂದಿನ ಆಧುನಿಕ ಬದುಕಿಗೆ ಪ್ರಾಣ ಕೊಡುವ ಕಾಯಕಲ್ಪಮಾಡುವ ಮರುಜೇವಣಿಗೆಗಳು. ಗ್ರಾಮೀಣ ಬದುಕಿನಲ್ಲಿ ಲೋಕಾನುಭವದ ತವನಿಧಿಯೇ ಇದೆ. ಅದೇಂದ ಕಾವ್ಯ ಕಣಜ!!

ನಮಗಿಂಥ ಬದುಕು ದೊಡ್ಡದು. ಆದ್ದರಿಂದಲೇ ಹಿಂದಿನವರು ಬಹುತೇಕ “ಅವಿಭಕ್ತ ಕುಟುಂಬ”ಗಳಲ್ಲಿಯೇ ವಾಸಿಸುತ್ತಿದ್ದರು. ಅದಕ್ಕೆ ಅವರು ಸಾಮರ್ಥ್ಯದಲ್ಲಿ ಬಲಿಷ್ಟ-ಈಗ ಎಲ್ಲೆಲ್ಲೂ “ವಿಭಕ್ತ” ಕುಟುಂಬಗಳೇ ಹೆಚ್ಚು. ಅದಕ್ಕೆ ನಾವು ಈ ಹೊತ್ತು ಕನಿಷ್ಟ..! ಹಾಗಾಗಬಾರದು…
ಹನಿ ಹನಿಗೂಡಿದರೆ ಹಳ್ಳ
ತೆನೆ ತೆನೆಗೂಡಿದರೆ ಭತ್ತ
ಅಂಥ ಮುತ್ತಿನಂಥ ಮಾತುಗಳನ್ನು ನಾವೀಗ ಬದುಕಿಗೆ ಅಳವಡಿಸಿಕೊಳ್ಳಬೇಕಾದ್ದು ಅಗತ್ಯವಾಗಿದೆ.
ಈ ಎಲ್ಲ ಅಂಶಗಳನ್ನೂ ಸರಿಯಾಗಿ ಅವಲೋಕಿಸಿದರೆ… ನಮ್ಮ ಸಂಸ್ಕೃತಿಯ ಮೂಲ ಬೇರುಗಳೇ “ಜಾನಪದ”ದಲ್ಲಿ ಇವೆ. ಅನ್ನಿಸುತ್ತದೆ. ಜಾನಪದ ಪ್ರಾಚೀನ! ಜಾನಪದ ಚಿರಂತನ! ಅಂಥ ಜಾನಪದವನ್ನು ನಾವು ಕಡೆಗಣಿಸದೆ ಬದುಕಿಗೆ ಅಳವಡಿಸಿಕೊಳ್ಳಬೇಕು

Source – Sakhigeetha.com

LEAVE A REPLY

Please enter your comment!
Please enter your name here