ಚುನಾವಣೆ ಬಂದಾಗ, ಅಭ್ಯರ್ಥಿಯಾಗಿ ಈ ರಾಜಕಾರಣಿಗಳು ಕಣಕ್ಕೆ ಇಳಿವಾಗ, ಅರ್ಜಿಯನ್ನು ಭರ್ತಿ ಮಾಡುವಾಗ ಇವರುಗಳು ಘೋಷಿಸಿಕೊಂಡ ಆಸ್ತಿ ಇವರ ಹಣ, ಕೂಡಿಟ್ಟ ನಿಧಿ, ಠೇವಣಿಗಳು, ಸಂಚಯಿಸಿದ ಬೆಳ್ಳಿ-ಬಂಗಾರ, ವಜ್ರದೊಡವೆಗಳು-ಇವುಗಳೆನ್ನಲ್ಲಾ (ಇಷ್ಟು ದೊಡ್ಡ ಮೊತ್ತ!!) ಹೇಗೆ ನಾಚಿಕೆಯಿಲ್ಲದೆ ಘೋಷಿಸಿಕೊಳ್ಳುತ್ತಿದ್ದಾರೆಂದರೆ-ಅದೆಲ್ಲವೂ ಅವರ ಸ್ವಂತ ದುಡಿಮೆಗಳೇನಲ್ಲ! ಐದು ವರ್ಷದಲ್ಲಿ, ಅವರುಗಳು ಲಂಚ ರುಷುವತ್ತುಗಳಿಂದ ಅಕ್ರಮವಾಗಿ ಗಳಿಸಿದ ಹಣ ಸರಿಯಾಗಿ ಹೇಳಬೇಕಾದರೆ ಲೂಟಿ ಹೊಡೆದ ಹಣ; ಸಾರ್ವಜನಿಕ ಧನ! ಹೇಗೆ ಅಂಥಾದ್ದನ್ನು ಸ್ವಲ್ಪವೂ ನಾಚಿಕೆ ಇಲ್ಲದೆ ಘೋಷಿಸಿಕೊಳ್ಳುತ್ತಾರೆ? ಇಂಥ ಲಜ್ಜಾಹೀನ ಅಗುಣವಂತ ಹಣವಂತ ಮಂದಿಯನ್ನು ಶ್ರಿÃ ಸಾಮಾನ್ಯರು ಮತ್ತೆ ಏಕೆ ಆರಿಸುತ್ತಾರೇ ಆ ದೇವರೇ ಬಲ್ಲ! ಹಣವೇ ನಿನ್ನ ಗುಣದ ಏನೆಂದು ಹೇಳಬೇಕಯ್ಯಾ?
ಎಂಥದ್ದೆÃ ಉದ್ದಿಮೆದಾರನಾದರೂ, ಎಷ್ಟೆÃ ಸಮರ್ಥ ವ್ಯಾಪಾರದಾರನಾದರೂ, ಏನೆಲ್ಲ ರೀತಿಯ ಚಾಣಕ್ಯ ತಂತ್ರಗಳನ್ನು ಮಾಡಿದರು ಹೀಗೆ ನೂರ್ಪಟ್ಟು ಸಾವಿರ ಪಟ್ಟು ಹಣ ಮಾಡುವುದರಲ್ಲಿದೆ ರಾಷ್ಟçದ್ರೊÃಹ. ಇಂಥಾ ಅಪರಾಧ ಖಂಡನೀಯ!
ನಮ್ಮದಲ್ಲದ ವಸ್ತುವನ್ನು ನಾವು ಮುಟ್ಟಬಾರದು. ಸಂಗ್ರಹಿಸಬಾರದು; ಅಂಥ ಸಂಚಯ ನಿಜಕ್ಕೂ ಅನ್ಯಾಯ.
ಕಳಬೇಡ, ಕೊಲಬೇಡ,
ಹುಸಿಯ ನುಡಿಯಲುಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರು ಹಳಿಯಲುಬೇಡ
ಎಂದೆಲ್ಲಾ “ಕೂಡಲ ಸಂಗಮದೇವ”ನ
ಅಂಕಿತದಲ್ಲಿ ಅಂದೇ ಬಸವಣ್ಣನವರು(೮೦೦ ವರ್ಷಗಳ ಹಿಂದೆ) ಹೇಳಿದ್ದುದನ್ನು ನಾವು ಇಂದಿನವರು ಮರೆತಿದ್ದೆÃವೆ. ಆ ಮಾತುಗಳನ್ನು ನಾವು ಹೂತು ಹಾಕಿದ್ದೆÃವೆ.
ಇಂದಿನ ರಾಜಕಾರಣಿಗಳು ಒಬ್ಬರಿಗಿಂತ ಒಬ್ಬರು ಆಸ್ತಿ ಮಾಡುವುದರಲ್ಲಿ ಪೈಪೋಟಿಗೆ ಇಳಿದಿರುವುದು ದುರಂತ.
ನನ್ನ ಬಳಿ ಇಂಥಿಂಥ ಆಸ್ತಿ ಒಡವೆ ವಸ್ತು ಧನ ಕನಕ ಕಾರು ಬಂಗಲೆ ಇದೆಯೆಂದು ಮರ್ಯಾದೆ ಬಿಟ್ಟು ಹೇಳಿಕೊಳ್ಳುವುದು ಇಂದಿನ ಸಮಾಜದಲ್ಲಿ ದೊಡ್ಡಸ್ತಿಕೆ ಆಗಿದೆ. “ದುಡ್ಡಿದ್ದವನೇ ದೊಡ್ಡಪ್ಪ” ಎಂಬ ಗಾದೆ ಇಂಥವರಿಗೆ ಅನ್ವಯ ಆಗುತ್ತಿದೆ.
ಸಾರ್ವಜನಿಕ ಆಸ್ತಿ ಲೂಟಿ ಮಾಡುವ ಇಂಥ ಗೋಸುಂಬೆಗಳ ದೂರ ಇಡಿ. ಮಾನಗೆಟ್ಟವರ ಸಹವಾಸ ಬಿಡಿ. ಆಗ ಇರದು ಯಾವುದೇ ಬಾನಗಡಿ.
Source – Sakhigeetha.com