ಈ ಶೀರ್ಷಿಕೆ ನೋಡಿ ನಿಮಗೆ ಅಚ್ಚರಿ ಆದರೂ ಆಗಬಹುದು. ಶೀರ್ಷಿಕೆ ಕೊಂಚ ತಪ್ಪಾಗಿರಬಹುದು. ಅದು ‘ದಲಿತರ ಮದುವೆಗೆ ಬ್ರಾಹ್ಮಣರ ಪೌರೋಹಿತ್ಯ’ ಎಂದಿರಬೇಕಿತ್ತು ಎಂದೂ ಅನ್ನಿಸಬಹುದು. ಆದರೆ ಹಾಗೇನಿಲ್ಲ. ಶೀರ್ಷಿಕೆ ಸರಿಯಾಗಿಯೇ ಇದೆ. ದಲಿತರ ಮದುವೆಗೆ ಬ್ರಾಹ್ಮಣರೊಬ್ಬರು ಸಂಪೂರ್ಣ ಸಾರಥ್ಯ ವಹಿಸಿ, ಮದುವೆ ಸಾಂಗವಾಗಿ ನೆರವೇರಿಸಿದ, ಸಾಮರಸ್ಯಕ್ಕೊಂದು ಹೊಸ ಭಾಷ್ಯ ಬರೆದ ವಿದ್ಯಮಾನವಿದು.
ಆತ ನಾಗಪ್ಪ. ದಲಿತ ಸಮುದಾಯಕ್ಕೆ ಸೇರಿದಾತ. ತಂದೆತಾಯಿಯರನ್ನು ಚಿಕ್ಕಂದಿನಲ್ಲೆÃ ಕಳೆದುಕೊಂಡು ಚಿಕ್ಕ ಹುಡುಗ ನಾಗಪ್ಪ ತುತ್ತು ಅನ್ನಕ್ಕಾಗಿ ಆಶ್ರಯಿಸಿದ್ದು ಹೊಸನಗರ ತಾಲ್ಲೂಕು ಸಂಪೆಕಟ್ಟೆ ಸಮೀಪದ ಗುಬ್ಬಗೋಡು ತಿಪ್ಪಯ್ಯ ಎಂಬ ಬ್ರಾಹ್ಮಣರ ಮನೆಯನ್ನು. ಮನೆಯ ಕೊಟ್ಟಿಗೆಯ ಕೆಲಸದಿಂದ ಹಿಡಿದು ತೋಟದ ಕೆಲಸ ಮತ್ತಿತರ ಎಲ್ಲ ಕೆಲಸಗಳನ್ನು ಕಲಿತು ನಿಯತ್ತಾಗಿ ಬದುಕ ತೊಡಗಿದ ನಾಗಪ್ಪನಿಗೆ ತಿಪ್ಪಯ್ಯ ತಮ್ಮ ತೋಟದ ಮೂಲೆಯಲ್ಲೆ ಮನೆಯೊಂದನ್ನು ಕಟ್ಟಿಸಿಕೊಟ್ಟರು. ದೊಡ್ಡವನಾದ ಬಳಿಕ ಮದುವೆಯನ್ನೂ ಮಾಡಿಸಿದರು. ಮೂವರು ಹೆಣ್ಣುಮಕ್ಕಳು ತಂದೆಯೂ ಆದ ನಾಗಪ್ಪನನ್ನು ಎಲ್ಲರೂ ಕರೆಯುತ್ತಿದ್ದುದು ಮಾತ್ರ ಹುಡುಗ ಎಂದೇ. ಆತನ ನಿಜವಾದ ಹೆಸರು ಈಗಲೂ ಹಲವರಿಗೆ ಸಂಪಕಟ್ಟೆ ಸುತ್ತಮುತ್ತ ಗೊತ್ತಿಲ್ಲ.
ಹುಡುಗ(ನಾಗಪ್ಪ)ನ ಮಗಳು ಬೆಳೆದು ದೊಡ್ಡವಳಾದಾಗ ಆಕೆಯ ಮದುವೆ ಮಾಡಿಸುವುದು ಹೇಗೆಂಬ ಸಮಸ್ಯೆ ಹುಡುಗನದು. ಕೂಲಿ ಕೆಲಸ ಮಾಡಿಕೊಂಡಿರುವ ತಾನು ಮಗಳ ಮದುವೆಗೆ ಆಗುವಷ್ಟು ಹಣ ತರುವುದು ಎಲ್ಲಿಂದ? ಸಾಲ ಮಾಡಿದರೆ ತೀರಿಸುವುದಾದರೂ ಹೇಗೆ? ಆದಾಯದ ಬೇರೆ ಮೂಲಗಳು ಇಲ್ಲದಿದ್ದಾಗ ಇಂತಹ ಚಿಂತೆ ಇತರರನ್ನು ಕಾಡುವಂತೆ ಹುಡುಗನನ್ನೂ ಕಾಡಿದ್ದು ನಿಜ. ಹುಡುಗನ ಆ ಚಿಂತೆಗೆ ಪರಿಹಾರ ನೀಡಿದವರು ತಿಪ್ಪಯ್ಯನವರ ಮಗ ಪಿ.ಟಿ.ಗಣಪತಿ.
ತಿಪ್ಪಯ್ಯ ಕಾಲವಾದ ಬಳಿಕ ಮನೆಯ ಎಲ್ಲ ಜವಾಬ್ದಾರಿಗಳನ್ನು ಹೊತ್ತ ಗಣಪತಿ, ಇದೀಗ ತಮ್ಮ ಮನೆಯಲ್ಲಿ ೪ ದಶಕಗಳಿಂದ ನಿಯತ್ತಾಗಿ ಕೂಲಿ ಕೆಲಸ ನಿರ್ವಹಿಸುತ್ತಿದ್ದ ಹುಡುಗನ ಮೊದಲನೆಯ ಮಗಳ ಮದುವೆಯ ಜವಾಬ್ದಾರಿಯನ್ನೂ ಹೊತ್ತರು. ಮದುವೆಗೆ ಅಗತ್ಯವಿರುವ ಜವಳಿ, ಮಂಗಲಸೂತ್ರ, ಆಭರಣ, ಊಟೋಪಚಾರ ಇತ್ಯಾದಿ ಎಲ್ಲ ಖರ್ಚುವೆಚ್ಚಗಳನ್ನೂ ನಿಭಾಯಿಸಿದರು. ಸಂಪೆಕಟ್ಟೆಯ ಗಣಪತಿ ದೇವಸ್ಥಾನದಲ್ಲಿ ಕಳೆದ ಮೇ೨೫ರಂದು ನಡೆದ ಹುಡುಗನ ಮಗಳು ಮಮತಾಳ ಮದುವೆಗೆ ಸೇರಿದವರ ಸಂಖ್ಯೆ ಬರೋಬ್ಬರಿ ೫೫೦. ದಲಿತರಷ್ಟೆÃ ಅಲ್ಲದೆ ಬ್ರಾಹ್ಮಣರು, ಈಡಿಗರು, ಮತ್ತಿತರ ಜಾತಿಯವರೆಲ್ಲ ಬಂದು ಮದುಮಕ್ಕಳಿಗೆ ಶುಭ ಹಾರೈಸಿ, ಉಡುಗೊರೆಯಿತ್ತು ಊಟ ಮಾಡಿ ತೆರಳಿದ ದೃಶ್ಯ, ಬ್ರಾಹ್ಮಣರೇ ಹೆಚ್ಚಾಗಿರುವ ಸಂಪಕಟ್ಟೆಯಲ್ಲಿ ಅಪರೂಪದ್ದಾಗಿತ್ತು. ಆ ಮದುವೆಗಾಗಿ ಗಣಪತಿ ಸುಮಾರು ಒಂದೂಮುಕ್ಕಾಲು ಲಕ್ಷ ರೂ.ಹಣವನ್ನು ಖರ್ಚುಮಾಡಿದ್ದಾರೆ. ದೂರದ ಬೆಂಗಳೂರಿನಿಂದ ಆಹ್ವಾನಿತನಾಗಿ ನಾನೂ ಆ ಮದುವೆಯಲ್ಲಿ ಪಾಲ್ಗೊಂಡು ವಧುವರರಿಗೆ ಅಕ್ಷತೆ ಹಾಕಿ, ಉಡುಗೊರೆ ನೀಡಿ ಊಟ ಮಾಡಿ ಬಂದೆ.
ಹುಡುಗನ ಮಗಳ ಮದುವೆಯನ್ನು ಗಣಪತಿ ಎಲ್ಲ ಖರ್ಚು ಮೊತ್ತ ಭರಿಸಿ ಮಾಡಲೇ ಬೇಕೆಂದೇನೂ ಇರಲಿಲ್ಲ. ಒಂದಿಷ್ಟು ಹಣಕೊಟ್ಟು ನೀನೇ ನಿರ್ವಹಿಸಿಕೊ ಎಂದು ಸುಮ್ಮನಾಗಬಹುದಿತ್ತು. ಆದರೆ ನಾಲ್ಕು ದಶಕಗಳಿಂದ ನಿಯತ್ತಿನಿಂದ ದುಡಿದ ಮನೆಯಾಳು ಹುಡುಗನನ್ನು ಗಣಪತಿ ನಡುನೀರಿನಲ್ಲಿ ಕೈಬಿಡಲಿಲ್ಲ. ಹಣ ಖರ್ಚು ಮಾಡಿದಲ್ಲದೆ ಪುರೋಹಿತರು, ಊಟ ತಿಂಡಿ ವ್ಯವಸ್ಥೆ, ಆಮಂತ್ರಣ ಪತ್ರಿಕೆ ಮುದ್ರಣ, ಬಡಿಸುವ ವ್ಯವಸ್ಥೆ ಇತ್ಯಾದಿ ಎಲ್ಲದರ ಉಸ್ತುವಾರಿ ವಹಿಸಿದ ಅವರು ತಮ್ಮ ಮನೆಯ ಮದುವೆ ನಡೆದರೆ ಹೇಗಿರುತ್ತಾರೋ ಹಾಗೆ ನಡೆದುಕೊಂಡಿದ್ದು ವಿಶೇಷ. ಒಟ್ಟಾರೆ ಗಣಪತಿಯವರ ಸಾರಥ್ಯದಲ್ಲಿ ಮನೆಯಾಳು ಹುಡುಗನ ಮಗಳ ಮದುವೆ ಅತ್ಯಂತ ಅಚ್ಚುಕಟ್ಟಾಗಿ, ಸಾಂಗವಾಗಿ ಊರಿನ ಹತ್ತುಸಮಸ್ತರು ಭಲೆಭಲೆ ಎನ್ನುವಂತೆ ನಡೆಯಿತು. ನಾಗಪ್ಪನಿಗಂತೂ ತನ್ನ ಮಗಳ ಮದುವೆ ಇಷ್ಟೊಂದು ಚೆನ್ನಾಗಿ ನಡೆಯಬಹುದೆಂಬ ನಿರೀಕ್ಷೆಯೇ ಇರಲಿಲ್ಲ.
ಬ್ರಾಹ್ಮಣರೆಂದರೆ ಮೇಲ್ವರ್ಗದವರು, ದಲಿತರನ್ನು ಶೋಷಿಸುವವರು ಎಂದೆಲ್ಲ ಈಗಲೂ ಕೆಲವು ವಿಚಾರವಾದಿಗಳು ಬ್ರಾಹ್ಮಣರ ವಿರುದ್ಧ ದ್ವೆÃಷಬೀಜ ಬಿತ್ತುತ್ತಿರುವ ಸನ್ನಿವೇಶದಲ್ಲಿ ಸದ್ದುಗದ್ದಲವಿಲ್ಲದೆ ಸಹಜ ಕರ್ತವ್ಯವೆಂಬಂತೆ ನಾಗಪ್ಪನ ಮಗಳ ಮದುವೆಯನ್ನು ಸಾಂಗವಾಗಿ ನೆರೆವೇರಿಸಿದ ಗಣಪತಿಯಂಥವರು ವಿರಳರಲ್ಲಿ ವಿರಳರು. ಅಂಥವರ ಸಂಖ್ಯೆ ಹೆಚ್ಚಾದಾಗ ಸಮಾಜದಲ್ಲಿ ಅಸ್ಪೃಶ್ಯತೆ, ಜಾತೀಯತೆಗಳು ದೂರವಾಗಿ ಸಾಮರಸ್ಯದ ವಾತಾವರಣ ಮಾಡಬಲ್ಲುದು.
ಮಹೇಶ್ ಸಾವನಿ ಮೇಲ್ಪಂಕ್ತಿ
ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನಲ್ಲಿ ಒಂದು ಮಹತ್ತರ ಘಟನೆ. ಈಗಂತೂ ಹೆಣ್ಣುಮಕ್ಕಳ ಮದುವೆ ಮಾಡುವುದೆಂದರೆ ತಂದೆತಾಯಿಗಳ ಪಾಲಿಗೆ ಹಿಮಾಲಯ ಪರ್ವತ ಏರುವುದಕ್ಕಿಂತಲೂ ಕಡುಕಷ್ಟದ ಕೆಲಸ. ದೀನದಲಿತರು, ಆರ್ಥಿಕವಾಗಿ ಹಿಂದುಳಿದವರ ಪಾಲಿಗಂತೂ ಮದುವೆ ಕರ‍್ಯ ಒಂದು ಅಗ್ನಿಪರೀಕ್ಷೆ.
ಇಂತಹ ಹಿಂದುಳಿದ, ಅಸಾಹಾಯಕ ಹೆಣ್ಣುಮಕ್ಕಳ ಪಾಲಿಗೆ ಗುಜರಾತಿನ ಭಾವನಗರದ ವಜ್ರೊÃದ್ಯಮಿ ಮಹೇಶ್ ಸಾವನಿ ದೇವರಾಗಿದ್ದಾರೆ. ಸಾವನಿ ಇದುವರೆಗೆ ೫೦೦ಕ್ಕೂ ಹೆಚ್ಚು ಅಸಹಾಯಕ, ಆರ್ಥಿಕ ದುರ್ಬಲ ಹೆಣ್ಣುಮಕ್ಕಳ ಮದುವೆ ಮಾಡಿಸಿ, ಅವರಿಗೆಲ್ಲ ನೆಮ್ಮದಿಯ ಬದುಕು ಕಲ್ಪಿಸಿಕೊಟ್ಟಿದ್ದಾರೆ. ಇವರಿಂದ ಉಪಕೃತರಾದ ಹೆಣ್ಣುಮಕ್ಕಳು ಸಾವನಿಯವರನ್ನು ಮಹೇಶ್‌ಪಪ್ಪ ಎಂದೇ ಪ್ರಿÃತಿಯಿಂದ ಸಂಬೋಧಿಸುತ್ತಾರೆ.
ಮಹೇಶ್ ಸಾವನಿಯವರಿಗೆ ಇಂತಹ ಔದಾರ್ಯದ ಗುಣ ಮೂಡಿದ್ದು ಕುಟುಂಬದಲ್ಲಿ ನಡೆದ ಒಂದು ಅವಘಢದಿಂದಾಗಿ. ಅವರ ತಮ್ಮ ಚಿಕ್ಕ ವಯಸ್ಸಿನಲ್ಲೆÃ ಇದ್ದಕ್ಕಿದ್ದಂತೆ ಸಾವಿಗೀಡಾದರು. ಅವರ ಇಬ್ಬರು ಹೆಣ್ಣುಮಕ್ಕಳು ಅನಾಥರಾದರು. ಮಹೇಶ್ ಅವರಿಗೆ ಈ ಘಟನೆ ಹೃದಯ ಕಲಕುವಂತೆ ಮೂಕಿತು. ಆ ಇಬ್ಬರು ಹೆಣ್ಣುಮಕ್ಕಳಿಗೂ ತಂದೆಯ ಸ್ಥಾನದಲ್ಲಿ ನಿಂತು ಮದುವೆ ನೆರೆವೇರಿಸಿದರು.
ಇದರಲ್ಲಿ ವಿಶೇಷವೇನೂ ಇಲ್ಲ. ಆದರೆ ವಿಶೇಷವಿರುವುದು ಸಾವನಿಯವರ ಅನಂತರದ ಚಿಂತನೆÀ ಹಾಗೂ ಕೃತಿಯಲ್ಲಿ. ತನ್ನ ಅಗಲಿದ ತಮ್ಮನ ಹೆಣ್ಣುಮಕ್ಕಳ ಸ್ಥಿತಿ ಸಮಾಜದಲ್ಲಿ ಇನ್ನೆಷ್ಟು ಮಂದಿಗೆ ಬಂದಿರಬಹುದು. ಅವರಿಗೆಲ್ಲ ತಾನು ತಂದೆಯ ಸ್ಥಾನದಲ್ಲಿ ನಿಂತು ಏಕೆ ಮದುವೆ ಮಾಡಿಸಬಾರದು? ಅವರಿಗೆಲ್ಲ ನೆಮ್ಮದಿಯ ಬದುಕು ಏಕೆ ಕರುಣಿಸಬಾರದು? ಇಂತಹುದೊಂದು ಚಿಂತನೆ ಮನದಲ್ಲಿ ಉದಿಸಿದ್ದೆÃ ತಡ, ಸಾವನಿ ಮತ್ತೆ ಹಿಂತಿರುಗಿ ನೋಡಲಿಲ್ಲ. ಅಸಹಾಯಕ ಹೆಣ್ಣು ಮಕ್ಕಳನ್ನು ಹುಡುಕಿ, ಪ್ರತಿಯೊಂದು ಮದುವೆಗೂ ಕನಿಷ್ಠ ೪ ಲಕ್ಷ ರೂ. ಖರ್ಚುಮಾಡುವ ಸೇವೆಯನ್ನು ಅವರು ವ್ರತದಂತೆ ಆಚರಿಸಿಕೊಂಡು ಬಂದಿದ್ದಾರೆ. ಇಂತಹ ಮದುವೆಗಳನ್ನು ಮಾಡಿಸುವಾಗ ಅವರು ಜಾತಿ, ಮತಗಳನ್ನು ಪರಿಗಣಿಸಿಲ್ಲ ಎನ್ನುವುದು ಇನ್ನೊಂದು ವಿಶೇಷ.
ಮಹೇಶ್ ಸಾವನಿ ಬಳಿ ಬೇಕಾದಷ್ಟು ಸಂಪತ್ತಿದೆ. ಆದರೆ ಅದನ್ನು ಹೇಗೆ ಸದ್ವಿನಿಯೋಗಿಸಬೇಕೆಂಬ ಸಂಸ್ಕಾರ ಭರಿತ ಮಾನಸಿಕತೆಯೂ ಇದೆ. ಪಿ.ಟಿ.ಗಣಪತಿ, ಮಹೇಶ್ ಸಾವನಿಯಂಥವರು ಈ ಸಮಾಜದಲ್ಲಿರುವುದು ಸಮಾಜದ ಆರೋಗ್ಯಕ್ಕೆ ಸಾಕ್ಷಿ.
Source – Sakhigeetha.com