ಎರಡನೆಯ ಮಹಾ ಯುಧ್ದದಲ್ಲಿಗೆಲ್ಲುವ ಸಲುವಾಗಿ ಪರಮಾಣುಬಾಂಬ್ ಒಂದನ್ನುತಯಾರಿಸುವಕಲ್ಪನೆಅಮೆರಿಕಕ್ಕೆ ಬಂದಿತು.ಈ ಸಲಹೆಯನ್ನು ಮುಂದಿಟ್ಟಾಗ ಸುಮಾರು ೩೦೦ಕ್ಕೂ ಹೆಚ್ಚು ವಿಜ್ಞಾನಿಗಳು ಅದರಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರಂತೆ.ಆದರೆ ಹನ್ನೆರಡು ವಿಜ್ಞಾನಿಗಳು ತಾರ್ಕಿಕವಾಗಿಅಣು ಬಾಂಬ್‌ತಯಾರಿಸುವುದು ಸಾಧ್ಯವಿದೆಎಂದು ಹೇಳಿ ತಯಾರಿಸಲು ಮುಂದಾದರಂತೆ.
ಪರಮಾಣುರಿಯಾಕ್ಟರ್ ತಯಾರಿಸಿ ವಿದ್ಯುತ್‌ಉತ್ಪಾದನೆಯಲ್ಲಿತೊಡಗಿದ್ದಎನರಿಕೋ ಫರ್ಮಿ ಮತ್ತು ಅವರ ತಂಡಅದಕ್ಕೆಒಪ್ಪಿಕೊಂಡು, ಬಾಂಬ್ ಒಂದನ್ನು ತಯಾರಿಸಿ ಪರೀಕ್ಷಾರ್ಥ ಮರುಭೂಮಿಯೊಂದರಲ್ಲಿಜುಲೈ ೧೯೪೫ರಲ್ಲಿ ಸ್ಫೊÃಟಿಸಿತು.ಅದರ ಯಶಸ್ಸಿನಿಂದ ಆಗಸ್ಟ್ ೬ ರಂದು ಹಿರೋಷಿಮಾದಲ್ಲಿ ಮೊದಲ ಬಾಂಬ್‌ಅನ್ನು ಸ್ಫೊÃಟಿಸಿದರು.ಅದನ್ನು ಹಾಕಿದ ಪೈಲಟ್‌ಅದರ ಭೀಕರತೆಯನ್ನು ವರ್ಣಿಸಿದ್ದಾನೆ. ಅದು ತಿಳಿದೂ, ಮೂರು ದಿನಗಳ ನಂತರ ನಾಗಾಸಾಕಿಯ ಮೇಲೆ ಮತ್ತೊಂದನ್ನು ಹಾಕಿದರುಎನ್ನುವುದೇ ಮನುಕುಲದದುರ್ದೈವ.
ಇಂತಹ ಭಯಂಕರ ಉತ್ಪನ್ನವನ್ನು ತಯಾರಿಸಿ ಕೊಟ್ಟಿದ್ದಕ್ಕೆ ಫರ್ಮಿಯನ್ನು ವೈಜ್ಞಾನಿಕ ಸಂಸ್ಥೆಗಳು ದೂರವಿಟ್ಟವುಎನ್ನುವುದುಗಮನಾರ್ಹ!
ಫರ್ಮಿ ಮತ್ತು ಆತನ ತಂಡದವರು ಕೇವಲ ತರ್ಕಬದ್ಧರಾಗಿ ಯೋಚಿಸಿದರೇ ಹೊರತುಅದಕ್ಕೆ ಭಾವುಕತೆಯನ್ನು ಬಳಸಲಿಲ್ಲ. ಈ ಪ್ರಯೋಗದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ವಿಜ್ಞಾನಿಗಳು ಭಾವುಕತೆಯೊಂದಿಗೆತರ್ಕದ ಸಮತೋಲನವನ್ನುಕಾಪಾಡಿಕೊಂಡಿದ್ದ್ದರಿಂದಅವರಿಗೆತಮ್ಮ ಪ್ರಯೋಗದ ಭೀಕರ ಪರಿಣಾಮದಅರಿವುಉಂಟಾಗಿಅವರು ಆ ಪ್ರಯೋಗಕ್ಕೆ ನಿರಾಕರಿಸಿದರು.
ಪಿ ಯು ವಿದ್ಯಾರ್ಥಿನಿಯೊಬ್ಬಳಿಗೆ ಅವಳ ಸೋದರಮಾವಕೀಟಲೆ ಮಾಡಲು ಪರೀಕ್ಷೆಯಲ್ಲಿ ನೀನು ಪಾಸಾಗಿಲ್ಲಎಂದು ತಿಳಿಸಿದಾಗ, ಹಿಂದು ಮುಂದು ನೋಡದೆಆಕೆ ಭಾವಿಗೆ ಹಾರಿ ಬಿಟ್ಟಳು.ವಾಸ್ತವವಾಗಿ ಆಕೆ ಮೊದಲ ದರ್ಜೆಯಲ್ಲಿ ಪಾಸಾಗಿದ್ದಳು.ತರ್ಕವನ್ನು ಬಳಸಿದ್ದರೆ, “ನಾನು ಮೊದಲ ದರ್ಜೆಯಲ್ಲಿ ಪಾಸಾಗುವ ರೀತಿಯಲ್ಲಿ ಸಾಧನೆ ಮಾಡಿದ್ದೆ. ಹೆಚ್ಚೆಂದರೆ ಎರಡನೆಯ ದರ್ಜೆ ಬರಬಹುದೇ ಹೊರತು ಫೇಲಾಗುವುದು ಸಾಧ್ಯವೇ ಇಲ್ಲ” ಎಂದು ವಾದಿಸಿರುತ್ತಿದ್ದಳು. ಆದರೆ ಭಾವುಕತೆ ಅವಳನ್ನು ಆವರಿಸಿ, ತರ್ಕವನ್ನು ಹಿನ್ನೆಲೆಗೆ ತಳ್ಳಿ ದೊಡ್ಡತಪ್ಪನ್ನು ಮಾಡುವಂತೆ ಪ್ರೆÃರೇಪಿಸಿತು.
ಮೇಲೆ ಉಲ್ಲೆÃಖಿಸಿರುವ ಎರಡೂ ತಪ್ಪುಗಳು ತಿದ್ದಿಕೊಳ್ಳಲು ಸಾಧ್ಯವಿಲ್ಲದಂತಹ ತಪ್ಪುಗಳು ಎಂಬುದನ್ನು ಗಮನಿಸಿ!
ಅತೀ ಭಾವುಕತೆ ಅಥವ ಅತೀತಾರ್ಕಿಕತೆ ತೋರಿಸುುವ ನಡವಳಿಕೆ ವ್ಯಕ್ತಿಯ ಜೀನ್‌ಗಳಿಂದ ರೂಪುಗೊಂಡಿರಬಹುದು. ಪ್ರಾಥಮಿಕ ಆರೇಳು ವರ್ಷಗಳ ಕಾಲದ ಬೆಳವಣಿಗೆಯ ಸಮಯದಲ್ಲಿ ಉಂಟಾಗುವ ಕಲಿಕೆಯಿಂದಲೂ ಉಂಟಾಗಿರಬಹುದು. ಮಗುವಿನೊಂದಿಗೆ ಮನೆಯವರು ನಡೆದುಕೊಳ್ಳುವ ರೀತಿ, ಮಗುವನ್ನು ಬೆಳೆಸುವಾಗ ಅದರೊಡನೆ ಹಾಗೂ ಪರಸ್ಪರ ಹಿರಿಯರು ಮತ್ತುಕುಟುಂಬದಅನ್ಯ ಸದಸ್ಯರು ನಡೆದುಕೊಂಡ ವಿಧಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಮನೆಯ ಜನ ತಮ್ಮ ಭ್ರಮನಿರಸನಗಳನ್ನು ಹೇಗೆ ನಿಭಾಯಿಸಿಕೊಳ್ಳುತ್ತಾರೆ, ಅವರ ಭಾವೋದ್ವೆÃಗದ ನಿರ್ವಹಣೆ ಹೇಗಿರುತ್ತದೆ, ಪರಸ್ಪರ ಗೌರವ ಕೊಡುವಿಕೆ ಯಾವ ರೀತಿಯದ್ದು, ಜಗಳ ಹೇಗೆ ಆಡುತ್ತಾರೆ, ಜಗಳವಾಡುವ ಸಂಂದರ್ಭದಲ್ಲಿ ಬಳಸುವ ಭಾಷೆ, ಉಪಯೋಗಿಸುವ ಪದಗಳು ಹೇಗಿರುತ್ತವೆ, ಇವೆಲ್ಲವೂ ಮಕ್ಕಳಿಗೆ ವಿಶಿಷ್ಟ ಕಲಿಕೆಗಳನ್ನು ಕೊಡುತ್ತಿರುತ್ತವೆ. ಈ ಕಲಿಕೆಗಳು ಬಹುತೇಕ ಜೀವನದುದ್ದಕ್ಕೂ ಬರುವುದರಿಂದ ಅವು ನಮ್ಮ ಬಾಹ್ಯ ವರ್ತನೆಯ ಮೇಲೆ ಪರಿಣಾಮವನ್ನು ಬೀರುತ್ತವೆ.
ಇದರಿಂದ ನಮಗೆ ಸಿಗುವ ಮೊದಲ ಪಾಠಎಂದರೆ, ಮಕ್ಕಳ ಎದುರು ನಾವು ಹೇಗೆ ವರ್ತಿಸುತ್ತೆÃವೆ ಎನ್ನುವುದರತ್ತ ಗಮನ ಇರಬೇಕುಎನ್ನುವುದು.
“ಚಿಕ್ಕವನಿದ್ದಾಗ ಆತÀನ ತಾಯಿ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಪ್ರಾಣಿ ಹಿಂಸೆ ಮಾಡಬಾರದು, ಚೀಮೆಗಳನ್ನು ಕೊಲ್ಲ ಬಾರದು ಎಂದೆಲ್ಲ ಹೇಳಿಕೊಟ್ಟಿದ್ದರಿಂದಲೇ ಆತ ದೊಡ್ಡವನಾಗಿ ಜಗತ್ತಿಗೇ ಅಹಿಂಸೆಯನ್ನು ಬೋಧಿಸಿದ್ದು” ಎಂದು ಕೈಲಾಸಂ ಅವರು ಗಾಂಧೀಜಿಯನ್ನು ಕುರಿತು ಹೇಳುತ್ತಾರೆ.ಈ ಹೇಳಿಕೆಯ ಜೊತೆಗೆ ನವತಾರುಣ್ಯದಲ್ಲಿರುವ ವ್ಯಕ್ತಿಯೊಬ್ಬಬನ ಅಸಮರ್ಪಕ ನಡವಳಿಕೆ ಕುರಿತು ಪ್ರಶ್ನಿಸಿದಾಗ, ರಾಜಕಾರಣಿ ತಂದೆ, “ನಾವೇನು ಸದಾ ಅವರ ಹಿಂದೆ ಇರುವುದು ಸಾಧ್ಯವೇ” ಎಂದು ಮರು ಪ್ರಶ್ನಿಸಿದುದನ್ನು ಜೋಡಿಸಿದಾಗ ಈ ಬಾಲ್ಯದಕಲಿಕೆಯ ಶಕ್ತಿ ನಿಮಗೆ ಅರಿವಾಗುತ್ತದೆ.
ನಾವು ಬೆಳೆದ ವಾತಾವರಣ, ನಮ್ಮ ವಂಶವಾಹಿನಿ ನಮ್ಮ ನಡವಳಿಕೆಯನ್ನು ನಿರ್ವಹಿಸುತ್ತವೆ, ಆದುದರಿಂದ ನಾವು ಏನೂ ಮಾಡಲಾಗದುಎಂದು ಕೈ ಚೆಲ್ಲಿಕೂರುವಅಗತ್ಯವೂಇಲ್ಲ. ನಮ್ಮ ಪ್ರಗತಿಗೆ, ಸಮಾಜದಲ್ಲಿನ ನಮ್ಮ ವ್ಯಕ್ತಿತ್ವಕ್ಕೆಧಕ್ಕೆತರಬಹುದಾದಂತಹ ಕಲಿಕೆಗಳನ್ನು ಕೈ ಬಿಟ್ಟು ಹೊಸ ಕಲಿಕೆಗಳನ್ನು ರೂಢಿಸಿಕೊಳ್ಳುವುದು ಸಾಧ್ಯವಿದೆ.
ತರ್ಕ ಮತ್ತು ಭಾವುಕತೆಗಳ ನಡುವೆ ಸಮತೋಲನ ಮಾಡಿಕೊಳ್ಳುವುದನ್ನು ಕಲಿತರೆ, ನಾವು ಉತ್ತಮ ಜೀವನ ನಡೆಸುವುದು ಸಾಧ್ಯವಿದೆ.
Source – Sakhigeetha.com