ಕ್ರಾಂತಿ ನಿದ್ರಿಸುತ್ತಿದೆ: ಡಾಲ್ಟನ್ ಗಾರ್ಸಿಯಾ

0
753

ಹೆಬ್ಬಂಡೆಗಳ ಜನ್ಮ ದಿನಗಳನ್ನೆÃ ಅಳಿಸಿ ಹಾಕಿವೆ
ನಿಮ್ಮ ನೆರಳುಗಳು
ನಡುಹಗಲ ಬೆಳಕನ್ನೆÃ ನುಂಗಿ ಬಿಟ್ಟಿವೆ
ನಿಮ್ಮೆದುರು ಬಿರುಗಾಳಿಯೂ ಸುಳಿಯಲು ಭಯಪಡುತ್ತಿದೆ ಈಗ
ಕರಗಿ ಹೋಗಿವೆ ಹಿಮಗಿರಿಗಳು ಕಂಗಾಲಾಗಿ
ಸದಾ ನಿಗಿನಿಗಿಯಾದವರು ನಿದ್ರಿಸುವ ಸಮುದ್ರವೇ
ನಿಮ್ಮ ನೆರಳಿಗಂಜಿ ಜಡತ್ವದ ಜೋಗುಳಕ್ಕೊರಗಿ ನಿದ್ರಿಸುತ್ತಿದೆ ಕೂಸಂತೆ,
ಅಂಬೆಗಾಲಿಡುವ ಮಗುವಂತೆ
‘ಕ್ರಾಂತಿ’ ಈಗ ಮರಭೂಮಿಯಲ್ಲಿ ತೆವಳುತ್ತಿರುವ ಬಸವನ ಹುಳು
ಸೆಂಟ್ರಲ್ ಅಮೇರಿಕಾದ ಕವಿ ಡಾಲ್ಟನ್ ಗಾರ್ಸಿಯಾನ ಈ ಸಾಲುಗಳು ಜಾಗತಿಕವಾದವುಗಳೆ. ನಿಜಕ್ಕೂ ಎಲ್ಲ ಜನಾಂದೋಲನಗಳು ಜಿಡ್ಡುಗಟ್ಟಿದ, ಜೀವಕಳೆದುಕೊಂಡ ಮತ್ತು ದಾರಿ ತಪ್ಪಿದ ದುರದೃಷ್ಟದ ದಿನಗಳಿವು. ನಮ್ಮ ನಗರಗಳ ಸಂದಿ ಸಂದಿಗಳಲ್ಲಿ ಧರಣಿ, ಸತ್ಯಾಗ್ರಹ ಮತ್ತು ಹೋರಾಟದ ಭಿತ್ತಿ ಪತ್ರಗಳನ್ನು ನಾವು ನಿತ್ಯ ನೋಡುತ್ತೆÃವೆ. ಆದರೆ ಅಂಥ ಒಂದು ಹೋರಾಟ ನಿಜಕ್ಕೂ ನಡೆದಿದೆಯೆ ಎನ್ನುವಷ್ಟು ನಿಸ್ತೆÃಜಗೊಳ್ಳುತ್ತಲೇ ಹೊರಟಿದೆ ವರ್ತಮಾನ. ಪ್ರತಿ ಪತ್ರಿಕೆಯ ಪುಟ ಪುಟವೂ ರ‍್ಯಾಲಿ, ಮೋರ್ಚಾಗಳ ಫೋಟೊಗಳಿಂದ ತುಂಬಿ ಹೋಗಿವೆ.
ಆದರೆ ಅದು ಯಾವುದರತ್ತ ಕೇಂದ್ರಿಕೃತವಾಗಿದೆ ಮತ್ತು ನಮ್ಮ ಸಮಾಜದ ಯಾವ ವೈಫಲ್ಯವನ್ನು ಸರಿಗೊಳಿಸಿದೆ ಎನ್ನುವುದು ಇಂದಿಗೂ ಬಗೆ ಹರಿಯದ ಪ್ರಶ್ನೆ. ಡಾಲ್ಟನ್ ಗಾರ್ಸಿಯಾ ತನ್ನ ಕ್ರಾಂತಿ ಕವಿತೆಗಳನ್ನು ಹೊಸೆಯುವಾಗ ಇಂಥದೇ ಸ್ಥಿತಿ ನಿರ್ಮಾಣವಾಗಿತ್ತು. ಅಂತೆಯೇ ಆತ ವ್ಯಂಗ್ಯವಾಗಿ ಹೇಳುತ್ತಾನೆ, ‘ಕ್ರಾಂತಿ’ ಈಗ ಮರಭೂಮಿಯಲ್ಲಿ ತೆವಳುತ್ತಿರುವ ಬಸವನಹುಳು.
ಲ್ಯಾಟಿನ್ ಅಮೇರಿಕಾದ ಅತ್ಯಂತ ಪ್ರಭಾವಿ ಕವಿ ಡಾಲ್ಟನ್ ಗಾರ್ಸಿಯಾ. ವ್ಯಂಗ್ಯ, ಭಾವ ತೀವ್ರತೆ, ಬದುಕು, ಸಾವು, ಪ್ರಿÃತಿ, ಹೋರಾಟ ಮತ್ತು ರಾಜಕಾರಣದ ತಾತ್ವಿಕ ಪ್ರಶ್ನೆಗಳನ್ನೆತ್ತಿಕೊಂಡು ಹರಿಯುವ ಅವನ ಕಾವ್ಯಧಾರೆ ಒಂದರ್ಥದಲ್ಲಿ ಅಗ್ನಿಧಾರೆ.
ಇತಿಹಾಸಕಾರರು ಈತ ಒಂದು ಅಕ್ರಮ ಸಂತಾನ ಎಂದು ಹೇಳುವ ಕಥೆ ಅತ್ಯಂತ ಸರಳವಾಗಿದೆ. ಯಾವಾಗಲೂ ಕಾನೂನು ಬಾಹಿರವಾಗಿಯೇ ಬದುಕಿದ ಡಾಲ್ಟನ್ ಸಹೋದರರಲ್ಲಿ ಒಬ್ಬನಾದ ವಿನಾಲ್ ಡಾಲ್ಟನ್, ಮದುವೆಯಾಗಿದ್ದು ಮಕ್ಕಳೊಂದಿಗಿನ ಒಬ್ಬ ಕುಟುಂಬಸ್ಥ. ಕುಟುಂಬದ ಕದನವೊಂದರಲ್ಲಿ ಸಾಮೂಹಿಕ ಹತ್ಯೆಯಲ್ಲಿ ಬದುಕಿ ಉಳಿದ ಈತ ಆಸ್ಪತ್ರೆ ಸೇರುತ್ತಾನೆ. ಈತನ ಆರೈಕೆಗೆಂದೇ ನಿಯುಕ್ತಳಾದ ನರ್ಸ್ ಮಾರಿಯಾಳೊಂದಿಗೆ ದೈಹಿಕ ಸಂಬಂಧ ಮಾಡಿ ಈತ ರೋಕ್ ಡಾಲ್ಟನ್ ಗಾರ್ಸಿಯಾನಿಗೆ ಜನ್ಮ ನೀಡಿ ತಂದೆಯಾಗುತ್ತಾನೆ.
ತಂದೆಯ ಕರ್ಮಕಾಂಡಗಳೇನೆ ಇರಲಿ, ಅವುಗಳ ಬಗೆಗೆ ಎಂದೂ ಚಿಂತಿಸದೆ ಮಗನ ಮನಸ್ಸನ್ನು ಅದರತ್ತ ಎಂದೂ ಗಮನ ಹರಿಸದೆ ಅತ್ಯಂತ ಪರಿಶ್ರಮದಿಂದ ದುಡಿದು ಓರ್ವ ಸಭ್ಯಸ್ಥ ತಾಯಿಯಾಗಿ ಜೀವನವನ್ನು ರೂಪಿಸಿದವಳು ಮಾರಿಯಾ ಗಾರ್ಸಿಯಾ. ಸೆಲ್ವೆಡರ್‌ನ ಪ್ರತಿಷ್ಠಿತ ಶಾಲೆ-ಕಾಲೇಜುಗಳಲ್ಲಿಯೇ ಮಗನ ಶಿಕ್ಷಣವನ್ನು ಪೂರೈಸಲು ಪ್ರಾಣವನ್ನೆÃ ಪಣಕ್ಕಿಟ್ಟವಳಿವಳು. ಮಗ ರೋಕ್ ಗಾರ್ಸಿಯಾನೂ ಅಷ್ಟೆ. ಶಾಲಾ ದಿನಗಳಲ್ಲಿ ಅತ್ಯಂತ ತೀಕ್ಷ÷್ಣಮತಿಯೂ ಹಾಗೂ ಸೂಕ್ಷö್ಮ ಮನಸ್ಸಿನವನೂ ಆಗಿದ್ದವ.
ಸಮಾಜದ ಮೂದಲಿಕೆಯಿಂದ ಗಾರ್ಸಿಯಾನಿಗೆ ಹೊರಬರಲು ಆಗಲೇ ಇಲ್ಲ. ಶ್ರಿÃಮಂತ ವಿದ್ಯಾರ್ಥಿಗಳ ಬಗೆಗೆ ಶಿಕ್ಷಕರಿಗಿದ್ದ ಆಸೆ, ಅಕ್ರಮ ಮಕ್ಕಳನ್ನು ಅವರು ವ್ಯಂಗ್ಯ ಮಾಡುತ್ತಿದ್ದ ರೀತಿ, ಈತನ ಹುಟ್ಟಿನ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಸದಾ ಸಂಶಯದಿಂದ ನೋಡಿದ ಸ್ನೆÃಹಿತರು ಹಾಗೂ ಸಮಾಜ ಗಾರ್ಸಿಯಾನಲ್ಲಿ ಒಬ್ಬ ಅಪರೂಪದ ಕವಿ ಸಂಗಾತಿಗೆ ಹುಟ್ಟು ನೀಡಿತು. ಚಿಲಿಯ ಸ್ಯಾಂಟಿಗೊ ವಿಶ್ವವಿದ್ಯಾಲಯದಲ್ಲಿ ಹಾಗೂ ಯುನಿವರ್ಸಿಟಿ ಆಫ್ ಸೆಲ್ವೆಡಾರ್‌ನಲ್ಲಿ ಶಿಕ್ಷಣವನ್ನು ಪಡೆಯುತ್ತಲೇ ತನ್ನ ಕಾವ್ಯ ಸಂವೇದನೆಗಳನ್ನು ಗಾರ್ಸಿಯಾ ತೀಕ್ಷ÷್ಣಗೊಳಸಿಕೊಂಡ. ಈ ಸಂದರ್ಭದ ಒಂದು ಕವಿತೆಯ ಅವನ ಈ ಸಾಲುಗಳನ್ನು ನೀವು ಓದಲೇಬೇಕು –
ಉಪ್ಪು ಉಪ್ಪಾದ ಜ್ಞಾನವನ್ನು ಹುಗಿದಿಟ್ಟುಕೊಂಡಿದೆ ಸಮುದ್ರ
ಬೆಂಕಿಯಿಲ್ಲದ ಬೆಳಕು ಜಗವನಾವರಿಸಿದೆ
ಮೊಗವೆತ್ತಲು ಯತ್ನಿಸುವ ಸತ್ಯವೊಂದು ಇಡೀ ಆಕಾಶವನ್ನೆÃ ಘಾಸಿಗೊಳಿಸಿದೆ
ನಿಸ್ಸೊÃತ ದಡಗಳ ತೋಳುಗಳಲ್ಲಿ ಬಿದ್ದು ಬಿಟ್ಟಿದೆ ಸಮುದ್ರ
ಇದೇ ಅವಧಿ, ಕವಿ ಗಾರ್ಸಿಯಾ ಕಮ್ಯೂನಿಸ್ಟ ಪಾರ್ಟಿಯ ಸದಸ್ಯನಾಗಿ ಚಳುವಳಿಗೂ ಇಳಿದ. ಕ್ಯೂಬಾದ ಕ್ರಾಂತಿಯ ದಿನಗಳಲ್ಲಿ ಈತ ಒಬ್ಬ ಕಟ್ಟರ್ ಕಮ್ಯೂನಿಸ್ಟ್ ವಿದ್ಯಾರ್ಥಿಗಳನ್ನು ಹಾಗೂ ರೈತರನ್ನು ಕ್ರಾಂತಿಗೆ ಪೂರಕವಾಗಿ ಒಗ್ಗೂಡಿಸಿದ ಆಪಾದನೆಯ ಮೇರೆಗೆ ಪ್ರಬಲ ರಾಜಕಾರಣಿಗಳು ಹಾಗೂ ಭೂ ಮಾಲೀಕರೆಲ್ಲ ಸೇರಿ ಸರ್ಕಾರದ ಆಡಳಿತ ಯಂತ್ರವನ್ನು ಬಳಸಿಕೊಂಡು ಈತನನ್ನು ಎರಡು ಬಾರಿ ಬಂಧಿಸಿ ಜೈಲಿಗಟ್ಟಿದರು. ಸಾರ್ವಜನಿಕ ಸ್ಥಳದಲ್ಲಿ ಸ್ಕಡ್ ಹಾರಿಸಿದ ಆಪಾದನೆಯ ಮೇರೆಗೆ ಕೆಲಕಾಲ ದೇಶದಿಂದ ಗಡಿಪಾರುಗೊಳಿಸಿದರು. ಹದ್ದು ಮೀರಿ ಬಂದ ಈತನನ್ನು ಜೈಲೊಂದರಲ್ಲಿ ಬಂಧಿಸಿಟ್ಟರು. ಆದರೆ ಲಾವಾರಸವನ್ನು ಯಾರೂ ನಿಲ್ಲಿಸಲಾಗದು ಎನ್ನುವಂತೆ ಭೀಕರ ಭೂಕಂಪವಾಗಿ ಈತನನ್ನು ಬಂಧಿಸಿಟ್ಟ ಜೈಲು ಕುಸಿದು ಬಿದ್ದಿತು. ಬಂಧ ಮುಕ್ತನಾದ ಗಾರ್ಸಿಯಾ ಇಲ್ಲಿಂದ ಓಡಿಹೋಗಿ ಮತ್ತೆ ಕ್ಯೂಬಾ ಮತ್ತು ಪೆರಿಗ್ವೆಗಳಲ್ಲಿ ಹೋರಾಟಕ್ಕಿಳಿದುಕೊಂಡ.
೧೯೭೩ರಲ್ಲಿ ಸೆಲ್ವಿಡಾರ್‌ಗೆ ಬಂದು ಭೂಗತನಾಗಿದ್ದುಕೊಂಡೇ ಕ್ರಾಂತಿಯ ಕನಸನ್ನು ಕಾಪಿಟ್ಟುಕೊಂಡ. ತನ್ನಲ್ಲಿರುವ ಕವಿತೆಗೆ ಆತ ಅಭಿವ್ಯಕ್ತಿ ಕೊಟ್ಟಿದ್ದು ಕೂಡ ಮೆಕ್ಸಿಕೊದ ತನ್ನ ಪಲಾಯನದ ದಿನಗಳಲ್ಲಿ. ಈ ಸಂದರ್ಭದಲ್ಲಿ ಆತ ಅನೇಕ ಕ್ಯೂಬನ್ ಮತ್ತು ಲ್ಯಾಟಿನ್ ಅಮೇರಿಕನ್ ಉಚ್ಛಾಟಿತ ಕವಿಗಳ ಸಂಪರ್ಕಕ್ಕೆ ಬಂದ. ತಲೆಮರೆಸಿ ಕೊಂಡವನಾಗಿದ್ದುಕೊಂಡೇ ಏನೆಲ್ಲ ಮಾಡಬೇಕೆಂದುಕೊಂಡಿದ್ದ ಗಾರ್ಸಿಯಾನಿಗೆ ನಿರೀಕ್ಷಿಸಿದಷ್ಟು ಸಮಯ ಸಿಗಲಿಲ್ಲ. ಈತ ಅಡಗಿದ ತಾಣದ ಪತ್ತೆಯಾಗಿ ಇವನನ್ನು ಹೊರಗೆಳೆದು ಮತ್ತೆ ಜೈಲಿಗೆ ಅಟ್ಟುವವರೆಗೆ ಸರ್ಕಾರ ನಿದ್ರಿಸಲಿಲ್ಲ.
ಬದುಕಿನಲ್ಲಿ ಏನೆಲ್ಲ ಏರಿಳಿತಗಳನ್ನು ಕಂಡಿದ್ದ ಗಾರ್ಸಿಯಾ, ತನ್ನ ಕವಿತೆಗಳ ಮೂಲಕವೇ ರಾಜಕೀಯ ವೈರಿಗಳನ್ನು ಸೃಷ್ಠಿಸಿಕೊಂಡಿದ್ದ ಎನ್ನುತ್ತಾರೆ ಇತಿಹಾಸಕಾರರು. ತನ್ನ ಜೀವನದ ನಲವತ್ತನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮುನ್ನಾದಿನ ಅಂದರೆ, ೧೦ ಮೇ ೧೯೭೫ರಲ್ಲಿ ರಾಜಕೀಯ ವೈರಿಯೊಬ್ಬನಿಂದ ಹತ್ಯೆಗೊಳಗಾಗುತ್ತಾನೆ. ಮೇ ತಿಂಗಳಲ್ಲಿಯೇ ಹುಟ್ಟಿ, ಮೇ ತಿಂಗಳಲ್ಲಿಯೇ ಮೃತ್ಯುಕೂಪಕ್ಕೆ ಜಾರಿದ ಗಾರ್ಸಿಯಾನ ಸಾವು ಒಂದು ರಾಷ್ಟಿçÃಯ ದುರಂತ ಎಂದು ಸಾರುವುದರೊಂದಿಗೆ ಸರ್ಕಾರ ಸ್ಟಾಂಪ್ ಪ್ರಕಟಿಸಿ ಸಾವಿನ ಲೆಕ್ಕವನ್ನು ಸರಿದೂಗಿಸುತ್ತದೆ.
ದೊಡ್ಡ ದೊಡ್ಡ ಜೈಲುಗಳು, ಗಲ್ಲಿನ ಆದೇಶಗಳು, ಗಡಿಪಾರಿನ ಸಂದರ್ಭಗಳು ಹಾಗೂ ಸಾರ್ವಜನಿಕ ಆಕ್ರಮಣಗಳು ಗಾರ್ಸಿಯಾನ ಬದುಕನ್ನು ಎಂದೂ ಬಾಧಿಸಲಿಲ್ಲ ಅಥವಾ ಅದಕ್ಕೊಂದು ಭಯಾನಕ ಅಂತ್ಯವನ್ನು ಹಾಡಲಿಲ್ಲ. ಬದಲಾಗಿ ರಾಜಕಾರಣ ಈತನ ಬದುಕನ್ನು ಮುಗಿಸಿತು.

Source – Sakhigeetha.com

LEAVE A REPLY

Please enter your comment!
Please enter your name here