ಕೋಟ್ಯಧೀಶರ ನಾಯಕತ್ವ ಬೇಕೆ….? – ಲಕ್ಷ್ಮಣ ಕೊಡಸೆ

0
781

ರಾಷ್ಟç ಈ ಏಳುದಶಕಗಳಲ್ಲಿ ನಿಜವಾಗಿ ಸಾಧಿಸಿದ್ದೆÃನು? ಎಂಬ ಪ್ರಶ್ನೆಗೆ ಯಾವ ಜನಪ್ರತಿನಿಧಿಯ ಬಳಿಯೂ ಸರಿಯಾದ ಉತ್ತರವಿಲ್ಲ. ಹೀಗಿರುವಾಗ ಸಮಸ್ಯೆಗಳು ಸಮಸ್ಯೆಗಳಾಗೇ ಉಳಿದದ್ದು ಹೆಚ್ಚು.

ಬಡತನ ಪೂರ ನಿರ್ಮೂಲನೆ ಆಗಿಲ್ಲ! ಅನಕ್ಷರಸ್ಥರು ಇನ್ನೂ ನಮ್ಮಲ್ಲಿ ಇದ್ದಾರೆ, ಮೂಢ ನಂಬಿಕೆಗಳು ಮತ್ತಷ್ಟು ಹೆಚ್ಚಾಗಿವೆ. ಅಪೌಷ್ಟಿಕತೆಯಿಂದ ಬಳಲುವವರಿಗೆ ಪರಿಹಾರಗಳಿಲ್ಲ.
ಹೀಗಿರುವಾಗ ಮತ್ತೆ ಚುನಾವಣೆ ಬಂದಿದೆ. ಇದೊಂದು ಹೇರಳ ಹಣ ಹೂಡಿ, ಗೆದ್ದು, ಅಧಿಕಾರಕ್ಕೆ ಬಂದು ಅದರ ದುಪ್ಪಟ್ಟು ಹಣ ಪಡೆವ ಆಟ!
ಇಂಥ ಕುತ್ಸಿತ ವ್ಯವಸ್ಥೆಯಲ್ಲಿ ಭಾರತ ತೊಳಲುತ್ತಿದೆ. ಇದರ ಬೇರುಗಳು ಎಲ್ಲಿವೆ? ಎಂಬ ಹುಡುಕಾಟದ ಪ್ರಯತ್ನ ಈ ಲೇಖನ…
ಸ್ವಾತಂತ್ರö್ಯ ಹೋರಾಟ ಕಾಲ ತೀವ್ರಗೊಂಡಿದ್ದ ಕಾಲದಲ್ಲಿಯೇ ಸ್ಥಳೀಯ ಸಂಸ್ಥಾನಗಳಲ್ಲಿ ಚುನಾವಣೆಗಳಲ್ಲಿ ಗೆದ್ದು ಆಡಳಿತ ನಡೆಸುವ ಅವಕಾಶ ನಮ್ಮ ನಾಯಕರಿಗೆ ಇತ್ತು. ಮಂತ್ರಿ ಪದವಿಗಳನ್ನು ಅಲಂಕರಿಸಿ ನಡೆಸುತ್ತಿದ್ದ ಆಡಳಿತ ವೈಖರಿಯನ್ನು ಸ್ವಾತಂತ್ರö್ಯ ಹೋರಾಟವನ್ನು ಮುನ್ನಡೆಸುತ್ತಿದ್ದ ಮಹಾತ್ಮ ಗಾಂಧಿಯವರು ನೋಡಿ ತಮ್ಮದೇ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಹರಿಜನ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ೧೯೩೯ರ ಒಂದು ಸಂಚಿಕೆಯಲ್ಲಿ ಮಹಾತ್ಮರು ಬರೆದ ಒಂದು ಸಂಪಾದಕೀಯದಲ್ಲಿ ಈ ಮಾತುಗಳಿವೆ: `ನಮ್ಮ ನಾಯಕರು ಜನರ ವಿಶ್ವಾಸ ಗಳಿಸಿ ಆಡಳಿತ ನಡೆಸುವ ಅವಕಾಶ ಪಡೆದಿರುವುದು ಸರಿಯೇ. ಅವರ ನಿತ್ಯ ಜೀವನ ಸರಳವಾಗಿದ್ದು ಉಳಿದವರಿಗೆ ಮಾದರಿಯಾಗಬೇಕು. ಆಡಳಿತದಲ್ಲಿ ದುಂದುವೆಚ್ಚವನ್ನು ನಿಲ್ಲಿಸಬೇಕು.
ನಮ್ಮ ಮಂತ್ರಿಗಳಿಗೆ ಬ್ರಿಟಿಷ್ ಅಧಿಕಾರಿಗಳ ಜೀವನ ವಿಧಾನ ಮಾದರಿಯಲ್ಲ. ಹೊತ್ತುಹೊತ್ತಿನ ಕೂಳಿಗೆ ಪರಿತಪಿಸುವ ಕೋಟ್ಯಂತರ ದೇಶವಾಸಿಗಳು ತುಂಬಿರುವ ನಮ್ಮ ದೇಶದಲ್ಲಿ ನಾಯಕರು ಸರಳ ಜೀವನ ನಡೆಸಬೇಕು ಮತ್ತು ಅವರ ಜೀವನಮಟ್ಟ ಸುಧಾರಣೆಗೆ ಅವಶ್ಯಕವಾದ ವಿಧಾಯಕ ಕ್ರಮಗಳನ್ನು ಕೈಗೊಳ್ಳಬೇಕು..’
ಗಾಂಧೀಜಿ ಅವರಿಗೆ ಸಾರ್ವಜನಿಕ ಬದುಕು ಎಂಬುದು ತೆರೆದ ಪುಸ್ತಕ ಇದ್ದಂತೆ. ಸಾರ್ವಜನಿಕ ಸೇವೆಗೆ ಬರುವ ವ್ಯಕ್ತಿ ಸ್ವಂತದ್ದೆಲ್ಲವನ್ನೂ ದೇಶಕ್ಕಾಗಿ ತ್ಯಾಗ ಮಾಡಿ ದೇಶವಾಸಿಗಳ ಒಳಿತಿಗಾಗಿ ಅಹರ್ನಿಶಿ ಶ್ರಮಿಸುವ ಜನಸೇವಕನಾಗಬೇಕು ಎಂಬುದು ಅವರ ಆದರ್ಶವಾಗಿತ್ತು.
ಈ ಆದರ್ಶಗಳು ಸ್ವಾತಂತ್ರö್ಯಪೂರ್ವದಲ್ಲಿಯೇ ಆಚರಣೆಗೆ ಬರಲಿಲ್ಲ ಎಂಬುದು ಸ್ವತಃ ಗಾಂಧೀಜಿಯವರ ಅನುಭವಕ್ಕೆ ಬಂದಿತ್ತು. ಆದ್ದರಿಂದಲೇ ಅವರು ಸ್ವಾತಂತ್ರö್ಯ ಗಳಿಸಿದ ನಂತರ ಅದಕ್ಕಾಗಿ ಹೋರಾಟ ನಡೆಸಿದ ರಾಜಕೀಯ ಸಂಘಟನೆಗಳು ವಿಸರ್ಜನೆಯಾಗಬೇಕು. ಹೋರಾಟ ನಡೆಸಿದ ಕಾರಣಕ್ಕಾಗಿ ಅಧಿಕಾರ ನಡೆಸುವ ಅವಕಾಶ ಪಡೆಯುವುದಕ್ಕಿಂತ ಜನರ ಸಮಸ್ಯೆಗಳನ್ನು ಬಗೆಹರಿಸುವ ಸೇವಕರಂತೆ ಜನತೆ ಸಾರ್ವಜನಿಕ ಜೀವನಕ್ಕೆ ಬರಬೇಕು ಎಂಬುದನ್ನು ಅವರು ಪ್ರತಿಪಾದಿಸುತ್ತಿದ್ದರು.
ಸ್ವಾತಂತ್ರö್ಯ ಗಳಿಸಿದ ಈ ಏಳು ದಶಕಗಳಲ್ಲಿ ಗಾಂಧೀಜಿ ಅವರನ್ನು “ರಾಷ್ಟçಪಿತ” ಎಂದು ಗೌರವಿಸುತ್ತಾ, ಅವರ ಜನ್ಮದಿನ ಮತ್ತು ಪುಣ್ಯತಿಥಿಯನ್ನು ಆಚರಿಸುವ ಸಂದರ್ಭದಲ್ಲಿ ನೆನೆಸಿಕೊಳ್ಳುವ ಸಂಪ್ರದಾಯಕ್ಕೆ ದೇಶ ಬಂದು ಮುಟ್ಟಿದೆ. ದೇಶಕ್ಕಾಗಿ ಸ್ವಂತದ್ದೆಲ್ಲವನ್ನೂ ತ್ಯಾಗ ಮಾಡಿದ್ದ ಪೀಳಿಗೆ ಇತಿಹಾಸದ ಭಾಗವಾಗಿದೆ.
ಈಗ ಏನಿದ್ದರೂ ಐದು ವರ್ಷಕ್ಕೊಮ್ಮೆ ಜನಾದೇಶ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವ ವ್ಯವಸ್ಥೆ. ಜಾತ್ಯತೀತ ಸಮಾಜ ನಿರ್ಮಾಣ ಎಂಬುದು ಸಂವಿಧಾನದ ಆಶಯವಾಗಿದ್ದರೂ,
ಜಾತಿ ವ್ಯವಸ್ಥೆಯನ್ನು ಮತಾಧಿಕಾರ ಪಡೆಯುವ ಒಂದು ಸುರಕ್ಷಿತ ವ್ಯವಸ್ಥೆಯನ್ನಾಗಿ ಉಳಿಸಿಕೊಳ್ಳುವುದರಲ್ಲಿ ಜನನಾಯಕರ ಆಸಕ್ತಿ ಉಳಿದಿದೆ. ಇದನ್ನೆÃ ಎಲ್ಲ ರಾಜಕೀಯ ಪಕ್ಷಗಳೂ ವ್ಯವಸ್ಥಿತವಾಗಿ ರಕ್ಷಿಸಿಕೊಂಡು ಬಂದಿವೆ. ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ಏಕೈಕ ಮಾರ್ಗವಾಗಿರುವುದರಿಂದ ಗೆಲ್ಲುವುದಕ್ಕಾಗಿ ಅನುಸರಿಸುವ ಯಾವ ತಂತ್ರವೂ ಆಧುನಿಕ ರಾಜಕೀಯ ಸಿದ್ಧಾಂತದಲ್ಲಿ ಒಪ್ಪಿತ ಮಾರ್ಗವೇ ಆಗಿದೆ.
ಆದ್ದರಿಂದಲೇ ಚುನಾವಣೆಯಲ್ಲಿ ಅಪಾರ ಪ್ರಮಾಣದಲ್ಲಿ ಹಣ ಚೆಲ್ಲಬಲ್ಲ ಕೋಟ್ಯಧೀಶರನ್ನೆÃ ಎಲ್ಲಾ ರಾಜಕೀಯ ಪಕ್ಷಗಳೂ ನಿಲ್ಲಿಸಿವೆ. ಚುನಾವಣಾ ಆಯೋಗ ಪ್ರತಿ ಅಭ್ಯರ್ಥಿಯ ವೆಚ್ಚದ ಮಿತಿಯನ್ನು ನಿಗದಿ ಪಡಿಸಿದ್ದರೂ ಅದನ್ನು ನಿರ್ವಹಿಸಬಲ್ಲ ಪ್ರತಿಭೆ ರಾಜಕೀಯ ಪಕ್ಷಗಳಿಗೂ ಮುಖಂಡರಿಗೂ ಇರುವುದು ಈ ವರೆಗಿನ ಎಲ್ಲಾ ಚುನಾವಣೆಗಳಲ್ಲಿಯೂ ಸಾಬೀತಾಗಿದೆ. ಗ್ರಾಮಪಂಚಾಯತ್ ಹಂತದ ಚುನಾವಣೆಯಲ್ಲಿಯೇ ಒಬ್ಬ ಅಭ್ಯರ್ಥಿ ಲಕ್ಷಗಟ್ಟಲೆ ವೆಚ್ಚ ಮಾಡುವಂಥ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಿರುವ ನಾಡಿನ ರಾಜಕೀಯ ಪಕ್ಷಗಳಿಗೆ ಯಾವುದೇ ಕಾನೂನಾತ್ಮಕ ನಿರ್ಬಂಧಗಳ ಚೌಕಟ್ಟಿನಲ್ಲಿಯೇ ಮತದಾರರನ್ನು ಪ್ರಭಾವಿಸುವ ತಂತ್ರಗಾರಿಕೆ ಸಿದ್ಧಿಸಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯನ್ನು ಜನತಂತ್ರದ ಹಬ್ಬವೆಂದು ಬಣ್ಣಿಸುವ ಮಾಧ್ಯಮಗಳಿವೆ. ಇದನ್ನು ರಣರಂಗ, ಕುರುಕ್ಷೆÃತ್ರ ಎಂದು ಪ್ರಚೋದಿಸುವ ಅಬ್ಬರವೂ ಕಾಣುತ್ತಿದೆ. ಆದರೆ ಸ್ವಾತಂತ್ರö್ಯ ಗಳಿಸಿದ ಏಳು ದಶಕಗಳ ನಂತರವೂ ದೇಶದಲ್ಲಿ ಬಡತನ, ಅನಕ್ಷರತೆ, ಅಪೌಷ್ಟಿಕತೆ, ಮೂಢನಂಬಿಕೆಗಳನ್ನು ನಿವಾರಿಸಲು ಸಾಧ್ಯವಾಗಿಲ್ಲ.
ನಿರುದ್ಯೊÃಗದ ಬವಣೆ ತೀವ್ರವಾಗಿದೆ. ಜೀವನಾವಶ್ಯಕ ಮೂಲಸೌಕರ್ಯಗಳ ಕೊರತೆ ನಿವಾರಣೆ ಆಗಿಲ್ಲ. ಈ ಸಮಸ್ಯೆಗಳನ್ನು ತಳಹಂತದಲ್ಲಿಯೇ ತಿಳಿದು ಅಧಿಕಾರಶಾಹಿಯನ್ನು ಮಣಿಸಿ ಅಗತ್ಯವಿರುವ ಸುಧಾರಣೆಗಳನ್ನು ಕೈಗೊಳ್ಳುವುದಕ್ಕೆ ನಿಸ್ವಾರ್ಥದಿಂದ ಶ್ರಮಿಸಬಲ್ಲ ಜನಪ್ರತಿನಿಧಿಗಳು ಬೇಕಾಗಿದ್ದಾರೆ.
ಚುನಾವಣೆಯಲ್ಲಿ ಹಣ ಹೂಡಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವ ಕೋಟ್ಯಧೀಶರಿಗೆ ರಾಜಕೀಯ ಅಧಿಕಾರ. ಅವರ ವ್ಯಾಪಾರ ವಹಿವಾಟುಗಳನ್ನು ವಿಸ್ತರಿಸಿಕೊಳ್ಳುವ ಅಪರಿಮಿತ ಅವಕಾಶವನ್ನು ಸೃಷ್ಟಿಸುತ್ತದೆ ಎಂಬುದನ್ನು ಬಡಜನತೆ ಅರ್ಥ ಮಾಡಿಕೊಳ್ಳದಿದ್ದರೆ ನಾಡಿನ ಮೂಲ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ.
ಕೋಟ್ಯಧೀಶರಿಂದ ಬಡಜನರ ಸಮಸ್ಯೆಗಳು ಪರಿಹಾರ ಕಾಣುವುದಿಲ್ಲ ಎಂಬ ಸತ್ಯವನ್ನು ಜನತೆ ತಿಳಿಯಬೇಕು. ತಮ್ಮ ಸಮಸ್ಯೆಗಳನ್ನು ಸ್ಥಳೀಯ, ಪ್ರಾಮಾಣಿಕ, ಸೇವಾದೃಷ್ಟಿಯ ವ್ಯಕ್ತಿಗಳಿಂದ ಮಾತ್ರವೇ ನಿವಾರಿಸಿಕೊಳ್ಳಲು ಸಾಧ್ಯ ಎಂಬುದನ್ನು ಅರಿತು ಬೆಂಬಲಿಸಿದರೆ ಜನತಂತ್ರ ವ್ಯವಸ್ಥೆ ಅರ್ಥಪೂರ್ಣವಾಗಲು ಸಾಧ್ಯ.

Source – Sakhigeetha.com

LEAVE A REPLY

Please enter your comment!
Please enter your name here