ಕನ್ನಡ ಕಥಾ ಲೋಕದ ಆಸ್ತಿ: ಮಾಸ್ತಿ

0
883

ಅನಾದಿ ಕಾಲದಿಂದಲೂ ಕಥೆ ಹೇಳುವ ಪರಂಪರೆ ಅಸ್ತಿತ್ವದಲ್ಲಿ ಇದ್ದೆ ಇದೆ! ಹಳೆಯ ಕಾಲದಲ್ಲಿ ಮನೆ ಮನೆಯಲ್ಲಿ ಅಜ್ಜಿಯರು ಮೊಮ್ಮಕ್ಕಳಿಗೆ ಕಥೆ ಹೇಳುತ್ತಾ ಮಕ್ಕಳನ್ನು ಮಲಗಿಸುವ ಸಂಪ್ರದಾಯವೂ ನಡೆದು ಬಂದಿದೆ. ಅಮ್ಮಂದಿರು ಸಾಮಾನ್ಯವಾಗಿ ಮಕ್ಕಳಿಗೆ ಅಕ್ಕರೆಯಿಂದ ಊಟ ತಿನ್ನಿಸುವ ಸಂದಂರ್ಭದಲ್ಲಿ ಪುಟ್ಟ ಪುಟ್ಟ ಕಥೆಗಳನ್ನು ಹೇಳುತ್ತಲೇ ಮಕ್ಕಳ ಮನಸ್ಸಿನ ಕುತೂಹಲ ತಣಿಸುತ್ತಲೇ… ಅವರಿಗೆ ಉಣಿಸುವ ಅಕರ್ಷಕ ರೀತಿಯೂ ಅನೂಚಾನವಾಗಿ ಹರಿದು ಬಂದಿದೆ.
ಸಾಮಾನ್ಯವಾಗಿ ಮನುಷ್ಯನಿಗೆ ಕಥೆ ಎಂದರೆ ಅದು ಸೋಜಿಗದ ವಿಷಯ, ವಿಸ್ಮಯ ಅದರ ಹೃದಯ! ಎಲ್ಲಾರಲ್ಲೂ ಜನ್ಮಜಾತವಾದದ್ದು. ಮುಂದೇನು? ಮುಂದೇನು? ಎಂಬ ಕೌತುಕ. ಕೇಳುಗರ ಆ ಕುತೂಹಲವೇ ಕಥೆಗಾರನಿಗೆ ಮೂಲ ಭಾವದ ಬಂಡವಾಳ. ಅದೇ ಬದುಕಿನ ಕೌಶಲ!
ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ಕಥೆಗಳದ್ದೆÃ ಮಹತ್ತರ ಪಾತ್ರ. ಕಥೆಯಲ್ಲಿ ಸಣ್ಣ ಹರಹಿದ್ದರೆ, ಕಾದಂಬರಿ ಎಂಬುದು ನೀಳ್ಗಥೆಯೇ!
ಇಂದು ಎಲ್ಲಿಂದ ಎಲ್ಲಿಗೇ ಹೋಗಲಿ ದಿನಪತ್ರಿಕೆ, ವಾರ ಪತ್ರಿಕೆ, ಮಾಸಪತ್ರಿಕೆಗಳಲ್ಲಿ ಕಥೆಗಳು ಯಥೇಚ್ಚ ಬೆಳಕು ಕಾಣುತ್ತಿರುತ್ತವೆ. ವಿವಿಧ ವಾಹಿನಿಗಳಲ್ಲೂ ಧಾರವಾಹಿಯಾಗಿ ಪ್ರವಹಿಸುತ್ತಿರುವ ಕಥೆಗಳೆಲ್ಲಾ ಮೂಲಭೂತವಾಗಿ ಆಂತರ್ಯದಲ್ಲಿ ಸಣ್ಣ ಕಥೆಗಳೇ ಆಗಿರುತ್ತವೇ. ಇಂದು ಸಣ್ಣ ಕಥೆಗಳ ಸೃಷ್ಟಿ ಅಗಾಧ! ಹೊಸ ಬರಹಗಾರರ ಕಥೆಗಳು ಅನುಪಮ. ಮಹಿಳೆಯರಂತೂ ಅನನ್ಯ ಕಥೆಗಳನ್ನು ಕನ್ನಡ ಜನಕ್ಕೆ ನೀಡುತ್ತಿದ್ದಾರೆ. ಜೀವನ ಪ್ರಿÃತಿಯ ಉಜ್ವಲ ಆಶಾಕಿರಣಗಳೇ ಕಥೆಗಳ ಸಿಹಿ ಹೂರಣ.
ಸಣ್ಣ ಕಥೆ ಕೂಡ ಭಾವಗೀತೆಯಂತೆ ಕೌಶಲಪೂರ್ಣ ಸೃಷ್ಟಿಗೆ ಇಂಬಾಗಿರುತ್ತದೆ. ಆ ಎಲ್ಲದರ ಆಶಯವಂತು ಒಂದೇ ಆಗಿರುತ್ತದೆ.

ಇಂದಿನ ಕಥೆಗಾರರಲ್ಲೂ ಅಭಿವ್ಯಕ್ತಿಯಲ್ಲಿ ಹೊಸತನ ಕಂಡರೂ ಕಥೆಗಾರರಲ್ಲೂ ಅಭಿವ್ಯಕ್ತಿಯಲ್ಲಿ ಹೊಸತನ ಕಂಡರೂ ಕಥೆಗಾರಿಕೆಯ ದೃಷ್ಟಿಯಿಂದ ನೋಡುವುದಾದರೆ ಅದೇ ಪುರಾತನ ಕಟ್ಟುವಿಕೆಯ ಸಂಸ್ಕಾರ. ಕಲ್ಪನೆಯಿಂದ ವಿಸ್ತಾರವಾಗಿ ಕಥಾ ಹಂದರ ಹಬ್ಬಿಸುವ ಕಲೆಗಾರಿಕೆಯ ಸೃಜನಶೀಲತೆಯೇ ಆಧಾರ!
“ಸಣ್ಣ ಕಥೆಗಳ ಆಸ್ತಿ ಮಾಸ್ತಿ” ಎಂದು ಜನಜನಿತ ಆಗುವಷ್ಟು ಸಮೃದ್ಧವಾಗಿ ಕಥೆಗಳನ್ನು ಐದು ದಶಕಗಳ ಕಾಲ ಬರೆದವರು ನಮ್ಮೆಲ್ಲರಿಗೂ ಹಿರಿಯರಾದ ಕಥೆಗಾರ ಮಾಸ್ತಿವೆಂಕಟೇಶ ಅಂiÀÄ್ಯಂಗಾರ್. ಅವರ ಬರಹಗಳಲ್ಲೂ ತಂತ್ರಗಳಿವೆ, ವ್ಯಾಪ್ತಿಯೂ ಇದೆ, ಜೀವನಕ್ಕೆ ಹತ್ತಿರವಾದ ಕಥೆಗಳು ಸಮ ಸಮಾನಾಂತರವಾಗಿ ಕಲ್ಪಕಥೆಗಳೂ ಇವೆ,
ಸಣ್ಣ ಕಥೆಗಳಲ್ಲೂ ಪ್ರಧಾನವಾಗಿ ಬದುಕಿನ ಕಥೆ ಬೀಜರೂಪದಲ್ಲಿ ಇರುತ್ತದೆ, ಆನಂತರದಲ್ಲಿ ಘಟನೆಗಳ ಸರಮಾಲೆ.. ಅವುಗಳಿಗೆ ಅಂಟಿಕೊಂಡ ಅನುಭವದ ವ್ಯಾಖ್ಯಾನಗಳು, ಬಣ್ಣನೆಗಳು ಕೂಡಿಬರುತ್ತವೆ.
ಮಾಸ್ತಿ ಅವರ “ಕಾವ್ಯನಾಮ “-ಶ್ರಿÃನಿವಾಸ; ಮೂಲ ಹೆಸರು ಮಾಸ್ತಿ ವೆಂಕಟೇಶ್ ಅಂiÀÄ್ಯಂಗಾರ್, ಶ್ರಿÃನಿವಾಸರು ತಮ್ಮ ಪ್ರಮುಖ ಅಭಿವ್ಯಕ್ತಿ ಮಾಧ್ಯಮಕ್ಕೆ ಸಣ್ಣ ಕಥೆಯಹೆಣೆಯನ್ನೆÃ ಧಾತುವಾಗಿ ಪಡೆದು ಕೊಂಡದ್ದು ಬಹಳ ಮುಖ್ಯ ವಿಷಯ, ಮಾಸ್ತಿಯವರ ಬಗೆಗೆ ಮೆಚ್ಚುಗೆಯ ಮಾತು ಹೇಳಬೇಕೆಂದರೆ ಇಡೀ ಒಂದು ಜೀವ ಮಾನವನ್ನೆÃ ಕಥೆಗಳನ್ನು ಬರೆಯಲು ಅವರು ತೊಡಗಿಸಿಕೊಂಡಿದ್ದ ಅವರ ಯಶೋಗಾಥೆಯಾಗಿದೆ. ಸಣ್ಣ ಕಥೆಗಳ ಕ್ಷೆÃತ್ರದಲ್ಲಿ ಬಹಳ ದೊಡ್ಡ ಹೆಸರು ಮಾಡಿದರು ನಮ್ಮ ನಲ್ಮೆಯ ಮಾಸ್ತಿ ವೆಂಕಟೇಶ್ ಅಂiÀÄ್ಯಂಗಾರ್‌ರರು. ಜ್ಞಾನಪೀಠ ಪ್ರಶಸ್ತಿ ವಿಜೇತರು, ಅಭಿಜಾತ ಬರಹಗಾರರು.
ಮೊದಮೊದಲಿಗೆ ಅವರು ರಂಗಪ್ಪನ ಕಥೆಗಳನ್ನು ಬರೆದ್ದಿದ್ದಾರೆ, ನಮ್ಮ ದೈನಂದಿನ ನಡೆಯ ತಳಭಾಗದ ನೆಲದಲ್ಲಿ ಇರುವ ಅಮೂಲ್ಯ ತವನಿಧಿಯ ಹಾಗೆ ಪಾತ್ರಗಳ ಆಂತರ್ಯದಲ್ಲಿ ಬಾಳಿನ ಘಟನೆಗಳೇ ಜೀವನದ ಉನ್ನತಿಗೆ ಕಾರಣವಾದ ಅಂಶಗಳಡಗಿರುವುದೇ ಸೋಜಿಗ.
“ ಕಾಮನ ಹಬ್ಬದ ಕಥೆ “ ಆಗಬಹುದು! “ವೆಂಕಟಶಾಮಿಯ ಪ್ರಣಯ” ಆಗಬಹುದು! ಇವು ಕೇವಲ ನಿದರ್ಶನಗಳು ಅಷ್ಟೆ. ಕಾಮನ ಹಬ್ಬದ ಕಥೆಯಲ್ಲಿ ಕಥಾ ನಾಯಕ -ಸಾವಿತ್ರಮ್ಮ… ಆಕೆಗೆ ಚಿಕ್ಕವಯಸ್ಸಿನಲ್ಲೆÃ ಕಂಕಣಭಾಗ್ಯ ಕೂಡಿ ಬಂದಿರುತ್ತದೆ. ಅವಳ ಪತಿರಾಯ ಶ್ರಿÃನಿವಾಸ ಅಂದರೆ ಕಥೆಯಲ್ಲಿನ ನಾಯಕಿ “ಶ್ರಿÃನಿ” ತೀರ್ಥಯಾತ್ರೆಗೆ ಹೋಗಿರುತ್ತಾನೆ. ಅವನು ದಾರಿಯಲ್ಲೆÃ ಸತ್ತನೆಂಬ ವದಂತಿ ಹೆಚ್ಚುತ್ತದೆ.
*ಸಾವಿತ್ರಮ್ಮ ಊರವರ ಕಣ್ಣಲ್ಲಿ ವಿಧವೆ ಆಗುತ್ತಾಳೆ, ಕಷ್ಟದಲ್ಲಿ ಕಾಲ ತಳ್ಳುತ್ತಾ ಇರುತ್ತಾಳೆ, ಕಾಮನ ಹಬ್ಬದ ದಿನ -ಸಾವಿತ್ರಮ್ಮ ಕಾಮನ ಸುಟ್ಟ ಜಾಗದಲ್ಲಿ ಬೂದಿಯನ್ನು ತಲೆಯ ಮೇಲೆ ಸುರಿದುಕೊಳ್ಳೊ ವಿಷಮ ಸಂಧರ್ಭಕ್ಕೆ ಸರಿಯಾಗಿ-ತೀರ್ಥಯಾತ್ರೆಯಲ್ಲಿ ಸತ್ತು ಹೋದನೆಂದು ಹೇಳಲಾದ “ಶ್ರಿÃನಿ” ಪ್ರತ್ಯಕ್ಷನಾಗಿ ಬಿಡುತ್ತಾನೆ. ಕಥೆಗಾರ ಮಾಸ್ತಿ ಯಾವ ಭಾವವೇಶಕ್ಕೂ ಒಳಗಾಗದೆ -ಸಂಯಮದಲ್ಲಿ ಕಥೆ ಮುನ್ನಡೆಸುತ್ತಾರೆ. ಕಥೆಗಾರರಿಗೆ ಸಾಂಪ್ರದಾಯಿಕ ಆಚರಣೆಗಳು ಮುಖ್ಯವಾಗುತ್ತವೆ.
ಇಂಥ ಎಷ್ಟೊÃ ಕಥೆಗಳನ್ನು ಮಾಸ್ತಿ ಬರೆದಿದ್ದಾರೆ. ವೆಂಕಟಶಾಮಿಯ ಪ್ರಣಯ, ನಮ್ಮ ಮೇಸ್ಟçರು, ಮಸುಮತಿ, ಬಾದಷಹನ ದಂಡನೆ, ಪಂಡಿತನ ಮರಣ ಶಾಸನ, ನಿಜಗಲ್ಲಿನ ರಾಣಿ, ಪೆನಗೊಂಡೆ ಕೃಷ್ಣಮೂರ್ತಿ, ಪ್ರಿಯದರ್ಶಿನಿ ಅಶೋಕ, ಸಾರಿಪುತ್ರನ ಕೊನೆಯ ದಿನಗಳು, ಆಚಾರ್ಯರ ಪತ್ನಿ, ಹೇಮಕೂಟದಿಂದ ಬಂದ ಮೇಲೆ -ಹೀಗೆ ಅಸಂS್ಯಕಥೆಗಳನ್ನು ಬರೆದು ಕನ್ನಡ ಸಣ್ಣ ಕಥಾ ಪ್ರಪಂಚದ ವಿಸ್ತರಣೆಗೆ ಕಾರಣರಾಗಿದ್ದಾರೆ.
ಮಾಸ್ತಿ ಅವರ ರೀತಿ: ವಾಸ್ತವದ ಚಿತ್ರಣ. ನೈಜ ಛಾಯಾಗ್ರಹಣದ ಹಾಗೆ: ಅಪ್ಪಟ. ಈ ನೆಲದ ಮನುಜರ ಕಥೆಗಳು. ರಷ್ಯಾ ದೇಶದ “ಟಾಲ್ ಸ್ಟಾರ್ಯ” ಹಾಗೆ, ಎಲ್ಲೂ ಯಾವ ಕಥೆಯಲ್ಲೂ ನಿರೂಪಣೆಯಲ್ಲಿ ಪೆಡುಸಿಲ್ಲ. ಸುಲಿದ ಬಾಳೆಯ ಹನ್ನಿನ ಹಾಗೆ ಸರಳ, ನೇರ, ಸಹಜ ಸ್ಪಂದನ, ಸತ್ಯ ಕಥನ. ಆದ್ದರುಂದಲೇ ಮಾಸಿ ಅವುಗಳನ್ನು ಬರೆದು ಐದು ದಶಕಗಳೇ ಕಳೆದಿದ್ದರೂ ಇಂದಿಗೂ ಜೀವಂತ. ಈಗಲೂ ಈ ಹೋತ್ತಿನ ಓದುಗರಿಗೂ ಆಕರ್ಷಕ ಅನ್ನಿಸಿವೆ, ಅದೇ “ಶ್ರಿÃನಿವಾಸ” ಕಾವ್ಯ ನಾಮದ ಮಾಸ್ತಿ ವೆಂಕಟೇಶ ಅಂiÀÄ್ಯಂಗಾರ್ ಅವರ ಸಾಹಿತ್ಯ ಸತ್ವ.
– ದೊಡ್ಡರಂಗೇಗೌಡ

Source – Sakhigeetha.com

LEAVE A REPLY

Please enter your comment!
Please enter your name here