ನಾವು ತಿನ್ನುವ ಆಹಾರ ರುಚಿಕರವಾಗಿರುತ್ತದೆ. ಆದರೆ ಅದೇ ಆಹಾರ ವಿಷವಾಗಿ ಕಾಡಬಹುದು. ಅದು ವಿಷ ಎನ್ನುವುದು ಕೂಡ ಗೊತ್ತೇ ಆಗದೆ ಸೇವಿಸುತ್ತೇವೆ. ಆಹಾರ ಸಂಬಂಧಿ ಕಾಯಿಲೆಯಾಗಿ ಕಾಡುವ ತನಕವು ನಾವು ಸೇವಿಸುವ ಆಹಾರದ ಬಗ್ಗೆ ಯೋಚಿಸುವುದೇ ಇಲ್ಲ ಉತ್ತಮ ಆಹಾರ ಸೇವನೆ ಆರೋಗ್ಯ ಕಾಪಾಡಲು ಬೇಕಾಗಿರುವ ಮೊದಲ ಆದ್ಯತೆ, ನಮ್ಮ ತಪ್ಪಿಲ್ಲದಿದ್ದರೂ ಇನ್ಯಾರದೋ ದುರುದ್ದೇಶಕ್ಕೆ ನಾವು ಸೇವಿಸುವ ಆಹಾರದಲ್ಲಿ ಕಲಬೆರಕೆಯಿಂದಾಗಿ ಆರೋಗ್ಯದ ಬದಲು ಅನಾರೋಗ್ಯ ನಮ್ಮನ್ನು ಕಾಡುತ್ತದೆ.
ಆಹಾರದ ಕಲಬೆರಕೆಯು ನಮ್ಮ ಆರೋಗ್ಯದ ಮೇಲೆ ಉಂಟುಮಾಡುವ ದುಷ್ಟರಿಣಾಮ ಅನೇಕ ವೇಳೆ ನಿಧಾನವಾಗಿ ಆವರಿಸುತ್ತದೆ. ಈ ಕಲಬೆರಕೆ ಆಹಾರ ಸೇವನೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಮತ್ತು ತೂಕವನ್ನು ಹೆಚ್ಚಿಸುತ್ತದೆ. ಹಣದ ದುರಾಸೆಯಿಂದಾಗಿ ಕೃತಕವಾದ ಮತ್ತು ವಿಷಕಾರಕ ಬಣ್ಣವನ್ನು ಹಣ್ಣು, ತರಕಾರಿ, ¸ÉÆಪ್ಪುಗಳಿಗೆ ಮಿಶ್ರಮಾಡಿ ಮಾರಾಟ ಮಾಡುತ್ತಾರೆ.
ಅಷ್ಟೇ ಅ®èದೆ ಮರಳು, ಕಲ್ಲು ಇವುಗಳನ್ನು ಕಾಳು ಧಾನ್ಯಗಳಿಗೆ ಮಿಶ್ರ ಮಾಡಿ ಮಾರುತ್ತಾರೆ. 1k.g ರಾಗಿ ಕೊಂಡರೆ 1/4 k.g ಕಲ್ಲು ಇರುತ್ತದೆ. ವಿಧಿಯಿಲ್ಲದೆ ಕೊಂಡುಕೊಳ್ಳಲೇ ಬೇಕಾಗುತ್ತದೆ. ಪ್ಲಾಸ್ಟಿಕ್ ನಿಂದ ಹಲವಾರು ಆಹಾರ ಪದಾಥðಗಳನ್ನು ತಯಾರು ಮಾಡುತ್ತಾರೆ. ನಮ್ಮ ಹಿಂದಿನ ಜನರು ಅನ್ನವನ್ನು ಅಮೃತ ಎಂದು ತಿಳಿದು ಸೇವಿಸುತ್ತಿದ್ದರು . ಆದರೆ ಈಗ ಅನ್ನ ಮಾಡಿರುವುದು ಅಕ್ಕಿಯಿಂದಲೋ ಅಥð ಪ್ಲಾಸ್ಟಿಕ್¤ ಯಿಂದಲೋ ಎಂದು ಹುಡುಕಬೇಕಾಗಿದೆ.
ಮಕ್ಕಳಿಗೆ ಸಕ್ಕರೆ ಎಂದರೆ ಪಂಚಪ್ರಾಣ ಆದರೆ ಅದು ತುಂಬಾ ಕೆಮಿಕಲ್ ಯಿಂದ ಕೂಡಿರುತ್ತದೆ ಅದನ್ನು ತಿಂದರೆ ಕ್ಯಾನ್ಸರ್ ಬರುವ ಸಾಧ್ಯತೆಯಿರುತ್ತದೆ. ಜ್ಯೂಸ್ ಅಂಗಡಿಗಳಲ್ಲಿ ಕೊಳೆತ ಹಣ್ಣುಗಳಿಂದಲೂ ಜ್ಯೂಸ್ ತಯಾರಿಸಿ ಮಾರಬಹುದು ಅದು ನಮಗೆ ತಿಳಿಯುದಿಲ್ಲ ಆದ್ದರಿಂದ ಆದಷ್ಟೂ ಮನೆಯಲ್ಲಿಯೇ ಜ್ಯೂಸ್ ತಯಾರಿಸಿ ಕುಡಿಯುವುದು ಉತ್ತಮ. ¦eÁÓ, §gïUÀgï, PÉÃPïನಂತಹ ಬೇಕರಿ ತಿಂಡಿಗಳಿಂದ ಮೈ ತೂಕವನ್ನು ಹೆಚ್ಚಿಸಿಕೊಂಡು ಹಲವು ಜನರು ಪರದಾಡುತ್ತಿರುತ್ತಾರೆ. ನಮ್ಮಲ್ಲಿರುವ ಹಣವನ್ನು ಅವರಿಗೆ ಕೊಟ್ಟು ನಾವು ಕಲುಷಿತ ಆಹಾರವನ್ನು ಕೊಂಡುಕೊಳ್ಳುತ್ತೇವೆ ಅಂದರೆ ಹಣ ಕೊಟ್ಟು ರೋಗವನ್ನು ಕೊಂಡಂತೆ!
ಇನ್ನಾದರೂ ನಾವು ಹಣ ಕೊಟ್ಟು ಹೊರಗಡೆ ಕೆಮಿಕಲ್ ತಿನ್ನುವುದರ ಬದಲು ಮನೆಯಲ್ಲಿಯೇ ಶುದ್ಧವಾದ ಆರೋಗ್ಯವಾದ ಆಹಾರವನ್ನು ತಿನ್ನುವುದನ್ನು ರೂಢಿಮಾಡಿಕೊಳ್ಳಬೇಕು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮನೆಯಲ್ಲಿಯೇ ಪೌಷ್ಟಿಕ ಆಹಾರ, ಮೊಳಕೆ ಕಾಳುಗಳನ್ನು ಕೊಡಬೇಕು. ಹೊರಗಡೆ ಸಿಗುವ ಬಣ್ಣಬಣ್ಣದ ಆಹಾರವನ್ನು ತ್ಯಜಿಸಿ ಮನೆಯಲ್ಲಿಯೇ ಸಿಗುವ ಬಣ್ಣರಹಿತ ಆಹಾರವನ್ನು ಸೇವಿಸಬೇಕು. ಹಾUÁದರೆ ಮಾತ್ರ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ.’
Source – Sakhigeetha.com