ಓ ಮನಸ್ಸೇ ರಿಲ್ಯಾಕ್ಸ್….! – ಸುಚೇತ ಅರುಣ್

0
1073

“ಮನುಷ್ಯನ ನೋವು ನಲಿವುಗಳು ಅವನ ಮನಸ್ಸಿನ ಸ್ಥಿತಿ ಹೇಗಿದೆ ಅನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಆದರೆ ಅಂತಹ ಮನಸ್ಸನ್ನು ಸಂತೋಷ ಪಡಿಸಲು ಅದನ್ನು ಸದಾ ರಿಲ್ಯಾಕ್ಸ್ ಮೂಡಿನಲ್ಲಿರಿಸಲು ನಾವೇನು ಮಾಡುತ್ತಿದ್ದೆÃವೆ?.” ಅಂದ ಹಾಗೆ ಈ ಮನಸ್ಸನ್ನು ಇದುವರೆಗೂ ಯಾರೂ ಸಹ ನೋಡಿದವರಿಲ್ಲ ಇನ್ನು ಮುಂದೆ ಯಾರೂ ಸಹ ನೋಡಲೂ ಸಾಧ್ಯವಾಗುವುದಿಲ್ಲ ಬಿಡಿ. ಮನಸ್ಸಿಗೆ ಆಕಾರವೂ ಇಲ್ಲ ರೂಪವೂ ಇಲ್ಲ. ಆದರೆ ಈ ಮನಸ್ಸು ನಮ್ಮ ಇಡೀ ಜೀವನದ ಪಯಣದಲ್ಲಿ ನಮ್ಮ ಜೊತೆಯಲ್ಲಿಯೇ ಸಾಗುತ್ತದೆ.
ಸುಂದರವಾದ, ರ‍್ಥಪರ‍್ಣವಾದ, ಸಮಗ್ರತೆಯ ಬದುಕನ್ನು ಹಸನುಗೊಳಿಸಬಲ್ಲ ನಮ್ಮ ಮನಸ್ಸನ್ನ ಸ್ವಲ್ಪ ರಿಲ್ಯಾಕ್ಸ್ ಮಾಡಿಕೊಳ್ಳೋಣ. ಮನಸ್ಸು ಸಂತೋಷವಾಗಿದ್ದರೆ ಇಡೀ ಜೀವನ ಸುಂದರವಾಗಿ ಕಳೆದು ಹೋಗುತ್ತದೆ.
ಒಬ್ಬೊಬ್ಬರದು ಒಂದೊಂದು ತರಹದ ವ್ಯಕ್ತಿತ್ವ. ಸದಾ ನಗುವ , ಸದಾ ಯಾವುದಾದರೂ ಆಲೋಚನೆಯಲ್ಲಿ ಮಗ್ನವಾಗಿರುವ, ಪರರ ಬಗ್ಗೆಯೇ ಸದಾ ಯೋಚಿಸುವ, ಸದಾ ಕನಸಿನ ಲೋಕದಲ್ಲಿಯೇ ತೇಲಾಡುವ, ಒಂಟಿಯಾಗಿ ಇರಬೇಕೆನ್ನುವ, ಹೀಗೆ ಹತ್ತು ಹಲವಾರು ವ್ಯಕ್ತಿತ್ವಗಳು ಸದಾ ನಮ್ಮ ಸುತ್ತಲೇ ಇರುತ್ತವೆ. ನಮ್ಮೊಳಗೆ ಇದರಲ್ಲಿ ಹಲವು ಮುಖಗಳಿರುತ್ತವೆ ಇದಕ್ಕೆಲ್ಲಾ ಮನಸ್ಸೇ ಕಾರಣ ಅದರಲ್ಲಿ ನಮ್ಮದು ಯಾವ ತರಹದ ವ್ಯಕ್ತಿತ್ವ ಎಂದು ಆಲೋಚಿಸಿರುವುದಿಲ್ಲ.s
ನಮ್ಮ ಅಂತರಂಗದೊಳಗಿಂದ ಒಂದು ಅಪರಿಚಿತ ಧ್ವನಿಯೊಂದು ಕೂಗಿ ಹೇಳುತ್ತದೆ ಅದು ನಮ್ಮ ನರ‍್ಣಯಗಳ ತಪ್ಪು ಒಪ್ಪುಗಳ ವಿರ‍್ಶೆಗೆ ಒಂದು ದಾರಿದೀಪವಾಗಿರುತ್ತದೆ. ಮನುಷ್ಯ ಬುದ್ಧಿಜೀವಿ. ಅವನಿಗೆ ಪ್ರತಿಯೊಂದರ ಬಗ್ಗೆಯೂ ಆಲೋಚಿಸುವ ಶಕ್ತಿ ಇದೆ. ಆಲೋಚಿಸಿದ್ದನ್ನು ವಿವೇಚಿಸುವುದು ಮನಸ್ಸು; ಮನಸ್ಸಿನ ಹಿಡಿತ ನಮಗಿದ್ದರೆ ಇಡೀ ಪ್ರಪಂಚವನ್ನು ಬೇಕಿದ್ದರೂ ಗೆಲ್ಲಬಹುದು. ನಮ್ಮ ಮನಸ್ಸಿಗೆ ತುಂಬುವ ಸಕಾರಾತ್ಮಕ ಅಂಶಗಳೇ ನಮ್ಮೊಳಗೆ ಆತ್ಮ ವಿಶ್ವಾಸವಾಗಿ ನಮ್ಮನ್ನು ಮುನ್ನಡೆಸುವುದು. ಆದರೆ ಮನುಷ್ಯನ ಮನಸ್ಸು ರ‍್ಕಟದಂತೆ. ಮನಸ್ಸು ಧನಾತ್ಮಕ ಹಾಗೂ ಋಣಾತ್ಮಕ ಚಿಂತನೆಗಳಿಂದ ಆವೃತವಾಗಿರುತ್ತದೆ. ಧನಾತ್ಮಕ ಚಿಂತನೆ ಮನಸ್ಸನ್ನ ಗಟ್ಟಿಗೊಳಿಸಿದರೆ ಋಣಾತ್ಮಕ ಚಿಂತನೆ ಮನಸ್ಸನ್ನು ಘಾಸಿಗೊಳಿಸುತ್ತದೆ.
ನಮ್ಮ ಇಡೀಜೀವನದಲ್ಲಿ ಮನಸ್ಸಿನ ಪಾತ್ರ ಬಹುಮುಖ್ಯವಾದದ್ದು. ಆದರೆ ಆ ಮನಸ್ಸಿನಲ್ಲಿ ತುಂಬಿರುವ ಅಸೂಯೆ, ಕೋಪ, ಅಹಂಕಾರ, ಆತಂಕ, ಇವುಗಳಿಂದ ಹೇಗೆ ನಮ್ಮ ಮನಸ್ಸನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ನಾವು ಎಂದಿಗೂ ಆಲೋಚಿಸಿರುವುದಿಲ್ಲ. ನಮ್ಮಲ್ಲಿರುವ ಕೆಟ್ಟ ಆಲೋಚನೆಗಳು ನಮಗೇ ಅರಿವಿಲ್ಲದಂತೆ ನಮ್ಮ ಅಧೋಗತಿಗೆ ಇಳಿಸುತ್ತಿರುತ್ತದೆ.
ಒಮ್ಮೆ ನಮ್ಮ ಮನಸ್ಸನ್ನು ಶ್ರೇಷ್ಟ ಸಕಾರಾತ್ಮಕ ಸಂಗತಿಗಳಿಂದ ತುಂಬಿಬಿಟ್ಟರೆ, ಅಲ್ಲಿಗೆ ನಕಾರಾತ್ಮಕ ಸಂಗತಿಗಳಿಗೆ ಪ್ರವೇಶವಿರುವುದಿಲ್ಲ. ಅದಕ್ಕಾಗಿ ನಮ್ಮಲ್ಲಿ ಕೆಲವು ಬದಲಾವಣೆಗಳನ್ನ ಮಾಡಿಕೊಳ್ಳಬೇಕಾಗುತ್ತದೆ.
ಧ್ಯಾನದ ಮಹತ್ವ: ಪ್ರತಿದಿನ ಧ್ಯಾನ ಮಾಡುವುದರಿಂದ ನಮ್ಮ ಮನಸ್ಸಿನ ಧನಾತ್ಮಕ ಭಾವನೆ ವೃಧ್ದಿಸುತ್ತದೆ. ಮನಸ್ಸನ್ನ ಕೇಂದ್ರೀಕರಿಸಿಕೊಳ್ಳುವ ಶಕ್ತಿ ಹೆಚ್ಚುತ್ತದೆ. ದಿನನಿತ್ಯ ಜಂಜಾಟವನ್ನೆಲ್ಲಾ ಸ್ವಲ್ಪ ಹೊತ್ತು ತೊಡೆದುಹಾಕಿ ಮನಸ್ಸಿಗೊಂದು ಶಾಂತಿಯ, ನೆಮ್ಮದಿಯ, ಸಮಯವನ್ನು ನೀಡುವ ಪರಿ ಈ ಧ್ಯಾನ.
“ಒಮ್ಮೆ ಬುದ್ಧನನ್ನು ಒಬ್ಬ ಹುಡುಗ ಕೇಳಿದನಂತೆ, ಧ್ಯಾನದಿಂದ ನೀವು ಏನನ್ನು ಗಳಿಸಿದ್ದೀರಿ ಎಂದು? ಅದಕ್ಕೆ ಬುದ್ಧ “ನಾನು ಗಳಿಸಿರುವುದಕ್ಕಿಂತ ಕಳೆದು ಕೋಂಡಿರುವುದೇ ಹೆಚ್ಚು” ಎಂದು, ಅದಕ್ಕೆ ಆ ಹುಡುಗ ಏನನ್ನ ಕಳೆದುಕೊಂಡಿದ್ದೀರಿ ಎಂದು ಕೇಳಿದಾಗ, ಅಹಂಕಾರ, ದುರಾಸೆ, ಸಿಟ್ಟು, ಭಯವನ್ನು ಕಳೆದುಕೊಂಡಿದ್ದೇನೆ” ಎಂದರಂತೆ.
ಓದುವ ಹವ್ಯಾಸ: ಅನುಭವಗಳ ನೈಜತೆ, ನಾವೀನ್ಯ, ಶಬ್ದಗಳ ಸೌಂರ‍್ಯ, ರ‍್ಥೋಚಿತ ಪದಗಳ ಜೀವಕಳೆಯಿಂದ ಮೂಡುವ ಪದ್ಯ, ಗದ್ಯ, ಸಾಹಿತ್ಯಗಳನ್ನ ಓದುವ ಹವ್ಯಾಸ ಮೂಡಿಸಿಕೊಳ್ಳಬೇಕು. ಏಕೆಂದರೆ ಇದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಅದರಿಂದ ನಮ್ಮ ಜೀವನದ ಕೆಲವು ನರ‍್ಣಯಗಳನ್ನ ತೆಗೆದುಕೊಳ್ಳುವಾಗ ಸಹಕಾರಿಯಾಗಬಲ್ಲದು.
ಸಂಗೀತದ ಕೇಳಬೇಕು: ಸಂಗೀತಕ್ಕೆ ನಮ್ಮನ್ನ ಬೇರೆಯದೇ ಒಂದು ಭಾವನಾ ಲೋಕಕ್ಕೆ ಕರೆದೊಯ್ಯುವ ಶಕ್ತಿ ಇದೆ. ಮನಸ್ಸಿಗೆ ತುಂಬಾ ಬೇಸರವೆನಿಸಿದಾಗ ಸಂಗೀತ ಕೇಳುವುದರಿಂದ ಮನಸ್ಸು ಶಾಂತವಾಗುತ್ತದೆ. ಸಾಹಿತ್ಯವಿಲ್ಲದ ಬರೀ ಕೊಳಲು, ವೀಣೆ, ಈ ತರಹದ ಸಂಗೀತವನ್ನ ಕೇಳಬಹುದು. ಕೇಳುತ್ತಾ ಕೇಳುತ್ತಾ ಮನಸ್ಸುತಿಳಿಯಾದ ಅನುಭವ ನಮಗೆ ದೊರೆತಂತಾಗುತ್ತದೆ.

ವ್ಯಾಯಾಮ: ವ್ಯಾಯಾಮ ಬರೀ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಬೇಕು. ವ್ಯಾಯಾಮ ದೇಹ ಮತ್ತು ಮನಸ್ಸನ್ನು ಧೃಡಪಡಿಸುತ್ತದೆ. ದಿನದಲ್ಲಿ ಸ್ವಲ್ಪ ಸಮಯವನ್ನಾದರೂ ವ್ಯಾಯಾಮಕ್ಕೆ ಮೀಸಲಿಡೋಣ.
ಮಲಗುವ ಮುನ್ನ: ಇತ್ತೀಚಿನ ಮಾಧ್ಯಮಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳು, ಕ್ರೈಂ ರಿಪರ‍್ಟಗಳು, ದೆವ್ವದ ಕಥೆಗಳು, ನಮ್ಮ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುತ್ತವೆ. ರಾತ್ರಿ ಮಲಗುವ ಮುನ್ನ ಇಂತಹ ಕರ‍್ಯಕ್ರಮಗಳನ್ನ ನೋಡುವುದರಿಂದ ಮನಸ್ಸಿನಲ್ಲಿ ಏನೋ ಒಂಥರಹದ ತಳಮಳ, ಗೊಂದಲ, ಭಯ, ಮೂಡುತ್ತದೆ. ಅದರ ಸರಿ-ತಪ್ಪುಗಳ, ಸತ್ಯ – ಅಸತ್ಯತೆಗಳ ಬಗ್ಗೆ ಮನಸ್ಸು ಲೆಕ್ಕಾಚಾರ ಮಾಡತೊಡಗುತ್ತದೆ.
ಡೈರಿ ಬರೆಯುವುದು: ಒಬ್ಬರ ಜೊತೆ ನಾವು ಎಷ್ಟೇ ಆತ್ಮೀಯತೆಯ ಭಾವದಿಂದಿದ್ದರೂ ನಮ್ಮ ಮನದಾಳದ ಮಾತುಗಳನ್ನ ನಾವು ಅವರ ಬಳಿ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರು ಅವರ ಅಭಿಪ್ರಾಯಗಳನ್ನ ನಮ್ಮ ಮೇಲೆ ಹೇರುವ ಪ್ರಯತ್ನ ಮಾಡುತ್ತಾರೆ. ಆಗ ಮನಸ್ಸು ಕಲಕಿದಂತಾಗುತ್ತದೆ. ಮಲಗುವಮುನ್ನ ನಮ್ಮ ಎಲ್ಲಾ ನೋವಿನ, ನಗುವಿನ ಕ್ಷಣಗಳನ್ನು ಹಾಳೆಯ ಮೇಲೆ ಬರೆಯುವುದರಿಂದ ಮನಸ್ಸು ನಿರಾಳವಾಗುತ್ತದೆ.
ಜೊತೆಗೆ ನಮ್ಮ ಆಹಾರವೂ ಸಹ ನಮ್ಮ ಮನಸ್ಸಿನ ಒತ್ತಡವನ್ನು ಹೆಚ್ಚಿಸುತ್ತದೆ. ಆದಷ್ಟು ನಮ್ಮ ಆಹಾರ ನಮ್ಮ ದೇಹಕ್ಕೆ ಆರೋಗ್ಯಕರವಾಗಿರಬೇಕು. ಸಿಗರೇಟ್, ಬೀಡಾ, ಕುಡಿತದ ಚಟಗಳಿಂದ ಆದಷ್ಟೂ ದೂರವಿರಬೇಕು. ದುಷ್ಚಟಗಳಿಗೆ ಒಮ್ಮೆ ದಾಸರಾದರೆ ಸಾಕು ನಮ್ಮ ಮನಸ್ಸಿನ ಮೇಲೆ ನಮಗೇ ನಿಯಂತ್ರಣವಿರುವುದಿಲ್ಲ.
ನಾವು ನೋವಿನಲ್ಲಿದ್ದಾಗ, ಸಂಕಟದಲ್ಲಿದ್ದಾಗ, ಗೊಂದಲದಲ್ಲಿದ್ದಾಗ, ಸಾಂತ್ವನ ನೀಡುವುದು ನಮ್ಮ ಮನಸ್ಸು. ನಮ್ಮ ಇಡೀ ಜೀವನದ ಪಥದಲ್ಲಿ ನಮ್ಮ ಮನಸ್ಸು ಮರ‍್ಗರ‍್ಶಕನ ಸ್ಥಾನದಲ್ಲಿರುತ್ತದೆ.
“ಸಾಲು ಸಾಲು ಸಮಸ್ಯೆಗಳೊಳಗೆ
ಉರಿಯುವ ಜಗದೊಳಗೆ
ನಲಿವಿನ ಸುಂದರಕ್ಷಣಗಳ ಜೊತೆಗೆ
ನೋವಿನ ಕಹಿನೆನಪುಗಳ ಮೆರವಣಿಗೆ ಮಾಡುತ
ಹಲವು ಮುಖದ ಭಾವಗಳ ಜೊತೆಗೆ ಸೆಣಸಾಡುವ ಮನಸ್ಸಿಗೆ ಸ್ವಲ್ಪ ಸಮಯವನ್ನ ಕೊಡೋಣ.”
ಮನಸ್ಸು ಸಂತೊಷದಿಂದಿದ್ದರೆ ಮಾತ್ರ ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಕಾಣುತ್ತೇವೆ. ನಮ್ಮಲ್ಲಿ ಆತ್ಮ ವಿಶ್ವಾಸವನ್ನ ಹೆಚ್ಚಿಸುವುದು ನಮ್ಮ ಮನಸ್ಸೇ ಅಲ್ಲವೇ?…..

Source – Sakhigeetha.com

LEAVE A REPLY

Please enter your comment!
Please enter your name here