ಉನ್ನತ ಶಿಕ್ಷಣ ಪದ್ಧತಿ ಮತ್ತು ಸಾರ್ವಜನಿಕ ಸಮುದಾಯ….! – ಡಿ.ಎಸ್.ಶ್ರಿÃನಿವಾಸ್

0
1011

ಚಲನಶೀಲವೂ, ಪ್ರಗತಿ ಪರವೂ ಆದ ಶಿಕ್ಷಣ ಲೋಕ ಹೆಚ್ಚು ಹೆಚ್ಚು ವ್ಯಾಪಕವಾಗಿ ತನ್ನ ಅನ್ಯ ಜ್ಞಾನ ಶಿಸ್ತುಗಳ ಪರಿಧಿಗಳ ಎಲ್ಲೆಯನ್ನು ದಾಟಬೇಕಿದೆ. ಆದರೆ ಹಾಗೆ ಸೀಮೋಲ್ಲಂಘನ ಮಾಡುವಾಗ ನಮಗೆ ಹಲವು ಗುರುತರವಾದ ವ್ಯತ್ಯಾಸಗಳು, ವೈವಿದ್ಯಗಳು ತಿಳಿಯಬೇಕಾಗಿದೆ. ಪಠ್ಯಕ್ರಮ ಆಧಾರಿತ ಶಿಕ್ಷಣದಿಂದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸುವ ಕಾರ್ಯಕ್ರಮವಷ್ಟೆÃ ಈಗ ಎಲ್ಲೆಲ್ಲೂ ಕಂಡುಬರುತ್ತಿದೆ. ಫಲಿತಾಂಶವನ್ನು ಪಡೆಯುವ ವಿದ್ಯಾರ್ಥಿ ಪರೀಕ್ಷೆಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡಿರುತ್ತಾರೆ. ಹಾಗೆ ಉಪನ್ಯಾಸಕರೂ ಸಹ ಮಿತಿ ಮೀರಿದ ಒತ್ತಡ ಮತ್ತು ಆತಂಕಗಳಲ್ಲಿ ಪಠ್ಯಕ್ರಮವನ್ನು ಮುಗಿಸಿಬಿಡುವ ನಿಗಧಿತ ಕಾಲದಲ್ಲಿ ಅದನ್ನು ಮುಗಿಸಿ ಸಮಾಧಾನದ ನಿಟ್ಟುಸಿರು ಬಿಡುವ ಲೋಕದಲ್ಲಿ ನಾವಿದ್ದೆÃವೆ. ವಾಸ್ತವದಲ್ಲಿ ವಿದ್ಯಾವಂತ – ಬುದ್ಧಿವಂತ ಇವುಗಳ ವ್ಯಾಖ್ಯೆ ಪÅನರ್ ಮನನವಾಗಬೇಕಾಗಿದೆ. ಏಕೆಂದರೆ ಎಷ್ಟೊÃ ಜನ ಅಕ್ಷರ ಕಲಿತವರು ಅನೇಕ ಪ್ರಜ್ಞಾವಂತ ಸಂಗತಿಗಳಿಂದ ವಿಮುಖರಾಗಿ ದೈನಂದಿನ ವಿಷಯಗಳನ್ನು ಗ್ರಹಿಸಿಕೊಳ್ಳಲಾಗದೆ ಕೇವಲ ಅಕ್ಷರ ಪ್ರಪಂಚದಲ್ಲಿ ಮಾತ್ರ ಉಳಿದಿರುತ್ತಾರೆ. ವಿದ್ಯಾರ್ಜನೆ, ಅಧ್ಯಯನ, ಅಧ್ಯಾಪನ ಇವಿಷ್ಟೆ ವಿದ್ಯಾವಂತರ ಮಿತಿಯಾಗಬಾರದು. ಎಷ್ಟೊÃ ಸಂದರ್ಭಗಳಲ್ಲಿ ಅಕ್ಷರ ಕಲಿಯದ ನಿರಕ್ಷರ ಕುಕ್ಷಿ, ಲೋಕದ ಎಲ್ಲಾ ಸತ್ಯಗಳನ್ನು ತನ್ನೊಳಗೆ ಅರಗಿಸಿಕೊಳ್ಳುವ ಮಹತ್ವದ ಸಾಮರ್ಥ್ಯ ಹೊಂದಿರುತ್ತಾರೆ. ಆತ ಮೇಲೆ ಹೇಳಿದ ವಿದ್ಯಾವಂತ ವಲಯಕ್ಕಿಂತ ನೂರು ಪಟ್ಟು ಕ್ರಿಯಾಶೀಲನಾಗಿ, ಸೃಜನಶೀಲನಾಗಿ ಬದುಕುತ್ತಿರುತ್ತಾನೆ. ಆದರೆ ನಾವು ಕೇವಲ ವಿದ್ಯಾರ್ಥಿ – ಉಪನ್ಯಾಸಕ, ಶೈಕ್ಷಣಿಕ ವಲಯ ಇಷ್ಟನ್ನೆÃ ಮುಖ್ಯವೆಂದು ಭಾವಿಸಿ ಇನ್ನುಳಿದ ಈ ಲೋಕಜ್ಞಾನದ ಸಾಮಾನ್ಯ ತಿಳಿವಿನ ಅಸಾಮಾನ್ಯ ಬುದ್ಧಿವಂತ ವರ್ಗವನ್ನು ಗೌಣವಾಗಿಸಿಬಿಡುತ್ತಿದ್ದೆÃವೆ. ಇವರ ಸಾಧನೆಗಳು ಬುದ್ಧಿಮತ್ತೆ, ಎಲ್ಲಿಯೂ ಕೂಡ ದಾಖಲಾಗದೆ ಕೇವಲ ಶೈಕ್ಷಣಿಕ ವಲಯದ ಅಕಾಡೆಮಿಕ್ ಸಂಸ್ಕÈತಿಯ ವರು ಮಾತ್ರ ಸುಶಿಕ್ಷಿತ ವಲಯದಲ್ಲಿ ಸಭೆ, ಸಮಾರಂಭಗಳಲ್ಲಿ, ಹಾರ ತುರಾಯಿಗಳಲ್ಲಿ ರಾರಾಜಿಸುತ್ತಾರೆ.

ಉಪನ್ಯಾಸಕರ ಮತ್ತು ವಿದ್ಯಾರ್ಥಿಗಳ ಜಂಟಿ ದ್ಯೆÃಯೋದ್ದೆÃಶಗಳು ಇವತ್ತಿನ ಸಂದರ್ಭದಲ್ಲಿ ಬದಲಾಗಲೇಬೇಕಾಗಿದೆ. ಹೊಸ ಹೊಸ ಗ್ರಹಿಕೆಗಳಲ್ಲಿ ಚಿಮ್ಮುವ ಉತ್ಸಾಹದಲ್ಲಿ ನಾಲ್ಕು ಗೋಡೆಯ ಮಧ್ಯೆ ನಾವು ಕೊಡುವ ಶಿಕ್ಷಣ ಸಾಕೆ ಎಂಬ ಪ್ರಶ್ನೆ ಉಪನ್ಯಾಸಕರನ್ನು ಕಾಡುವಂತಾಗಲೇಬೇಕು. ಹಾಗೆಯೇ ನಾವು ಪಡೆಯುತ್ತಿರುವ ಶಿಕ್ಷಣ ನಮ್ಮ ಬೌದ್ಧಿಕ ಅರಿವಿಗೆ, ಅದರ ವಿಸ್ತಾರಕ್ಕೆ ಸಾಕಾಗಿದೆಯೇ, ಕಪ್ಪೆ ಚಿಪ್ಪಿನಿಂದಾಚೆ ಬರುವ ಪ್ರಯತ್ನ ಮಾಡಲು ನಮ್ಮಲ್ಲಿ ಸಾಧ್ಯವಿಲ್ಲವೇ ಎಂಬ ಪ್ರಶ್ನಾರ್ಥಕ ಚಿಹ್ನೆಗಳು ವಿದ್ಯಾರ್ಥಿಗಳನ್ನೂ ಕಾಡಬೇಕಾಗಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪರಿಸ್ಥಿತಿಯಲ್ಲಿ ಇಬ್ಬರೂ ಇದ್ದಾರೆ. ಜೊತೆಗೆ ಇಂದು ಬೀಜ ಬಿತ್ತಿ ನಾಳೆಯೇ ಅದು ಫಲ ಬಿಡಬೇಕೆಂದು ಹಾತೊರೆಯುವ ವರ್ಗವಿರುವಾಗ ಸುಧಾರಣೆ ಮತ್ತು ಅದರ ನಿಧಾನ ಪ್ರಗತಿ ಮರೀಚಿಕೆಯಂತೆ ಕಾಣುತ್ತದೆ.
ಕಂಡಷ್ಟೂ ಸತ್ಯವಿರಬಹುದು ಆದರೆ ಕಂಡಿದ್ದೆಲ್ಲಾ ಸತ್ಯವಲ್ಲಾ ಎಂಬ ಮಹತ್ವದ ಮಾತುಗಳು ನಮಗೆ ಅರಿವಾಗಬೇಕು. ಮಾತೃ ಭಾಷಾ ಶಿಕ್ಷಣ ಮತ್ತು ಅದರ ಕಡ್ಡಾಯ ಇದಕ್ಕೆ ಮತ್ತು ಇದರ ಹಕ್ಕಿಗೆ ಹೋರಾಟ ಮಾಡಿ ಅದನ್ನು ಪ್ರಯಾಸದಿಂದ ಪೆಡಯಬೇಕಾಗಿರುವುದೇ ಬಹಳ ದೊಡ್ಡ ದುರಂತ, ಸಾಮಾಜಿಕವಾಗಿ ಮತ್ತು ಮೂಲಭೂತವಾಗಿ ಮಾತೃ ಭಾಷೆ ಮತ್ತು ಅದರ ಸುತ್ತಮುತ್ತಲಿನ ಸಂವೇದನೆಗಳನ್ನು ಇನ್ಯಾವುದೋ ಭಾಷೆಯಲ್ಲಿ ಹೇಳಿದರೆ ಆ ಬಾವನೆಗಳು ಸ್ವಂತವಾಗಿ ಮೂಡುವುದಿಲ್ಲ. ಬದಲಾಗಿ ಯಾರಿಂದಲೋ, ಎಲ್ಲಿಂದಲೋ ಎರವಲು ಪಡೆದುಕೊಂಡ ಬಾಡಿಗೆ ಭಾವನೆಗಳಾಗಿರುತ್ತವೆ. ಶಿಕ್ಷಣ ಭಾವನೆಗಳ ವ್ಯಾಪಾರವಲ್ಲ. ಹಾಗೆಂದು ಭಾಷಾ ವ್ಯಾಪಾರವೂ ಅಲ್ಲ. ಶಿಕ್ಷಣ ಮತ್ತು ನಾವು ಆರಿಸಿಕೊಳ್ಳುವ ಶಿಕ್ಷಣ ಮಾಧ್ಯಮ ಪ್ರತಿಷ್ಟೆಯ ಸಂಕೇತವಾಗಿ ನೆಂಟರಿಷ್ಟರ ಮುಂದೆ ಕಾಲರ್ ಏರಿಸಿ ಠೀವಿ ತೋರಿಸುವ ದರ್ಪದ, ಅಸ್ತಿತ್ವದ ಸಂಕೇತವಾಗಿ ಭಾವಿಸಿರುವುದೇ ಬಹಳ ದೊಡ್ಡ ಅಪಸವ್ಯವಾಗಿದೆ. ವ್ಯಾಪಾರೀಕರಣದ ಸರಕಾಗಿ ಶಿಕ್ಷಣ ವ್ಯವಸ್ಥೆ ರೂಪÅಗೊಂಡು ಮಂತ್ರಕ್ಕಿಂತ ಉಗುಳೇ ಜಾಸ್ತಿ ಎನ್ನುವಂತೆ ಎಷ್ಟೊÃ ಸಲ ಹೇಳಬೇಕಾದ ಸಂಗತಿಗಳಿಗಿಂತ ಹೇಳದೇ ಬಿಟ್ಟ ಸಂಗತಿಗಳೇ ಸಾಕಷ್ಟಿರುತ್ತವೆ.
ಬಂಧನವು ಬಂದದ್ದು ಎಲ್ಲಿಂದಲೋ, ಬಿಡುಗಡೆಯು ಬಂದಿದ್ದು ಅಲ್ಲಿಂದಲೇ ಎನ್ನುವ ಹಾಗೆ ಸಮಸ್ಯೆಗಳು ಶಿಕ್ಷಣ ವ್ಯವಸ್ಥೆಯಲ್ಲಿ ಬೃಹದಾಕಾರವಾಗಿದ್ದರೂ ಅದರ ಹೊರಗೆ ಅಥವಾ ಆಚೆ ನಿಂತು ಬೊಬ್ಬೆ ಹೊಡೆಯುತ್ತಾ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಗೂಬೆ ಕೂರಿಸುವುದು ತರವಲ್ಲ. ಅದರ ಬದಲಾಗಿ ಸಾಂಘಿಕವಾಗಿ ಕೀಳರಿಮೆ ಇಲ್ಲದೆ ಎಲ್ಲಕ್ಕಿಂತ ಮುಖ್ಯವಾಗಿ ಗಣ್ಯಾತಿ ಗಣ್ಯರ ಲಾಭಿ, ಶಿಫಾರಸ್ಸು ಇವುಗಳ ಲೇಪವಿಲ್ಲದೆ ಪಠ್ಯ ಪÅಸ್ತಕಗಳ ರಚನೆಯಲ್ಲಿ ಇನ್ನೊಬ್ಬರ ಹಸ್ತಕ್ಷೆÃಪ, ಪ್ರಭಾವಗಳಿಲ್ಲದೆ ಹೋದಲ್ಲಿ ಅದು ಸವಾಂಗ ಸುಂದರವಾಗಿರುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಗತಿ ಸ್ಥಿತಿಯಲ್ಲಿ ಎಷ್ಟು ಪಠ್ಯಪÅಸ್ತಕಗಳ ಗದ್ಯ ಪದ್ಯಗಳಲ್ಲಿ ಅರ್ಹತೆಗಿಂತ ಶಿಫಾರಸ್ಸು , ಪ್ರಭಾವ ಕೆಲಸ ಮಾಡಿದೆ ಎನ್ನುವುದು ವಿದ್ಯಾರ್ಥಿಗಳಿಗೂ, ಉಪನ್ಯಾಸಕರಿಗೂ ಅದರ ಗುಣಮಟ್ಟದ ಹಿನ್ನೆಲೆಯಲ್ಲಿಯೇ ಕಣ್ಣು ಮುಂದೆ ರಾಚಿಸಿ ರಾರಾಜಿಸುತ್ತಿರುತ್ತದೆ. ಪಠ್ಯಪÅಸ್ತಕಗಳ ಮೇಲೂ ಅಧಿಕಾರದ ಮುದ್ರೆ ಮತ್ತು ಸ್ವಪ್ರತಿಷ್ಟೆಯ ಅಹಂ ತೋರಿಸುತ್ತಾ ಮೆರೆದಾಡುವ ಗಣ್ಯರು ಈ ಮೂಲಕ ಶಿಕ್ಷಣ ವ್ಯವಸ್ಥೆಗೆ ಮತ್ತು ಅದರ ಸುಧಾರಣೆಗೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ. ಎಲ್ಲಿಯವರೆಗೆ ಮುಕ್ತವಾದ, ಯುಕ್ತವಾದ ಮತ್ತು ಪಕ್ಷಪಾತ ರಹಿತ ಪಠ್ಯಪÅಸ್ತಕಗಳು ಸಿದ್ಧವಾಗುತ್ತದೋ ಅಲ್ಲಿಯವರೆಗೆ ಬೆಳವಣಿಗೆಯ ತಟಸ್ಥ ಸ್ಥಿತಿ ಸರ್ವೆÃ ಸಾಮಾನ್ಯ. ಹಾಗಾಗಿ ಪಠ್ಯ, ವಿದ್ಯಾರ್ಥಿ, ಉಪನ್ಯಾಸಕ ಇವರ ಸಂಸರ್ಗ ಯಶಸ್ವಿಯಾಗಿ ಮತ್ತು ನಿರ್ಮಲವಾಗಿ ಹೊಂದಾಣಿಕೆಯಾಗಬೇಕು.
ಸಾರ್ವಜನಿಕ ಬದುಕು ಶೈಕ್ಷಣಿಕ ಪ್ರಪಂಚಕ್ಕಿಂತ ವಿಸ್ತಾರವಾದದ್ದು, ಬೋಧನಾ ಪ್ರಪಂಚದಲ್ಲಿ ಉಪನ್ಯಾಸಕರು – ವಿದ್ಯಾರ್ಥಿಗಳು ಕಾಣುವ ಜಗತ್ತಿಗಿಂತ ಸಾರ್ವಜನಿಕ ವ್ಯಕ್ತಿಗಳು ಲೋಕವನ್ನು ಗ್ರಹಿಸುವ ರೀತಿ ಭಿನ್ನ ಮತ್ತು ಅದನ್ನು ತಮ್ಮ ಆಲೋಚನೆ, ಅಭಿವ್ಯಕ್ತಿಗೆ ತಕ್ಕ ಹಾಗೆ ಕಲ್ಪಿಸಿಕೊಳ್ಳುವ ರೀತಿಯಿಂದಲೂ ಇದರ ಬಾಹುಳ್ಯ ದೊಡ್ಡದು. ಆದರೆ ಇವತ್ತಿನವರೆಗೂ ಸಾರ್ವಜನಿಕ ಸಮುದಾಯದ ಆಲೋಚನೆಗಳು ಶೈಕ್ಷಣಿಕ ಪ್ರಪಂಚದ ವಲಯದೊಳಗೆ ಸೇರಿಕೊಳ್ಳುತ್ತಲೇ ಇಲ್ಲ. ಬದಲಾಗಿ ಉತ್ತರ ಧ್ರುವ – ದಕ್ಷಿಣ ಧ್ರುವ ಎಂಬಂತೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಾ ಇತ್ತ ಕಡೆ ಸಾರ್ವಜನಿಕ ಸಮುದಾಯದ ವಿದ್ಯಾಪ್ರಪಂಚ ಮತ್ತು ಶೈಕ್ಷಣಿಕ ಲೇಪವಿರುವ ಅಕಾಡೆಮಿಕ್ ವಲಯದ ಶಿಕ್ಷಣ ಲೋಕ ಇವರೆಡೂ ಅಸಮತೋಲನಗೊಳ್ಳುತ್ತಿವೆ. ಸಮಸಮವಾಗಿ ಒಬ್ಬರನ್ನೊಬ್ಬರು ಮುಕ್ಕಿ ಬಾಳದೆ ಪರಸ್ಪರ ಸೌಹಾರ್ಧ ಅನ್ಯೊÃನ್ಯತೆಯ ಮೂಲಕ ಸಾರ್ವಜನಿಕ ಸಮುದಾಯ ಮತ್ತು ಶಿಕ್ಷಣ ಪ್ರಪಂಚ ಒಂದನ್ನೊಂದು ಅನ್ಯೊÃನ್ಯತೆಯ ಬಂಧವನ್ನು ಸೃಷ್ಟಿಸಿಕೊಳ್ಳುವಂತಾಗಬೇಕು. ಆಗಲೇ ಸೃಜನ ಶೀಲ ಸಾಮರ್ಥ್ಯ ಎರಡೂ ನಿಟ್ಟಿನಲ್ಲಿ ಕಾರ್ಯ ಸಾಧ್ಯವಾಗುತ್ತದೆ ಎಂದು ಆಶಿಸೋಣವೇ.

Source – Sakhigeetha.com

LEAVE A REPLY

Please enter your comment!
Please enter your name here