ಉಂಡಗಡಬು ಪುಂಡೀಪಲ್ಲೆ !

0
803

ಎಪ್ಪತ್ತು ವರ್ಷಗಳು ಹಿಂದೆ ಉಂಡ ಆ ಆರದ ಅಂಟಿನುಂಡಿ, ಗುಳ್ಳೆಡಿಕಿ ಉಚಿಡಿ, ಮುಟಿಗಿ ರೊಟ್ಟಿ, ಉಂಡಗಡಬು-ಪುಂಡಿಪಲ್ಲೆ, ಹರಕಹುಗ್ಗಿ-ಹೆರತುಪ್ಪಾ, ಗುದುಗುನ ಹುಗ್ಗಿ, ರೊಟ್ಟಿ-ಸಪ್ಪನಬ್ಯಾಳಿ- ಕುಚ್ಚಿದ ಮೆಣಸಿನಕಾಯಿ, ಕಟಗರೊಟ್ಟಿ-ಕರಂಡಿ, ಸುರುಳೀಹೋಳ್ಗಿ, ಬಾನಾ- ಪುಡಿಚಟ್ನಿ- ಮೆಣಸಿಂಡಿ, ಎಳ್ಳಹಚ್ಚಿದ ಸಜ್ಜಿÃರೊಟ್ಟಿ, ಡೊಣ್ಣಮೆಣಸಿನಕಾಯಿಯ ತುಂಬಗಾಯಿ, ಕೊರದ ಹಿಟ್ಟಿನ ಪಲ್ಲೆ, ಬದ್ನಿÃಕಾಯಿ ತುಂಬಗಾಯಿ, ಮಡಕಿ ಉಸುಳಿ,ಹಕ್ಕರಕಿ, ಪಚಡಿ ಇ ನ್ನೂ ಮರೆಯಲಾಗಿಲ್ಲ ! ನೆನಪು ಕಾಡುತ್ತದೆ ! ನಾಲಿಗೆ ನೀರೂರುತ್ತಿದೆ !
ಹುಬ್ಬಳ್ಳಿಯಲ್ಲಿ ನಾವು ಹುಡುಗರು ಅಕ್ಕ-ಅವ್ವ-ಕಾಕಾ-ದೊಡ್ಡಪ್ಪ-ಚಿಗವ್ವರೊಂದಿಗೆ ತಿಮ್ಮಸಾಗರ ಗುಡಿಗೆ ಕಾರ್ತೀಕ ಮಾಸದಲ್ಲಿ “ಅಲ್ಲಿÃಕೇರಿ”ಗೆ ಹೋಗುತ್ತಿದ್ದೆವು. ಅಲ್ಲಿÃಕೇರಿಯೆಂದರೆ ಮನೆಯ ಜಂಜಡದಿಂದ ದೂರಾಗಿ ಹಸಿರು-ಹೂದೋಟ-ಗುಡ್ಡ-ಬೆಟ್ಟ-ಹಳ್ಳ-ಹೊಳೆ-ಹೊಂಡಗಳಿಗೆ ಹೋಗಿ; ಮನೆಯಿಂದ ಎಣ್ಣಿÃಬುಟ್ಟಿಯಲ್ಲಿ ತುಂಬಿ ತಂದ ಎಳ್ಳುಹಚ್ಚಿದ ಸಜ್ಜಿÃರೊಟ್ಟಿ, ಎಣಗಾಯಿ ಪಲ್ಲೆ, ಬಳ್ಳೊಳ್ಳಿ ಚಟ್ನಿ, ರಂಜಕ, ಕರಂಡಿ,ಕರ್ಚೀಕಾಯಿ ಸುರಳೀಹೋಳ್ಗಿ, ಎಳ್ಳಹೋಳ್ಗಿ, ಕರಿಗಡಬು, ಜುಣುಕದ ವಡಿ, ಮಸರನ್ನ, ಪಚಡಿ, ಅಗಸೀಹಿಂಡಿ ಮುಂತಾದ ರುಚಿಕಟ್ಟಾದ ದೀನಸುಗಳನ್ನುಖೂಬಾಗಿ ಕುಂತು ನಿರುಂಬ್ಳಾಗಿ ಉಣ್ಣುವ ಸಂತಸ.
ಶಿಶುನಾಳ ಶರೀಫ ಕೂಡ ತಮ್ಮ ಅನುಭಾವ ಪದ್ಯದಲ್ಲಿ… “ಅಲ್ಲಿÃಕೇರಿಗೆ ಹೋಗೂನು ಬರ್ತೀರೇನ್ರೆÃ ನೀವು… ಒಲ್ಲದಿದ್ರ ಇಲ್ಲೆÃ ಇರತೀರೇನ್ರೆÃ…’’ ಅಂತ ಹಾಡಿದ.
ಈಗ ವಿದೇಶ ನೆಲದ “ಪಿಕ್ನಿಕ್” ಶಬ್ದಬಂದು; ಈ “ಅಲ್ಲಿಕೇರಿ” ಶಬ್ದ ನಮ್ಮಿಂದ ದೂರವಾಯಿತು.
ಹಾಂ…! ರಾಯಚೂರ- ವಿಚಾಪೂರ-ಗುಲಬರ್ಗಾ ಜಿಲ್ಲೆಗಳಲ್ಲಿ ಅರವತ್ತು ವರ್ಷಗಳ ಹಿಂದೆ ಇದೇರೀತಿ “ಕೊಂತೀರೊಟ್ಟಿ”ಗೆ ಹೋಗುವ ಸಂಪ್ರದಾಯವಿತ್ತು. ವಿಶೇಷ ಹಬ್ಬದ ಮರುದಿ ವಸ ಹಬ್ಬದ ಅಡಿಗೆಯನ್ನೆಲ್ಲ ಎಣ್ಣೆಬುಟ್ಟಿಯಲ್ಲಿ ತುಂಬಿಕೊಂಡು ಪ್ರಶಾಂತ ಪರಿಸರದಲ್ಲಿ ಊರಜನರೆಲ್ಲ… ತಾವು ತಂದ ಪಕ್ವಾನ್ನಗಳನ್ನು ಪರಸ್ಪರ ಹಂಚಿಕೊಂಡು… ಸಾಮೂಹಿಕವಾಗಿ ಉಣ್ಣುವ ನೆಮ್ಮದಿಯ ದಿನ ಇತ್ತು. ಇದಕ್ಕೆ “ಕೊಂತಿರೊಟ್ಟಿ” ಅಂತ ಹೆಸರು.
ಆದರೆ ಕಡಲಾಚೆಯಿಂದ ಬಂದ ಆಂಗ್ಲಭಾಷೆಯ “ಪಿಕ್‌ನಿಕ್”ಎಂಬ ಶಬ್ದ ಬಳಕೆಯಲ್ಲಿ ಬಂದು ನಮ್ಮ “ಅಲ್ಲಿಕೇರಿ” ಹಾಗೂ “ಕೊಂತೀರೊಟ್ಟಿ” ಪದಗಳು ಬಳಕೆಯಿಂದ ದೂರವಾದವು.
ಹರಿಹರಿ ಮಹಾಕವಿ ತನ್ನ ಪುಷ್ಪರಗಳೆಯಲ್ಲಿ “ಹೂವು ಹರಿ” ಎಂಬ ಶಬ್ದಕ್ಕೆ “ಹೂವುತಿರಿ” ಎಂಬ ಪದ ಬಳಸಿದ್ದಾನೆ. “ಹೂವು ಹರಿ” ಹಾಗೂ “ಅಂಗಿ ಹರಿ” ಶಬ್ದಗಳಲ್ಲಿರುವ ಹಿಂಸೆಯ ಸಂಕೇತವನ್ನು ಗುರುತಿಸಿದ ಕನ್ನಡ ಕವಿಗಳು ಅಹಿಂಸಾತ್ಮಕವಾದ “ಹೂವು ತಿರಿ” ಪದ ಬಳಸಿದ್ದಾರೆ. ಎಂದು ಕೂಡಾ ಧಾರವಾಡ ಜಿಲ್ಲೆಯಲ್ಲಿ “ಹೂವು ಎತ್ತು” “ಹೂವು ಬಿಡಿಸು” ಎಂಬ ಅಹಿಂಸಾತ್ಮಕವಾದ ಪದಗಳನ್ನು ಬಳಸುವ ಕನ್ನಡದ ಸಾಂಸ್ಕçತಿಕ ಮನಸನ್ನು ಗಮನಿಸನಹುದು.
೭೦ ವರ್ಷಗಳಹಿಂದೆ ಹುಬ್ಬಳ್ಳಿಯಲ್ಲಿ “ರ‍್ಯಾಗ ನ್ಯಾರೀ” ಮಾಡುತ್ತಿದ್ದರು. ಆದರೆ ಆಂಗ್ಲಭಾಷೆಯ “ಬ್ರೆಕ್‌ಫಾಸ್ಟ” ಶಬ್ದ ಚಾಲ್ತಿಯಲ್ಲಿ ಬಂದು “ನ್ಯಾರೀ” ಶಬ್ದ ಇಲ್ಲವಾಯಿತು. ಜೋತೆಗೆ “ಚುಮುಚುಮು ಬೆಳಕು”, ಚಿಕ್ಕಿಬೆಳಕು”, “ಮುನ್ನಸಕು”… ಸಂಜೆಗೆ “ಗೊಂಬಿಹೊತ್ತು”, “ಮಾರು ಹೊತ್ತು”…. ಕತ್ತಲೆಗೆ “ಕಾಡಿಗತ್ತಲು”…. ಹಾಗೂ “ಕತ್ತಲಗಡಸ”…. ಶಬ್ದಗಳು ಬಳಕೆಯಿಮದ ದೂರಾದವು.
ಅಷ್ಟೆÃ ಅಲ್ಲ ನಮ್ಮ ಗೃಹೋಪಯೋಗಿ ಪದಗಳಲ್ಲಿ “ಕೆಂಜಿಗ್ಯಾ”, “ವನಕೀಮಂಡಾ”, “ಹುಗ್ಗಿÃಜೇನು”, “ಕುಡ್ಡಿÃಕುಕ್ಕಾರಿ”, “ಬಳತಾ”, “ಹಗೆ”, “ಹೋಳಗಟ್ಟಿ”, “ಬಂಕಾ”, “ಜಂತಿ”, “ಪಡಜಂತಿ”, “ಕ್ವಾಟೀ ಕೋಣಿ”, “ಬೆಂಡಾಲಿ”, “ಗುಬ್ಬಿಬಾವಲಿ”, ಬುಗುಡಿ”, ಸಾರು ನೀಡುವ ಕಾಗಿ”, “ತುಪ್ಪನೀಡುವ ಕಾಗಿ”, “ಹುಟ್ಟು”, “ಸವುಟು”, “ಗಡಿಗಿ”, “ಮಡಿಕಿ”, “ಚಟಿಗಿ”, “ಕುಡಿಕಿ”, “ಮಿಳ್ಳಿ”, “ಹರಿವಿ”, “ಬಾನಿ”, “ಕಲ್ಗಡಗಿ’, “ರ‍್ಯಾಣ”, “ಮುಚ್ಳ”, “ಚಿಬ್ಲಾ”, “ಬೋಕಿ”, “ಕಲಗಂಚು”, “ಬಾಯಿ ಚಿಕ್ಕಾ”, “ಗ್ವಾದ್ಲಿ”, ದಂದಕ್ಕಿ”, “ಹುಸಿ”, “ಒಳಟ್ಟಾ”, “ಹದ್ಲಿÃ ಕೋಣೆ”, “ಹಸಿಬಿ”, “ಚಂಚಿ”, “ಅಡಕೊತ್ತು”, “ಸೀಬು”, “ಡಂಬು”, “ರಂಟಿ”, “ಕುಂಟಿ”, “ಮೇಟಿ”, “ಬ್ಯಾಕೋಲು”, “ಗ್ವಾರಿ”, “ಜಂತಗುಂಟಿ”, “ಮಡಿಗುಂಟಿ”, “ಕೊಡ್ಡಾ”, “ಹಂತಿ”, “ತತ್ತ ರಾಣಿ”…… ಇತ್ಯಾದಿ ಅಸಂಖ್ಯ ಪದಗಳು ಬಳಕೆಯಿಂದ ದೂರಾಗಿಬಿಟ್ಟಿವು. ನಾವು ಮನಸು ಮಾಡಿದ್ದರೆ ಇವುಗಳಲ್ಲಿ ಕೆಲವಾದರೂ ಪದಗಳನ್ನು ಉಳಿಸಿಕೊಳ್ಳನಹುದಿತ್ತು.
ಕನ್ನಡ ನಮ್ಮದು. ನಮ್ಮ ಭಾಷೆ ಅಷ್ಟೆÃ ಕನ್ನಡ ಅಲ್ಲ; ನಮ್ಮ ಪ್ರಾಣ, ಪ್ರಿÃತಿ, ಸಂಸ್ಕೃತಿ, ಆಚಾರ, ಅನುಭವವೇ ಕನ್ನಡ ! ಕಡಲಾಚೆಯ ಭಾಷಾಸಂಸ್ಕçತಿ ಶಿಕ್ಷಣದಲ್ಲಿ ಬಂದನಂತರ ನಮ್ಮ ಅಸಂಖ್ಯ ಕನ್ನ ಪದಗಳು ನಮ್ಮಿಂದ ದೂರವಾದವು!
ಕನ್ನಡವೇ ನಮ್ಮ ಬೆಲ್ಲ-ಬೆಳಸಿ-ಬೆಳ್ದಿಂಗಳು !!

Source – Sakhigeetha.com

LEAVE A REPLY

Please enter your comment!
Please enter your name here