ಮುದ್ದಿನ ಮಗು ಅತ್ತರೆ ಅದಕ್ಕೆ ಆಟಿಕೆಯ ಪ್ಲಾಸ್ಟಿಕ್ ಕಾರು ಕೊಡಿಸಲೇಬೇಕು. ಅದಕ್ಕೆ ಭಾರತೀಯ ಲೆಕ್ಕದಲ್ಲಿ 27 ಸಾವಿರ ರೂಪಾಯಿ! ಕೆಲಿಫೋರ್ನಿಯಾ ಕಡಲಕೊಲ್ಲಿಯ ಬರ್ಕಲಿಯ ಈ ಮಕ್ಕಳ ಬ್ರಹ್ಮಾಂಡದ ಅಂಗಡಿಗೆ ಏನಿಲ್ಲೆಂದರೂ ನೂರಾರು ಕಾರುಗಳೂ. ಇಮದ ಸಂಡೆ ಬೇರೆ. ನಮ್ಮ ಕಾರು ಪಾರ್ಕ ಮಾಡಲು ಹತ್ತುನಿಮಿಷ ಕಾಯಬೇಕಾಯಿತು.
ಒಳಹೊಕ್ಕರೆ; ಅಮೇರಿಕಯ ಪ್ರಚಂಡ ಮಾರ್ಕೆಟಿಂಗ್ ಸಂಸ್ಕೃತಿಯ ಬೃಹತ್ ಅನಾವರಣ. ಮಕ್ಕಳೇಕೆ….. ಇಲ್ಲಿ ಬಂದರೆ ಮುದುಕರೂ ಹುಚ್ಚರಾಗುತ್ತಾರೆ. ಮಾರಾಟದ ಕ್ಷೆÃತ್ರದಲ್ಲಿ ಜಗತ್ತಿನ ಮಹಾಪ್ರಚಂಡರು ಹೊಕ್ಕು ಮಕ್ಕಳ ಆಟಿಕೆಗಲೆಲ್ಲ ಅನೇಕ ಮಿಲಿಯನ್ನುಗಳನ್ನು ದಾಟುತ್ತವೆ.
ನಾವೆಲ್ಲ ಒಂದು ಕಾಲಕ್ಕೆ ರಾಯಚೂರ, ಬಳ್ಳಾರಿ, ಬಿಜಾಪೂರ, ಹುಬ್ಬಳ್ಳಿಯಲ್ಲಿ ಮಣ್ಣಿನ ಕುಡಿಕಿ, ಮಣ್ಣಿನ ವಲಿ, ಜೋಳದ ದಂಟಿನ ಚಕ್ಕಡಿ, ಗುಂಡ, ಗಜಗ, ಹುಂಚಿಕಪ್ಪ, ವಟ್ಟಪ್ಪ, ಬಗರಿ, ಬಿಂಗರಿ, ಕಣಮುಚಿಗಿ ಆಡಿದವರು. ಯಾವುದಕ್ಕೂ ಪೈಪಾವಾಣೆ ಖರ್ಚಿಲ್ಲ. ಪ್ರಕೃತಿ ನಮ್ಮ ಆಟದ ಮನೆಯಾಗಿತ್ತು. ನ್ನ ಅಕ್ಕಂದಿರಿಗೆ ಆಡಲು ಒಂದೇ ಒಂದು ಕಟ್ಟಿಗೆಯ ಗೊಂಬೆ ಇತ್ತು. ಅದಕ್ಕೆ “ಚಂದಾಳಗೊಂಬಿ” ಅನ್ನುತ್ತಿದ್ದರು.
ಮಕ್ಕಳ ಮನಸ್ಸು ಮಾರ್ಕೇಟಿಂಗ್ ಬ್ರಹ್ಮಾಂಡದ ಮಹಾಬಾಹುಗಳ ತೆಕ್ಕೆಗೆ ಸಿಕ್ಕಮೇಲೆ ಮುಗುದೇ ಹೋತು. ಸೀರಿಯ ಕರಿಯನ್ನೆÃ (ಕಡೇ ಚುಂಗು) ನಮ್ಮ ಅಕ್ಕ ಉಟ್ಟು ಮದುವಿಯ ಆಟ ಅಡುತ್ತಿದ್ದಳು. ಆ ಕತ್ತರಿಸಿದ ಚುಂಗಿನಲ್ಲಿ ಅವಳು ರಾಜಕುಮಾರಿಯ ಸುಖ ಅನುಭವಿಸುತ್ತಿದ್ದಳು. ಹುಂಚೀಮರದ ಗಿಡಮಂಗನ ಆಟ ಎಂಥಾ ಖುಶಿ! ಅದು ನಮ್ಮ ಮನೆಮುಂದಿನ ಪಂಚಮಿ ಹಬ್ಬ! ಕೂಳುಮರೆತು ಆಡುತ್ತಿದ್ದ ಕಾಲ!
ಈ ಕೊಳ್ಳಬಾಕ ಸಂಸ್ಕೃತಿಯಲ್ಲಿ ಬೆಳೆದುಬಂದ ಮಕ್ಕಳಿಗೆ ತೃಪ್ತಿ ಎಂಬುದೇ ಇಲ್ಲ. ಕನಿಷ್ಟ ತಿಂಗಳಿಗೆ ನಮ್ಮ ಲೆಕ್ಕದಲ್ಲಿ ೨೦-೩೦ ಸಾವಿರ ರೂಪಾಯಿ ಆ ಮಕ್ಕಳ ಆಟಿಕೆಗಳಿಗೆ ವೆಚ್ಚವಾಗುತ್ತದೆ. ಪ್ರತಿಯೊಂದು ಮನೆಯಲ್ಲೆÃ ಒಂದು ದೊಡ್ಡ ಹಾಲ್‌ತುಂಬ ಮಿನಿ ಮಾಲ್ !ಮನೆಮನೆಯೂ ಮಕ್ಕಳ ಶಾಪಿಂಗ್ ಕಾರ್ನರ್!
ಭೂತ-ಪ್ರೆÃತ-ಪಿಶಾಚಿ-ಕಿನ್ನರರು-ಕಿಂಪುರುಷರು-ಯಕ್ಷರು-ಯಕ್ಷಿÃಣಿಯರು-ಗಂಧರ್ವರು-ಸುಡುಗಾಡ ಸಿದ್ಧರು ಮಕ್ಕಳ ಆಟಿಕೆಗಳಾಗಿ ಮನೆ ಸೇರುತ್ತವೆ. ಮನೆಮನೆಯಲ್ಲೂ ಮಕ್ಕಳ ಆಟದ ಮಹಾಕಸ ತುಂಬುತ್ತದೆ.
ಅಮೇರಿಕೆಯವರ ಕೈಯಲ್ಲಿ ಏನು ಕೊಟ್ಟರೂ ಮಾರ್ಕೇಟಿಂಗ್ ಗೂಡ್ಸ ಆಗುತ್ತದೆ. ನಮ್ಮ ಎಲ್ಲ ದೇವರುಗಳೂ ಈಗ ಅಮೇರಿಕೆಯಲ್ಲಿ ಮಾರಾಟದ ವಸ್ತುವಾಗಿ ಸೇರ್ಪಡೆಯಾಗಿದ್ದಾರೆ. ನಮ್ಮ ಬುದ್ಧ, ಗಣಪತಿಯರಿಗೆ ಅಲ್ಲಿ ಮನೆಮನೆಯಲ್ಲೂ ಆದ್ಯಸ್ಥಾನ ಸಂದಿದೆ.
ನಮ್ಮ ಯಕ್ಷಗಾನ, ದೊಡದಡಾಟ, ಸಣ್ಣಾಟ, ತೊಗಲಗೊಂಬಿ, ಪಾರಿಜಾತ, ಡೊಂಬರಾಟ ಕಾಡಸಿದ್ಧರು, ಸುಡುಗಾಡು ಸಿದ್ಧರು, ಬುಡಬುಡಿಕಿಗಳು, ಜಾತಿಗಾರ ತಂಡಗಳು ನಮ್ಮ ಗ್ರಾಮೀಣ ಸಂಸ್ಕೃತಿಯ ಕಲೆಗೆ ಬಣ್ಣದ ತೋರಣ ಕಟ್ಟಿದವು. ಮಠಮಾನ್ಯಗಳ ಪುರಾಣಕಾರರು, ಕೀರ್ತನಕಾರರು ಪುಷ್ಪಕ ವಿಮಾನದಲ್ಲಿ ಕುಂತು ಕೈಲಾಸಕ್ಕೆ ಹೋಗುತ್ತಿದ್ದೆವು.
ನಮ್ಮ ಮಕ್ಕಳ ಮನಸು ಇಂಥ ಅತ್ಯಗಾಧ ಕಲ್ಪನಾ ಲೋಕದ ಅಂತರಾಳದಲ್ಲಿ ಅರಳುತ್ತಿದ್ದವು.ಏಳುಮಕ್ಕಳ ತಾಯಿ ನಮ್ಮನ್ನು ದಿನಾ ಭೆಟ್ಟಿಆಗುತ್ತಿದ್ದಳು. ಹಾಳುಬಾವಿಯ ದೆವ್ವಗಳು ನಮ್ಮ ಮನಸಿನಲ್ಲಿ ಚಲ್ಲಾಡುತ್ತಿದ್ದವು. ಬಾಣತಿ ಕಟ್ಟಿ, ಬಸರಿಕಟ್ಟಿಯ ಭೂತಗಳು ನಮ್ಮ ಕಲ್ಪನಾ ಲೋಕಕ್ಕೆ ಕನಸಿನ ಅಭಿಷೇ ಮಾಡುತ್ತಿದ್ದವು.
ಮಗುವನ್ನು ಬಣ್ಣದ ತೊಟ್ಟಿಲಲ್ಲಿ ಮಲಗಿಸಿ, ಜೋಗುಳ ಹಾಡುವ ಕನ್ನಡತಾಯಿಯ ಜೋಗುಳ ಹಾಡು ಇಲ್ಲಿಲ್ಲ. “ಆಡಿಬಾ ನನ ಕಂದ ಅಂಗಾಲ ತೊಳದೇನ, ತೆಂಗೀನ ಕಾಯ ತಿಳಿ ನೀರ ತೊಕ್ಕೊಂಡು ಬಂಗಾರದ ಮಾರಿ ತಿಳದೇನ” ಅಂತ ಹಾಡುವ ತಾಯಿ ಇಲ್ಲ. “ಮುಂಜಾನೆ ಏಳುತಲೆ ಅಂಗಳಕೆ ಚಳಿ ಹೊಡೆದು ದುಂಡು ಮಲ್ಲಿÃಗೆ ಹರವೀದೆ, ನನಮನೆಗೆ ನಂದೀಯನೇರಿ ಶಿವಬಂದ”…..ಎಂಥಾ ಮನಸಿನ ಆನಂದ! “ಎಲ್ಲಾö್ಯರ ಇರಲೆವ್ವ ಹುಲ್ಲಾಗಿ ಬೆಳೆಯಲೀ, ನೆಲ್ಲಿÃ ಬಡ್ಯಾಗಿ ಚಿಗಿಯಲಿ ನನಕಂದ, ಜಯವಂತನಾಗಿ ಬೆಳೆಯಲಿ” ಎನ್ನುವ ಕನ್ನಡತಾಯ ಹರಕೆ ಎಂಥಾ ಕಕ್ಕುಲಾತಿಯ ಕಳಬಳ್ಳಿ
ಮಣ್ಣಿನ ಗುಳ್ಳವ್ವ, ಮಣ್ಣಿನ ಶೀಗವ್ವ, ನಾಗಪ್ಪ-ಗಣಪ್ಪ-ಬಸವಣ್ಣ ನಮ್ಮಿಂದ ದೂರವಾದರು
ಮಣ್ಣು ಹೋತು ! ಬಣ್ಣ ಬಂತು!
ಪ್ರಿÃತಿ ಹೋತು ! ಪ್ಲಾಸ್ಟಿಕ್ ಬಂತು!!
Source – Sakhigeetha.com