ಅಪ್ರಾಪ್ತೆಯರ ಮೇಲಿನ ಅತ್ಯಾಚಾರಕ್ಕೆ ಕೊನೆ ಎಂದು….? – ನಾದಲೀಲೆ ನಾಗರಾಜು

0
877

ಹಸುಳೆಗಳ ಮೇಲೆ ಎರಗುವ ಈ ಕಾಮ ಪಿಶಾಚಿಗಳ ಬರ್ಬರ ಕೃತ್ಯಗಳ ಹುಟ್ಟಡಗಿಸಬೇಕು. ಇದು ಬರೀ ಕಾನ್ಮೂಭ ಪ್ರಶ್ನೆಯಲ್ಲ. ಇದು ಸಮಾಜದ ನೈತಿಕ ಜವಾಬ್ದಾರಿಯಲ್ಲವೇನು?
ಸಂಸ್ಕೃತಿ ಮತ್ತು ನಾಗರಿಕತೆಯ ಶ್ರಿÃಮಂತಿಕೆಯಲ್ಲಿ ಭಾರತ ದೇಶವು ವಿಶ್ವಕ್ಕೆà ಮಾದರಿಯೆನಿಸಿದೆ. ಶಾಂತಿ, ಸಹನೆ, ಸಹಬಾಳ್ವೆ, ಪೂಜನೀಯಭಾವ, ಸದ್ಗುಣಗಳಲ್ಲಿ ಭಾರತ ತನ್ನದೇ ಆದ ವಿಶಿಷ್ಟತೆಯನ್ನು ಮೆರೆದಿದೆ. ಶ್ರಿÃರಾಮನ ಸ್ತಿçÃಗೌರವ, ಲಕ್ಷö್ಮಣನ ಮಾತೃಭಕ್ತಿ, ಸರ್ವರಲ್ಲೂ ತಾಯಿಯನ್ನೆà ಕಾಣುವ ವಿವೇಕಾನಂದರಂಥ ಆದರ್ಶಪ್ರಾಯರು ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ. ಮನು ಸೃತಿಯಲ್ಲೂ ಸಹ “ಯತ್ರ ನಾರ್ಯಂತು ಪೂಜ್ಯತೇ, ರಮಂತೇ ತತ್ರ ದೇವತಾ” ಎಂದು ಉಲ್ಲೆÃ್ಲಖಗೊಂಡಿರುವುದನ್ನು ಗಮನಿಸಬಹುದು. ಹೀಗಿದ್ದರೂ ಇಂದು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹೇಯ ಕೃತ್ಯಗಳು ವಿಶ್ವವನ್ನೆà ಬೆಚ್ಚಿಬೀಳಿಸುವಂತಿದೆ.
“ನಿರ್ಭಯಾ”ಳಿಂದ ಹಿಡಿದು ಮೊನ್ನೆ ಮೊನ್ನೆ ನಡೆದ ಅಶಿಫಾ ಪ್ರಕರಣಗಳವರೆಗೆ ದೇಶದಲ್ಲಿ ಅಪ್ರಾಪ್ತೆಯರ ಮೇಲಾದ ದೌರ್ಜನ್ಯಗಳನ್ನು ಕಂಡಾಗ ನಿಜಕ್ಕೂ ಮನಸ್ಸಿಗೆ ನೋವಾಯಿತು. ಎತ್ತ ಸಾಗುತ್ತಿದೆ ನಮ್ಮ ಸಂಸ್ಕೃತಿಯ ಹಾದಿ, ಎತ್ತ ಸಾಗುತ್ತಿದೆ ನಮ್ಮ ಸ್ತಿçÃಯರ ಸ್ಥಾನಮಾನಗಳು? ಮನುಷ್ಯನ ಈ ಮೃಗೀಯ ವರ್ತನೆ ಅವನನ್ನು ಪ್ರಾಣಿಗಳಿಗಿಂತ ಕೀಳಾಗಿಸಿದೆ. ಇಂಥ ಪ್ರಕರಣಗಳು ಮುಸ್ಲಿಂ ರಾಷ್ಟçಗಳಲ್ಲಿ ನಡೆದರೆ ಅಲ್ಲಿನವರು ಅಂಥವರ ಮೇಲೆ ನಿರ್ದಾಕ್ಷಿಣ್ಯವಾದ ಶಿಸ್ತಿನ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ, ಅಂಥವರನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಲ್ಲತ್ತಾರೆ, ಅಥವಾ ಸಾರ್ವಜನಿಕವಾಗಿ ನೇಣು ಹಾಕುತ್ತಾರೆ. ನಮ್ಮಲ್ಲೂ ಇತ್ತಿÃಚೆಗೆ ಇಂತಹುದೇ ಪ್ರಕರಣವೊದರಲ್ಲಿ ಜಿಲ್ಲಾ ಸಶನ್ಸ್ ನ್ಯಾಯಾಲಯವು ಅಪರಾಧಿಗೆ ಮರಣದಂಡನೆಯನ್ನು ವಿಧಿಸಿದ್ದನ್ನು ನಾವು ಗಮನಿಸಬಹುದು.
ಆದರೆ ಈ ಎಲ್ಲ ದಂಡನೆಗಳಿಂದ ಇಂಥ ಹೇಯ ಕೃತ್ಯಗಳನ್ನು ತಡೆಗಟ್ಟಲು ಸಾಧ್ಯವೇ? ಉಗ್ರಶಿಕ್ಷೆಯನ್ನು ವಿಧಿಸುವಂತಹ ವಿದೇಶಗಳಲ್ಲಿ ಈ ಅಮಾನುಷತೆಯನ್ನು ಮೂಲೋತ್ಪಾಟಿಸಲಾಗಿದೆಯೇ? ಎಂಬ ಪ್ರಶ್ನೆಗಳನ್ನು ಹಾಕಿಕೊಂಡಾಗ, ನಮಗೆ ಸಿಗುವ ಉತ್ತರ ತೃಪ್ತಿಕರವಾಗಿರುವುದಿಲ್ಲ, ಅಲ್ಲೊಂದು ಇಲ್ಲೊಂದು ಇಂಥ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಹಾಗಾದರೆ ಇದರ ನಿರ್ಮೂಲನೆ ಹೇಗೆ? ಇದಕ್ಕೆ ಕಾರಣವೇನಿರಬಹುದು?
ಬದಲಾಗುತ್ತಿರುವ ನಾಗರಿಕತೆಯ ಸಾಮಾಜಿಕ ಶೈಲಿಯೇ ಇದಕ್ಕೆ ಮೂಲ ಕಾರಣ. ಇಂದಿನ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ನೇತ್ಯಾತ್ಮಕ ವಿಷಯಗಳನ್ನೆÃ ಢಾಳಾಗಿ ಬಿಂಬಿಸುತ್ತಿರುವ ಸಮಾಹ ಮಾಧ್ಯಮಗಳು, ಕಡಿವಾಣವಿಲ್ಲದ ಅಂತರ್ಜಾಲದ ಆಶ್ಲಿÃಲ ತಾಣಗಳು, ಜೊತೆಗೆ ಕುಸಿಯುತ್ತಿರುವ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳು ಇತ್ಯಾದಿಗಳನ್ನು ಉದಾಹರಿಸಬಹುದು. ಹಿಂದೆ ಆಧ್ಯಾತ್ಮಕ ವಿಷಯಗಳನ್ನು ನಮ್ಮ ಸಮಾಜ ಆತ್ಯಂತ ಮಹತ್ವಪೂರ್ಣವಾಗಿ ಕಾಣುತ್ತಿತ್ತು. ಮೌಲ್ಯಗಳ ಆಚರಣೆ ವiನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿತ್ತು, ಹಾಗೆಂದ ಮಾತ್ರಕ್ಕೆ ಹೆಣ್ಣಿನ ಮೋಹ ಇರಲಿಲ್ಲವೆಂದೇನಲ್ಲ. ಅತ್ಯಾಚಾರಗಳು ಆಗಲೂ ನಡೆಯುತ್ತಿದ್ದವು, ಆದರೆ ಅದಕ್ಕೆ ವಯಸ್ಸಿನ ಮಿತಿಯಿತ್ತು, ಆದರೆ ಇಲ್ಲಿ ನಾವು ಗಮನಿಸಬೇಕಾದ ವಿಷಯವೊಂದಿದೆ, ಹಿಂದೆ ಹೆಣ್ಣುಮಕ್ಕಳು ವಯಸ್ಸಿಗೆ ಬರುವ ಮುಂಚೆಯೇ ಅಥವಾ ಋತುಮತಿಯಾದ ಕೂಡಲೇ ವಿವಾಹ ಮಾಡಿಬಿಡುತ್ತಿದ್ದರು. ಇದು ಮೂಢನಂಬಿಕೆಯಾದರೂ ಇಂಥ ಅಚಾತುರ್ಯಗಳು ಸಂಭವಿಸಬಹುದೇನೋ ಎಂಬ ಆತಂಕವೂ ಇರಬಹುದು. ಇದೆಲ್ಲ ಕೇವಲ ಊಹೆಯಷ್ಟೆ,
ಆದರೆ ನಾವು ವಿಚಾರಮಾಡಬೇಕಾದ ವಿಷಯ ಅದಲ್ಲ ಇಂಥ ಅಮಾನುಷ ದೌರ್ಜನ್ಯಗಳನ್ನು ತೊಡೆದುಹಾಕಲು ಏನು ಮಾಡಬೇಕೆನ್ನುವುದು. ಕೇವಲ ಮರಣದಂಡನೆ, ಜೀವಾವಧಿ, ಪಶ್ಚಾತ್ತಾಪಗಳಿಂದ ಇದರ ನಿವಾರಣೆ ಸಾಧ್ಯವಿಲ್ಲ. ಮೊದಲು ನಮ್ಮ ಮಾಧ್ಯಮಗಳ ದೃಷ್ಟಿಕೋನ ಬದಲಾಗಬೇಜು, ಯಾವುದನ್ನು ಢಾಳಾಗಿ ಬಿಂಬಿಸಬೇಕು? ಬಿಂಬಿಸಬಾರದು? ಎಂಬುದರ ಅರಿವಿರಬೇಕು. ಪಠ್ಯಕ್ರಮದಲ್ಲಿ ಮೌಲ್ಯ ಶಿಕ್ಷಣವನ್ನು ವಿಶೇಷ ಅಧ್ಯಯನವನ್ನಾಗಿಸಬೇಕು. ಸಮಾಜಕ್ಕೆ ಚಿಕಿತ್ಸಕ ಮನೋಭಾವವನ್ನು ಬೆಳೆಸಿಕೊಳ್ಳುವ ಸಮಾನತೆ, ಸಮಾನ ಗೌರವ, ಆದರತೆಗಳನ್ನು ರೂಢಿಸಿಕೊಳ್ಳುವಂಥ ಚಟುವಟಿಕೆಗಳನ್ನು ಸಾಮಾಜಿಕ ಸಂಘಸಂಸ್ಥೆಗಳು ಹಾಗು ರಾಜಕೀಯ ಸಂಘಟನೆಗಳು ಹಮ್ಮಿಕೊಳ್ಳಬೇಕು. ಎಲ್ಲಾ ಧರ್ಮಗಳ ಸಾರವಾಗಿರುವ, ಸಮಾಜದ ಆದರ್ಶಗಳನ್ನು ಎತ್ತಿ ಹಿಡಿಯುವ ಸಂದೇಶಗಳನ್ನು ಸಾರುವ ಚಲನಚಿತ್ರಗಳನ್ನು ಈಗಿನ ನಿರ್ದೇಶಕರು ರೂಪಿಸಬೇಕು.
ಇದೆಲ್ಲದರ ಜೊತೆಗೆ ಅಪ್ರಾಪ್ತೆಯರ ಮೇಲಾಗುವ ದೌರ್ಜನ್ಯಗಳಿಂದ ಆಗುವ ದುಷ್ಪರಿಣಾಮಗಳ ಕುರಿತ ತಿಳಿವಳಿಕೆಯನ್ನು ಸಮಾಜಕ್ಕೆ ನೀಡುವ ಕಾರ್ಯವಾಗಬೇಕು. ಆಗ ಮಾತ್ರ ಇದರ ಅಟ್ಟಹಾಸವನ್ನು ಕ್ರಮೇಣವಾಗಿ ತೊಡಯಬಹುದು. ಇಂತಹ ಕಾರ್ಯಗಳು ಇನ್ನಾದರೂ ನಮ್ಮ ದೇಶದಲ್ಲಿ ಆಗುವ ಅನಿವಾರ್ಯತೆ ಇದೆ.

ಈ ಸಂದರ್ಭಕ್ಕೆ ಉಲ್ಲೆÃಖಿಸಬಹುದಾದ ಕವಿತೆ:-
ಯಾಕಿಂತು ದುರ್ಮಾರ್ಗಿಗಳಾಗಿದ್ದಾರೆ
ಈ ಮಾನವರು?
ಎಲ್ಲ ಎಲ್ಲೆ ದಾಟಿ ಮೃಗಗಳಾದರೇ
ಈ ದಾನವರು!
ಅಮ್ಮ ಅಕ್ಕ ತಂಗಿ ಮಗಳು
ನೆನಪಾಗುವುದಿಲ್ಲವೇನು?
ಈ ಮರ್ಯಾದೆಗೆಟ್ಟ ಜನಕೆ
ಸಮಾಜವೇ ಬುದ್ಧಿ ಕಲಿಸಬೇಕು!
ಇಂಥ ಕೌರವ ಕೀಚಕ ದುಶ್ಯಾಸನರ
ಮೊದಲು ಹುಟ್ಟಡಗಿಸಬೇಕು!

Source – Sakhigeetha.com

LEAVE A REPLY

Please enter your comment!
Please enter your name here